ದೀಪಿಕಾ ಮದುವೆಯಲ್ಲಿ ಕರಾವಳಿ ಟೀಂ!


Team Udayavani, Nov 18, 2018, 6:00 AM IST

c-16.jpg

ಮಂಗಳೂರು: ಕರಾವಳಿ ಮೂಲದ ಸಿನೆಮಾ ನಟ-ನಟಿಯರು ಬಾಲಿವುಡ್‌ನ‌ಲ್ಲಿ ಎಷ್ಟೇ ತಾರಾ ಮೌಲ್ಯ ಗಳಿಸಿಕೊಂಡರೂ ತಾಯಿ ಬೇರುಗಳನ್ನು ಮರೆಯುವುದಿಲ್ಲ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಈ ಸಾಲಿಗೆ ಹೊಸ ಸೇರ್ಪಡೆ ದೀಪಿಕಾ ಪಡುಕೋಣೆ. ದೀಪಿಕಾ ಮತ್ತು ನಟ ರಣವೀರ್‌ ಸಿಂಗ್‌ ವಿವಾಹ ನ.14ರಂದು ಇಟಲಿಯ ಲೇಕ್‌ ಕೋಮೊ ರೆಸಾರ್ಟ್‌ ನಲ್ಲಿ ನಡೆಯಿತು. ಅಲ್ಲೂ ಕರಾವಳಿ ಸಂಸ್ಕೃತಿ ಮೇಳೈಸಿತ್ತು. ಪಕ್ಕಾ ಕೊಂಕಣಿ ಸಂಪ್ರದಾಯದಲ್ಲಿ ಈ ಮದುವೆ ನಡೆದದ್ದು ವಿಶೇಷ. ನಿಶ್ಚಿತಾರ್ಥ ಸಂದರ್ಭದಲ್ಲಿಯೂ ದೀಪಿಕಾ ತಂದೆ ಪ್ರಕಾಶ್‌ ಪಡುಕೋಣೆ ಅಳಿಯನನ್ನು ತೆಂಗಿನಕಾಯಿ ನೀಡಿ, ಕಾಲು ತೊಳೆದು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದರು. ಕರಾವಳಿ ಪ್ರದೇಶದ ಈ ವಿಧಿಯನ್ನು ದೀಪಿಕಾ ಕುಟುಂಬ ಮರೆಯದೆ ಪಾಲಿಸಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿತ್ತು.

ಮಂಗಳೂರಿನ ಕೇಟರಿಂಗ್‌ ಟೀಂ
ದೀಪಿಕಾ ಮದುವೆಯಲ್ಲಿ “ಊರಿನ’ ಊಟೋಪಹಾರ ಉಣ ಬಡಿಸುವ ಸದವಕಾಶ ಮಂಗಳೂರಿನ ರಥಬೀದಿ ಮೂಲದ ಗಣೇಶ್‌ ನಾಯಕ್‌ ಅವರ ಕೇಟರಿಂಗ್‌ ಟೀಂಗೆ ಲಭಿಸಿದೆ. ಗಣೇಶ್‌ ನಾಯಕ್‌ ಸದ್ಯ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸೋನಾ ಕೇಟರಿಂಗ್‌ ಉದ್ಯಮ ನಡೆಸುತ್ತಿದ್ದಾರೆ. ಅವರ ತಂಡದ ಜತೆ ಪತ್ನಿ ಸರೋಜ್‌ ನಾಯಕ್‌, ಮಗ ಅರ್ಜುನ್‌ ಕೂಡ ತೆರಳಿದ್ದಾರೆ. ದೀಪಿಕಾ ಮತ್ತು ಗಣೇಶ್‌ ನಾಯಕ್‌ ಕುಟುಂಬ ಸ್ನೇಹಿತರು. ಗಣೇಶ್‌ ನಾಯಕ್‌ ಅವರ ಪುತ್ರ ಶ್ರವಣ್‌ “ಉದಯವಾಣಿ’ಗೆ ಜತೆ ಮಾತನಾಡಿ, ಕೊಂಕಣಿ ಶೈಲಿಯ ಖಾದ್ಯ ತಯಾರಿಸಿ ಉಣಬಡಿಸಲಾಗಿದೆ ಎಂಬ ಮಾಹಿತಿ ನನಗಿದೆ. ತಂದೆ ಸೋಮ ವಾರ ಇಟಲಿಯಿಂದ ಭಾರತಕ್ಕೆ ಆಗಮಿಸಲಿದ್ದು, ಹೆಚ್ಚಿನ ಮಾಹಿತಿ ಬಳಿಕವಷ್ಟೇ ಲಭಿಸಬೇಕಿದೆ ಎಂದಿದ್ದಾರೆ.

ಹೊನ್ನಾವರದ ಪುರೋಹಿತರಿಂದ ಮಂಗಳ ಕಾರ್ಯ
ದೀಪಿಕಾ ಮತ್ತು ತಂದೆ ಪ್ರಕಾಶ್‌ ಪಡುಕೋಣೆ ಮೂಲತಃ ಉಡುಪಿ ಜಿಲ್ಲೆಯ ಪಡುಕೋಣೆಯವರು. ಇಟೆಲಿಯಲ್ಲಿ ದೀಪಿಕಾ-ರಣವೀರ್‌ ಸಿಂಗ್‌ ವಿವಾಹ ಮಂಗಳಕಾರ್ಯ ವನ್ನು ನಡೆಸಿದ್ದು ಹೊನ್ನಾವರದ ಗುರುದಾಸ್‌ ಭಟ್‌. ಮದುವೆಯ ಸುಂದರ ಕ್ಷಣವನ್ನು ಸೆರೆಹಿಡಿಯಲು ಹೋದವರು ಮಂಗಳೂರು ಮೂಲದ ಫೋಟೊ ಗ್ರಾಫರ್‌ ಕ್ಲಾಡ್‌ ಲೊರಿನ್‌. ಅವರು ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ವೈಭವದ ಮದುವೆಯ ಫೋಟೋ ಕ್ಲಿಕ್ಕಿಸಿದ್ದು ಅವಿಸ್ಮರಣೀಯ ಘಳಿಗೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ರಿಸೆಪ್ಷನ್‌ಗೆ ಕರಾವಳಿಗನ ಸಿತಾರ್‌ ವಾದನ
ದೀಪಿಕಾ ಜೋಡಿ ನ.18ರಂದು ಭಾರತಕ್ಕೆ ವಾಪಸಾಗಲಿದ್ದಾರೆ. ನ.21ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್‌ನಲ್ಲಿ ಅದ್ದೂರಿ ರಿಸೆಪ್ಷನ್‌ ಆಯೋಜಿಸಲಾಗಿದೆ. ದೀಪಿಕಾ ಆಪ್ತವರ್ಗ ಪಾಲ್ಗೊಳ್ಳಲಿದ್ದು, ವಿಶೇಷ ಮನೋರಂಜನ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂಗಳೂರಿನ ಖ್ಯಾತ ಕಲಾವಿದರೊಬ್ಬರು ಸಿತಾರ್‌ ವಾದನ ನೀಡಲಿದ್ದಾರೆ. 

ಭಾಗವಹಿಸುವವರಿಗಿತ್ತು ಶರತ್ತು
ಈ ಹೈಫೈ ಮದುವೆ, ರಿಸೆಪ್ಷನ್‌ ಸಮಾರಂಭಗಳಲ್ಲಿ ಪೋಟೋಗ್ರಾಫರ್‌, ಮನೋರಂಜನೆ ಕಾರ್ಯಕ್ರಮ ನೀಡುವವರ ಜತೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರ ಪ್ರಕಾರ ಕಾರ್ಯಕ್ರಮ ಪೂರ್ಣಗೊಳ್ಳುವ ವರೆಗೆ ಈ ಬಗ್ಗೆ ಸಾರ್ವಜನಿಕವಾಗಿ ಹೇಳುವಂತಿಲ್ಲ. ಮೊಬೈಲ್‌ ಬಳಕೆಗೆ ನಿಷೇಧವಿದೆ. ಯಾವುದೇ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ. 

ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ಮಾ. 20 – 24 ಕೆಲವೆಡೆ ಸಾಮಾನ್ಯ ಮಳೆ ಸಾಧ್ಯತೆ

Rain ಮಾ. 20 – 24 ಕೆಲವೆಡೆ ಸಾಮಾನ್ಯ ಮಳೆ ಸಾಧ್ಯತೆ

Lok Sabha Election 2024: ಗಡಿ ಭಾಗಗಳಲ್ಲಿ ತಪಾಸಣೆ ಬಿರುಸು

Lok Sabha Election 2024: ಗಡಿ ಭಾಗಗಳಲ್ಲಿ ತಪಾಸಣೆ ಬಿರುಸು

ಜೆಡಿಎಸ್‌ನಲ್ಲಿದ್ದು ಬಿಜೆಪಿಗೆ ಬೆಂಬಲ, ಸ್ವತಂತ್ರ ಸ್ಪರ್ಧೆ ಶೀಘ್ರ ನಿರ್ಧಾರ: ಮೊದಿನ್‌ ಬಾವಾ

ಜೆಡಿಎಸ್‌ನಲ್ಲಿದ್ದು ಬಿಜೆಪಿಗೆ ಬೆಂಬಲ, ಸ್ವತಂತ್ರ ಸ್ಪರ್ಧೆ ಶೀಘ್ರ ನಿರ್ಧಾರ: ಮೊದಿನ್‌ ಬಾವಾ

ಕಲಾವಿದರ ಮೇಲೆ ದಬ್ಬಾಳಿಕೆಗೆ ಖಂಡನೆ; ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿಕಲಾವಿದರ ಮೇಲೆ ದಬ್ಬಾಳಿಕೆಗೆ ಖಂಡನೆ; ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ

ಕಲಾವಿದರ ಮೇಲೆ ದಬ್ಬಾಳಿಕೆಗೆ ಖಂಡನೆ; ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ

RAJ”ಬಿಜೆಪಿಯಲ್ಲಿರುವವರ ಮೇಲೆ ಐಟಿ ದಾಳಿ ಯಾಕಿಲ್ಲ’: ನಟ ಪ್ರಕಾಶ್‌ ರಾಜ್‌

“ಬಿಜೆಪಿಯಲ್ಲಿರುವವರ ಮೇಲೆ ಐಟಿ ದಾಳಿ ಯಾಕಿಲ್ಲ’: ನಟ ಪ್ರಕಾಶ್‌ ರಾಜ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.