ಎಲ್ಲರನ್ನೂ ಮೆಚ್ಚಿಸಬೇಕೋ? ನಮ್ಮನ್ನು ಮೆಚ್ಚಿಸಿಕೊಂಡರೆ ಸಾಕೋ? 


Team Udayavani, Feb 6, 2018, 12:05 PM IST

roopa.jpg

ಎಲ್ಲರೂ ನಮ್ಮನ್ನು ಮೆಚ್ಚಿಕೊಳ್ಳಬೇಕು ಎನ್ನುವುದು ತಪ್ಪು. ಹಾಗೆಯೇ ಎಲ್ಲರೂ ನಮ್ಮನ್ನು ಮೆಚ್ಚಿಕೊಳ್ಳುತ್ತಾರೆ ಎಂದು ಭಾವಿಸುವುದೂ ಸರಿಯಲ್ಲ. ಜಗತ್ತಿನಲ್ಲಿ ಒಬ್ಬೊಬ್ಬರ ಮನಸ್ಸೂ ಒಂದೊಂದು ಬಗೆ. ನಾವು ಎಲ್ಲರನ್ನೂ ಮೆಚ್ಚಿಸುತ್ತೇವೆ 
ಎನ್ನುವುದು ಮೂರ್ಖತನವಾದೀತು.

ಜೀವನದಲ್ಲಿ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿರುತ್ತದೆ. ಒಂದರಿಂದ ಒಂದು ಆಕರ್ಷಿಸಲ್ಪಡುತ್ತದೆ. ಮನುಷ್ಯ ಮಾತ್ರವೇ ಅಲ್ಲದೆ ಪ್ರಕೃತಿಯೂ ಸಹ ಹಾಗೆಯೇ. ಅಲ್ಲಿರುವ ಎಲ್ಲವೂ ಒಂದರಿಂದ ಒಂದು ಆಕರ್ಷಿಸಲ್ಪಡುತ್ತದೆ.

ಸುಂದರವಾದ ಭೂಮಿಯನ್ನು ಹಸಿರಾಗಿಸಲು ಆಕಾಶ ಮಳೆ ಸುರಿಸುತ್ತದೆ. ದುಂಬಿಯನ್ನು ಆಕರ್ಷಿಸುವ ಸಲುವಾಗಿ ಹೂವು ಹೊಸತನದಿಂದ ಅರಳಿ ನಿಲ್ಲುತ್ತದೆ. ಹುಣ್ಣಿಮೆಯಂದು ಸಮುದ್ರದ ಅಲೆಗಳು ಚಂದಿರನಿಗಾಗಿ ಎತ್ತರ ಎತ್ತರಕ್ಕೆ ಜಿಗಿಯುತ್ತವೆ. ಇಲ್ಲಿ ಎಲ್ಲವೂ ತಮ್ಮ ಸ್ವಭಾವವನ್ನು ವಿಶೇಷ ರೀತಿಯಲ್ಲಿ ತೋರ್ಪಡಿಸಿಕೊಂಡು ಇನ್ನೊಂದು ವಿಷಯ, ವಸ್ತುವನ್ನು ಆಕರ್ಷಿಸುತ್ತವೆ. ಮನುಷ್ಯ ಎಲ್ಲದಕ್ಕೂ ಹಾಗೆ ಮಾಡುವುದು ಸಾಧ್ಯವಿಲ್ಲ. ಆದರೂ ತಮಗೆ ಬೇಕಾದವರನ್ನು ಬೇಕಾದ ಸಮಯದಲ್ಲಿ ಮೆಚ್ಚುಗೆ ಪಡಿಸುವುದಕ್ಕೆ ಮುಂದಾಗುತ್ತಾರೆ.

ತಮಗೆ ಬೇಕಾದುದ್ದನ್ನು ಪಡೆದುಕೊಳ್ಳುವ ಸಲುವಾಗಿ ಕೆಲವರು ಅತಿಯಾಗಿ ಮೆಚ್ಚುಗೆ ಸೂಚಿಸುತ್ತಾರೆ. ಕೆಲವು ಬಾರಿ ಈ ತಂತ್ರವು ಫ‌ಲಿಸುತ್ತದೆ. ಹಾಗೆಯೇ ಇನ್ನೂ ಕೆಲವು ಬಾರಿ ಅತಿಯಾದ ಮೆಚ್ಚುಗೆ ಸೂಚಿಸುವಿಕೆಯು ನಮ್ಮಲ್ಲಿನ ಟೊಳ್ಳುತನವನ್ನು ನಾಟಕೀಯತೆಯನ್ನೂ ತೋರಿಸುತ್ತದೆ.

ನಾವು ಭಗವಂತನಿಗೆ ಹತ್ತಿರವಾಗುವ ಸಲುವಾಗಿ ಅವನು ನನ್ನ ಕಡೆ ನೋಡಲಿ ಎನ್ನುವ ಕಾರಣದಿಂದ ಅವನನ್ನು ಪೂಜಿಸಿ, ಭಜನೆ ಮಾಡಿ, ಅವನಿಗಾಗಿ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ. ನಮ್ಮ ಭಕ್ತಿಯನ್ನು ಭಗವಂತನು ಮೆಚ್ಚಿಕೊಂಡು ನಮ್ಮ ಪಾಪ ಕರ್ಮ ಗಳನ್ನು ಕ್ಷಮಿಸಿ ನಮ್ಮನ್ನು ಕಾಪಾಡಲಿ, ನಮಗೆ ಅಂತಿಮ ಮೋಕ್ಷ ನೀಡಲಿ ಎನ್ನುವ ಕಾರಣಕ್ಕೆ ಭಕ್ತಿ ಮಾರ್ಗ, ಜ್ಞಾನಮಾರ್ಗ, ಕರ್ಮಮಾರ್ಗ ಎನ್ನುವ ನಾನಾ ಮಾರ್ಗಗಳಿಂದ ಭಗವಂತನನ್ನು ಮೆಚ್ಚಿಸಲು ನೋಡುತ್ತೇವೆ. 

ಪ್ರೀತಿಯಲ್ಲಿ ಮೆಚ್ಚುಗೆಯೆಂಬ ಹುಚ್ಚಾಟ
ಪ್ರೇಮಿಗಳು ತಮ್ಮ ಪ್ರೀತಿಯನ್ನು ಪಡೆದುಕೊಳ್ಳುವ ಸಲುವಾಗಿ ಅನೇಕ ಬಗೆಯಲ್ಲಿ ಪ್ರಯತ್ನಿಸುತ್ತಾರೆ. ಕೆಲವರು ರಕ್ತದಲ್ಲಿ ಕಾಗದ ಬರೆಯುತ್ತಾರೆ. ಇನ್ನೂ ಕೆಲವರು ತಮ್ಮ ಕೈ ಮೇಲೆ ಪ್ರಿಯತಮೆಯ ಹೆಸರು ಬರೆದುಕೊಳ್ಳುತ್ತಾರೆ. ಪ್ರೇಮಿಯ ಜೊತೆ ಜಗಳವಾದರೆ ಬ್ಲೇಡಿನಿಂದ ಕೊಯ್ದುಕೊಳ್ಳುತ್ತಾರೆ. ಲವ್‌ ಫೇಲ್ಯೂರ್‌ ಆದರೆ ವಿಷ ತೆಗೆದುಕೊಳ್ಳುತ್ತಾರೆ. ಇನ್ನು ಏನೇನೋ ಮಾಡುತ್ತಾರೆ. ಇನ್ನು ಕೆಲವರು ಪ್ರತಿದಿನ ರಾತ್ರಿ ಅತಿಯಾಗಿ ಕುಡಿದು, ತಮ್ಮ ಪ್ರಿಯತಮೆಗೆ ಫೋನ್‌ ಮಾಡಿ ನೀನು ನನ್ನ ಪ್ರೀತಿಯನ್ನು ಒಪ್ಕೋಳ್ಳಲ್ಲ ಅಂದ್ರೆ ನಾನು ಹೀಗೆ ಕುಡಿದು ಸತ್ತು ಹೋಗ್ತಿàನಿ ಐ ಲವ್‌ ಯೂ ಸೋ ಮಚ್‌… ಎಂದೆಲ್ಲಾ ಅವಳನ್ನು ಎಮೋಷನಲ್ಲಾಗಿ ಬ್ಲ್ಯಾಕ್‌ವೆುàಲ್‌ ಮಾಡುತ್ತಾರೆ. ಅವಳನ್ನು ಮೆಚ್ಚಿಸಲು ನೋಡುತ್ತಾರೆ.

ಇನ್ನು ಕೆಲವು ಹುಡುಗರು ಪ್ರಿಯತಮೆಯನ್ನು ಮೆಚ್ಚಿಸಲು ಹಾಡು ಕಲಿತು ಅವಳ ಮುಂದೆ ಹಾಡುತ್ತಾರೆ. ಕೆಲವರು ಅವಳ ಜತೆಯಲ್ಲಿ ನರ್ತಿಸಬೇಕು ಎಂದು ನೃತ್ಯ ಕಲಿಯುತ್ತಾರೆ. ಜಿಮ್‌ಗೆ ಹೋಗಿ ದೇಹದಂಡನೆ ಮಾಡಿಕೊಳ್ಳುತ್ತಾರೆ. ಹೇರ್‌ ಸ್ಟೈಲ್‌ ಬದಲಿಸಿಕೊಳ್ಳುತ್ತಾರೆ. ಒಳ್ಳೆಯ ಬಟ್ಟೆ ಹಾಕಿಕೊಳ್ಳಲು ಪ್ರಾರಂಭಿಸುತ್ತಾರೆ. ಹಬ್ಬಗಳಲ್ಲಿ, ವಿಶೇಷ ದಿನಗಳಲ್ಲಿ ತನ್ನ ಪ್ರಿಯೆಗೆ ಏನಾದರೂ ಉಡುಗೊರೆ ನೀಡಿ ಅವಳನ್ನು ಮೆಚ್ಚಿಸಲು ನೊಡು ತ್ತಾರೆ. ಹೀಗೆ ಒಬ್ಬ ಪ್ರೇಮಿ ತನ್ನ ಪ್ರಿಯತಮೆಯನ್ನು ಮೆಚ್ಚಿಸಲಿಕ್ಕೆ ನಾನಾ ವಿಧದಲ್ಲಿ ಪ್ರಯತ್ನಿಸುತ್ತಾನೆ. ಅದಕ್ಕಾಗಿ ಏನನ್ನು ಮಾಡಲೂ ತಯಾರಿರುತ್ತಾನೆ. ಎಲ್ಲರನ್ನೂ ದೂರಮಾಡಿ ತನ್ನ ತಂದೆ ತಾಯಿ ಬಂಧು ಬಾಂಧವರೊಂದಿಗೆ, ಸ್ನೇಹಿತರೊಂದಿಗೆ ಜಗಳವಾಡಿಯಾ ದರೂ ಸರಿಯೇ, ಅವಳನ್ನು ಮೆಚ್ಚಿಸಬೇಕೆನ್ನುವುದು ಅವನ ಮನದ ಇರಾದೆಯಾಗಿರುತ್ತದೆ. ಇದಕ್ಕಾಗಿ ಅವನು ತನ್ನದೆನ್ನುವ ಊರು, ಮನೆ ಮಾರುಗಳನ್ನು ತ್ಯಜಿಸಲು ಸಿದ್ಧನಿರುತ್ತಾನೆ. ತನ್ನ ಪ್ರೀತಿ ಜಗತ್ತಿನ ಎಲ್ಲಾ ಪ್ರೇಮಿಗಳ ಪ್ರೀತಿಗಿಂತಲೂ ದೊಡ್ಡದು. ಅದನ್ನು ಹೇಗೆ ನಿನಗೆ ತೋರಿಸಲಿ ಎಂದು ಚಡಪಡಿಸುತ್ತಾನೆ. ಪ್ರೇಮಿ ಅದು ಯಾವ ರೀತಿಯಲ್ಲಿ ತನ್ನ ಪ್ರಿಯೆಯನ್ನು ಮೆಚ್ಚಿಸಲು ತೊಡಗುವನೆನ್ನುವುದಕ್ಕೆ ಒಂದು ಕಥೆ ನೆನಪಾಗುತ್ತದೆ. ಒಂದು ಹೆಣ್ಣು ಪಾರಿವಾಳವು ಹೂ ತೋಟದಲ್ಲಿದ್ದ ಬಿಳಿ ಗುಲಾಬಿಯನ್ನು ನೋಡಿ ಇಷ್ಟಪಟ್ಟು ಗಂಡು ಪಾರಿವಾಳಕ್ಕೆ ಹೇಳಿತು ನಿನ್ನ ಪ್ರೀತಿ ನಿಜವಾದದ್ದಾದರೆ, ಆ ಬಿಳಿ ಗುಲಾಬಿ ನಾಳೆ ಬೆಳಗಾಗುವುದರೊಳಗೆ ಕೆಂಪು ಗುಲಾಬಿಯಾಗಿರಬೇಕು. ಆಗ ಗಂಡು ಪಾರಿವಾಳ ರಾತ್ರಿ ಎಲ್ಲ ಯೋಚಿಸಿ, ಪ್ರಿಯೆಗೆ ತನ್ನ ಪ್ರೀತಿಯ ಆಳವನ್ನು ತೋರಿಸಲೇಬೇಕು ಎಂದು ದೇಹವನ್ನು ಚುಚ್ಚಿಕೊಂಡು ರಕ್ತವನ್ನು ಆ ಬಿಳಿ ಗುಲಾಬಿಯ ಮೇಲೆ ಸುರಿಸಿ ಅದನ್ನು ಕೆಂಪು ಗುಲಾಬಿ ಯನ್ನಾಗಿ ಮಾಡುತ್ತದೆ. ಬೆಳಗ್ಗೆ ಹೆಣ್ಣು ಪಾರಿವಾಳ ತೋಟಕ್ಕೆ ಬಂದು ನೋಡಿದಾಗ ಬಿಳಿಯ ಗುಲಾಬಿ ಕೆಂಪು ಗುಲಾಬಿ ಯಾಗಿರುತ್ತದೆ. ಪಾರಿವಾಳವು ತನ್ನ ಗೆಳೆಯನ ಪ್ರೀತಿಯನ್ನು ಮೆಚ್ಚಿ ಕುಣಿದಾಡುತ್ತದೆ. ಅದೇ ಸಮಯದಲ್ಲಿ ತನ್ನ ಕಾಲಿನ ಕೆಳಗೆ ಸತ್ತು ಬಿದ್ದಿದ್ದ ಗಂಡು ಪಾರಿವಾಳವನ್ನು ನೋಡಿ ಆಘಾತಗೊಂಡು ಒಂದು ಕೆಂಪು ಗುಲಾಬಿಯನ್ನು ಕೊಟ್ಟು ತನ್ನನ್ನು ಮೆಚ್ಚಿಸಲು ತನ್ನ ಪ್ರಾಣವನ್ನೇ ತೆತ್ತ ಪ್ರೇಮಿಯನ್ನು ಕಂಡು ತಾನೂ ಅಲ್ಲೇ ಪ್ರಾಣ ಬಿಡುತ್ತದೆ. ಇದೇ ಕಾರಣಕ್ಕೆ ಪಾರಿವಾಳಗಳನ್ನು ಲವ್‌ ಬರ್ಡ್ಸ್‌ ಎನ್ನುವುದು. ಕೆಂಪು ಗುಲಾಬಿಯನ್ನು ನಾವು ಬಹಳವಾಗಿ ಪ್ರೀತಿಸಿದವರಿಗೆ ಕೊಡುವುದೂ ಇದೇ ನಂಬಿಕೆಯಿಂದಾಗಿ.

ಇಂಪ್ರಸ್‌ ಮಾಡಲು ನಾನಾ ದಾರಿ
ಕೆಲಸದ ವಿಚಾರಕ್ಕೆ ಬಂದರೆ ಅಲ್ಲಿ ಸುಮ್ಮ ಸುಮ್ಮನೆ ಇನ್ನೊಬ್ಬರನ್ನು ಮೆಚ್ಚಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಒಂದು ಗಟ್ಟಿ ವ್ಯಕ್ತಿತ್ವ ಇರಬೇಕು. ಹಾಗೆಯೇ ನಮ್ಮಲ್ಲಿ ಒಂದು ವಿಶೇಷ ವಿಚಾರವಿರಬೇಕು. ಅದೇನೂ ಇಲ್ಲದೆ ಕೇವಲ ಬಾಯಿ ಮಾತಿನಲ್ಲಿ 
ಮೆಚ್ಚಿಸಲು ನೋಡಿದರೆ ಅದರಿಂದ ಕೆಲವೇ ದಿನಗಳಲ್ಲಿ ನಮಗೆ ಕೆಟ್ಟ ಹೆಸರು ಬರುತ್ತದೆ. ನಾವು ಯಾವುದಕ್ಕೂ ಲಾಯಕ್ಕಿಲ್ಲ ಎನ್ನುವುದನ್ನು ನಾವೇ ತೋರಿಸಿ ಕೊಟ್ಟಂತಾಗುತ್ತದೆ. ನಮ್ಮ ಜ್ಞಾನ ವನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಂಡಾಗ ಮಾತ್ರ ನಮ್ಮ ಪ್ರಯತ್ನಕ್ಕೆ ಒಂದು ಅರ್ಥವಿರುತ್ತದೆ. ಒಂದು ಸಂದರ್ಶನಕ್ಕೆ ಹೋದಾಗ ಅಲ್ಲಿ ಚೆನ್ನಾಗಿ ಮಾತನಾಡಿ ಸರಿಯಾದ ರೀತಿಯಲ್ಲಿ ವರ್ತಿಸಿ ಅವರನ್ನು ಮೆಚ್ಚಿಸಬೇಕಾಗುತ್ತದೆ. ನಮ್ಮ ಕೆಲಸದ ಮೂಲಕ ನಮ್ಮ ಮೇಲಧಿಕಾರಿಗಳನ್ನು ಮೆಚ್ಚಿಸ ಬೇಕಾಗುತ್ತದೆ. ಮನೆಯಲ್ಲಿ ಒಳ್ಳೆಯ ಮಕ್ಕಳೆನಿಸಿಕೊಳ್ಳಲು ತಂದೆ ತಾಯಿಯನ್ನು, ಸಂಬಂಧಿಕರನ್ನು ಮೆಚ್ಚಿಸಬೇಕಾಗುತ್ತದೆ. ಕೆಲವು ಸಲ ನಾವು ನಾವಾಗಿ ದ್ದಲ್ಲಿ ನಮ್ಮ ವ್ಯಕ್ತಿತ್ವ ನಮ್ಮ ಮನೆಯವರಿಗೇ ಹಿಡಿಸಲಾರದು. ಅವರ ಮನಸ್ಸಿಗೆ ತಕ್ಕಂತೆ ನಾವು ಕೆಲಸ ಮಾಡಿ ಅವರನ್ನು ಮೆಚ್ಚಿಸಬೇಕು.

ಕೆಲವರನ್ನು ಮೆಚ್ಚಿಸಲು ಬೇರೆ ಬೇರೆ ದಾರಿಗಳಿವೆ. ಉದಾಹರ ಣೆಗೆ, ಕೆಲವರಿಗೆ ದುಡ್ಡು ಕೊಟ್ಟು, ಕೆಲವರಿಗೆ ಸಮಯ ಕೊಟ್ಟು ಇನ್ನು ಕೆಲವರಿಗೆ ಪ್ರೀತಿ ಕೊಟ್ಟು ಮೆಚ್ಚಿಸಬೇಕಾಗುತ್ತದೆ. ಮತ್ತೂ ಕೆಲವರಿಗೆ ಅವರು ಹೇಳಿದುದಕ್ಕೆಲ್ಲಾ ಒಪ್ಪಿ ಹಾಂ… ಎಂದರೆ ಸಾಕು ಹೀಗೆ ಜೀವನ ಪರ್ಯಂತ ಎಲ್ಲರನ್ನೂ ಒಂದಲ್ಲ ಒಂದು ರೀತಿ ಮೆಚ್ಚಿಸಬೇಕಾಗುತ್ತದೆ. 

ಆದರೆ ಎಲ್ಲರೂ ನಮ್ಮನ್ನು ಮೆಚ್ಚಿಕೊಳ್ಳಬೇಕು ಎನ್ನುವುದು ತಪ್ಪು. ಹಾಗೆಯೇ ಎಲ್ಲರೂ ನಮ್ಮನ್ನು ಮೆಚ್ಚಿಕೊಳ್ಳುತ್ತಾರೆ ಎಂದು ಭಾವಿಸುವುದೂ ಸರಿಯಲ್ಲ. ಜಗತ್ತಿನಲ್ಲಿ ಒಬ್ಬೊಬ್ಬರ ಮನಸ್ಸೂ ಒಂದೊಂದು ಬಗೆ. ಅವರೆಲ್ಲರ ಆಸಕ್ತಿಗಳು ಬೇರೆ ಬೇರೆಯಾಗಿರುವುದರಿಂದ ನಾವು ಎಲ್ಲರನ್ನೂ ಮೆಚ್ಚಿಸುತ್ತೇವೆ ಎನ್ನುವುದು ಮೂರ್ಖತನವಾದೀತು. ಪ್ರತಿಯೊಂದು ವಿಚಾರಕ್ಕೂ ಪರ ವಿರೋಧ ಅಭಿಪ್ರಾಯವಿರುವಂತೆ ಪ್ರತಿಯೊಬ್ಬರಲ್ಲಿಯೂ ಇನ್ನೊಬ್ಬರ ಮೇಲೆ ವಿಭಿನ್ನವಾದ ಅಭಿಪ್ರಾಯವಿರುತ್ತದೆ. ಹೀಗಾಗಿ ಎಲ್ಲರೂ ಎಲ್ಲರನ್ನೂ ಮೆಚ್ಚಿಕೊಳ್ಳುವುದಿಲ್ಲ. ಯಾರು ನಮ್ಮನ್ನು ಮೆಚ್ಚಿ ಕೊಳ್ಳುವರೋ ಇಲ್ಲವೋ ನಮ್ಮ ಪ್ರಯತ್ನವನ್ನು ನಾವು ಮಾಡುತ್ತಿ ರಬೇಕು. ಏಕೆಂದರೆ ಬೇರೆಯವರಿಗೆ ನಮ್ಮ ಪ್ರೀತಿಯ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿರುವುದಿಲ್ಲ ಆದರೆ ನಮಗೆ, ನಮ್ಮ ಜೀವನಕ್ಕೆ ಅವರ ಪ್ರೀತಿ, ಸಹಕಾರ ಬೇಕಾಗಿರುತ್ತದೆ.

– ರೂಪಾ ಅಯ್ಯರ್‌

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.