ಆದಿಯುದ್ದಕ್ಕೂ ತವಕ ತಲ್ಲಣ


Team Udayavani, Oct 6, 2018, 11:34 AM IST

adi-purana.jpg

“ಹಸಿದವನ ಮುಂದೆ ಹಬ್ಬದ ಊಟ ಬಡಿಸಿ, ತಿನ್ನಬೇಡ ಅಂದರೆ ಹೇಗೆ…’ ಹೀಗೆ ಬೇಸರದಿಂದಲೇ ಹೇಳುತ್ತಾನೆ ಯೌವ್ವನಕ್ಕೆ ಬಂದ ಹುಡುಗ. ಅವನು ಹೀಗೆ ಹೇಳ್ಳೋಕೆ ಕಾರಣ, ಆಗಷ್ಟೇ ಮದುವೆಯಾದ, ಹೆಂಡತಿ ಜೊತೆ ಮೊದಲ ರಾತ್ರಿ ಕಳೆಯಲು ಮನೆಯವರು ಪಡಿಸುವ ಅಡ್ಡಿ.  ಹದಿಹರೆಯಕ್ಕೆ ಬಂದ ಹುಡುಗನೊಬ್ಬ ಸುಂದರ ಹುಡುಗಿಯೊಬ್ಬಳನ್ನು ಮದುವೆಯಾಗಿ, ತನ್ನ ಆಸೆ-ಆಕಾಂಕ್ಷೆ ಈಡೇರಿಸಿಕೊಳ್ಳಲಾಗದೆ ಪರಿತಪಿಸಿ, ಕ್ಷಣ ಕ್ಷಣಕ್ಕೂ ಚಡಪಡಿಸುವ ವಿರಹ ವೇದನೆ ಸುತ್ತ ನಡೆಯುವ ಕಥೆ ಇದು.

ಇಲ್ಲಿ “ಮೊದಲ ರಾತ್ರಿ’ಯ ಸ್ವಾರಸ್ಯವೇ ಹೈಲೆಟ್‌. ಹಾಗಂತ, ಬೇರೇನೂ ಇಲ್ಲವೆಂದವಲ್ಲ. ಯುವಕನ ತಳಮಳ, ತಾಳ್ಮೆ, ಬಯಕೆ, ಆತುರ, ಕಾತುರ ಇವೆಲ್ಲವನ್ನೂ ಒಂದೆಡೆ ಕಲೆಹಾಕಿ, ಈಗಿನ ಕಾಲದ ಹುಡುಗರ ಪೀಕಲಾಟವನ್ನು ಹಾಸ್ಯದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ಹೊಡಿ, ಬಡಿ, ಕಡಿ ಎಂಬ ಶಬ್ಧದಿಂದ ಆಚೆ ಬಂದು, ಸಂಪ್ರದಾಯಸ್ಥ ಕುಟುಂಬದ ಹುಡುಗ, ಹುಡುಗಿಯ ಶಾಸ್ತ್ರಬದ್ಧ ಮದುವೆ, ನೂತನ ದಂಪತಿಯ ಸಾಂಗತ್ಯ, ಲಾಲಿತ್ಯವನ್ನು ತೋರಿಸುವುದರ ಜೊತೆಗೊಂದು ಸಣ್ಣ ಸಂದೇಶ ಕಟ್ಟಿಕೊಡಲಾಗಿದೆ.

ಆ ಸಂದೇಶದ ಕುತೂಹಲವಿದ್ದರೆ, “ಆದಿ’ಯ ಮೊದಲ ರಾತ್ರಿ “ಪುರಾಣ’ ಕೇಳಿ, ನೋಡುವ ಮನಸ್ಸು ಮಾಡಬಹುದು. ಮೊದಲೇ ಹೇಳಿದಂತೆ, ಇದು ಯುವಕರೇ ಈ ಸಿನಿಮಾದ ಟಾಗೇಟ್‌.  ಹಾಗಾಗಿ, ಅಲ್ಲಲ್ಲಿ “ಚುಂಬಕ’ ದೃಶ್ಯಗಳ ಜೊತೆಗೆ “ಪಂಚಿಂಗ್‌’ ಮಾತುಗಳಿಗೆ ಬರವಿಲ್ಲ. ಆರಂಭದಲ್ಲಿ ಡಬ್ಬಲ್‌ ಮೀನಿಂಗ್‌ ಮಾತುಗಳು ಹರಿದಾಡುವುದರಿಂದ ಇದು “ಪೋಲಿ’ತನದ ಸಿನಿಮಾ ಎನಿಸಿದರೂ, ಚಿತ್ರದ ಕಥೆಯೊಳಗೊಂದು ಆಶಯವಿದೆ.

ಅದನ್ನು ಹೇಳಬೇಕೆಂಬ ಕಾರಣಕ್ಕೆ ನಿರ್ದೇಶಕರು ಅಲ್ಲಲ್ಲಿ ಕೆಲ ಅಗವಿಲ್ಲದ ದೃಶ್ಯಗಳನ್ನು ತೂರಿಸಿ, ಕೆಲವೊಮ್ಮೆ ನೋಡುಗರ ತಾಳ್ಮೆ ಕೆಡಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಮೊದಲರ್ಧ ಏನಾಗುತ್ತಿದೆ ಅನ್ನುವಷ್ಟರಲ್ಲೇ ಹಾಡೊಂದು ಕಾಣಸಿಕೊಂಡು, ಸ್ವಲ್ಪ ರಿಲ್ಯಾಕ್ಸ್‌ ಮೂಡ್‌ಗೆ ಕರೆದೊಯ್ಯುತ್ತದೆ. ದ್ವಿತಿಯಾರ್ಧ ಕೊಂಚ “ಪುರಾಣ’ಕ್ಕೆ ಹಿಡಿದಿಡುವ ತಾಕತ್ತು ಸಿದ್ಧಿಸಿದೆ. ಅದು ಬಿಟ್ಟರೆ, ಇಲ್ಲಿ ಬಲವಾಗಿ ಕಾಡುವ ಮತ್ತು ನೆನಪಲ್ಲುಳಿಯುವ ಅಂಶಗಳು ಕಡಿಮೆ. ಮನರಂಜನೆ ಬಯಸುವವರಿಗೆ ದ್ವಿತಿಯಾರ್ಧವಂತೂ ಮೋಸವಿಲ್ಲ.

ಸಿನಿಮಾ ಮೂಡಿಬಂದಿರುವುದೇ ಹಾಗೆಯೋ ಅಥವಾ ಚಿತ್ರಮಂದಿರದ ಪರದೆಯ ಸಮಸ್ಯೆಯೋ ಗೊತ್ತಿಲ್ಲ. ಕೆಲವು ದೃಶ್ಯಗಳು ಮಬ್ಟಾಗಿ ಗೋಚರಿಸುತ್ತವೆ. ಅದು ಬಿಟ್ಟರೆ, “ಆದಿ’ ಬಗ್ಗೆ ಹೆಚ್ಚು ದೂರುವಂಥದ್ದೇನೂ ಇಲ್ಲ. ಈಗಿನ ಯೂತ್ಸ್ಗೆ ಅದರಲ್ಲೂ ಚಿಕ್ಕವಯಸ್ಸಲ್ಲೇ ಮದುವೆಯಾಗಿ ಮೊದಲ ರಾತ್ರಿ ಅನುಭವಿಸುವ ಕನಸು ಕಾಣುತ್ತಿರುವ ಪಡ್ಡೆಗಳಿಗೊಂದು ಮಜವೆನಿಸುವ ಚಿತ್ರಣವಿದೆ. ಕಾಣುವ ದೃಶ್ಯಗಳು ಅದೆಷ್ಟೋ ಜನರ ಫ್ಲ್ಯಾಶ್‌ಬ್ಯಾಕ್‌ಗೆ ಕಾರಣವಾದರೂ ಅಚ್ಚರಿ ಇಲ್ಲ. ಅಂತಹ ಅಚ್ಚರಿಯ ಅಂಶಗಳೂ ಅಲ್ಲಲ್ಲಿ ಮೂಡಿವೆ.

ಕಥೆ ತುಂಬ ಸರಳ. ನಿರೂಪಣೆ ಬಗ್ಗೆ ಹೇಳುವುದಾದರೆ, ಚಿತ್ರಕಥೆಗೆ ಇನ್ನಷ್ಟು ಬಿಗಿಹಿಡಿತ ಇರಬೇಕಿತ್ತು. ಇಲ್ಲಿ ಹಿನ್ನೆಲೆ ಸಂಗೀತದ ಸದ್ದೇ ಮೈನಸ್ಸು. ಎಲ್ಲೋ ಒಂದು ಕಡೆ ಸೀಟಿಗೆ ಒರಗುವ ಮನಸ್ಸು ಮಾಡುತ್ತಿದ್ದಂತೆಯೇ, ಮದುವೆ ಸಂಭ್ರಮದ ಗೀತೆಯೊಂದು ಕಾಣಿಸಿಕೊಂಡು, ರಿಯಲ್‌ ಮದುವೆಯೇನೋ ಎಂಬಷ್ಟರ ಮಟ್ಟಿಗೆ ಶಾಸ್ತ್ರೋಕ್ತವಾಗಿ ಎಲ್ಲವನ್ನೂ ತೋರಿಸುವ ಮೂಲಕ ಇಡೀ ಚಿತ್ರಣ ಕಟ್ಟಿಕೊಟ್ಟಿರುವ ಪ್ರಯತ್ನ ಸಾರ್ಥಕವೆನಿಸಿದೆ. ಉಳಿದಂತೆ ಒಂದು ಮನೆ, ಕಚೇರಿ, ಬಾರು ಇಷ್ಟರಲ್ಲೇ ಕಥೆ ಹೇಳಿರುವುದು ನಿರ್ದೇಶಕರ ಜಾಣತನ ಎನ್ನಬಹುದು.

ಆದಿಯ ಪುರಾಣ ಬಗ್ಗೆ ಹೇಳುವುದಾದರೆ, ಆಗಷ್ಟೇ ಎಂಜಿನಿಯರಿಂಗ್‌ ಮುಗಿಸಿ, ಕೆಲಸ ಗಿಟ್ಟಿಸಿಕೊಂಡವನು. ಅಪ್ಪ, ಅಮ್ಮನಿಗೆ ಒಬ್ಬನೇ ಮಗ. ದೂರಲ್ಲಿರುವ ಅವರಿಗೆ ಮಗನ ಮೇಲೆ ಸಂಪೂರ್ಣ ನಂಬಿಕೆ. ಆ ನಂಬಿಕೆಗೆ ಧಕ್ಕೆಯಾಗದಂತೆ ಇರುವ ಆದಿಗೆ ಒಂದೇ ಒಂದು ಬೇಸರ. ಅದು ಯಾವ ಹುಡುಗಿಯೂ ಪ್ರೀತಿಗೆ ಸಿಕ್ಕಿಲ್ಲವೆಂಬುದು. ಸಿಗರೇಟ್‌, ಕುಡಿತ ಇದರಿಂದ ದೂರವೇ ಇರುವ ಆದಿ, ಆ ವಯಸ್ಸಲ್ಲಿ ಟಿವಿಯಲ್ಲಿ ಏನೆಲ್ಲಾ ನೋಡಬಾರಧ್ದೋ ಅದೆಲ್ಲವನ್ನೂ ನೋಡುತ್ತಿರುತ್ತಾನೆ. ಅಪ್ಪನಿಗೆ ಆ ವಿಷಯ ಗೊತ್ತಾಗಿ, ಮದ್ವೆ ಮಾಡಲು ನಿರ್ಧರಿಸುತ್ತಾನೆ.

ಸಂಪ್ರದಾಯಸ್ಥ ಕುಟುಂಬದ ಹುಡುಗಿ ಫಿಕ್ಸ್‌ ಆಗುತ್ತಾಳೆ. ಆದರೆ, ಹತ್ತು ದಿನಗಳ ಕಾಲ ಮೊದಲ ರಾತ್ರಿಗೆ ಅವಕಾಶ ಇರುವುದಿಲ್ಲ. ಆಗ ಶುರುವಾಗುವುದೇ ಆದಿಯ ತರಹೇವಾರಿ “ಪುರಾಣ’. ಶಶಾಂಕ್‌ಗೆ ಮೊದಲ ಚಿತ್ರವಾದರೂ ಸಿಕ್ಕ ಪಾತ್ರಕ್ಕೆ ಸಾಧ್ಯವಾದಷ್ಟು ನ್ಯಾಯ ಸಲ್ಲಿಸಿದ್ದಾರೆ. ಬಾಡಿಲಾಂಗ್ವೇಜ್‌ ಬಗ್ಗೆ ಇನ್ನಷ್ಟು ಗಮನಹರಿಸಿದರೆ ಭವಿಷ್ಯವಿದೆ. ಅಹಲ್ಯಾ ಮತ್ತು ಮೋಕ್ಷಾ ಇಬ್ಬರೂ ಜಿದ್ದಿಗೆ ಬಿದ್ದವರಂತೆ ನಟಿಸಬಹುದಿತ್ತು. ಅದಿಲ್ಲಿ ಕಾಣಸಿಗಲ್ಲ.

ಅಹಲ್ಯಾ ನಟನೆಗಿಂತ ನಗುವಲ್ಲೇ ಆಕರ್ಷಿಸಿದರೆ, ಮೋಕ್ಷಾ ಗ್ಲಾಮರಸ್‌ ಆಗಿ ಗಮನಸೆಳೆಯುತ್ತಾರೆ. ರಂಗಾಯಣ ರಘು ಅವರನ್ನು ಬಾರ್‌ಗಷ್ಟೇ ಸೀಮಿತಗೊಳಿಸಲಾಗಿದೆ. ಅವರನ್ನು ಸರಿಯಾಗಿ ಬಳಸಿಕೊಳ್ಳಬಹುದಿತ್ತು. ನಾಗೇಂದ್ರ ಶಾ, ವತ್ಸಲಾ ಅಪ್ಪ, ಅಮ್ಮನಾಗಿ ಸಂಭ್ರಮಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳ್ಯಾವೂ ಹೆಚ್ಚು ಗಮನಸೆಳೆಯಲ್ಲ. ವಿಕ್ರಮ್‌ ವಸಿಷ್ಠ, ಚಂದನ ವಸಿಷ್ಠ ಅವರ ಹಾಡಲ್ಲಿ ಇನ್ನಷ್ಟು “ಪುರಾಣ’ ಇರಬೇಕಿತ್ತು. ಸಿದ್ಧಾರ್ಥ್ ಕಾಮತ್‌ ಹಿನ್ನೆಲೆ ಸಂಗೀತಕ್ಕಿನ್ನೂ ಒತ್ತು ಕೊಡಬಹುದಿತ್ತು. ಗುರುಪ್ರಸಾದ್‌ ಅವರ ಛಾಯಾಗ್ರಹಣ ಹೆಚ್ಚು ಹೇಳುವ ಅಗತ್ಯವಿಲ್ಲ.

ಚಿತ್ರ: ಆದಿ ಪುರಾಣ
ನಿರ್ಮಾಣ: ಶಮಂತ್‌
ನಿರ್ದೇಶನ: ಮೋಹನ್‌ ಕಾಮಾಕ್ಷಿ
ತಾರಾಗಣ: ಶಶಾಂಕ್‌, ಅಹಲ್ಯಾ, ಮೋಕ್ಷಾ, ರಂಗಾಯಣ ರಘು, ನಾಗೇಂದ್ರ ಶಾ, ವತ್ಸಲಾ ಮೋಹನ್‌, ಕರಿಸುಬ್ಬು, ಶಕ್ತಿವೇಲ್‌ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.