CONNECT WITH US  

ನಗರ ಸಂಸ್ಥೆಗಳ ಮೀಸಲಾತಿ ಬದಲು: ಬಿಜೆಪಿಯ ರೊಟ್ಟಿ ಕಾಂಗ್ರೆಸ್‌ ತಟ್ಟೆಗೆ

ಮಂಗಳೂರು/ಉಡುಪಿ: ಕೆಲವು ನಗರಾಡಳಿತ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಬದ ಲಾಯಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಬಿಜೆಪಿ ಅಧಿಕಾರ ನಡೆಸಬಹುದಾದ ಕಡೆ ಅಧಿಕಾರ ಕೈತಪ್ಪಿ ಕಾಂಗ್ರೆಸ್‌ ಪಾಲಾಗುವ ಸಾಧ್ಯತೆ ಇದೆ. 

ಅಧ್ಯಕ್ಷರ ಹುದ್ದೆ ಕಾಂಗ್ರೆಸ್‌ ಪಾಲಾದರೂ ಸದನದಲ್ಲಿ ಬಿಜೆಪಿ ಬಹುಮತ ಹೊಂದಿರುತ್ತದೆ. ಇಂತಹ ಸಂದರ್ಭ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕಷ್ಟವಾಗುತ್ತದೆ. ಆದರೆ ಅಧ್ಯಕ್ಷರ ವಿವೇಚನಾಧಿಕಾರದ ಮೇಲೆ ಒಂದಿಷ್ಟು ನಿರ್ಣಯ ತಳೆಯಲು ಸಾಧ್ಯವಾಗುತ್ತದೆ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಕಡತಗಳು ಅಧ್ಯಕ್ಷರಲ್ಲಿ ಹೋಗುತ್ತವೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ದಿನ ವಿಪಕ್ಷದವರು ಕೋರಂ ಆಗದಂತೆ ನೋಡಿಕೊಂಡರೆ ಆಡಳಿತಾಧಿಕಾರಿ ಅಧಿ ಕಾರ  ವಹಿಸಿಕೊಳ್ಳಬೇಕಾಗುತ್ತದೆ. ಬಿಜೆಪಿ ಇಂತಹ ಪ್ರಯತ್ನ ನಡೆಸುವ ಸಾಧ್ಯತೆಯೂ ಇದೆ. ನ್ಯಾಯಾಲಯದ ಮೆಟ್ಟಿಲು ಏರುವ ಸಾಧ್ಯತೆಯೂ ಇಲ್ಲದಿಲ್ಲ. 

ಬಂಟ್ವಾಳ: ಎಸ್‌ಡಿಪಿಐ, ಬಿಜೆಪಿ ಕೈತಪ್ಪಿದ ಅವಕಾಶ
ಬಂಟ್ವಾಳ: ಅತಂತ್ರ ಫಲಿತಾಂಶ ದಾಖಲಿಸಿದ ಬಂಟ್ವಾಳ ಪುರಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಬದಲಾಗಿದ್ದು, ಪರಿಶಿಷ್ಟ ಜಾತಿಗೆ ಮರುನಿಗದಿಯಾಗಿದೆ. ಈ ಹಿಂದೆ ಇದು ಸಾಮಾನ್ಯ ಮಹಿಳೆಗೆ ಘೋಷಣೆ ಆಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಹಿಂದುಳಿದ ವರ್ಗ ಎ ಆಗಿಯೇ ಮುಂದುವರಿದಿದೆ. ಬದಲಾದ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ದಕ್ಕಲಿದೆ. ಏಕೆಂದರೆ ಅಂತಹ ಏಕಮಾತ್ರ ಅಭ್ಯರ್ಥಿ ಇರುವುದು ಕಾಂಗ್ರೆಸ್‌ನಲ್ಲಿ. ಬಿಜೆಪಿ ಮತ್ತು ಎಸ್‌ಡಿಪಿಐಯ ಆಯ್ಕೆಗೊಂಡ ಸದಸ್ಯರಲ್ಲಿ ಪರಿಶಿಷ್ಟ ಜಾತಿಯವರು ಇಲ್ಲದಿರುವುದರಿಂದ ಈ ಎರಡೂ ಪಕ್ಷಗಳಿಗೆ ಅವಕಾಶ ಕೈತಪ್ಪಲಿದೆ.

ಉಳ್ಳಾಲ ನಗರಸಭೆ: ಮೀಸಲಾತಿ ಅದಲು ಬದಲು
ಉಳ್ಳಾಲ: ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಮೀಸ ಲಾತಿ ಅದಲು ಬದಲಾಗಿ ಹಿಂದುಳಿದ ವರ್ಗ ಬಿಗೆ ಅಧ್ಯಕ್ಷ, ಹಿಂದುಳಿದವರ್ಗ ಎಗೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಮಾತ್ರ ಅಭ್ಯರ್ಥಿ
ಗಳಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೇರುವುದು ನಿಚ್ಚಳವಾಗಿದೆ. ಪಕ್ಷೇತರರು ಯಾ ಜೆಡಿಎಸ್‌ ಬೆಂಬಲದೊಂದಿಗೆ ಅಧಿಕಾರ ಹಿಡಿಯುವ ಲೆಕ್ಕಾಚಾರ ನಡೆದಿತ್ತು. ಆದರೆ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಯಿಂದ ಮೈತ್ರಿಗೆ ಅಡ್ಡಿ ಯಾಗಿತ್ತು. ಹೊಸ ಮೀಸಲಾತಿಯಿಂದ ಮೈತ್ರಿ ಸುಗಮವಾಗಿದೆ.
ಕಾಂಗ್ರೆಸ್‌ 13 ಸದಸ್ಯ ಬಲ ಹೊಂದಿದ್ದು, ಬಿಜೆಪಿ, ಎಸ್‌ಡಿಪಿಐ ತಲಾ 6 ಸದಸ್ಯ ಬಲ ಹೊಂದಿವೆ. ಜೆಡಿಎಸ್‌ನ ನಾಲ್ವರು ಮತ್ತು ಇಬ್ಬರು ಪಕ್ಷೇತರರಿದ್ದಾರೆ. ಜೆಡಿಎಸ್‌ ಮೈತ್ರಿಗೆ ಒಂದು ಹೆಜ್ಜೆ ಮುಂದೆ ಇದ್ದರೂ ಪಕ್ಷೇತರ
ರೊಂದಿಗೆ ಮಾತುಕತೆ ನಡೆಯುತ್ತಿದೆ. ಯಾರೊಂದಿಗೆ ಎಂದು ತೀರ್ಮಾನವಾಗಿಲ್ಲ.

ಕುಂದಾಪುರ ಪುರಸಭೆ: "ಕೈ'ಗೆ ಬಂದ ತುತ್ತು ಬಿಜೆಪಿಗಿಲ್ಲ!
ಕುಂದಾಪುರ: ಪುರಸಭೆ ಅಧ್ಯಕ್ಷತೆ ಹುದ್ದೆ ಮೀಸಲಾತಿ ಬದಲಾಗಿದ್ದು, ಕಾಂಗ್ರೆಸ್‌ ಪಾಲಾಗಲಿದೆ. ಬಿಜೆಪಿಗೆ ಬಹುಮತ ಇದ್ದರೂ ಮೀಸಲಾತಿಯ ಅಭ್ಯರ್ಥಿ ಇಲ್ಲದಿರುವುದು ಸಮಸ್ಯೆಯಾಗಿದೆ. ಈ ಮೊದಲು ಸಾಮಾನ್ಯ ಮಹಿಳಾ ಮೀಸಲಾತಿ ಇದ್ದುದು ಈಗ ಹಿಂದುಳಿದ ವರ್ಗ ಬಿ ಮಹಿಳೆ ಆಗಿದೆ. ಬಹುಮತ ಪಡೆದ ಬಿಜೆಪಿಯಲ್ಲಿ ಅಧ್ಯಕ್ಷ ಮೀಸಲಾತಿಯ ಅಭ್ಯರ್ಥಿ ಇಲ್ಲ. ಕಾಂಗ್ರೆಸ್‌ನಲ್ಲಿ ಇದ್ದಾರೆ. ಉಪಾಧ್ಯಕ್ಷತೆ ಎಸ್‌ಸಿ ಮೀಸಲಾತಿಗೆ ಬಿಜೆಪಿ ಯಲ್ಲಿ ಒಬ್ಬರೇ ಅಭ್ಯರ್ಥಿ ಇದ್ದಾರೆ. ಹಿಂದುಳಿದ ವರ್ಗ ಬಿ ಮಹಿಳಾ ಮೀಸಲಾತಿ ಈವರೆಗೆ ಇಲ್ಲಿನ ಪುರಸಭೆಯಲ್ಲಿ ಬರದ ಕಾರಣ ನ್ಯಾಯಾಲಯದ ಮೊರೆ ಹೊಕ್ಕರೂ ಮೀಸಲಾತಿ ರದ್ದಾಗುವುದು ಕಷ್ಟ. ಇಂತಹ ಸನ್ನಿವೇಶ ಬರುವ ಸಾಧ್ಯತೆಯನ್ನು ಫ‌ಲಿ ತಾಂಶದ ದಿನವೇ ಊಹಿಸಲಾಗಿತ್ತು.

ಕಾರ್ಕಳ ಪುರಸಭೆ:  ಬದಲಾದ ಮೀಸಲಾತಿ
ಅಜೆಕಾರು: ಕಾರ್ಕಳ ಪುರಸಭೆಯ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾ ಗಿದ್ದು, ಪ. ಜಾತಿ ಮಹಿಳೆಗೆ ಬಂದಿದೆ. ಈ ಹಿಂದೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಬದಲಾದ ಮೀಸಲಾತಿಯಂತೆ ಆಡಳಿತ ಚುಕ್ಕಾಣಿ ಕಾಂಗ್ರೆಸ್‌ ಪಾಲಾಗಲಿದೆ. 
ಹಿಂದಿನ ಮೀಸಲಾತಿಯಂತೆ ಶಾಸಕ ಹಾಗೂ ಸಂಸದರ ಮತದೊಂದಿಗೆ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ 
ವಾಗಿತ್ತು. ಆದರೆ ಈಗ ಕಾಂಗ್ರೆಸ್‌ನ ಸದಸ್ಯೆ ಅಧ್ಯಕ್ಷರಾಗುವ ಅವಕಾಶವಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್‌
ನಿಂದ 12 ಮಹಿಳೆಯರು ಇದ್ದು, ಅಧ್ಯಕ್ಷರಾಗುವ ಒಬ್ಬರನ್ನು ಹೊರತುಪಡಿಸಿ ಉಳಿದ 11 ಮಂದಿಗೆ ಉಪಾಧ್ಯಕ್ಷರಾ ಗುವ ಅವಕಾಶವಿದೆ. ಶಾಸಕ ಹಾಗೂ ಸಂಸದರ ಮತಗಳಿಂದ ಉಪಾಧ್ಯಕ್ಷ ಸ್ಥಾನ ಬಿಜೆಪಿ ಉಳಿಸಿಕೊಳ್ಳುವ ಸಾಧ್ಯತೆ ಇದೆ.

ಕಾನೂನು ಹೋರಾಟ: ಬಿಜೆಪಿ ಎಚ್ಚರಿಕೆ
ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಮೀಸಲಾತಿ ನಿಗದಿಯಾಗಿತ್ತು. ಈಗ ನಮ್ಮ ಅಭ್ಯರ್ಥಿಗಳು ಇಲ್ಲದ ಸ್ಥಾನಗಳಿಗೆ ಮೀಸಲಾತಿ ತಂದಿದ್ದಾರೆ. ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಮನಬಂದಂತೆ ಮೀಸಲಾತಿಯನ್ನು ತಿದ್ದುಪಡಿ ತರಲು ಆಗುವುದಿಲ್ಲ. ನಾವು ಕಾನೂನು ಹೋರಾಟ ನಡೆಸುತ್ತೇವೆ ಮತ್ತು ಇಂತಹ ಪ್ರಯತ್ನಗಳಾದ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ.
- ಮಟ್ಟಾರು ರತ್ನಾಕರ ಹೆಗ್ಡೆ  , ಜಿಲ್ಲಾ  ಬಿಜೆಪಿ ಅಧ್ಯಕ್ಷರು, ಉಡುಪಿ

ಪಕ್ಷಕ್ಕಾಗಿ ತಿದ್ದುಪಡಿ ತಪ್ಪು ಕಲ್ಪನೆ: ಕಾಂಗ್ರೆಸ್‌
ಕೆಲವೆಡೆ ನಗರಸಂಸ್ಥೆಗಳ ಮೀಸಲಾತಿಯನ್ನು ಬದಲಾಯಿಸಲಾಗಿದೆ. ಇದು ಪಕ್ಷಕ್ಕಾಗಿ ಮಾಡಿದ ತಿದ್ದುಪಡಿ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಇದು ತಪ್ಪು ಕಲ್ಪನೆ. ಮೀಸಲಾತಿಯಂತೆ ಅವರಿಗೆ ಸಿಕ್ಕುವುದಾದರೆ ಅವರಿಗೆ ಸಿಗುತ್ತದೆ, ನಮಗೆ ಸಿಗುವುದಾದರೆ ನಮಗೆ ಸಿಗುತ್ತದೆ. 
- ಜನಾರ್ದನ ತೋನ್ಸೆ  , ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು, ಉಡುಪಿ

ಅನುಕೂಲಕ್ಕೆ ತಕ್ಕ ಮೀಸಲಾತಿ
ಸರಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಮೀಸಲಾತಿಯಲ್ಲಿ ಬದಲಾವಣೆ ತರುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಚುನಾವಣೆಗೆ ಮುನ್ನ ಮೀಸಲಾತಿ ಘೋಷಣೆ ಮಾಡಬೇಕು. ಚುನಾವಣೆ ಬಳಿಕ ಘೋಷಿಸುವುದು ತಪ್ಪು.
- ಸಂಜೀವ ಮಠಂದೂರು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ

ನಮ್ಮ ಕೈವಾಡವಿಲ್ಲ
ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕ್ರಿಯೆ ಪದ್ಧತಿಯ ಪ್ರಕಾರವೇ ನಡೆದಿದೆ. ಇದರಲ್ಲಿ  ನಮ್ಮ ಪಕ್ಷದ ಯಾವುದೇ ಕೈವಾಡವಿಲ್ಲ.
- ಹರೀಶ್‌ ಕುಮಾರ್‌ ದ.ಕ. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ


Trending videos

Back to Top