ಕ್ಸಿಯಾಮಿ ಮಿ ಬ್ಲೂಟೂತ್ ಆಡಿಯೋ ರಿಸೀವರ್ ಮಾರುಕಟ್ಟೆಗೆ
Team Udayavani, May 18, 2018, 4:12 PM IST
ಕ್ಸಿಯಾಮಿ ಮಿ ಬ್ಲೂಟೂತ್ ಆಡಿಯೋ ರಿಸೀವರ್ ಮತ್ತು ಎಂಐ ಸೆಲ್ಫಿ ಸ್ಟಿಕ್ ಕಳೆದ ತಿಂಗಳು ಭಾರತದ ಮಾರುಕಟ್ಟೆಗೆ ಕಾಲಿರಿಸಿದೆ. ಭಾರತದಲ್ಲಿ ಫೇಮಸ್ ಆಗುತ್ತಿರುವ ಎಂಐ ಬ್ರ್ಯಾಂಡ್ನ ಹಲವು ಉತ್ಪನ್ನಗಳು ಇಂದು ಬಹುತೇಕ ಜನರಕೈಯಲ್ಲಿವೆ. ಬ್ಲೂಟೂತ್ ರಿಸೀವರ್ ಮತ್ತು ಸೆಲ್ಫಿ ಸ್ಟಿಕ್ಗಳು ಭಾರತದ ಮಾರುಕಟ್ಟೆ ಬರಲಿವೆ ಎಂಬುದು ತನ್ನ ಬಳಕೆದಾರರಿಗೆ ಈ ಮೊದಲೆ ತಿಳಿದಿತ್ತು ಎಮದು ಸಂಸ್ಥೆ ಹೇಳಿದೆ.
ಕ್ಸಿಯಾಮಿ ಮಿ ಉತ್ಪನ್ನದ ಕುರಿತು ಭಾರತದಲ್ಲಿ ಜನರು ಹೆಚ್ಚು ಆಸಕ್ತಿತೋರುತ್ತಿದ್ದು, ಮಾರುಕಟ್ಟೆ ಯೋಜನೆ ಹಾಗೂ ನಾವೀನ್ಯ ಉತ್ಪನ್ನಗಳ ಒಂದು ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಮೊದಲ ಉತ್ಪನ್ನ ಬ್ಲೂಟೂತ್ ಆಡಿಯೋ ರಿಸೀವರ್ ರೂ. 999 ಬೆಲೆ ನಿಗದಿಪಡಿಸಲಾಗಿದೆ. ವೈರ್ಲೆಸ್ ಸಂಗೀತವನ್ನು ಒದಗಿಸುವ ಸಾಧನವು ಅತ್ಯಾಧುನಿಕವಾಗಿ ತಯಾರಾಗಿದೆ. 97ಞಅಜ ಬ್ಯಾಟರಿ ಬೋರ್ಡ್ ಸಂಪೂರ್ಣವಾಗಿ 2 ಗಂಟೆಗಳ ಚಾರ್ಜ್ ಮಾಡಿದರೆ 4-5 ಗಂಟೆಗಳ ಪ್ಲೇಬ್ಯಾಕ್ ಅನ್ನು ಹೊಂದಲಿದೆ. ಈ ಉತ್ಪನ್ನವನ್ನು ಬಳಕೆದಾರರು ಎರಡು ಹ್ಯಾಂಡ್ಸೆಟ್ಗಳಿಗೆ ಸಂಪರ್ಕಿಸಬಹುದು. ಆದರೆ ಒಂದರಲ್ಲಿ ಮಾತ್ರ ಕರೆ ಅಥವಾ ಸಂಗೀತ ಆಸ್ವಾಧಿಸಲು ಸಾಧ್ಯವಾಗಿದೆ.
ಮಿ ಸೆಲ್ಫಿ ಟ್ರೈಪಾಡ್ 1,099 ರೂ ಬೆಲೆ ನಿಗದಿ ಪಡಿಸಲಾಗಿದ್ದು, ಇದು ಬ್ಲೂಟೂತ್ ಶಟರ್ ರಿಮೋಟ್ನೊಂದಿಗೆ ಲಭಿಸುತ್ತದೆ. ಬ್ಲೂಟೂತ್ ಸಾಮರ್ಥ್ಯವು 3.0 ನಷ್ಟಿದೆ. ಅಂದರೆ ಇದು ಆಂಡ್ರಾಯ್ಡ್ 4.3 ಮತ್ತು ಹೆಚ್ಚಿನ ಮತ್ತು ಐಒಎಸ್ 5.0 ಮತ್ತು ದಕ್ಕಿಂತ ಮೇಲ್ಪಟ್ಟ ಸಾಮರ್ಥ್ಯವುಳ್ಳ ಸ್ಮಾರ್ಟ್ಫೋನ್ ಗಳನ್ನು ಬೆಂಬಲಿಸುತ್ತದೆ. ಎಮೈ ಸೆಲ್ಫಿ ಸ್ಟಿಕ್ ಟ್ರೈಪಾಡ್ಅನ್ನು 360 ಡಿಗ್ರಿಗಳ ವ್ಯಾಪ್ತಿಯಲ್ಲಿ ತಿರುಗಿಸಲು ಸಾಧ್ಯವಾಗುತ್ತದೆ. ಮತ್ತು ಮಿ ಮ್ಯಾಕ್ಸ್ 2 ನಂತಹ ಅತಿದೊಡ್ಡ ಸ್ಮಾಟ್ಫೋನ್ಗಳನ್ನು ಹೊಂದಿಸಲು ಹೊಂದಾಣಿಕೆ ಹಿಡಿತದೊಂದಿಗೆ ಬರುತ್ತದೆ. ಉತ್ಪನ್ನವು ಕೇವಲ ಒಂದು ಕಪ್ಪು ಬಣ್ಣದ ರೂಪಾಂತರದಲ್ಲಿ ಬರುತ್ತದೆ, 45×49.5x190mm ಅಳತೆ ಮಾಡುತ್ತದೆ, ಮತ್ತು 155 ಗ್ರಾಂ ತೂಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ