CONNECT WITH US  

ಪಿವಿಎಸ್‌ ಶೌಚಾಲಯ ಸಾರ್ವಜನಿಕರಿಗೆ ಮುಕ್ತ 

ಮಹಾನಗರ: ಮಹಾನಗರ ಪಾಲಿಕೆ ಅಧೀನದ ಪಿವಿಎಸ್‌ ಸರ್ಕಲ್‌ ಬಳಿಯ ಶೌಚಾಲಯ ಕೊನೆಗೂ ಸಾರ್ವಜನಿಕರಿಗೆ ಮುಕ್ತವಾಗಿದೆ. ಶುಕ್ರವಾರದಿಂದ ಶೌಚಾಲಯವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದ್ದು, ವಿದ್ಯುತ್‌, ನೀರು ಸೇರಿದಂತೆ ಅಗತ್ಯವಿರುವ ಎಲ್ಲ ಸೌಲಭ್ಯಗಳೊಂದಿಗೆ ಭದ್ರತಾ ಸಿಬಂದಿಯನ್ನು ಒದಗಿಸಿ ಶೌಚಾಲಯವನ್ನು ಮತ್ತೆ ತೆರೆಯಲಾಗಿದೆ.

ಶೌಚಾಲಯದ ಅವ್ಯವಸ್ಥೆ ಮತ್ತು ಮುಚ್ಚಿದ ಬಗ್ಗೆ ಸುದಿನ ಈ ಹಿಂದೆ ವರದಿ ಪ್ರಕಟಿಸಿತ್ತು. ಆದಾದ ಬಳಿಕ ಪಾಲಿಕೆ ಶೌಚಾಲಯವನ್ನು ದುರಸ್ತಿ ಮಾಡಿ ಟೆಂಡರ್‌ ಹಾಗೂ ಇನ್ನಿತರ ಕಾರಣ ನೀಡಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿತ್ತು. ಇದೀಗ ಎಲ್ಲ ಸೌಲಭ್ಯಗಳೊಂದಿಗೆ ಶೌಚಾಲಯ ಸಾರ್ವಜನಿಕರಿಗೆ ಮುಕ್ತವಾಗಿದೆ. ಬಲ್ಲಾಳ್‌ಬಾಗ್‌, ಬಂಟ್ಸ್‌ ಹಾಸ್ಟೆಲ್‌, ನವಭಾರತ್‌ ಸರ್ಕಲ್‌ ಭಾಗಗಳಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೆ ಇದ್ದುದರಿಂದ ಪಿವಿಎಸ್‌ ಸರ್ಕಲ್‌ ಬಳಿ ಇದ್ದ ಶೌಚಾಲಯ ಇದೀಗ ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗಿದೆ.


Trending videos

Back to Top