CONNECT WITH US  

60 ಶಾಲೆಗಳಿಗೆ ಬಿಸಿಯೂಟ ಪೂರೈಕೆ ಯೋಜನೆಗೆ ಚಾಲನೆ 

ಮಕ್ಕಳ ಬಿಸಿಯೂಟ ಯೋಜನೆಗೆ ಚಾಲನೆ ನೀಡಲಾಯಿತು.

ಸುರತ್ಕಲ್‌: ಎಂಟಿಆರ್‌ ಫ‌ುಡ್ಸ್‌ ಪ್ರೈ.ಲಿ. ತನ್ನ ನಮ್ಮ ಮಕ್ಕಳು ನಮ್ಮ ಎಂಟಿಆರ್‌ ಕಾರ್ಯಕ್ರಮದಡಿ ಅಕ್ಷಯ ಪಾತ್ರೆ ಪ್ರತಿಷ್ಠಾನದ ಸಹಯೋಗದೊಂದಿಗೆ ಸುರತ್ಕಲ್‌ ಮತ್ತು ಮಂಗಳೂರು ಸುತ್ತಮುತ್ತಲಿನ 60 ಶಾಲೆಗಳ ಆರು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಒಂದು ವರ್ಷದವರೆಗೆ ಮಧ್ಯಾಹ್ನದ ಬಿಸಿಯೂಟ ವನ್ನು ಒದಗಿಸುವ ಕಾರ್ಯಕ್ರಮಕ್ಕೆ ಶುಕ್ರವಾರ ಸುರತ್ಕಲ್‌ ಎನ್‌ ಐಟಿಕೆಯಲ್ಲಿ ಚಾಲನೆ ನೀಡಲಾಯಿತು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಕರ್ತವ್ಯ ನಮ್ಮದಾಗಿದೆ. ಜಿಲ್ಲೆಯಲ್ಲಿ ಪೌಷ್ಟಿಕಾಂಶದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಕಡಿಮೆಯಿದೆ. ಎಂಟಿಆರ್‌, ಇಸ್ಕಾನ್‌ ಕೇಂದ್ರ ಬಿಸಿಯೂಟ ನೀಡುವ ಮೂಲಕ ಹೆಚ್ಚಿನ ಮಕ್ಕಳು ಹಸಿವು ಮುಕ್ತವಾಗಿರುವಂತೆ ಮಾಡಿರುವುದು ಶ್ಲಾಘನೀಯ ಎಂದರು. ಎಂಟಿಆರ್‌ ಸಿಇಒ ಸಂಜಯ ಶರ್ಮ, ಗಣೇಶ್‌ ಶೆಣೈ ಮತ್ತು ಸುನಯ್‌ ಭಾಸಿನ್‌, ಸಂದೀಪ್‌ತಲ್ವಾರ್‌, ಕಾರುಣ್ಯಸಾಗರ್‌, ಶಿಕ್ಷಕರು ಉಪಸ್ಥಿತರಿದ್ದರು. ಪದ್ಮನಾಭ್‌ ಸ್ವಾಗತಿಸಿದರು. ಸುಧಾಕರ ರಾವ್‌ ಪೇಜಾವರ ನಿರೂಪಿಸಿದರು.


Trending videos

Back to Top