ಬೇರೆಯವರ ಬಗ್ಗೆ ಹಗುರವಾಗಿ ಮಾತಾಡುವವರು ಜಗತ್ತಿಗೆ ಭಾರ


Team Udayavani, Jul 10, 2018, 4:23 PM IST

jagattige-bara.jpg

ಬೇರೆಯವರು ಅವರಿಗಿಷ್ಟ ಬಂದಂತೆ ಇರುತ್ತಾರೆ, ಅದನ್ನು ಕಟ್ಟಿಕೊಂಡು ಇವರಿಗೇನಾಗಬೇಕು? ಬೇರೆಯವರ ಬಗ್ಗೆ ಮಾತನಾಡಿ ಸಮಯ ಹರಣ ಮಾಡುವಷ್ಟು ಬದುಕು ಸೋವಿಯಲ್ಲ. ಒಂದಿಡೀ ಜೀವನ ಕಷ್ಟಪಟ್ಟರೂ ನಮ್ಮನ್ನು ನಾವು ಸರಿಯಾಗಿ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಮೊದಲ ಪ್ರಯತ್ನ ನಮ್ಮನ್ನು ಚೆನ್ನಾಗಿ ರೂಪಿಸಿಕೊಳ್ಳುವತ್ತ ಇರಬೇಕು.

ಬಹಳ ಜನ ಬೇರೆಯವರ ಬಗ್ಗೆ ಯೋಚಿಸದೆ ಮಾತನಾಡುತ್ತಾರೆ. ಯಾರಧ್ದೋ ಬಗ್ಗೆ ಕೀಳಾಗಿ ಮಾತನಾಡಿ ಅಕ್ಕಪಕ್ಕದವರ ಮುಂದೆ ತಮ್ಮನ್ನು ತಾವೇ ಕೀಳಾಗಿಸಿಕೊಳ್ಳುತ್ತಿದ್ದೇವೆ ಎಂಬ ಅರಿವೂ ಅವರಿಗೆ ಇರುವುದಿಲ್ಲ.

ನಮ್ಮ ಮನೆಯಲ್ಲಿ ನಾವು ಬೇರೆಯವರ ಬಗ್ಗೆ ಮಾತನಾಡಿಕೊಂಡರೆ ಅವರಿಗೆಲ್ಲಿ ಕೇಳಿಸುತ್ತೆ ಅಂತ ನಾವು ಏನೇನೋ ಗಾಸಿಪ್‌ ಮಾಡುತ್ತೇವೆ. ಆದರೆ, ಬೇರೆಯವರು ಅವರ ಮನೆಯಲ್ಲಿ ನಮ್ಮ ಬಗ್ಗೆ ಮಾತಾಡಿಕೊಳ್ಳುತ್ತಿರುತ್ತಾರೆ ಎಂಬುದನ್ನು ಮರೆತುಬಿಡುತ್ತೇವೆ.

ಕೆಲವರು ಕಣ್ಣಿಗೆ ಕಂಡಿದ್ದಕ್ಕೆಲ್ಲಾ ಕಾಮೆಂಟ್‌ ಮಾಡುತ್ತಾರೆ. ಅದರಲ್ಲಿ ಹೆಚ್ಚಿನವು ನೆಗೆಟಿವ್‌ ಕಾಮೆಂಟೇ ಆಗಿರುತ್ತವೆ. ಇನ್ನು ಕೆಲವರು ಯಾವುದನ್ನೂ ತಕ್ಷಣ ಹೊಗಳುವುದಿಲ್ಲ. ಆದರೆ ಕೆಟ್ಟದ್ದನ್ನು ತಕ್ಷಣ ಹೇಳಿಬಿಡುತ್ತಾರೆ. ಹೇಳುವುದಕ್ಕಾಗದಿದ್ದರೆ ಒಳಗೊಳಗೇ ಗೊಣಗುತ್ತಾರೆ. ಇವರು ಯಾರನ್ನು ಭೇಟಿಯಾದರೂ ತಲೆಯಿಂದ ಕಾಲಿನ ತನಕ ಒಂದೇ ಕ್ಷಣದಲ್ಲಿ ಗಮನಿಸಿ ಅವರು ದಪ್ಪ, ಇವರು ಸಣ್ಣ, ಅವರು ಬಿಳಿ, ಇವರು ಕಪ್ಪು, ಇವರು ತುಂಬಾ ಉದ್ದ, ಇವರು ತುಂಬಾ ಕುಳ್ಳ ಎಂದು ಪಕ್ಕದವರ ಬಳಿ ಕಾಮೆಂಟ್‌ ಮಾಡುತ್ತಾರೆ. ಅವರಿಗೆ ಬಾಯಿ ಜಾಸ್ತಿ, ಇವರು ಮಾತಾಡೋದೇ ಇಲ್ಲ, ತುಂಬಾ ಬೋರ್‌ ಹೊಡೆಸ್ತಾರೆ… ಹೀಗೆ ಬೇರೆಯವರ ಬಗ್ಗೆ ಸುಲಲಿತವಾಗಿ ಟೀಕೆ-ಟಿಪ್ಪಣಿ ಹರಿಸುತ್ತಾರೆ. ಅದೇ ಅವರು ತಿರುಗಿಸಿ ನಮ್ಮ ಬಗ್ಗೆ ಕಾಮೆಂಟ್‌ ಮಾಡಿದರೆ ಇವರು ಸಹಿಸಿಕೊಳ್ಳುತ್ತಾರಾ?

ಪರರ ಚಿಂತೆ ನಿನಗೇಕಯ್ನಾ?
ಗುಂಪಿನಲ್ಲಿ ಒಬ್ಬ ಹುಡುಗಿ ಬಂದು ಕುಳಿತುಕೊಂಡಳು ಅಂತಿಟ್ಟುಕೊಳ್ಳಿ. ಪಕ್ಕದಲ್ಲಿದ್ದವರ ಗುಸುಗುಸು ಶುರುವಾಗುತ್ತದೆ. ಅವಳು ಮುಂಚೆ ಸಣ್ಣ ಇದುÉ, ಈಗ ದಪ್ಪ ಆಗಿದ್ದಾಳೆ. ಮುಂಚೇನೇ ಚೆನ್ನಾಗಿದ್ದಳು, ಈಗ ಕೆಟ್ಟದಾಗಿ ಕಾಣಿ¤ದ್ದಾಳೆ, ಅವಳಿಗೆ ಕೂದುÉ ಉದ್ದ ಇದ್ದಿದ್ದೆ ಚೆನ್ನಾಗಿರಿ¤ತ್ತು. ಅದೇನೋ ಜುಟ್ಟು ಕಟ್ಕೊàತಾಳೆ, ಅವಳು ಸೀರೆ ಉಟ್ಕೊಂಡ್ರೆ ಸೂಪರ್‌ ಫಿಗರುÅ, ಈಗೀಗ ಬರೀ ಜೀನ್ಸ್‌ ಪ್ಯಾಂಟ್‌ ಹಾಕ್ತಾಳೆ.
ಅಷ್ಟೆಲ್ಲಾ ಏಕೆ, ಅವಳ ಪರವಾಗಿ ಇವರೇ ಎಲ್ಲಾ ವಿಚಾರಗಳನ್ನೂ ಚರ್ಚೆ ಮಾಡುತ್ತಾರೆ…ಈಗೆಲ್ಲ ರಸ್ತೆಗೆ ಒಂದೊಂದು ಜಿಮ್‌ ಇದೆ, ಅವಳಾÂಕೆ ಜಿಮ್ಮಿಗೆ ಹೋಗಿ ಸಣ್ಣ ಆಗಲ್ಲ?

ಅವಳು ಯಾರು? ಇವರಿಗೆ ಏನಾಗಬೇಕು? ಆ ಹುಡುಗಿ ಇವರ ಗರ್ಲ್ಫ್ರೆಂಡಾ? ಇವರ ಸಂಬಂಧಿಕಳಾ? ಗರ್ಲ್ಫ್ರೆಂಡ್‌ ಅಥವಾ ಸಂಬಂಧಿಕಳಾಗಿದ್ದರೆ ಇವರು ಎಲ್ಲರ ಮುಂದೆ ಅವಳ ಬಗ್ಗೆ ಮಾತಾಡುತ್ತಿದ್ದರಾ? ಬೇರೆಯವರ ಬಗ್ಗೆ ಮಾತಾಡುವುದಕ್ಕೆ ಜನರ ಬಾಯಿಗೆ ಕಡಿವಾಣವೇ ಇರುವುದಿಲ್ಲ.

ಬೇರೆಯವರು ಅವರಿಗಿಷ್ಟ ಬಂದಂತೆ ಇರುತ್ತಾರೆ, ಅದನ್ನು ಕಟ್ಟಿಕೊಂಡು ಇವರಿಗೇನಾಗಬೇಕು? ಇವರ ಕಣ್ಣಿಗೆ ಚೆನ್ನಾಗಿ ಕಾಣಬೇಕು ಅಂತ ನಾವು ಅವರಿಗಿಷ್ಟ ಬಂದಂತೆ ಡ್ರೆಸ್‌ ಮಾಡಿಕೊಳ್ಳಲು ಸಾಧ್ಯವೇ? 

ನಾನು, ನನ್ನ ಸ್ನೇಹಿತೆ ಒಂದು ಸಮಾರಂಭಕ್ಕೆ ಹೋಗಿದ್ದೆವು. ಎದುರಿಗೆ ಸಿಕ್ಕವರಿಗೆಲ್ಲಾ ಹಲೋ ಹೇಳಿ ಮುನ್ನಡೆಯುತ್ತಿದ್ದೆವು. ಒಬ್ಬ ಪರಿಚಯದ ವ್ಯಕ್ತಿ ಎದುರಿಗೆ ಸಿಕ್ಕಿ ಮಾತನಾಡಿಸಿದರು. ನಾನು ನನ್ನ ಗೆಳತಿಯನ್ನು ಪರಿಚಯಿಸಿದೆ. ತಕ್ಷಣ ಆತ, ಓ ನಿಮ್ಮ ಫ್ರೆಂಡ್‌ ಚೆನ್ನಾಗಿದ್ದಾರೆ, ಆದ್ರೆ ಇನ್ನೊಂದು ಸ್ವಲ್ಪ ಉದ್ದ ಇರ್ಬೇಕಿತ್ತು ಅಂದರು! ನಾನೇನು ಇವರಿಗೆ ಮದುವೆಗೆ ಹೆಣ್ಣು ತೋರಿಸಲು ಕರೆದುಕೊಂಡು ಹೋಗಿದ್ದೆನೇ? ನಾವು ವಾಪಸ್ಸು ತಿರುಗಿ ಹೇಳಬಹುದಿತ್ತು… ಮೊದಲು ನಿಮ್ಮ ಹೈಟ್‌ ನೋಡ್ಕೊಳ್ಳಿ. ನಾವು ಎತ್ತರದ ಚಪ್ಪಲಿ ಹಾಕ್ಕೊಂಡಾದ್ರೂ ಉದ್ದ ಕಾಣಿಸºಹುದು, ಆದ್ರೆ ನಿಮಗೆ ಆ ಅವಕಾಶವೂ ಇಲ್ಲ ಎನ್ನಬಹುದಿತ್ತು. ಆದರೆ ನಮ್ಮ ಮನಸ್ಸು ಅವರ ವ್ಯಕ್ತಿತ್ವಕ್ಕೆ ಸರಿಸಮನಾಗಿ ಬೀಳಲು ಅವಕಾಶ ಮಾಡಿಕೊಡಲಿಲ್ಲ.

ಆತ ನನಗೂ ಒಂದು ಕಾಮೆಂಟ್‌ ಮಾಡಿದರು. ಮೇಡಂ ನಿಮಗೆ ರೆಡ್ಡು, ಬ್ಲ್ಯಾಕು ಈ ಎರಡು ಕಲರ್‌ ಸೀರೆಗಳು ಚೆನ್ನಾಗಿರುತ್ತೆ. ನೀವ್ಯಾಕೆ ನೀಲಿ ಬಣ್ಣದ ಸೀರೆ ಉಟ್ಕೊàಳ್ತೀರಿ? ಇದೆ ಓಕೆ ಓಕೆ ಅಷ್ಟೆ. ನೀವು ಫೇರಾಗಿದ್ದೀರಿ ಅಲ್ವಾ. ಅದಕ್ಕೆ ನೆಕ್ಸ್ಟ್ ಟೈಂ ಕೆಂಪು ಸೀರೆ ಉಟ್ಕೊಳ್ಳಿ…ನಮಗೆ ಒಂದು ಕ್ಷಣ ತಲೆ ಗಿರ್ರ ಅಂದಿತು. ಇವರು ಯಾರು ನಮಗೆ? ಇವರಿಗೆ ಇಷ್ಟ ಬಂದ ಸೀರೆ ನಾನ್ಯಾಕೆ ಉಡಬೇಕು? ಇವರ ಕಣ್ಣಿಗೆ ಆ ಎರಡು ಬಣ್ಣ ಚೆನ್ನಾಗಿದ್ದರೆ ಮತ್ತೂಬ್ಬರ ಕಣ್ಣಿಗೆ ಬೇರೆ ಬಣ್ಣಗಳು ಚೆನ್ನಾಗಿ ಕಾಣತ್ತವೆ. ಇದೆಲ್ಲ ಮೀರಿ ನನಗೆ ಇಷ್ಟವಾದ ಬಣ್ಣ ಇರುತ್ತದೆ ಅಲ್ಲವೇ?

ಅವರು ಹಾಗಿರಲಿ, ನೀವು ಚೆನ್ನಾಗಿರಿ
ಜನ ಅವರವರ ಕಲ್ಪನೆಗೆ, ಭಾವಕ್ಕೆ ತಕ್ಕಂತೆ ಮಾತಾಡುತ್ತಾರೆ. ಮಾತಾಡಲಿ, ತಪ್ಪಿಲ್ಲ, ಆದರೆ ಅವರಿಗೆ ಬೇಕಾದಂತೆ ಊರವರೆಲ್ಲ ಇರಬೇಕು ಅಂದುಕೊಳ್ಳುವುದು ತಪ್ಪು. ಬೇಕಾದರೆ ಅವರವರ ಮನೆಯವರನ್ನು ಅವರಿಗೆ ಬೇಕಾದಂತೆ ರೂಪುಗೊಳಿಸಲಿ. ಹೊರಗಿನವರ ಬಗ್ಗೆ ನಿರೀಕ್ಷೆ ಮಾಡುವುದು, ಕಾಮೆಂಟ್‌ ಮಾಡುವುದು ಸರಿಯಲ್ಲ, ನಾವು ನಿರೀಕ್ಷಿಸಿದಂತೆ ಬೇರೆಯವರೂ ನಮ್ಮಿಂದ ನಿರೀಕ್ಷಿಸಿದರೆ ನಾವು ಅವರ ಅಪೇಕ್ಷೆಯಂತೆ ಇರಲು ಸಾಧ್ಯವೇ? 

ಇನ್ನೊಂದು ತಮಾಷೆಯ ವಿಷಯ ಅಂದರೆ, ಹುಡುಗಿಯರಿಗೆ ಉದ್ದ ಜಡೆ ಇದ್ದರೆ ಚೆನ್ನಾಗಿರುತ್ತದೆ ಅಂತ ಹುಡುಗರು ಕಾಮೆಂಟ್‌ ಮಾಡುವುದು. ಹೇರ್‌ಕಟ್‌ ಮಾಡಿಕೊಳ್ಳಬೇಡ ಅಂತ ತಮ್ಮ ಆಪ್ತ ಹುಡುಗಿಯರಿಗೆ ಅವರು ಸೂಚನೆ ಕೊಡುವುದುಂಟು. ಒಬ್ಬರು ಹೇಳುತ್ತಾರೆ, ನೀವು ಕೂದಲು ಬಿಚ್ಚಿದ್ದರೆ ಚೆನ್ನಾಗಿ ಕಾಣುತ್ತೀರಿ ಅಂತ. ಇನ್ನು ಕೆಲವರು ಹೇಳುತ್ತಾರೆ, ನೀವು ಜಡೆ ಹಾಕ್ಕೊಂಡರೆ ಚೆನ್ನಾಗಿ ಕಾಣುತ್ತೀರಿ ಅಂತ. ನಮ್ಮ ಕೂದಲಿನ ಬಗ್ಗೆ ಕಾಮೆಂಟ್‌ ಮಾಡುವವರು ಯಾರು ಅಂತ ಗಮನಿಸಿ ಅವರ ತಲೆ ನೋಡಿದರೆ ಅಲ್ಲಿ ನಾಲ್ಕೋ ಐದೋ ಕೂದಲಿರುತ್ತದೆ. ನಾವು ಇಷ್ಟಾದರೂ ಕೂದಲು ಇಟ್ಟುಕೊಂಡಿದ್ದೀವಿ, ನಿಮ್ಮಂತೆ ನಮ್ಮ ತಲೆ ಆಗಿಲ್ಲವಲ್ಲ ಅಂತ ನಾವೂ ಹೇಳಬಹುದಲ್ಲವೇ?

ಕಂಟ್ರೋಲ್‌ ಮಾಡಿಕೊಳ್ಳೋದು ಹೇಗೆ?
ಬೇರೆಯವರ ಬಗ್ಗೆ ಏನೇ ಮಾತಾಡಬೇಕಾದರೂ ನಮ್ಮನ್ನು ನಾವು ಕನ್ನಡಿಯಲ್ಲಿ ಒಂದು ಸಲ ನೋಡಿಕೊಳ್ಳಬೇಕು. ಆಗ ನಮ್ಮ ದೇಹದಲ್ಲಿರುವ ನ್ಯೂನತೆ ಕಾಣಿಸುತ್ತದೆ. ಬೇರೆಯವರ ವ್ಯಕ್ತಿತ್ವದ ಬಗ್ಗೆ ಕಾಮೆಂಟ್‌ ಮಾಡುವಾಗ ನಮ್ಮ ವ್ಯಕ್ತಿತ್ವದೊಳಗೊಮ್ಮೆ ಹೊರಗಿನವರಾಗಿ ಇಣುಕಿ ನೋಡಿಕೊಳ್ಳಬೇಕು. ಆಗ ನಮ್ಮ ಗುಣದಲ್ಲಿರುವ ಕೊರತೆಗಳು ಗೋಚರಿಸುತ್ತವೆ. ಈ ಎರಡೂ ರೀತಿಯ ಆತ್ಮಾವಲೋಕನ ಮಾಡಿಕೊಂಡು ನಂತರ ಬೇರೆಯವರ ಬಗ್ಗೆ ಮಾತನಾಡುವಾಗ ನಮಗೆ ಗೊತ್ತಿಲ್ಲದಂತೆಯೇ ನಾವು ಎಚ್ಚರ ವಹಿಸತೊಡಗುತ್ತೇವೆ. ನಮ್ಮ ಕೊರತೆಗಳ ಬಗ್ಗೆ ಬೇರೆಯವರು ಆಡಿಕೊಂಡು ನಕ್ಕರೆ ಹೇಗಿರುತ್ತದೆ ಎಂದು ಮನಸ್ಸು ಎಚ್ಚರಿಕೆ ನೀಡುತ್ತದೆ. ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಎಲ್ಲರಲ್ಲೂ ಕೊರತೆಗಳಿರುತ್ತವೆ. ಅವು ನಮ್ಮಲ್ಲೂ ಇರುತ್ತವೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಬೇರೆಯವರ ಬಗ್ಗೆ ಮಾತನಾಡಿ ಸಮಯ ಹರಣ ಮಾಡುವಷ್ಟು ಬದುಕು ಸೋವಿಯಲ್ಲ. ಒಂದಿಡೀ ಜೀವನ ಕಷ್ಟಪಟ್ಟರೂ ನಮ್ಮನ್ನು ನಾವು ಸರಿಯಾಗಿ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಮೊದಲ ಪ್ರಯತ್ನ ನಮ್ಮನ್ನು ಚೆನ್ನಾಗಿ ರೂಪಿಸಿಕೊಳ್ಳುವತ್ತ ಇರಬೇಕು. ಆಗ ಬೇರೆಯವರ ಬಗ್ಗೆ ಆಡಿಕೊಳ್ಳಲು ಸಮಯವೂ ಸಿಗುವುದಿಲ್ಲ. ಸಿಕ್ಕರೂ ಮನಸ್ಸಾಗುವುದಿಲ್ಲ.

– ರೂಪಾ ಅಯ್ಯರ್‌

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.