ರಸ್ತೆಬದಿಯಅನಧಿಕೃತವಾಹನಎತ್ತಂಗಡಿಗೆ ಬರಲಿವೆ ಟೋವಿಂಗ್‌ ವಾಹನ:ಡಿ.ಸಿ.ಪಿ


Team Udayavani, Jun 23, 2018, 11:02 AM IST

23-june-3.jpg

ಮಹಾನಗರ: ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸುವ ವಾಹನ ಮಾಲಕರ ವಿರುದ್ಧ ಕಠಿನ ಕ್ರಮ ಜರಗಿಸಲು ಪೊಲೀಸರು ಮುಂದಾಗಿದ್ದು, ಈ ನಿಟ್ಟಿನಲ್ಲಿ ನಾಲ್ಕು ಟೋವಿಂಗ್‌ ವಾಹನಗಳು ಶೀಘ್ರ ಮಂಗಳೂರು ಪೊಲೀಸ್‌ ಕಮಿಷನರೆಟ್‌ಗೆ ಬರಲಿವೆ.

ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಸಂಚಾರಿ ಪೊಲೀಸ್‌ ಠಾಣೆಗಳು ತಲಾ ಒಂದೊಂದು ಟೋವಿಂಗ್‌ ವಾಹನವನ್ನು ಹೊಂದಲಿವೆ ಎಂದು ಡಿಸಿಪಿ ಹನುಮಂತರಾಯ ಅವರು ಶುಕ್ರವಾರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ನಡೆದ ಫೋನ್‌ಇನ್‌ನಲ್ಲಿ ತಿಳಿಸಿದರು.

ನಗರದ ಪಿವಿಎಸ್‌ ವೃತ್ತದಿಂದ ಬಂಟ್ಸ್‌ ಹಾಸ್ಟೆಲ್‌ವರೆಗೆ ಸದಾ ಸಂಚಾರ ದಟ್ಟಣೆ ಇರುತ್ತದೆ. ರಸ್ತೆ ಮಧ್ಯೆ ಕೋನ್‌ಗಳನ್ನು ಅಳವಡಿಸಿದರೂ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಆದ್ದರಿಂದ ಇಲ್ಲಿ ಟೈಗರ್‌ ಮಾದರಿಯ ಕಾರ್ಯಾಚರಣೆ ನಡೆಸುವಂತೆ ನಗರದ ವ್ಯಕ್ತಿಯೊಬ್ಬರು ಫೋನ್‌ ಕರೆ ಮಾಡಿ ಸಲಹೆ ಮಾಡಿದ್ದರು.

ಇದಕ್ಕೆ ಸ್ಪಂದಿಸಿದ ಡಿಸಿಪಿ ಹನುಮಂತರಾಯ ಅವರು, ಈಗಾಗಲೇ ಅನಧಿಕೃತ ಪಾರ್ಕ್‌ ಮಾಡವ ವಾಹನಗಳನ್ನು ಎತ್ತಂಗಡಿಗೆ ನಾಲ್ಕು ಟೋವಿಂಗ್‌ ವಾಹನಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ವಾಹನಗಳು ನಗರಕ್ಕೆ ಆಗಮಿಸಲಿದ್ದು, ಬಳಿಕ ಟೈಗರ್‌ ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದರು.

ಅನಧಿಕೃತವಾಗಿ ನಿಲ್ಲಿಸಿರುವ ವಾಹನಗಳಿಗೆ ಇದುವರೆಗೆ ಸಂಚಾರಿ ಪೊಲೀಸರು ಲಾಕ್‌ ಹಾಕುತ್ತಿದ್ದರು. ಆದರೆ ಮುಂದೆ ಟೈಗರ್‌ ಕಾರ್ಯಾಚರಣೆಯಲ್ಲಿ ಟೋವಿಂಗ್‌ ವಾಹನದಲ್ಲೇ ಅನಧಿಕೃತ ಪಾರ್ಕಿಂಗ್‌ನಲ್ಲಿರುವ ವಾಹನಗಳನ್ನು ಎತ್ತಿ ಕೊಂಡೊಯ್ಯಲಿದೆ. ಬಳಿಕ ವಾಹನವನ್ನು ಪಡೆದುಕೊಳ್ಳಬೇಕಾದರೆ ಆಯಾ ಸಂಚಾರಿ ಪೊಲೀಸ್‌ ಠಾಣೆಗೆ ತೆರಳಿ ದಂಡ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದರು.

ರಾತ್ರಿ ಧ್ವನಿವರ್ಧಕದ ಶಬ್ದ ಮಾಲಿನ್ಯ: ದೂರು
ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯ ನಿಯಮದ ಪ್ರಕಾರ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳನ್ನು ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬಳಸುವಂತಿಲ್ಲ. ಆದರೆ ನಗರ ಪ್ರದೇಶದ ಕೆಲವು ಕಡೆಗಳಲ್ಲಿ ನಿಯಮ ಮೀರಿ ದೊಡ್ಡ ಧ್ವನಿಯಲ್ಲಿ ಮೈಕ್‌ ಬಳಸುತ್ತಿದ್ದಾರೆ. ಇದು ಪರಿಸರ ನಿಯಮದ ಉಲ್ಲಂಘನೆಯಾಗಿದೆ. ಪೊಲೀಸರಿಗೆ ದೂರು ನೀಡಿದರೆ, ಅಂತಹ ಧ್ವನಿ ಮಾಲಿನ್ಯವನ್ನು ಒಮ್ಮೆಗೆ ಸ್ಥಗಿತಗೊಳಿಸುತ್ತಾರೆಯೇ ವಿನಃ ಶಾಶ್ವತ ಪರಿಹಾರ ಸೂಚಿಸುತ್ತಿಲ್ಲ. ರಾತ್ರಿ ಧ್ವನಿವರ್ಧಕ ಉಪಯೋಗಕ್ಕೆ ನಿಷೇಧ ಇರುವಾಗ ಕ್ರಮ ಕೈಗೊಳ್ಳಲು ಪರಿಸರ ಇಲಾಖೆಯ ಅನುಮತಿಯ ಆವಶ್ಯಕತೆ ಏನಿದೆ ಎಂದು ಮೂಡಬಿದಿರೆಯ ಹಿರಿಯ ನಾಗರಿಕರೊಬ್ಬರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಡಿಸಿಪಿ ಹನುಮಂತರಾಯ, ಧ್ವನಿವರ್ಧಕ ಬಳಕೆಗೆ ಅನುಮತಿ ನೀಡುವ ಬಗೆಗಿನ 2014-15ರ ಕಾನೂನನ್ನು ಪರಿಷ್ಕರಿಸಿ ಹೊಸ ಕಾನೂನು ಜಾರಿಗೆ ಬಂದಿದೆ. ಈ ನಿಯಮದಡಿ ಕಠಿನ ಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ. ನಿಯಮವನ್ನು ಉಲ್ಲಂಘಿಸಿದರೆ ಈ ಹಿಂದೆ ಪೊಲೀಸರು ಮೈಕ್‌ ಸೆಟ್‌ ಮುಟ್ಟುಗೋಲು ಹಾಕುತ್ತಿದ್ದರು. ಹೊಸ ನಿಯಮದಂತೆ ಪೊಲೀಸರಿಗೆ ಕೇಸು ದಾಖಲಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಹನುಮಂತರಾಯ ತಿಳಿಸಿದರು. ಆದ್ದರಿಂದ ನಿಯಮ ಉಲ್ಲಂಘಿಸಿ ಧ್ವನಿ ವರ್ಧಕ ಬಳಕೆಯ ಪ್ರಕರಣಗಳು ಕಂಡು ಬಂದರೆ ಸಂಬಂಧ ಪಟ್ಟ ಪೊಲೀಸ್‌ ಠಾಣೆಯ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದರು.

ಡಿವೈಡರ್‌ನ ಗಿಡಗಳು ಅಡ್ಡಿ
ಕೊಟ್ಟಾರ ಚೌಕಿಯಲ್ಲಿ ಮಳೆ ಬಂದರೆ ರಸ್ತೆಯಲ್ಲೇ ನೀರು ನಿಲ್ಲುತ್ತದೆ. ತೆಗೆದಿರುವ ಹೂಳನ್ನು ಮತ್ತೆ ಚರಂಡಿಯ ಬದಿಯಲ್ಲೇ ಹಾಕಲಾಗಿದೆ. ಇದರಿಂದ ಭಾರಿ ಮಳೆ ಬಂದರೆ ಮತ್ತೆ ಹೂಳು ಚರಂಡಿ ಸೇರುತ್ತದೆ ಎಂದು ಸ್ಥಳೀಯ ನಿವಾಸಿ ರಾಮರಾವ್‌ ಆರೋಪಿಸಿದರು. ರಸ್ತೆ ಮಧ್ಯೆಯ ವಿಭಾಜಕಗಳಲ್ಲಿ ಗಿಡಗಳನ್ನು ಬೆಳೆಸುವುದು ಉತ್ತಮವೇ. ಆದರೆ ಗಿಡಗಳು ಎತ್ತರ ಇರುವಲ್ಲಿ ಅಲ್ಲಿಂದ ಹಠಾತ್ತನೆ ಪಾದಚಾರಿಗಳು ರಸ್ತೆ ದಾಟುತ್ತಾರೆ. ಇದು ಅಪಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ ರಸ್ತೆ ವಿಭಾಜಕಗಳಲ್ಲಿ ಗಿಡಗಳನ್ನು ಕಡಿಯಬೇಕು. ಇಲ್ಲವೇ ಕೇವಲ ಹುಲ್ಲು ಬೆಳೆಸಲು ಸೀಮಿತಗೊಳಿಸಬೇಕು ಎಂದರು. ಈ ವಿಚಾರವನ್ನು ಪಾಲಿಕೆ ಹಾಗೂ ಹೆದ್ದಾರಿ ಇಲಾಖೆಯ ಗಮನಕ್ಕೆ ತರುವುದಾಗಿ ಡಿಸಿಪಿ ತಿಳಿಸಿದರು.

ಇದು 80ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಇಂದು 18 ಕರೆಗಳು ಬಂದವು. ಸುಚೇತನ್‌, ಸಂಚಾರ ವಿಭಾಗದ ಎಸಿಪಿ ಮಂಜುನಾಥ್‌ ಶೆಟ್ಟಿ , ಇನ್ಸ್‌ಪೆಕ್ಟರ್‌ಗಳಾದ ದಿವಾಕರ್‌, ಸುನೀಲ್‌ ಕುಮಾರ್‌, ತಿಮ್ಮರಾಜು, ಪಿ. ಯೋಗೇಶ್ವರನ್‌, ಹೆಡ್‌ ಕಾನ್ಸ್‌ಟೆಬಲ್‌ ಪುರುಷೋತ್ತಮ ಉಪಸ್ಥಿತರಿದ್ದರು.

ಪ್ರಮುಖ ದೂರುಗಳು
.ಹೊನ್ನೆಕಟ್ಟೆಯಲ್ಲಿ ಭಾರೀ ಗಾತ್ರದ ವಾಹನಗಳು ರಸ್ತೆ ಬದಿಯಲ್ಲಿ ನಿಲ್ಲುವುದರಿಂದ ರಸ್ತೆ ಬದಿ ಹೊಂಡಗಳಾಗಿ ಶಾಲಾ ಮಕ್ಕಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. 

. ಕದ್ರಿ ಶಿವಭಾಗ್‌ನ ರೆಸ್ಟೋರೆಂಟ್‌ಗೆ ಆಗಮಿಸುವ ವಾಹನಗಳನ್ನು ರಸ್ತೆಯಲ್ಲೇ ಪಾರ್ಕ್‌ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅವರಿಗೆ ಪಾರ್ಕಿಂಗ್‌ಗೆ ಪರ್ಯಾಯ ವ್ಯವಸ್ಥೆ ಮಾಡಿ. 

.ಶಕ್ತಿನಗರದಲ್ಲಿ ಇಕ್ಕಟ್ಟಾದ ರಸ್ತೆಯ ಬದಿಯಲ್ಲೇ ಕಾರುಗಳನ್ನು ಪಾರ್ಕ್‌ ಮಾಡಲಾಗುತ್ತಿದ್ದು, ಇದ ರಿಂದ ಶಾಲಾ ವಾಹನಗಳ ಸಂಚಾರಕ್ಕೆ ತೊಂದರೆ.  

.ಹಂಪನಕಟ್ಟೆಯ ಬಲ್ಮಠ ರಸ್ತೆಯ ಅಂಗಡಿಯೊಂದರಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವಿಪರೀತವಾಗಿ ಧೂಮಪಾನ ಮಾಡುತ್ತಿದ್ದು, ಅವರ ವಿರುದ್ಧ ಕ್ರಮ ಜರಗಿಸಿ.  

.ಬಜಪೆಯ ಪೆರಾರ್‌-ಕೈಕಂಬ ಹಾಗೂ ಕಂಕನಾಡಿಗೆ ಪರವಾನಿಗೆ ಹೊಂದಿರುವ ಕೆಲವೊಂದು ಬಸ್‌ಗಳು ನಿಗದಿತ ಮಾರ್ಗದಲ್ಲಿ ಸಂಚರಿಸುತ್ತಿಲ್ಲ.

.ಎಕ್ಕೂರಿನಲ್ಲಿ ಅಪಘಾತಗಳು ಹೆಚ್ಚುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ಬ್ಯಾರಿಕೇಡ್‌ ಅಳವಡಿಸಿ. 

ಬಸ್‌ ಫುಟ್‌ಬೋರ್ಡ್‌ ಎತ್ತರ ಸಮಸ್ಯೆ 
ನಗರದಲ್ಲಿ ಸಂಚರಿಸುವ ಕೆಲವು ಖಾಸಗಿ ಬಸ್‌ಗಳಲ್ಲಿ ಸುಲಭವಾಗಿ ಹತ್ತಿ ಇಳಿಯಲು ಸಾಧ್ಯವಾಗುತ್ತಿಲ್ಲ. ಬಸ್‌ನ ಫುಟ್‌ಬೋರ್ಡ್‌ ಎತ್ತರದಲ್ಲಿರುವ ಕಾರಣ ಹಿರಿಯ ನಾಗರಿಕರಿಗೆ, ಮಹಿಳೆ ಯರಿಗೆ, ಶಾಲಾ ಮಕ್ಕಳಿಗೆ ಕಷ್ಟವಾಗುತ್ತಿದೆ. ಕೆಲವೊಮ್ಮೆ ಬಸ್‌ ಇಳಿಯುವ ಅಥವಾ ಹತ್ತುವ ಮೊದಲೇ ನಿರ್ವಾಹಕರು ಸೀಟಿ ಊದುತ್ತಾರೆ. ಇದರಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಸೂಚನೆ ನೀಡಬೇಕು ಎಂದು ಸುಭಾಸ್‌ನಗರದ ಮಹಿಳೆ ಯೊಬ್ಬರು ಕರೆ ಮಾಡಿ ತಿಳಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಭರವಸೆ ನೀಡಿದರು.

ಹಿರಿಯ ನಾಗರಿಕರ ಸೀಟು ಮೀಸಲಾತಿ
ಈಗ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಒಂದು ಸೀಟು ಮಾತ್ರ ಮೀಸಲಿದ್ದು, ಅದನ್ನು ಎರಡುಕ್ಕೆ ಏರಿಸಬೇಕು. ನಗರದ ಲೇಡಿಗೋಷನ್‌ ಮತ್ತು ಲೈಟ್‌ಹೌಸ್‌ ಹಿಲ್‌ ಮಧ್ಯೆ ಬಸ್‌ ತಂಗುದಾಣ ನಿರ್ಮಿಸಬೇಕೆಂದು ಲೋಕಾಯುಕ್ತರು ಆದೇಶ ನೀಡಿ ಕೆಲವು ಸಮಯ ಕಳೆದರೂ ಕಾರ್ಯಗತಗೊಂಡಿಲ್ಲ. ತೊಕ್ಕೊಟ್ಟು-ಪಂಪ್‌ವೆಲ್‌ ಮಧ್ಯೆ ಹೆದ್ದಾರಿ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿರುವುದರಿಂದ ನಾಗರಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಪರಿಸರಪ್ರೇಮಿ ಹಸನಬ್ಬ ತಿಳಿಸಿದರು. ಈ ಬಗ್ಗೆ ಆರ್‌ಟಿಒ, ಮಹಾನಗರಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಡಿಸಿಪಿ ತಿಳಿಸಿದರು.

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.