CONNECT WITH US  

ಫ್ರಾನ್ಸ್‌ ಡೀಪಿ ಉತ್ಸವಕ್ಕೆ ಮಂಗಳೂರು ಕಲಾವಿದರ ಪೋಸ್ಟರ್‌ ಆಯ್ಕೆ

ಮಂಗಳೂರು: ಫ್ರಾನ್ಸ್‌ನ ಡೀಪಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಪೋಸ್ಟರ್‌ ವಿನ್ಯಾಸಕ್ಕೆ ಮಂಗಳೂರಿನ ಕಲಾವಿದ ದಿನೇಶ್‌ ಹೊಳ್ಳ ಅವರ ಕಲಾಕೃತಿ ಆಯ್ಕೆಯಾಗಿದೆ.
48 ದೇಶಗಳು ಭಾಗವಹಿಸುವ ಜಗತ್ತಿನ ಅತಿದೊಡ್ಡ ಗಾಳಿಪಟ ಉತ್ಸವದ ಪೋಸ್ಟರ್‌ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪ್ರಚಾರವಾಗುತ್ತಿದೆ. ಅಮೆರಿಕ, ಕೆನಡ, ಆಸ್ಟ್ರೇಲಿಯ, ಯುರೋಪ್‌ ದೇಶಗಳ ಕಲಾವಿದರು ಪೋಸ್ಟರ್‌ ವಿನ್ಯಾಸ ಮಾಡಿದ್ದು, ಅಂತಿಮವಾಗಿ ದಿನೇಶ್‌ ಹೊಳ್ಳರ  ವಿನ್ಯಾಸ ಆಯ್ಕೆಯಾಗಿದೆ. ಪೋಸ್ಟರ್‌ ವಿನ್ಯಾಸದಲ್ಲಿ "ಜಾಗತಿಕ ತಾಪಮಾನ ಎಂಬ ನಮ್ಮ ಸ್ವಯಂಕೃತ ಅಪರಾಧಕ್ಕೆ ನಾವೇ ಪರಿಹಾರ ಹುಡುಕಬೇಕು' ಮತ್ತು ಎಲ್ಲರೂ ಕೈಜೋಡಿಸಬೇಕೆಂಬ ಸಂದೇಶವಿದೆ.

ಸೆ. 8ರಿಂದ 16ರ ವರೆಗೆ ಫ್ರಾನ್ಸ್‌ನ ಡೀಪಿ ನಗರದಲ್ಲಿ ಜರಗುವ ಉತ್ಸವಕ್ಕೆ ಭಾರತದ ಪ್ರತಿನಿಧಿಗಳಾಗಿ ಸರ್ವೇಶ್‌ ರಾವ್‌ ನೇತೃತ್ವದ ಟೀಮ್‌ ಮಂಗಳೂರು ತಂಡದ ದಿನೇಶ್‌ ಹೊಳ್ಳ ಮತ್ತು ಸತೀಶ್‌ ರಾವ್‌ ಭಾಗವಹಿಸಲಿದ್ದಾರೆ.


Trending videos

Back to Top