ಕತ್ತಲ ರಾತ್ರಿಗಳಲ್ಲಿ ಚಿಟ್ಟೆಯ ಚೀರಾಟ…


Team Udayavani, Jun 30, 2018, 11:52 AM IST

chitte-8.jpg

ನನ್ನ ನಂಬು, ಈ ಮನೆಯಲ್ಲಿ ಏನೋ ಇದೆ …ಎಂದು ಆಕೆ ಹೇಳಿದರೂ ಅವನು ನಂಬುವುದಿಲ್ಲ. ಎಲ್ಲೋ ಆಕೆಗೆ ಭ್ರಮೆ ಎಂದು ತನ್ನ ಪಾಡಿಗೆ ತಾನಿರುತ್ತಾನೆ. ಆದರೆ, ಆಕೆ ರಾತ್ರಿ ಮಲಗಿದ್ದಾಗ ಒಬ್ಬಳೇ ನಡೆಯುವುದು, ಕರೆದಾಗ ಲುಕ್‌ ಕೊಡುವುದು, ವಿಚಿತ್ರವಾಗಿ ಆಡುವುದನ್ನೆಲ್ಲಾ ನೋಡಿದಾಗ ಆಕೆಯ ಮಾತಿನಲ್ಲಿ ಸತ್ಯ ಇರಬಹುದು ಎಂದನಿಸುತ್ತದೆ. ಆದರೆ, ಆ ಮನೆಯಲ್ಲಿ ಏನಿದೆ ಎಂದು ಕಂಡುಹಿಡಿಯುವುದು ಹೇಗೆ ಎಂದು ಒದ್ದಾಡುತ್ತಿದ್ದಾಗ, ಅದೊಂದು ರಾತ್ರಿ ಆಕೆ ಮೊದಲ ಬಾರಿಗೆ ಅವರಿಬ್ಬರಿಗೆ ಕಾಣಿಸಿಕೊಳ್ಳುತ್ತಾಳೆ. 

ಅಲ್ಲಿಯವರೆಗೂ ಆ ಮನೆಯಲ್ಲಿ ನಡೆಯುತ್ತಿದ್ದ ವಿಚಿತ್ರ ಘಟನೆಗಳಿಗೆಲ್ಲಾ ಕಾರಣ ಅವಳೇ ಎನ್ನುವುದು ಗೊತ್ತಾಗುತ್ತದೆ. ಇಷ್ಟಕ್ಕೂ ಅವಳು ಯಾರು ಮತ್ತು ಅವಳಾಕೆ ಆ ಮನೆಗೆ ನುಗ್ಗಿ ಅವರಿಬ್ಬರಿಗೆ ಕಾಟ ಕೊಡುತ್ತಿರುತ್ತಾಳೆ ಎನ್ನುವುದು ಗೊತ್ತಾಗಬೇಕಿದ್ದರೆ, “ಚಿಟ್ಟೆ’ ಹಾರುವುದನ್ನು ನೋಡಬೇಕು.

“ಚಿಟ್ಟೆ’ ಒಂದು ಹಾರರ್‌ ಚಿತ್ರ ಎಂಬುದು ಇಷ್ಟರಲ್ಲಾಗಲೇ ಸ್ಪಷ್ಟ. ಹಾರರ್‌ ಕಥೆಗಳಲ್ಲಿರುವಂತೆ ಈ ಚಿತ್ರದಲ್ಲೂ ಅದೇ ಮಾದರಿಯ ಕಥೆ ಇದೆ. ಒಂದು ದೊಡ್ಡ ಬಂಗಲೆ ಇದೆ. ಅಲ್ಲಿಗೆ ನವದಂಪತಿ ಶಿಫ್ಟ್ ಆಗುತ್ತಾರೆ. ಅವರು ಆ ಮನೆಗೆ ಹೋದ ನಂತರ ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಉಯ್ನಾಲೆ ತನ್ನಿಂತಾನೆ ತೂಗಾಡುತ್ತಿರುತ್ತದೆ. ಕೀಚೈನ್‌ನಿಂದ ತನ್ನಿಂತಾನೇ ಸಂಗೀತ ಬರುತ್ತಿರುತ್ತದೆ. ನಾಯಕಿಗೆ ಯಾರೋ ತನ್ನನ್ನು ಫಾಲೋ ಮಾಡಿದಂತೆ ಭಾಸವಾಗುತ್ತಿರುತ್ತದೆ. ಹೀಗೆ ಹಾರರ್‌ ಚಿತ್ರಗಳ ಸಿದ್ಧಸೂತ್ರಗಳು ಇಲ್ಲೂ ಮುಂದುವರೆಯುತ್ತದೆ.

ಆದರೆ, ವಿಶೇಷತೆ ಎಂದರೆ, ಸಾಮಾನ್ಯವಾಗಿ ದೆವ್ವಗಳು ಎಲ್ಲಿ ಬೇಕಾದರೂ ಅಲ್ಲಿ ಹಾಜರಿ ಹಾಕಿ, ತಮಗೆ ತೊಂದರೆ ಕೊಟ್ಟವರನ್ನು ಕೊಲ್ಲುವುದು ಎಲ್ಲಾ ಚಿತ್ರಗಳಲ್ಲೂ ಇರುತ್ತದೆ. ಆದರೆ, ಇಲ್ಲಿ ದೆವ್ವವೇ ಮನುಷ್ಯರಿಗೆ ಒಂದಿಷ್ಟು ಟಾಸ್ಕ್ಗಳನ್ನು ಕೊಡುತ್ತದೆ. ಅದಕ್ಕೆ ಕಾರಣವೂ ಇದೆ. ಇನ್ನೊಬ್ಬರು ಮಾಡಿರುವ ತಪ್ಪು ಅವರಿಗೆ ಚೆನ್ನಾಗಿ ಅರ್ಥವಾಗಬೇಕು ಮತ್ತು ತನ್ನ ನೋವು ಸಹ ಗೊತ್ತಾಗಬೇಕು ಎಂಬ ಕಾರಣಕ್ಕೆ, ದೆವ್ವವೇ ಜವಾಬ್ದಾರಿಯೊಂದನ್ನು ಹೊರಿಸುತ್ತದೆ. ಈ ವಿಷಯ ಒಂದು ಸ್ವಲ್ಪ ವಿಶೇಷ ಎನ್ನುವುದು ಬಿಟ್ಟರೆ, “ಚಿಟ್ಟೆ’ಯನ್ನು ಮಿಕ್ಕ ಹಾರರ್‌ ಚಿತ್ರಗಳ ಸಾಲಿಗೆ ಸೇರಿಸಲಡ್ಡಿಯಿಲ್ಲ.

ಇನ್ನು ನಿರೂಪಣೆಯ ವಿಷಯದಲ್ಲೂ “ಚಿಟ್ಟೆ’ ಒಂದಿಷ್ಟು ಮೇಲೆ ಹಾರುತ್ತದೆ ಎಮದನಿಸುವುದಿಲ್ಲ. ಮೊದಲಾರ್ಧವೆಲ್ಲಾ ಕಾಮಿಡಿ, ಹಾಡುಗಳು ಮತ್ತು ಭಯಬೀಳಿಸುವ ದೃಶ್ಯಗಳಿಗೆ ಸೀಮಿತವಾಗುವ ಚಿತ್ರ, ದ್ವಿತೀಯಾರ್ಧದಲ್ಲಿ ತೆರೆದುಕೊಳ್ಳುತ್ತದೆ. ಅಲ್ಲಿಯವರೆಗೂ ಪ್ರೇಕ್ಷಕ ಕಾಯಲೇಬೇಕು. ಇಂಟರ್‌ವೆಲ್‌ ನಂತರ ಚಿತ್ರ ಸ್ವಲ್ಪ ಚುರುಕಾಗುತ್ತದೆ. ಅಲ್ಲೂ ಒಂದಿಷ್ಟು ಟ್ವಿಸ್ಟ್‌ಗಳು, ಗೊಂದಲಗಳೊಂದಿಗೆ ಚಿತ್ರ ಮುಂದುವರೆಯುತ್ತದೆ. ಕೊನೆಗೆ ಇಷ್ಟೇನಾ ಎನಿಸುವಲ್ಲಿಗೆ ಚಿತ್ರ ಮುಗಿಯುತ್ತದೆ. ಚಿತ್ರದಲ್ಲಿ ಗಮನ ಸೆಳೆಯುವ ಅಂಶಗಳಲ್ಲಿ ಪ್ರಸನ್ನ ಅವರ ಸಂಗೀತ, ದೀಪಿಕಾ ಅವರ ಅಭಿನಯ, ವಿಶ್ವಜಿತ್‌ ರಾವ್‌ ಅವರ ಛಾಯಾಗ್ರಹಣ, ಕೆಜೆಟನ್‌ ಡಯಾಸ್‌ ಅವರ ಹಿನ್ನೆಲೆ ಸಂಗೀತವನ್ನು ಹೆಸರಿಸಬಹುದು. ಅದರಲ್ಲೂ “ಕುಲವಧು’ ಖ್ಯಾತಿಯ ದೀಪಿಕಾ ದ್ವಿತೀಯಾರ್ಧದಲ್ಲಿ ಬಂದರೂ, ಪ್ರೇಕ್ಷಕರನ್ನು ತಮ್ಮ ಅಭಿನಯದಿಂದ ಹಿಡಿದಿಡುತ್ತಾರೆ. ಮಿಕ್ಕಂತೆ ಯಶಸ್‌, ಹರ್ಷಿಕಾ ತಮ್ಮ ಕೆಲಸವನ್ನು ನೀಟ್‌ ಆಗಿ ಮಾಡಿದ್ದಾರೆ.

ಚಿತ್ರ: ಚಿಟ್ಟೆ
ನಿರ್ಮಾಣ-ನಿರ್ದೇಶನ: ಎಂ.ಎಲ್‌. ಪ್ರಸನ್ನ
ತಾರಾಗಣ: ಯಶಸ್‌ ಸೂರ್ಯ, ಹರ್ಷಿಕಾ ಪೂಣ
ಚ್ಛ, ದೀಪಿಕಾ, ಗಿರಿರಾಜ್‌, ನಾಗೇಶ್‌ ಮುಂತಾದವರು

– ಚೇತನ್‌ ನಾಡಿಗೇರ್‌ 

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.