ವಿವಿ ಕಾಲೇಜು ಗ್ರಂಥಾಲಯಕ್ಕೆ ಡಿಜಿಟಲ್‌ ಟಚ್!

Team Udayavani, Jan 18, 2019, 4:20 AM IST

18j-anuary-1.jpg

ಮಹಾನಗರ: ಸುಮಾರು 150 ವರ್ಷಗಳ ಇತಿಹಾಸವಿರುವ ಮಂಗಳೂರು ವಿವಿ ಗ್ರಂಥಾಲಯಕ್ಕೆ ಡಿಜಿಟಲ್‌ ಟಚ್ ಸಿಗಲಿದೆ. ಆ ಮೂಲಕ ಇನ್ನು ಮುಂದೆ ಇಲ್ಲಿನ ಗ್ರಂಥಾಲ ಯದಲ್ಲಿರುವ ಪುಸ್ತಕಗಳನ್ನು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಓದಬಹುದಾಗಿದೆ.

ಪ್ರಸ್ತುತ ಮಂಗಳೂರು ವಿಶ್ವವಿದ್ಯಾ ನಿಲಯ ಕಾಲೇಜಿನಲ್ಲಿ ನೂರಾರು ವರ್ಷಗಳ ಹಳೆಯ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಶೋಧನೆಗೆ ಯೋಗ್ಯ ವಾದ ಪುಸ್ತಕಗಳಿವೆ. ಆದರೆ ಇದು ಈವರೆಗೆ ಸಾರ್ವಜನಿಕರ ಬಳಕೆಗೆ ಲಭಿಸಿಲ್ಲ. ಆ ಕಾರಣಕ್ಕಾಗಿ ಪುಸ್ತಕಗಳ ಅಗತ್ಯ ಇರುವವರಿಗೆ ಇದನ್ನು ತಲುಪಿಸ ಬೇಕು ಎಂಬ ಉದ್ದೇಶದಿಂದ ಮಂಗಳೂರು ವಿಶ್ವವಿದ್ಯಾನಿಲಯವು ಗ್ರಂಥಾಲಯ ವನ್ನು ಡಿಜಿಟಲೀಕರಣ ಮಾಡಲು ಸಿದ್ಧತೆ ನಡೆಸಿದೆ. ವಿವಿ ಕಾಲೇಜಿನ ವೆಬ್‌ಸೈಟ್ ಮೂಲಕ ಪುಸ್ತಕಗಳ ಅಪ್‌ಲೋಡ್‌ ಮಾಡಲು ಯೋಜನೆ ರೂಪಿಸಲಾಗುತ್ತಿದೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 1,808ರಲ್ಲಿ ಪ್ರಕಟಗೊಂಡ ಸಂಸ್ಕೃತ, ಸಾಹಿತ್ಯ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿದ ಪುಸ್ತಕಗಳಿವೆ. ವರ್ಷವೂ ಸರಕಾರದ ವಿವಿಧ ಅನುದಾನಗಳಿಂದ ದೊರೆಯುವ ಪುಸ್ತಕಗಳು ಒಟ್ಟಾಗಿ ಸುಮಾರು 75,000ದಷ್ಟು ಕಾಲೇಜಿನಲ್ಲಿ ಗ್ರಂಥಾಲಯದಲ್ಲಿವೆೆ. ಸಂಶೋಧನೆ ಮಾಡುತ್ತಿದ್ದರೆ ಅದಕ್ಕೆ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸುವ ಅನೇಕ ಪುಸ್ತಕಗಳು ಗ್ರಂಥಾಲಯದಲ್ಲಿದ್ದು, ಇದನ್ನು ಎಲ್ಲರಿಗೂ ಸಿಗುವಂತೆ ಹಾಗೂ ಸಂರಕ್ಷಿಸುವ ದೃಷ್ಟಿಯಿಂದ ಡಿಜಿಟಲ್‌ ಟಚ್ ನೀಡಲಾಗುತ್ತಿದೆ.

ಹಳೆಯ ಪುಸ್ತಕಗಳು ಮಾತ್ರ ಅಪ್‌ಲೋಡ್‌
ಸಂಸ್ಕೃತ, ಸಾಹಿತ್ಯ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಪಿಎಚ್.ಡಿ., ಸಂಶೋಧನೆ ಮಾಡಲು ಹೊರಟ ಆಸಕ್ತರಿಗೆ ಅನುಕೂಲವಾಗುವಂತಹ ಅನೇಕ ಪುಸ್ತಕಗಳು ವಿವಿ ಕಾಲೇಜಿನ ಗ್ರಂಥಾಲಯದಲ್ಲಿವೆ. ಈವರೆಗೆ ಇಂತಹ ಪುಸ್ತಕಗಳಿಗಾಗಿ ಓದುಗರು ಕಲ್ಕತ್ತಾ, ಮದ್ರಸ್‌ಗಳ ಗ್ರಂಥಾಲಯದಿಂದ ಓದಬೇಕಿತ್ತು.

ಮುಂದೆ ಈ ಸಮಸ್ಯೆ ಎದುರಾಗುವುದಿಲ್ಲ. ಗ್ರಂಥಾಲಯದಲ್ಲಿರುವ 75,000 ಪುಸ್ತಕಗಳಲ್ಲಿ ಎಲ್ಲೂ ಸಿಗದ ಬಹಳಷ್ಟು ಹಳೆಯ ಪುಸ್ತಕಗಳನ್ನು ಮಾತ್ರ ಅಪ್‌ಲೋಡ್‌ ಮಾಡಲು ವಿವಿ ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ. ಹೊಸ ಪುಸ್ತಕಗಳು ಇತರ ಗ್ರಂಥಾಲಯಗಳ ವೆಬ್‌ಸೈಟ್‌ಗಳಲ್ಲಿ ಲಭಿಸುವುದರಿಂದ ಹಳೆಯ ಸುಮಾರು 500ರಷ್ಟು ಪುಸ್ತಕಗಳನ್ನು ಅಪ್‌ಲೋಡ್‌ ಮಾಡಲು ನಿರ್ಧರಿಸಲಾಗಿದೆ.

ಹಳೆ ಪುಸ್ತಕಗಳ ಸಂರಕ್ಷಣೆಗೆ ಡಿಜಿಟಲೀಕರಣ
ವಿವಿ ಕಾಲೇಜು ಗ್ರಂಥಾಲಯದಲ್ಲಿ ನೂರಾರು ವರ್ಷಗಳ ಹಳೆಯ ಸಂಗ್ರಹ ಯೋಗ್ಯ ಪುಸ್ತಕಗಳಿವೆ. ಹಳೆಯ ಪುಸ್ತಕಗಳು ಧೂಳು, ಗೆದ್ದಲುಗಳಿಂದ ಶಿಥಿ ಲಾವಸ್ಥೆಯಲ್ಲಿವೆ. ಇದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಗ್ರಂಥಾಲಯವನ್ನು ಡಿಜಿಟಲೀಕರಣ ಮಾಡಲು ಚಿಂತಿಸ ಲಾಗಿದೆ. ಎಲ್ಲ ಪುಸ್ತಗಳನ್ನು ಅಪ್‌ಲೋಡ್‌ ಮಾಡಲು ಸಾಧ್ಯವಿಲ್ಲದಿರುವುದರಿಂದ, ಎಲ್ಲೂ ಸಿಗದ ಹಳೆಯ ಪುಸ್ತಕಗಳನ್ನು ಮಾತ್ರ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ.

ಕೋ.ರೂ. ಅಂದಾಜು 
ಪುಸ್ತಕಗಳನ್ನು ಡಿಜಿಟಿಲೀಕರಣ ಮಾಡಲು ಮಂಗಳೂರು ವಿವಿ ಕಾಲೇಜು ಆಡಳಿತ ಮಂಡಳಿ ಚಿಂತನೆ ನಡೆಸಿ ಕಾಲೇಜಿನ ಹಳೆ ವಿದ್ಯಾರ್ಥಿ, ಸಂಸದ ವೀರಪ್ಪ ಮೊಲಿ ಅವರೊಂದಿಗೆ ಈ ಬಗ್ಗೆ ಪ್ರಸಾವಿಸಿದಾಗ ಯೋಜನಾ ವರದಿ ತಯಾರಿಸಿ ನೀಡುವಂತೆ ತಿಳಿಸಿದ್ದರು. ಅದರಂತೆ ಕಾಲೇಜು ಸಿಬಂದಿ ಯೋಜನಾ ವರದಿ ಸಿದ್ಧಪಡಿಸುತ್ತಿದ್ದಾರೆ. ಅಪ್‌ಲೋಡ್‌ ಮಾಡಲಿರುವ ಪುಸ್ತಕ ಗಳನ್ನು ಸ್ಕ್ಯಾನ್‌ ಮಾಡಲು ಲಕ್ಷಾಂತರ ರೂ. ವೆಚ್ಚದ ಅಟೋ ಮ್ಯಾಟಿಕ್‌ ಸ್ಕಾನ್‌ಮಿಷನ್‌, ಆ ಮಿಷನ್‌ಗಾಗಿ ಎಸಿ ರೂಂ ಸೇರಿ ದಂತೆ ಇತರ ಖರ್ಚುಗಳು ಸೇರಿ ಸುಮಾರು ಒಂದು ಕೋಟಿ ರೂ.ಗಳ ವರೆಗೆ ಅನುದಾನ ಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ವರದಿ ಗಳನ್ನು ಸಿದ್ಧಪಡಿಸಲಾಗುತ್ತದೆ ಎಂದು ವಿವಿ ಕಾಲೇಜಿನ ಗ್ರಂಥ ಪಾಲಕಿ ವನಜಾ ಹೇಳುತ್ತಾರೆ.

ಯೋಜನಾ ವರದಿಗೆ ಸಿದ್ಧತೆ
ವಿವಿ ಕಾಲೇಜಿನ ಗ್ರಂಥಾಲಯದಲ್ಲಿ ಹಳೆಯ ಹಲವು ಉಪಯುಕ್ತ ಪುಸ್ತಕಗಳಿವೆ. ಅದು ಶಿಥಿಲಾವಸ್ಥೆಯಲ್ಲಿದೆ. ಅದನ್ನು ಸಂರಕ್ಷಿಸಲು ಹಾಗೂ ದೂರದ ಜನರಿಗೆ ಓದಲು ಅವಕಾಶ ಕಲ್ಪಿಸಲು ಗ್ರಂಥಾಲಯವನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಅದಕ್ಕೆ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. 
– ಡಾ| ಉದಯ್‌ ಕುಮಾರ್‌ ಇರ್ವತ್ತೂರು
ಪ್ರಾಂಶುಪಾಲರು, ಮಂಗಳೂರು ವಿವಿ ಕಾಲೇಜು

•ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.