ಅಳು ಭಾವನೆಗಳ ಪ್ರತಿರೂಪ, ವೀಕ್‌ನೆಸ್‌ ಅಲ್ಲ!


Team Udayavani, Apr 24, 2018, 11:19 AM IST

alu.jpg

ನಮ್ಮೊಳಗಿರುವ ಋಣಾತ್ಮಕ ಶಕ್ತಿಯನ್ನು ಅಳು ಹೋಗಲಾಡಿಸಿ, ಆದದ್ದೆಲ್ಲ ಒಳ್ಳೆಯದಕ್ಕೆ ಎಂಬಂತೆ ನಮ್ಮನ್ನು ಮತ್ತಷ್ಟು ಗಟ್ಟಿಯಾಗುವಂತೆ ಮಾಡುತ್ತದೆ. ಕೆಲ ಹುಡುಗರು ಅಳುವುದೇ ದೊಡ್ಡ ಅಪರಾಧ ಎಂದುಕೊಳ್ಳುತ್ತಾರೆ. ಒಂದು ವೇಳೆ ಎರಡು ತೊಟ್ಟು ಕಣ್ಣೀರು ಬಿದ್ದರೆ, ನಾನು ಯಾವತ್ತೂ ಕಣ್ಣಿರು ಹಾಕಿದವನೇ ಅಲ್ಲ ಎಂದು ಪದೇ ಪದೇ ಹೇಳಿಕೊಳ್ಳುತ್ತಿರುತ್ತಾರೆ.

ನಗು ಹೇಗೆ ಮನುಷ್ಯನ ಮುಖದಲ್ಲಿ ಮೂಡುವ ಸಹಜ ಭಾವವೋ ಹಾಗೆಯೇ ಅಳುವುದು ಕೂಡ ನಮ್ಮ ಅಂತರಾಳದ ನೋವು ಮತ್ತು ಸಂತೊಷವನ್ನು ವ್ಯಕ್ತಪಡಿಸುವ ಒಂದು ಪ್ರಮುಖ ಭಾವ. ಅನೇಕರು ಅಳುವನ್ನು ನೆಗೆಟಿವ್‌ ಅಂದುಕೊಳ್ಳುತ್ತಾರೆ, ಅಪಶಕುನ ಅನ್ನುತ್ತಾರೆ, ಅದು ನಮ್ಮ ದೌರ್ಬಲ್ಯ ತೋರಿಸಿದಂತೆ, ಅಳಬೇಡಿ ಅನ್ನುತ್ತಾರೆ. ಅಳುವನ್ನು ಸಾಧ್ಯವಾದಷ್ಟೂ ಮುಚ್ಚಿಡಲು ಯತ್ನಿಸುತ್ತಾರೆ. ಅತ್ತರೆ ನಾಚಿಕೆಗೇಡು ಎಂಬ ಭಾವನೆ ಹಲವರಲ್ಲಿ ದಟ್ಟವಾಗಿರುತ್ತದೆ. ಆದರೆ ನಿಜ ಹಾಗಿಲ್ಲ. ಆಂಗಿಕ ಯೋಗದಲ್ಲಿ ಅಳು ಅಂದರೆ ಕೆಟ್ಟದು ಅಥವಾ ನೆಗೆಟಿವ್‌ ಅಲ್ಲವೇ ಅಲ್ಲ. ಅಳು ಎಂದರೆ ಅದು ಮನಷ್ಯನ ಸಹಜ ಕ್ರಿಯೆ ಮತ್ತು ಸಹಜ ಭಾವ. ಅದನ್ನು ಎಷ್ಟು ಮಾತ್ರಕ್ಕೂ ತಡೆಯದೆ ಸಹಜವಾಗಿರಲು ಬಿಡಬೇಕು. ಅಳು ಬಂದರೆ ನದಿಯಂತೆ ಹರಿದು ಹೋಗಬೇಕು. ಅದನ್ನು ಕಟ್ಟಿ ಕುಳಿತುಕೊಳ್ಳಬಾರದು. ಒಂದು ವೇಳೆ ಅದೊಂದು ಸಂದರ್ಭದಲ್ಲಿ ನಾವು ತುಂಬಾ ಭಾವುಕರಾಗಿದ್ದು, ಅಳುವನ್ನು ಕಟ್ಟಿ ಕುಳಿತರೆ, ಅದು ನಿಜಕ್ಕೂ ಪ್ರಕೃತಿ ಸಹಜತೆಗೆ ವಿರುದ್ಧವಾಗಿ ನಡೆದಂತೆ. ಒಂದು ವೇಳೆ ಎಲ್ಲರ ಮುಂದೆ ಅಳುವುದು ಅವಮಾನ, ನಾಚಿಕೆಗೇಡು, ಸರಿಯಲ್ಲ ಎಂದನ್ನಿಸಿದರೆ, ಏಕಾಂತದಲ್ಲಾದರೂ ಮನಸೊÕà ಇಚ್ಛೆ ಅತ್ತು ಸಮಾಧಾನ ತಂದುಕೊಳ್ಳಬೇಕು. ಅತ್ತ ಬಳಿಕ ನಮ್ಮೊಳಗೆ ಅದುಮಿಟ್ಟಿದ್ದ ದುಃಖ ಹೊರಬಂದು ಸಲೀಸಾಗಿ ಮನಸ್ಸು-ದೇಹ ಹಗುರಾಗುತ್ತದೆ. ಮನಸ್ಸು ಮತ್ತಷ್ಟು ಪ್ರಫ‌ುಲ್ಲ ವಾಗುತ್ತದೆ. ಇದು ಸ್ವಾಸ್ಥÂ ಕಾಪಾಡಿಕೊಳ್ಳಲು ನೆರವಾಗುತ್ತದೆ. ನಮ್ಮೊಳಗೆ ನೋವನ್ನು ಅದುಮಿಟ್ಟುಕೊಳ್ಳುವುದು, ಅದನ್ನು ಹೊರಗೆ ಹಾಕದೇ ಸಹಿಸಿ, ಯಾತನೆಯನ್ನು ಮತ್ತಷ್ಟು ತೀಕ್ಷ್ಣ ವಾಗಿಸುವುದು ತರವಲ್ಲ. ಇದರಿಂದ ನಮ್ಮ ನಿತ್ಯದ ನಡವಳಿಕೆ ಮತ್ತು ಮನಸಿನ ಮೇಲೆ ಪರಿಣಾಮ ಉಂಟಾಗುತ್ತದೆ.

ಸೃಷ್ಟಿ ಎಂಬ ಕ್ರಿಯೆಯಲ್ಲಿ ದೇವರು ಎಲ್ಲ ಮನುಷ್ಯರಲ್ಲೂ ಕಣ್ಣೀ ರನ್ನು ಸಮಾನವಾಗಿ ಇಟ್ಟಿದ್ದರೂ, ಅತಿ ಹೆಚ್ಚು ಕಣ್ಣೀರು ಸುರಿಸು ವುದು ಹೆಣ್ಮಕ್ಕಳೇ ಎಂಬುದು ಹೆಂಗಸರ ಮೇಲಿನ ಸಾಮಾನ್ಯ ಆರೋಪ. ಆದರೆ ಸೃಷ್ಟಿಯ ಒಡಲಿನಲ್ಲಿ ಕೂಸನ್ನು ಹೊತ್ತು, ಹೆತ್ತು ಕರುಳ ಬಳ್ಳಿಯ ಸಂಬಂಧ ಸಾಧಿಸುವ ಹೆಣ್ಣು ಆಂತರಿಕವಾದ ಒಡನಾಟವನ್ನು ಹೊಂದಿರುತ್ತಾಳೆ. ಆದ್ದರಿಂದಲೇ ಆಕೆಯ ಬಳಿ ಭಾವುಕತೆ ಹೆಚ್ಚು. ಒಂದು ವೇಳೆ ಕೆಲವು ಗಂಡಸರೂ ಅತ್ತಾಗ ಪಾಪ ಅವನದು ಹೆಂಗರುಳು, ಸಣ್ಣ ನೋವಿಗೂ ಎಷ್ಟೊಂದು ಸಂಕಟ ಪಡುತ್ತಾನೆ ಎಂದು ಹೇಳುತ್ತಾರೆ!

ನಾವೆಲ್ಲ ಗಮನಿಸಿರುವ ಹಾಗೆ ಗಂಡಸರು ಹೆಚ್ಚಾಗಿ ಅಳುವುದೇ ಇಲ್ಲ. ಅಳು ಬಂದರೂ ಮುಗುಮ್ಮಾಗಿರುತ್ತಾರೆ. ಕಣ್ಣಂಚಲ್ಲಿ ಒಂದು ಹನಿ ನೀರೂ ಜಿನುಗುವುದಿಲ್ಲ. ಹೆಚ್ಚೆಂದರೆ ಸುಮ್ಮನಾಗಬಹುದು. ಅಳು ಬಂದರೂ ಆದಷ್ಟು ಗಂಭೀರವಾಗಿಯೇ ಇರಲು ಗಂಡಸರು ಇಷ್ಟಪಡುತ್ತಾರೆ. ಆದರೆ ನಿಜ ವಿಚಾರ ಏನೆಂದರೆ, ಗಂಡಸು ಎಷ್ಟೇ ಒರಟನಾಗಿರಲಿ, ಗಂಭೀರ, ಬಿಗುಮಾನ, ಕೆಳಗೆ ಬಿದ್ದರೂ ಬಿಡೆ, ಸೋತು ಹೋಗಲಾರೆ ಎಂದು ಮನಸ್ಸು ಇದ್ದರೂ ಅವರ ಬಳಿ ಸಾಮಾನ್ಯವಾಗಿ ಕಾಣಸಿಗದ ಒಂದು ಸೂಕ್ಷ್ಮತನ ಇದ್ದೇ ಇರುತ್ತದೆ. ಗಂಡಸರು ಎಂದಿಗೂ ಹೆಣ್ಮಕ್ಕಳಂತೆ ಬೇಗ ಭಾವುಕರಾಗುವುದಿಲ್ಲ. ಅದು ಅವರ ರೀತಿ. ಎಲ್ಲ ಸಮಸ್ಯೆಗೂ ಒಂದು ದಾರಿ ಇದ್ದೇ ಇರುತ್ತದೆ, ಏನಾದರಾಗಲಿ, ಎದುರಿಸಿ ನೋಡೋಣ ಎಂದು ಕೊಂಡು ಸುಮ್ಮನಾಗುತ್ತಾರೆ. ಕೆಲ ಪ್ರೇಮಿಗಳು ಪ್ರೀತಿಯ ಪರಾಕಾಷ್ಠೆಯನ್ನು ಇನ್ನಿಲ್ಲದಂತೆ ತಿಳಿಸುವ ಭರದಲ್ಲಿ ನೀನು ನನ್ನ ಹುಡುಗಿ, ಕಣ್ಣಲ್ಲಿ ಒಂದು ತೊಟ್ಟು ಕಣ್ಣೀರು ಹೊರಗೆ ಬಾರದಂತೆ ನೋಡಿಕೊಳ್ಳುತ್ತೇನೆ ಅನ್ನುತ್ತಾರೆ. ಅದರ ಹಾಗೆ ಹೇಳಿದಂತೆ ಇರುವುದು, ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಸಾಧ್ಯವೇ ಇಲ್ಲ. ಅಚ್ಚರಿ ಎಂದರೆ ಹಾಗೆ ಹೇಳಿದಾತನೇ, ಆಕೆಯ ಜೀವನದಲ್ಲಿ ಅತಿ ಹೆಚ್ಚು ಕಣ್ಣೀರು ಹಾಕಿಸುವ ವ್ಯಕ್ತಿಯಾಗಿರುತ್ತಾನೆ! ಯಾವುದೋ ಒಂದು ಘಟನೆ ಜಗಳಕ್ಕೆ ಕಾರಣವಾಗಿ, ಮುನಿಸು ದಿನಗಳ ಪರ್ಯಂತ ಇದ್ದು, ಅದರಲ್ಲಿ ಅವಳ-ಅವನ ಯಾರದ್ದೇ ತಪ್ಪು ಆದರೂ, ಅಳುವುದು ಆ ಹುಡುಗಿ ಮಾತ್ರ. 

ಪ್ರೀತಿಯ ಮೊದ ಮೊದಲ ದಿನಗಳಲ್ಲಿ, ಅದನ್ನು ವ್ಯಕ್ತಪಡಿಸುವ ಭರದಲ್ಲಿ ಹುಡುಗರು, ಅಳಬೇಡ ಚಿನ್ನ, ಬಂಗಾರ, ಮುದ್ದು ಅಂತೆಲ್ಲ ಹೇಳಿ ಹುಡುಗಿಯನ್ನು ರಮಿಸಿ, ಸಮಾಧಾನ ಮಾಡು ವರು. ದಿನ ಹೋದಂತೆ ದಿನಾ ಸಾಯುವವರಿಗೆ ಅಳ್ಳೋದ್ಯಾರು, ಅಂತ ಹುಡುಗಿ ಅಳುತ್ತಾ ಇದ್ದರೂ ಆಕೆಯನ್ನು ಸಮಾಧಾನ ಪಡಿಸುವ ಗೋಜಿಗೆ ಹೋಗುವುದಿಲ್ಲ. ಆಕೆ ಅತ್ತು ಕರೆದರೂ ಅತ್ತ ತಲೆ ಹಾಕುವ ವ್ಯವಧಾನವೇ ಇರುವುದಿಲ್ಲ. ಮೊದ ಮೊದಲು ಹುಡುಗಿ ಅತ್ತರೆ, ಅಳುವಾಗಲೂ ಎಷ್ಟು ಚೆನ್ನಾಗಿ ಕಾಣುತ್ತೀ ಎಂದು ಅಳುವಿನಲ್ಲೂ ಸೌಂದರ್ಯ ಹುಡುಕಿ, ಆಕೆಯನ್ನು ಹೊಗಳಿ ಅಟ್ಟಕೇರಿಸಿ, ಆಕೆಯ ಮೊಗದಲ್ಲಿ ನಗು ತರಿಸಿದರೆ, ಆ ಮೇಲಿನ ದಿನಗಳಲ್ಲಿ ಅಯ್ಯೋ ಮುಖ ಏಕೆ ಗಂಟು ಹಾಕ್ಕೊಂಡಿದ್ದೀಯಾ, ಏನು ನಿನ್ನ ಪ್ರಾಬ್ಲಿಂ, ಬರೀ ಅಳ್ಳೋದೇ ಆಯ್ತು, ಬರ್ತಾ ಯಾಕೋ ಅತಿಯಾಗಿ ಆಡ್ತೀಯಾ ಎಂದು ಮೂದಲಿಸುವಷ್ಟು ಮಟ್ಟಿಗೆ, ತಿರಸ್ಕಾರದ ಭಾವವನ್ನು ವ್ಯಕ್ತಪಡಿಸುವುದರಲ್ಲಿ ಮೊದಲ ಪ್ರೀತಿ ಹಾಗೆಯೇ ಹಕ್ಕಿಯಂತೆ ಹಾರಿ ಮಾಯವಾಗಿ ಹೋಗಿರುತ್ತದೆ. 

ಆ ವಿಚಾರ ಹಾಗಿರಲಿ, ಕೆಲವು ಮನೆಗಳಲ್ಲಿ ಹೆಂಗಸರು ಜೋರಾಗಿ ಅತ್ತು ಒಂದು ನಾಟಕವನ್ನೇ ಮಾಡಿ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಾರೆ. ಈ ಕಲೆಯಿಂದ ಎದುರಿನ ವ್ಯಕ್ತಿಯನ್ನು ಕರಗಿಸುವುದು ಅವರ ಉದ್ದೇಶ. ಆದರೆ ಇದು ಕೆಲಸಕ್ಕೆ ಬರುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಜೋರಾಗಿ ಕಿರುಚುತ್ತಾ, ತಮ್ಮ ಮನಸ್ಸಿನಲ್ಲಿರುವುದನ್ನೆಲ್ಲ ಹೊರಗೆ ಹಾಕುತ್ತಾರೆ.

ಅಳುವುದು ತಪ್ಪಲ್ಲ. ಕೆಲವು ಸಲ ಜಗತ್ತಿನಲ್ಲಿ ನಮ್ಮ ಜತೆ ಯಾರೂ ಇಲ್ಲ ಅಂತ ಒಬ್ಬರೇ ಕೂತು ಯೋಚಿಸುತ್ತಿದ್ದಾಗ, ಒಂಟಿತನ, ಧ್ಯಾನ ದಲ್ಲಿದ್ದಾಗ ಕಣ್ಣೀರು ಯಾರ ಅನುಮತಿಯನ್ನೂ ಪಡೆಯದೆ ತಾನಾಗಿಯೇ ಹರಿದು ಬರುತ್ತದೆ. ಹುಡುಗಿಯರಾದರೆ, ದುಃಖ ಗಂಟಲವರೆಗೆ ಬಂದರೂ ಹೊರಗೆ ನಕ್ಕು ಒಂಟಿಯಾಗಿದ್ದಾಗ ಜೋರಾಗಿ ಅಳುತ್ತಾರೆ. ಅನೇಕ ಹುಡುಗಿಯರು ಪ್ರೀತಿಯಲ್ಲಿರು ವಾಗ ಹುಡುಗ ಜಗಳವಾಡಿದ ಎಂದು ರಾತ್ರಿ ಹೊತ್ತು ಹೊದಿಕೆ ಯೊಳಗೇ ಮುಖ ಮುಚ್ಚಿ ಅಳುತ್ತಾರೆ. ಕನ್ನಡಿ ನೋಡಿಕೊಂಡು, ಸ್ನೇಹಿತೆಯರ ಬಳಿ ಹೀಗಾಯ್ತು ಕಣೇ…ಅಂತ ಹೇಳಿಕೊಂಡು ಅಳುತ್ತಾರೆ. ಮತ್ತೆ ಕೆಲವರು ಯಾಕೇ ಏನಾಯ್ತು ಅಂತ ಯಾರಾ ದರೂ ಕೇಳಿದರೆ ಎಂಬ ಭೀತಿಯಲ್ಲೇ ಗೊತ್ತಾಗದಂತೆ ಅಳುತ್ತಾರೆ. ಇನ್ನೂ ಕೆಲವರು ತನ್ನೊಳಗಿನ ಸತ್ಯ ತನ್ನೊಳಗೆ ಸತ್ತು ಹೋಗಲಿ ಎಂದು ದುಃಖವನ್ನು ಯಾರಿಗೂ ಹೇಳಿಕೊಳ್ಳದೇ ಒಳಗೊಳಗೇ ಅಳುತ್ತಿರುತ್ತಾರೆ. ಕೆಲವು ಸಮುದಾಯಗಳಲ್ಲಿ ಮೃತರ ಮುಂದೆ ಕೂತು ಅಳುವುದನ್ನು ಒಂದು ಸಂಪ್ರದಾಯದಂತೆ ಪಾಲಿಸುತ್ತಾರೆ. ಸ್ನೇಹಿತರು, ಬಂಧುಗಳು ಅತ್ತರೆ ಸಹಜ. ಆದರೆ ಅಳುವುದಕ್ಕೆಂದೇ ಜನ ಕರೆಸುವುದೂ ಇದೆ. ಅಚ್ಚರಿ ಎಂದರೆ ತಾನು ಸತ್ತಾಗ ಎಷ್ಟು ಜನ ಬಂದರು, ಎಷ್ಟ ಜನ ಅತ್ತರು ಎಂಬುದನ್ನು ಆತ್ಮ ದೇಹವನ್ನು ಸುಡುವವರೆಗೂ ಅಲ್ಲೇ ಕೂತು ನೋಡುತ್ತದೆ ಎಂಬ ನಂಬಿಕೆಯಿದೆ.

ಅದಕ್ಕೆ ಮನಸ್ಸು ಸಮಾಧಾನವಾಗಲಿ ಎಂದು ಅಳುವವರನ್ನು ಕರೆಸಲಾಗುತ್ತದೆಯಂತೆ!
ಹಾಗೆ ಜೋರಾಗಿ ಅತ್ತೂ ಅತ್ತೂ ನಮ್ಮ ಮನಸ್ಸು ಕೊನೆಗೆ ಒಂದು ದೃಢ ನಿರ್ಧಾರ ತೆಗೆದುಕೊಂಡು ಹೇಗೆ ಸುಮ್ಮನಾಗುತ್ತದೋ ಹಾಗೆಯೇ, ನಮ್ಮೊಳಗಿರುವ ಋಣಾತ್ಮಕ ಶಕ್ತಿಯನ್ನು ಅಳು ಹೋಗ ಲಾ ಡಿಸಿ, ಆದದ್ದೆಲ್ಲ ಒಳ್ಳೆಯದಕ್ಕೆ ಎಂಬಂತೆ ನಮ್ಮನ್ನು ಮತ್ತಷ್ಟು ಗಟ್ಟಿ ಯಾ ಗುವಂತೆ ಮಾಡುತ್ತದೆ. ಕೆಲ ಹುಡುಗರು ಅಳುವುದೇ ದೊಡ್ಡ ಅಪರಾಧ ಎಂದುಕೊಳ್ಳುತ್ತಾರೆ. ಒಂದು ವೇಳೆ ಎರಡು ತೊಟ್ಟು ಕಣ್ಣೀರು ಬಿದ್ದರೆ, ನಾನು ಯಾವತ್ತೂ ಕಣ್ಣಿರು ಹಾಕಿದವನೇ ಅಲ್ಲ ಎಂದು ಪದೇ ಪದೇ ಹೇಳಿಕೊಳ್ಳುತ್ತಿರುತ್ತಾರೆ, ಛೇ ಎಂದು ಪೇಚಾ ಡುತ್ತಾರೆ. ಆದರೆ ಅಳುವುದು ಮನುಷ್ಯನ ಸಹಜ ಗುಣ. ಅವಮಾನ ಅಲ್ಲ. ತುಂಬ ಭಾವುಕ ಮಾತು, ಪ್ರಿಯವಾದವರ ಭೇಟಿ, ಒಂದು ಅಭಿಮಾನ, ರೋಮಾಂಚನಕ್ಕೆಲ್ಲ ಕಣ್ಣೀರು ಪ್ರಕಟಗೊಳ್ಳುತ್ತದೆ. ಅಳುವುದು ವೀಕ್‌ನೆಸ್‌ ಅಲ್ಲ. ಅದು ಭಾವನೆಗಳ ಪ್ರತಿರೂಪ.

– ರೂಪಾ ಅಯ್ಯರ್‌

ಟಾಪ್ ನ್ಯೂಸ್

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.