ಹೆಣ್ಮಕ್ಕಳೇಕೆ ಈ ಪರಿ ಕನ್ನಡಿ ನೋಡಿಕೊಳ್ಳುತ್ತಾರೆ?


Team Udayavani, Oct 30, 2018, 6:00 AM IST

v-6.jpg

ದಕ್ಷಿಣ ಅಮೆರಿಕದ ಮನೆಗಳಲ್ಲಿ ಯಾರಾದರೂ ಸತ್ತರೆ ಕೂಡಲೇ ಕನ್ನಡಿ ಹಾಗೂ ಪ್ರತಿಬಿಂಬ ತೋರಿಸುವ ಟಿವಿ ಮುಂತಾದ ಎಲ್ಲಾ ನಯವಾದ ವಸ್ತುಗಳನ್ನು ವಸ್ತ್ರದಿಂದ ಮುಚ್ಚಿಡುತ್ತಾರೆ. ಅಂತ್ಯಸಂಸ್ಕಾರ ಮುಗಿದ ನಂತರವಷ್ಟೇ ಆ ಬಟ್ಟೆ ತೆಗೆಯುತ್ತಾರೆ. ಮುಚ್ಚಿಡದಿದ್ದರೆ ಸತ್ತವರ ಆತ್ಮ ಕನ್ನಡಿಯಲ್ಲಿ ಅಡಗಿಕೊಂಡು ಶಾಶ್ವತವಾಗಿ ಅಲ್ಲೇ ನೆಲೆಸಿಬಿಡುತ್ತದೆ ಎಂಬ ನಂಬಿಕೆ ಅವರದು! 

ಕನ್ನಡಿ-ದರ್ಪಣ: ಇದೊಂದೇ ನಮ್ಮನ್ನು ನಾವು ಸಂಪೂರ್ಣವಾಗಿ ನೋಡಿಕೊಳ್ಳಲು ಸಹಾಯ ಮಾಡುವಂತಹ ವಸ್ತು ಎಂದರೆ ತಪ್ಪಾಗಲಾರದು. ನಮ್ಮ ಬಾಹ್ಯ ಸೌಂದರ್ಯವನ್ನು ಮಾತ್ರವಲ್ಲ, ಎಷ್ಟೋ ಸಲ ನಮ್ಮ ಆಂತರಿಕ ನೋವನ್ನೂ ಪ್ರತಿಬಿಂಬಿಸುವ ಶಕ್ತಿ ಅದಕ್ಕಿದೆ. ಏಕೆಂದರೆ ಅದರ ಮುಂದೆ ನಿಂತರೆ ಅದರೊಳಗೆ ಕಾಣುವುದು ನಮ್ಮ ಪ್ರತ್ಯಕ್ಷ ಸ್ವರೂಪ ಅಲ್ಲವೇ!

ಹೆಣ್ಣು ಮಕ್ಕಳು ಅಥವಾ ಹೆಂಗಸರು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಸಾಮಾನ್ಯವಾಗಿ ಎಷ್ಟು ಸಲ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬಹುದು? ಸುಮಾರು 20 ರಿಂದ 30 ಸಲ. ಕೆಲವರಿಗೆ ಅದೂ ಕಡಿಮೆ. ನಾವು ಪ್ರೀತಿಸಿದವರನ್ನು ನೋಡುವುದಕ್ಕಿಂತ ಹೆಚ್ಚಾಗಿ ನಮ್ಮನ್ನು ನಾವೇ ಕನ್ನಡಿಯಲ್ಲಿ ಆಗಾಗ ನೊಡಿಕೊಳ್ಳುತ್ತಿರುತ್ತೇವೆ. ಇದರಿಂದ, ಎಲ್ಲರಿಗಿಂತ ಹೆಚ್ಚಾಗಿ ಮೊದಲು ನಮ್ಮನ್ನು ನಾವು ಪ್ರೀತಿಸುತ್ತೇವೆ ಎಂಬುದು ಖಚಿತವಾಗುತ್ತದೆ. ಹುಡುಗಿಯರಿಗೆ ಕನ್ನಡಿ ತುಂಬಾ ಹತ್ತಿರವಾದ ಸ್ನೇಹಿತ/ ಸ್ನೇಹಿತೆ ಆಗಿರಲು ಸಾಧ್ಯ. ಅವರು ಎಷ್ಟೋ ವಿಷಯಗಳನ್ನು ಕನ್ನಡಿ ಮುಂದೆ ಒಬ್ಬರೇ ನಿಂತು ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ಬೇರೆಯವರ ಜೊತೆ ಮಾತನಾಡುವಾಗ ನಾವು ಅವರಿಗೆ ಹೇಗೆ ಕಾಣಿಸುತ್ತೇವೆ ಎಂಬುದನ್ನು ಕನ್ನಡಿ ಮುಂದೆ ನಿಂತು ಕಲ್ಪನೆ ಮಾಡಿಕೊಳ್ಳುತ್ತಾರೆ.

ಕನ್ನಡಿಯನ್ನು ಅಲಂಕಾರ ಮಾಡಿಕೊಳ್ಳುವಾಗ ಮಾತ್ರ ಉಪಯೋಗಿಸುತ್ತೇವೆ ಎನ್ನುವುದು ತಪ್ಪು. ನಮಗೆ ತುಂಬಾ ಸಂತೋಷ ಆದಾಗ ಓಡಿಹೋಗಿ ಕನ್ನಡಿ ಮುಂದೆ ನಿಂತು ನಮಗೆ ನಾವೇ ಮುಗುಳ್ನಗಲು ಪ್ರಾರಂಭಿಸುತ್ತೇವೆ. ಅಷ್ಟೇ ಅಲ್ಲ ನಾವು ತಪ್ಪು ಮಾಡಿದಾಗ ನಮ್ಮ ಪಾಪ ಪ್ರಜ್ಞೆಯನ್ನು ಎತ್ತಿ ತೋರಿಸುವುದೇ ಕನ್ನಡಿ. ನಮಗೆ ನಾವೇ ಛೇ ನಾನು ಇಂಥಾ ಕೆಲಸ ಮಾಡಿದ್ನಾ…ಅದೂ ನಾನೇನಾ? ಅಂತ ಕನ್ನಡಿಯನ್ನು ಕೇಳುತ್ತಾ ನಿಂತರೆ, ಕನ್ನಡಿ ಪಾಪ ಸುಮ್ಮನಿರುವುದಿಲ್ಲ. ಏಕೆಂದರೆ ನಮ್ಮ ತಪ್ಪು ಸರಿಗಳಿಗೆ ಪ್ರಪಂಚದಲ್ಲಿ ಯಾರಿಗೆ ಉತ್ತರ ಕೊಡದಿದ್ದರೂ ನಮ್ಮ ಅಂತರಾತ್ಮದ ಪ್ರಜ್ಞೆಯಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲಿ ಹೋದರೂ ಬಿಡದೆ ಕಾಡುವ ನಮ್ಮ ಪಾಪ ಪ್ರಜ್ಞೆಗೆ ಉತ್ತರ ಹುಡುಕಿ ಸರಿಪಡಿಸಿಕೊಳ್ಳುವುದು ಅನಿವಾರ್ಯ.

ಕನ್ನಡಿ ಯಾವುದೇ ರೀತಿ ಜಾತಿ ಭೇದವಿಲ್ಲದೆ, ಎಲ್ಲರ ಜೀವನದಲ್ಲೂ ಒಂದೇ ಗುಣದಿಂದ ಕಾರ್ಯನಿರ್ವಹಿಸುತ್ತದೆ. ಅವರು ಚೆನ್ನಾಗಿರಲಿ, ಚೆನ್ನಾಗಿರದೆ ಇರಲಿ, ಅಂಗವಿಕಲನಾಗಿರಲಿ, ಕ್ರೂರಿಯಾಗಿರಲಿ, ಎಲ್ಲರಿಗೂ ಒಂದೇ ರೀತಿ ಪಾರದರ್ಶಕವಾಗಿರುತ್ತದೆ. ಎಷ್ಟೋ ಹುಡುಗಿಯರಿಗೆ ಮನೆಯಲ್ಲಿ ರೇಗಿಸುತ್ತಾರೆ. ಅದೆಷ್ಟು ಸಲ ಕನ್ನಡಿ ನೋಡ್ಕೊàತಿಯಾ… ನೋಡ್ಕೊಂಡಿದ್ದು ಸಾಕು ಎಂದು. ಅದರೆ ನಾನು ಗಮನಿಸಿರುವ ಹಾಗೆ ಅತಿ ಹೆಚ್ಚು ಕನ್ನಡಿ ನೋಡಿಕೊಳ್ಳುವವರು ತಮ್ಮನ್ನು ತಾವು ಸ್ವತ್ಛವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಇವತ್ತಿನ ಮಹಿಳೆಯರು ಇರುವ 24 ಗಂಟೆಗಳಲ್ಲೇ ಸಂಸಾರದ ಕೆಲಸವನ್ನೂ ಮಾಡುತ್ತಾರೆ. ಹೊರಗೆ ಹೋಗಿಯೂ ದುಡಿಯುತ್ತಾರೆ… ಆರೋಗ್ಯ ಪ್ರಜ್ಞೆಯಿಂದ ವ್ಯಾಯಾಮಕ್ಕೂ ಹೋಗುತ್ತಾರೆ. ಇದೆಲ್ಲದರ ಜೊತೆಗೆ ತಮ್ಮನ್ನು ತಾವು ಸ್ವತ್ಛವಾಗಿ ಕಾಣುವಂತೆ ಅಲಂಕರಿಸಿಕೊಳ್ಳುತ್ತಾರೆ. ಕೆಲವರು ಕನ್ನಡಿ ನೋಡಿಕೊಳ್ಳಲು ಮುಜುಗರಪಡುವುದನ್ನು ನೀವೇ ಗಮನಿಸಿ. ಅವರು ಏನಾದರೂ ತಿಂದಾಗ ಬಾಯಿಗೆ ಮೆತ್ತಿರುವ ತಿನಿಸನ್ನು ಒರೆಸಿಕೊಂಡಿರುವುದಿಲ್ಲ. ತಲೆಯಿಂದ ಹೊಟ್ಟು ಬೀಳುತ್ತಿದ್ದರೂ ಅದನ್ನು ಗಮನಿಸಿರುವುದಿಲ್ಲ. ಕಿವಿಯನ್ನು ಸ್ವತ್ಛವಾಗಿಟ್ಟುಕೊಂಡಿರುವುದಿಲ್ಲ. ಉಗುರುಗಳಲ್ಲಿ ಕೊಳೆ ಇದ್ದರೂ ನೋಡಿಕೊಳ್ಳುವುದಿಲ್ಲ. ಮುಖ ಎಣ್ಣೆಯಾಗಿದ್ದರೂ, ಕೂದಲು ಕೆದರಿದ್ದರೂ, ಬಟ್ಟೆ ಗಲೀಜಾಗಿದ್ದರೂ, ಹಲ್ಲುಗಳಲ್ಲಿ ತಿಂದ ಊಟ ಉಳಿದಿದ್ದರೂ ಹಾಗೇ ಗಲೀಜಾಗೇ ಇರುತ್ತಾರೆ. ಇವೆಲ್ಲವನ್ನೂ ಸರಿಪಡಿಸಿಕೊಳ್ಳಲು ಸಾಧ್ಯವಾಗುವುದು ನಮ್ಮನ್ನು ಕನ್ನಡಿಯಲ್ಲಿ ನೋಡಿಕೊಂಡಾಗ ಮಾತ್ರ.

ಎಷ್ಟೋ ಸಲ ಕನ್ನಡಿ ಇಲ್ಲದೇ ನಾವು ಬದುಕಲು ಸಾಧ್ಯವೇ ಇಲ್ಲವಾ ಅನ್ನಿಸಿಬಿಡುತ್ತದೆ. ನಮಗೆ ಮೊದಲು ಆತ್ಮವಿಶ್ವಾಸ ತುಂಬುವುದೇ ಕನ್ನಡಿ, ನಾನು ಚೆನ್ನಾಗಿ ಕಾಣಿಸುತ್ತಿದ್ದೇನೆ. ನಾನು ಯಾರಿಗಿಂತ ಏನೂ ಕಡಿಮೆ ಇಲ್ಲ. ನಾನು ಮಾಡುತ್ತಿರುವ ಕೆಲಸಗಳು ನನಗೆ ಮೆರುಗು ತಂದಿವೆ… ಈ ಎಲ್ಲಾ ಮನಸ್ಸಿನ ಭಾವನೆಗಳನ್ನು ನಮ್ಮ ಮೂಲಕವೇ ಕನ್ನಡಿ ನಮಗೆ ತೋರಿಸಿಕೊಡುತ್ತದೆ. 

ಕನ್ನಡಿಯ ಮೋಹ ಬಹಳ ಹಿಂದಿನದು. ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ಶಿಲಾಬಾಲಿಕೆಯೊಬ್ಬಳು ಕನ್ನಡಿ ಹಿಡಿದು ಮುಖ ನೋಡಿಕೊಳ್ಳುತ್ತ ಬಳುಕಿ ನಿಂತಿರುವ ಕೆತ್ತನೆ ಪ್ರಸಿದ್ಧವೂ ಅದ್ಭುತವೂ ಹೌದು. ಯುವತಿಯರು ಕನ್ನಡಿಯೆದುರು ನಿಂತಾಗ ಆ ಕ್ರಿಯೆಯಲ್ಲಿ ಯಾವ ಪರಿ ತನ್ಮಯರಾಗಿರುತ್ತಾರೆ ಎಂಬುದಕ್ಕೆ ಆ ಕೆತ್ತನೆ ಸಾಕ್ಷೀರೂಪದಂತಿದೆ.

ಕನ್ನಡಿಯ ಬಗ್ಗೆ ಹಲವು ಮೂಢನಂಬಿಕೆಗಳಿವೆ. ವಾಮಾಚಾರದಲ್ಲಿ ಕನ್ನಡಿಯನ್ನು ಮನುಷ್ಯನ ಆತ್ಮದ ಪ್ರತಿಬಿಂಬ ಎಂದು ನಂಬುತ್ತಾರೆ. ಹಾಗಾಗಿ ಮಾಟ-ಮಂತ್ರಗಳಲ್ಲಿ ಕನ್ನಡಿ ಬಳಕೆಯಾಗುತ್ತದೆ. ಕನ್ನಡಿ ಸುಳ್ಳು ಹೇಳುವುದಿಲ್ಲವಂತೆ. ಹಾಗಾಗಿ ಕೆಟ್ಟ ವಸ್ತುಗಳನ್ನು ಕನ್ನಡಿಯಲ್ಲಿ ನೋಡಬಾರದಂತೆ. ಹಾಗೆಯೇ, ನವಜಾತ ಶಿಶುವಿಗೆ ಒಂದು ವರ್ಷ ತುಂಬುವವರೆಗೆ ಕನ್ನಡಿಯಲ್ಲಿ ಅದರ ಮುಖ ತೋರಿಸಬಾರದಂತೆ. 

ಕನ್ನಡಿ ಒಡೆದವರು ಏಳು ವರ್ಷ ದುರದೃಷ್ಟ ಅನುಭವಿಸುತ್ತಾರೆ ಎಂಬುದು ಇನ್ನೊಂದು ಮೂಢನಂಬಿಕೆ. ಕನ್ನಡಿ ನಮ್ಮ ಆತ್ಮದ ಪ್ರತಿಬಿಂಬವಾಗಿರುವುದರಿಂದ ಅದನ್ನು ಒಡೆದರೆ ನಮ್ಮಾತ್ಮವನ್ನೇ ಒಡೆದಂತೆ. ಆತ್ಮ ಏಳು ವರ್ಷಕ್ಕೊಮ್ಮೆ ನವೀಕರಣಗೊಳ್ಳುತ್ತದೆ ಎಂಬ ಮತ್ತೂಂದು ಮೂಢನಂಬಿಕೆಯನ್ನು ಇದಕ್ಕೆ ತಳುಕು ಹಾಕಿ, ಕನ್ನಡಿ ಒಡೆದರೆ ಏಳು ವರ್ಷ ಕೆಡುಕು ಎಂಬ ದಂತಕತೆ ಹುಟ್ಟಿಕೊಂಡಿತು. ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬಾರದು ಎಂದು ಹೇಳುವುದನ್ನು ನೀವೆಲ್ಲ ಕೇಳಿರುತ್ತೀರಿ.

ತ್ರಿಕೋನಾಕಾರದ ಮಾಳಿಗೆಯಿರುವ ಮನೆಗೆ ದುಷ್ಟ ಶಕ್ತಿಗಳು ಬರುತ್ತವೆ ಎಂಬ ನಂಬಿಕೆ ಬೌದ್ಧರಲ್ಲಿದೆ. ಅದಕ್ಕೆ ಅವರು ಬಾಗಿಲಿನ ಎದುರು ವೃತ್ತಾಕಾರದ ಪುಟ್ಟ ಕನ್ನಡಿಯೊಂದನ್ನು ನೇತುಹಾಕುತ್ತಾರೆ. ಅದು ಕೆಟ್ಟ ಶಕ್ತಿಗಳು ಮನೆಗೆ ಪ್ರವೇಶಿಸದಂತೆ ತಡೆಯುತ್ತದೆಯಂತೆ. 

ದಕ್ಷಿಣ ಅಮೆರಿಕದ ಮನೆಗಳಲ್ಲಿ ಯಾರಾದರೂ ಸತ್ತರೆ ಕೂಡಲೇ ಕನ್ನಡಿ ಹಾಗೂ ಪ್ರತಿಬಿಂಬ ತೋರಿಸುವ ಟೀವಿ ಮುಂತಾದ ಎಲ್ಲಾ ನಯವಾದ ವಸ್ತುಗಳನ್ನು ವಸ್ತ್ರದಿಂದ ಮುಚ್ಚಿಡುತ್ತಾರೆ. ಅಂತ್ಯಸಂಸ್ಕಾರ ಮುಗಿದ ನಂತರವಷ್ಟೇ ಆ ಬಟ್ಟೆ ತೆಗೆಯುತ್ತಾರೆ. ಮುಚ್ಚಿಡದಿದ್ದರೆ ಸತ್ತವರ ಆತ್ಮ ಕನ್ನಡಿಯಲ್ಲಿ ಅಡಗಿಕೊಂಡು ಶಾಶ್ವತವಾಗಿ ಅಲ್ಲೇ ನೆಲೆಸಿಬಿಡುತ್ತದೆ ಎಂಬ ನಂಬಿಕೆ ಅವರದು! ಗ್ರೀಸ್‌ನಲ್ಲೂ ಸಾವು ಉಂಟಾದ ಮನೆಯಲ್ಲಿ ಕನ್ನಡಿ ಬಳಸುವುದಿಲ್ಲ. ದುಃಖದಲ್ಲಿರುವಾಗ ಕನ್ನಡಿ ನೋಡಬಾರದು ಎಂಬುದು ಅವರ ನಂಬಿಕೆ. 

ಭೂತಗಳಿಗೆ ಕನ್ನಡಿಯಲ್ಲಿ ಪ್ರತಿಬಿಂಬ ಕಾಣಿಸುವುದಿಲ್ಲವಂತೆ. ಏಕೆಂದರೆ ಅವು ಸಾವಿಲ್ಲದ ಜೀವಗಳು. ಅವು ಆತ್ಮವನ್ನೇ ಕಳೆದುಕೊಂಡಿರುತ್ತವೆ. ಹಾಗಾಗಿ ಜನರ ಆತ್ಮವನ್ನು ಎತ್ತಿ ತೋರಿಸುವ ಕನ್ನಡಿಯಲ್ಲಿ ಭೂತ ಪಿಶಾಚಿಗಳು ಕಾಣಿಸುವುದಿಲ್ಲವಂತೆ. ಎರಡು ಕನ್ನಡಿಗಳನ್ನು ಎದುರುಬದುರು ಇಡುವುದು ಅಶುಭ ಎಂಬ ಇನ್ನೊಂದು ನಂಬಿಕೆಯೂ ಇದೆ. ಇವೆಲ್ಲಕ್ಕೂ ಯಾವುದೇ ಆಧಾರವಿಲ್ಲ. ಜನರ ಮನಸ್ಸಿನಲ್ಲಿ ಉಳಿದುಕೊಂಡು ಬಂದಿವೆ ಅಷ್ಟೆ.

ನಂಬಿಕೆಗಳೇನೇ ಇದ್ದರೂ ಕನ್ನಡಿ ನಮ್ಮ ವ್ಯಕ್ತಿತ್ವವನ್ನು ನಮಗೆ ತೋರಿಸುತ್ತದೆ ಎಂಬುದಂತೂ ನಿಜ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವ ಸಂಕೀರ್ಣ ಪ್ರಕ್ರಿಯೆಯಲ್ಲಿ ಕನ್ನಡಿಗೂ ಪಾತ್ರವಿದೆ. ಈಗಲೇ ಎದ್ದುಹೋಗಿ ಕನ್ನಡಿ ಮುಂದೆ ನಿಂತು ಒಂದು ಸ್ಮೈಲ್ ಕೊಡಿ, ಅದರ ಖುಷಿ ಏನೆಂಬುದು ತಿಳಿಯುತ್ತದೆ. 

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.