CONNECT WITH US  

ಖಗ್ರಾಸ ಚಂದ್ರಗ್ರಹಣ ದೇಗುಲಗಳಲ್ಲಿ ನಿಗದಿಗಿಂತ ಮುನ್ನ ಪೂಜೆ

ಮಂಗಳೂರು/ಉಡುಪಿ: ಶತಮಾನದ ಖಗ್ರಾಸ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಸ್ಥಾನಗಳಲ್ಲಿ ಶುಕ್ರ ವಾರ ಸುಮಾರು ಎರಡು ಗಂಟೆ ಮುಂಚಿತವಾಗಿಯೇ ರಾತ್ರಿ ಪೂಜೆಯನ್ನು ನೆರವೇರಿಸಲಾಯಿತು. ಆದರೆ ದೇವಸ್ಥಾನಗಳು ಪ್ರತಿದಿನದಂತೆ ರಾತ್ರಿ ಒಂಬತ್ತರವರೆಗೂ ತೆರೆದಿದ್ದವು.

ಈ ಶತಮಾನದ ಸುದೀರ್ಘ‌ ಅವಧಿಯ ಕೆಂಪು ರಕ್ತ ಚಂದ್ರಗ್ರಹಣ ಇದಾಗಿದೆ. ಭಾರತೀಯರ ನಂಬಿಕೆಯ ಪ್ರಕಾರ ಗ್ರಹಣ ಹಿಡಿಯುವ ಕೆಲವು ಗಂಟೆಗಳ ಮುಂಚಿತವಾಗಿಯೇ ಯಾವುದೇ ಶುಭ ಕಾರ್ಯ, ಪೂಜೆ ಪುನಸ್ಕಾರಾದಿಗಳನ್ನು ಮಾಡುವಂತಿಲ್ಲ. ಹಾಗಾಗಿ ನಗರದ ದೇವಸ್ಥಾನಗಳಲ್ಲಿನ ರಾತ್ರಿ ಪೂಜಾ ವಿಧಿ ವಿಧಾನಗಳಲ್ಲಿಯೂ ಶುಕ್ರವಾರ ಬದಲಾವಣೆ ಮಾಡಲಾಗಿತ್ತು. ಶ್ರೀಕೃಷ್ಣ ಮಠದಲ್ಲಿ ಚಾತುರ್ಮಾಸ್ಯ ಅವಧಿಯಾದ ಕಾರಣ ಎಂದಿನಂತೆ ರಾತ್ರಿ 7.30ಕ್ಕೆ ಪೂಜೆ ಆರಂಭ ವಾಗಿ 8.15ಕ್ಕೆ ಮುಕ್ತಾಯಗೊಂಡಿತು. ಗ್ರಹಣ ಕಾಲದಲ್ಲಿ ಏರ್ಪಡಿಸಿದ ಗ್ರಹಣ ಶಾಂತಿ ಯಲ್ಲಿ ಪರ್ಯಾಯ ಶ್ರೀ ಪಲಿಮಾರು ಶ್ರೀಪಾದರು ಸಹಿತ ನೂರಾರು ಭಕ್ತರು ಪಾಲ್ಗೊಂಡಿದ್ದರು. ಗ್ರಹಣ ಕಾಲದಲ್ಲಿ ಕೃಷ್ಣ ಮಠ ತೆರೆದಿದ್ದು ಮಧ್ವಸರೋವರದಲ್ಲಿ ವೈದಿಕರು ಜಪ, ಪಾರಾಯಣ ನಡೆಸಿದರು. 

ದೇಗುಲಗಳಲ್ಲಿ ಭಕ್ತರ ದಟ್ಟಣೆ ಕಡಿಮೆ
ಕುಂದಾಪುರ: ಚಂದ್ರಗ್ರಹಣ ಪ್ರಯುಕ್ತ ಶುಕ್ರವಾರ ಕೊಲ್ಲೂರು, ಆನೆ ಗುಡ್ಡೆ, ಮಾರಣಕಟ್ಟೆ, ಹಟ್ಟಿಯಂಗಡಿ, ಕಮಲ ಶಿಲೆ ದೇವಸ್ಥಾನಗಳಲ್ಲಿ ಮಧ್ಯಾಹ್ನ ಬಳಿಕ ಭಕ್ತರ ಸಂಖ್ಯೆ ಇಳಿ ಮುಖ ಗೊಂಡಿತ್ತು. 
ಕೊಲ್ಲೂರಿನಲ್ಲಿ ಎಂದಿನಂತೆ ಬೆಳಗ್ಗಿನಿಂದ ಸಂಜೆಯವರೆಗೂ ಪೂಜೆ, ಸೇವೆ ಗಳಿದ್ದರೂ, ಮಧ್ಯಾಹ್ನದ ಬಳಿಕ ದೇವರ ದರ್ಶನಕ್ಕೆ ಆಗಮಿಸಿದ ಭಕ್ತರ ಸಂಖ್ಯೆ ಕಡಿಮೆಯಿತ್ತು. ಆನೆಗುಡ್ಡೆ ಹಾಗೂ ಹಟ್ಟಿಯಂಗಡಿಯಲ್ಲಿ ದೇವ ಸ್ಥಾನ ತೆರೆದಿದ್ದರೂ, ಭಕ್ತರ ಸಂಖ್ಯೆ ವಿರಳವಾಗಿತ್ತು. ಮಾರಣಕಟ್ಟೆಯಲ್ಲಿ ಮಧ್ಯಾಹ್ನ 1.30ರ ಅನಂತರ ದೇವರ ದರ್ಶನ ವಿದ್ದರೂ, ಭಕ್ತರು ಹೆಚ್ಚಿನ ಪ್ರಮಾಣದಲ್ಲಿರಲಿಲ್ಲ. ಕದ್ರಿ ಶ್ರೀ ಮಂಜುನಾಥ ದೇವ ಸ್ಥಾನ ದಲ್ಲಿ ರಾತ್ರಿ 8 ಗಂಟೆಯ ಮಹಾ ಪೂಜೆಯನ್ನು 7 ಗಂಟೆಗೇ ನೆರವೇರಿಸಲಾಗಿತ್ತು. ಗ್ರಹಣ ದೋಷವಿರುವ ಭಕ್ತಾದಿಗಳು ಜು. 28 ರಂದು ಕೂಡ ಎಳ್ಳೆಣ್ಣೆ ಹಾಗೂ ಧಾನ್ಯ ಸಮರ್ಪಿಸಲು ಅವಕಾಶವಿದೆ.  

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ರಾತ್ರಿ ಪೂಜೆ ಸಂಜೆ 6.15ಕ್ಕೇ ಮುಗಿದಿದೆ. ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ದೈನಂದಿನ ಪೂಜೆ ಗಳು ಯಥಾ ಪ್ರಕಾರ ನಡೆದಿದೆ. ಗ್ರಹಣ ಆರಂಭ ಕಾಲವಾದ ರಾತ್ರಿ 11.54ರಿಂದ ಗ್ರಹಣಮೋಕ್ಷವಾದ ಮುಂಜಾನೆ 3.38ರ ವರೆಗೂ ದೇವಾಲಯ ತೆರೆದಿತ್ತು.


Trending videos

Back to Top