CONNECT WITH US  

ಹುತಾತ್ಮ ಸೈನಿಕರಿಗೆ ನಮನ 

ಕದ್ರಿಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ಹುತಾತ್ಮರಾದ ಸೈನಿಕರಿಗೆ ನಮನ ಕಾರ್ಯಕ್ರಮ ನಡೆಯಿತು.

ಮಹಾನಗರ : ಕಾರ್ಗಿಲ್‌ ವಿಜಯ ದಿವಸದ ಸ್ಮರಣಾರ್ಥ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಶ್ರೀ ಶಾಸ್ತಾವು ಭೂತನಾಥೇಶ್ವರ ಟ್ರಸ್ಟ್‌, ಲಯನ್ಸ್‌ ಜಿಲ್ಲೆ 317-ಡಿ ಮತ್ತು ಸಮಗ್ರ ಕಲಿಕಾ ಕೇಂದ್ರದ ಸಹಯೋಗದಲ್ಲಿ ಗುರುವಾರ ನಗರದ ಕದ್ರಿಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ನಮನ ಕಾರ್ಯಕ್ರಮ ನಡೆಯಿತು.

ಶ್ರೀ ಶಾಸ್ತಾವು ಭೂತನಾಥೇಶ್ವರ ದೇವಸ್ಥಾನದ ನವೀಕರಣದ ರೂವಾರಿ ವಿಜಯ ನಾಥ ವಿಠ್ಠಲ ಶೆಟ್ಟಿ, ಸಂಘದ ನಿಕಟಪೂರ್ವ ಅಧ್ಯಕ್ಷ ನಿಟ್ಟೆಗುತ್ತು ಶರತ್‌ ಭಂಡಾರಿ, ನಿವೃತ್ತ ಹಿರಿಯ ಭೂಸೇನಾಧಿಕಾರಿ ಐ.ಎನ್‌. ರೈ, ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಐರನ್‌, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂಜಾ ಪೈ, ಕಾರ್ಪೊರೇಟರ್‌ ರೂಪಾ ಡಿ. ಬಂಗೇರ, ಖಾಯಂ ಲೋಕ ಅದಾಲತ್‌ನ ಕಿಶೋರ್‌ ಚಂದ್ರ ಹೆಗ್ಡೆ, ಕ್ಯಾ| ಬ್ರಿಜೇಶ್‌ ಚೌಟ, ಗೃಹರಕ್ಷಕದಳ ಕಮಾಡೆಂಟ್‌ ಡಾ| ಮುರಳಿ ಮೋಹನ್‌ ಚೂಂತಾರು, ಕುಸುಮಾಕರ್‌, ಎನ್‌ಸಿಸಿ ಅಧಿಕಾರಿ ಲೆಫ್ಟಿ ನೆಂಟ್‌ ಕರ್ನಲ್‌ ಗ್ರೇಶಿಯನ್‌ ಸಿಕ್ವೇರಾ, ಡಾ| ಆಶಾ ಜ್ಯೋತಿ ರೈ, ಕದ್ರಿ ಠಾಣೆ ಪಿಎಸ್‌ಐ ಮಾರುತಿ, ಸಚಿತಾ ನಂದಗೋಪಾಲ್‌ ಮೊದಲಾದವರು ಉಪಸ್ಥಿತರಿದ್ದರು.


Trending videos

Back to Top