ನನ್ನತಪ್ಪಿಲ್ಲ;ಹೆಣ್ತನ ಇದೆ ಎಂಬಮಾತ್ರಕ್ಕೆ ಯಾಕೀ ಹಿಂಸೆ:ರೇವತಿಪ್ರಶ್ನೆ

Team Udayavani, Nov 19, 2018, 11:01 AM IST

19-november-3.gif

ವಿದ್ಯಾಗಿರಿ (ಮೂಡಬಿದಿರೆ) : ಹೆಣ್ಣಿನ ಭಾವನೆ, ಗಂಡು-ಹೆಣ್ಣಿನ ದೈಹಿಕ ರಚನೆ ಹೊಂದಿ ಜನಿಸಿದ್ದು ನನ್ನ ತಪ್ಪಲ್ಲ. ಆದರೂ ಯಾಕಿಷ್ಟು ಹಿಂಸೆ ನೀಡುತ್ತೀರಿ? ಸಮಾಜಕ್ಕೆ ಪ್ರಶ್ನೆ ಹಾಕಿದವರು ಚೆನ್ನೈಯ ಮಂಗಳಮುಖಿ  ರೇವತಿ. ಆಳ್ವಾಸ್‌ ನುಡಿಸಿರಿಯ ಎರಡನೇ ದಿನವಾದ ಶನಿವಾರ ಸಂಜೆ ನಡೆದ ‘ನನ್ನ ಕಥೆ-ನಿಮ್ಮ ಜತೆ’ಯಲ್ಲಿ ಮಾತನಾಡಿದ ಅವರು, ತನ್ನ ಜೀವನ ವೃತ್ತಾಂತವನ್ನು ವಿವರಿಸಿದರು.

ನನ್ನ ಮೂಲ ಹೆಸರು ದೊರೆಸ್ವಾಮಿ. ನಾವು ನಾಲ್ವರು ಗಂಡು ಮಕ್ಕಳು. 6-7ನೇ ತರಗತಿವರೆಗೆ ನನ್ನಲ್ಲಿ ಯಾವ ಭಾವನೆಯೂ ಇರಲಿಲ್ಲ. ಬಳಿಕ ನನ್ನ ವರ್ತನೆ ಹೆಣ್ಣಿನಂತಾಯಿತು. ಹೆಣ್ಣಿನಂತೆ ಉಡುಗೆ- ತೊಡುಗೆ ಧರಿಸಲು ಆಸೆಯಾಯಿತು. ಟೀಚರ್‌, ಸಹಪಾಠಿಗಳು ಮೂದಲಿಸಿದರು. 10ನೇ ತರಗತಿಗೆ ಶಿಕ್ಷಣ ಮುಗಿಸಿ ಮನೆ ಬಿಟ್ಟು ದಿಲ್ಲಿಗೆ ಹೋದೆ. ಅಲ್ಲಿ ನಮ್ಮವರು ಸಿಕ್ಕಿ, ಜತೆಸೇರಿ ಭಿಕ್ಷೆ ಬೇಡಲಾರಂಭಿಸಿದೆ. ಅಲ್ಲಿಂದ ಬದಲಾದೆ ಎಂದರು.

ದಿಲ್ಲಿಯಿಂದ ಮನೆಗೆ ಪತ್ರ ಬರೆದೆ. ತಾಯಿಗೆ ಸೀರಿಯಸ್‌ ಇದೆ ಎಂಬ ಮರುಪತ್ರ ಬಂತು. ರೈಲೇರಿ ಊರಿಗೆ ಬಂದೆ. ಮನೆಗೆ ಬಂದಾಗ ತಾಯಿ ಕ್ಷೇಮದಿಂದಿದ್ದರು. ಅದು ನನ್ನನ್ನು ಕರೆಯಿಸಲು ಹೂಡಿದ ತಂತ್ರವಾಗಿತ್ತು. ಅಣ್ಣ ಕ್ರಿಕೆಟ್‌ ಬ್ಯಾಟ್‌ನಿಂದ ಮನಸೋ ಇಚ್ಛೆ ಥಳಿಸಿದ. ಹೇಗೋ ತಪ್ಪಿಸಿಕೊಂಡು ಬೆಂಗಳೂರು ಸೇರಿದೆ ಎಂದು ವಿವರಿಸಿದರು ರೇವತಿ. ಬೆಂಗಳೂರಿನಲ್ಲಿ ಪೊಲೀಸರ ಲೈಂಗಿಕ ಚಿತ್ರಹಿಂಸೆ ಎದುರಿಸಬೇಕಾಯಿತು. ಕೊನೆಗೆ ಸಂಗಮ ಎಂಬ ಲೈಂಗಿಕ ಅಲ್ಪಸಂಖ್ಯಾಕರ ಸಂಘಟನೆಗೆ ಸೇರಿ ಹೋರಾಡಲು ನಿರ್ಧರಿಸಿದೆ. ನಿರಂತರ ಹೋರಾಟದಿಂದಾಗಿ ಈಗ ಸಶಕ್ತರಾಗಿದ್ದೇವೆ. ಸದ್ಯ ಸಹವರ್ತಿಗಳಲ್ಲಿ ಪೊಲೀಸ್‌ ಎಸ್‌ಐ, ಡಾಕ್ಟರ್‌ ಆಗಿದ್ದಾರೆ ಎಂದು ಹೇಳಿ ಖುಷಿಪಟ್ಟರು ರೇವತಿ.

ಭಿಕ್ಷೆ ಬೇಡದೆ ಇನ್ನೇನು ಮಾಡಲಿ?
ನಾನು ಬದಲಾದಾಗ ಉದ್ಯೋಗ ಅರಸಿ ಊರೂರು, ಅಂಗಡಿ-ಮಳಿಗೆಯನ್ನು ಸುತ್ತಾಡಿದ್ದೇನೆ. ಆದರೆ ಯಾರೂ ಉದ್ಯೋಗ ನೀಡಿಲ್ಲ. ನೋವಿನ ಸಂಗತಿಯೆಂದರೆ ಶೌಚಾಲಯ ಬಳಸಲೂ ಅವಕಾಶ ನೀಡಲಿಲ್ಲ. ಹೊಟ್ಟೆಪಾಡಿಗೆ ಏನು ಮಾಡಬೇಕು ಎಂದು ಯೋಚಿಸಿದಾಗ ಭಿಕ್ಷಾಟನೆ ಮತ್ತು ಲೈಂಗಿಕ ಕಾರ್ಯಕರ್ತೆಯಾಗಿ ಬದಲಾಗ ಬೇಕಾಯಿತು. ಉದ್ಯೋಗವೇ ಇಲ್ಲದಿದ್ದ ಮೇಲೆ ಮತ್ತೇನನ್ನು ಮಾಡಬೇಕಿತ್ತು ಎಂದವರು ಪ್ರಶ್ನಿಸಿದರು. ಈ ಮಾತುಗಳನ್ನು ಆಲಿಸಿ ಸಮ್ಮೇಳನಾಧ್ಯಕ್ಷೆ ಡಾ| ಮಲ್ಲಿಕಾ ಘಂಟಿ ಕಂಬನಿದುಂಬಿದರು.

ದಯಮಾಡಿ ಒಪ್ಪಿಕೊಳ್ಳಿ!
ಶಿವ-ವಿಷ್ಣುವಿಗೆ ಹುಟ್ಟಿದ ಅಯ್ಯಪ್ಪ ದೇವರನ್ನು ಪೂಜಿಸುವ ಈ ಸಮಾಜ ನಮ್ಮನ್ನು ಒಪ್ಪುವುದಿಲ್ಲ ಎನ್ನುವುದು ಬೇಸರದ ವಿಚಾರ. ನನ್ನದೊಂದು ವಿನಮ್ರ ಮನವಿಯಿದೆ: ನಿಮ್ಮ ಮನೆಯಲ್ಲಿ ನನ್ನಂತಹ ಮಗು ಹುಟ್ಟಿದರೆ ದಯವಿಟ್ಟು ಪ್ರೀತಿಯಿಂದಲೇ ಒಪ್ಪಿಕೊಳ್ಳಿ, ಹಿಂಸಿಸಬೇಡಿ. ಹೆಣ್ಣು-ಗಂಡಿನಂತೆಯೇ ನಮ್ಮನ್ನೂ ಸ್ವೀಕರಿಸಿ. ನಾವೂ ಮನುಷ್ಯರು ಎಂಬ ಸಾಮಾನ್ಯ ತಿಳಿವಳಿಕೆಯಿಂದ ಸ್ಪಂದಿಸಿ. ಪ್ರತೀ ಮನೆಯಲ್ಲಿ ತಾಯಿಯು ಹೆಣ್ಣುಮಗುವಿಗೆ ಕಲಿಸುವ ಶಿಷ್ಟಾಚಾರ, ನೀತಿನಿಯಮಗಳನ್ನು ಗಂಡುಮಗುವಿಗೂ ಕಲಿಸಲಿ. ಲೈಂಗಿಕ ಅಲ್ಪಸಂಖ್ಯಾಕರ ಭಾವನೆಗಳು ಏನು ಎಂಬ ಬಗ್ಗೆ ಗಂಡು ಮಕ್ಕಳಿಗೆ ಪ್ರತೀ ಮನೆಯಲ್ಲಿ ತಾಯಿ ಹೇಳಿಕೊಡಲಿ.
– ರೇವತಿ

ಟಾಪ್ ನ್ಯೂಸ್

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.