ಪತ್ತೆದಾರಿ ಗುಂಗಲ್ಲಿ ರೆಟ್ರೋ ರಂಗು


Team Udayavani, Feb 16, 2019, 5:40 AM IST

bel-bottom.jpg

ಕೊನೆಗೂ ದಿವಾಕರನಿಗೆ ಒಂದೊಳ್ಳೆಯ ಕಾಲ ಬರುತ್ತದೆ. ಇಷ್ಟವಿಲ್ಲದೇ, ಅಪ್ಪನ ಬಲವಂತಕ್ಕೆ ಪೊಲೀಸ್‌ ಇಲಾಖೆ ಸೇರಿದ್ದ ದಿವಾಕರನಿಗೆ ಇಲಾಖೆ ಒಂದು ಕೇಸ್‌ ಒಪ್ಪಿಸುತ್ತದೆ. ಕೇಸ್‌ ಒಪ್ಪಿಕೊಳ್ಳುವ ಮುನ್ನ ಮೂರು ಷರತ್ತುಗಳನ್ನು ವಿಧಿಸುತ್ತಾನೆ ದಿವಾಕರ. ಮೊದಲನೇಯದಾಗಿ, ನನ್ನ ಟೈಮ್‌ಗೆ ನಾನು ಸ್ಟೇಷನ್‌ಗೆ ಬರೋದು, ತಿರುಗಾಡಲು ಒಂದು ಜಾವಾ ಬೈಕ್‌ ಕೊಡಿಸಬೇಕು ಹಾಗೂ ಕೊನೆಯದಾಗಿ, ಮೇಲಾಧಿಕಾರಿಗಳ ಮೇಲೆ ದರ್ಪ, ಅಶಿಸ್ತು ಎಂಬ ಕಾರಣ ನೀಡಿ ತನ್ನನ್ನು ಕೆಲಸದಿಂದ  ತೆಗೆದುಹಾಕಬೇಕು…

ಈ ಮೂರು ಷರತ್ತುಗಳನ್ನು ಮೇಲಾಧಿಕಾರಿಗಳು ಒಪ್ಪಿದ ನಂತರವೇ ದಿವಾಕರ ಪತ್ತೆದಾರಿ ಕೆಲಸ ಶುರುಹಚ್ಚಿಕೊಳ್ಳುತ್ತಾನೆ. ತುಂಬಾ ಉತ್ಸಾಹದಿಂದ ತನಿಖೆಗೆ ಹೊರಡುವ ದಿವಾಕರ ಅದರಲ್ಲಿ ಯಶಸ್ಸು ಕಾಣುತ್ತಾನಾ ಎಂಬ ಕುತೂಹಲ ನಿಮಗಿದ್ದರೆ ನೀವು “ಬೆಲ್‌ ಬಾಟಮ್‌’ ನೋಡಬಹುದು.  “ಬೆಲ್‌ ಬಾಟಮ್‌’ ಒಂದು ಥ್ರಿಲ್ಲರ್‌ ಸಿನಿಮಾ. ಪತ್ತೆದಾರಿ ಕಥೆ, ಕಾದಂಬರಿಗಳನ್ನು ಇಷ್ಟಪಡುವವರಿಗೆ “ಬೆಲ್‌ ಬಾಟಮ್‌’ ಕಥೆ ಇಷ್ಟವಾಗಬಹುದು.

ದಯಾನಂದ ಟಿ.ಕೆಯವರು ಬರೆದ ಕಥೆ ತುಂಬಾ ಮಜವಾಗಿದೆ ಮತ್ತು ಸಾಕಷ್ಟು ಕುತೂಹಲದ ಅಂಶಗಳನ್ನು ಒಳಗೊಂಡಿದೆ. ಮುಖ್ಯವಾಗಿ ಈ ಕಥೆಯ ಆಶಯ ಹಾಗೂ ಜೋಡಿಸಿಕೊಂಡು ಹೋದ ಕೊಂಡಿಗಳು ಗಮನಸೆಳೆಯುತ್ತವೆ. ಕಾದಂಬರಿ, ಕಥೆಯೊಂದನ್ನು ಸಿನಿಮಾಕ್ಕೆ ಇಳಿಸುವಾಗ ಒಬ್ಬ ನಿರ್ದೇಶಕನಿಗೆ ಒಂದಷ್ಟು ಸವಾಲುಗಳು ಎದುರಾಗುತ್ತವೆ. ಮೂಲಕಥೆಯ ಆಶಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜೊತೆಗೆ ಸಿನಿಮಾ ಪ್ರೇಕ್ಷಕನಿಗೆ ಬೇಕಾದ ರೋಚಕತೆ, ಟ್ವಿಸ್ಟ್‌ ಹಾಗೂ ವೇಗ ಕಾಯ್ದುಕೊಳ್ಳುವುದು.

“ಬೆಲ್‌ ಬಾಟಮ್‌’ ಚಿತ್ರ ನೋಡಿದಾಗ ನಿಮಗೆ, ನಿರ್ದೇಶಕರು ಇನ್ನಷ್ಟು ರೋಚಕವಾಗಿ ಕಟ್ಟಿಕೊಡಬಹುದಿತ್ತು ಎಂದೆನಿಸದೇ ಇರದು. ಪತ್ತೆದಾರಿ ಸಿನಿಮಾದಲ್ಲಿರಬೇಕಾದ ಕ್ಷಣ ಕ್ಷಣದ ಕುತೂಹಲ, ಟ್ವಿಸ್ಟ್‌ ಇಲ್ಲಿ ಕೊಂಚ ಕಡಿಮೆ ಎನಿಸಿದರೂ, ಚಿತ್ರ ಪ್ರೇಕ್ಷಕನನ್ನು ರಂಜಿಸುವಲ್ಲಿ ಹಿಂದೆ ಬಿದ್ದಿಲ್ಲ.  ಸಿನಿಮಾದ ಮೊದಲರ್ಧದಲ್ಲಿ ದಿವಾಕರನ ಇಂಟ್ರೋಡಕ್ಷನ್‌, ಪ್ರೇಮಪುರಾಣ ಹಾಗೂ ತನಿಖೆಯ ಹಾದಿಗೆ ನಾಂದಿಯಾಡಿದ್ದಾರಷ್ಟೇ. ಹಾಗಾಗಿ, ಇಲ್ಲಿ ನೀವು ಒಂದಷ್ಟು ನಗೆಬುಗ್ಗೆಗಳನ್ನು ಬಿಟ್ಟು ಹೆಚ್ಚಿನ ಥ್ರಿಲ್ಲರ್‌ ಅಂಶಗಳನ್ನು ನಿರೀಕ್ಷಿಸುವಂತಿಲ್ಲ.

ಹಾಗಾಗಿ, ಇದನ್ನು ಕಾಮಿಡಿ ಥ್ರಿಲ್ಲರ್‌ ಜಾನರ್‌  ಸಿನಿಮಾ ಎಂದು ಕರೆಯಬಹುದು. ಚಿತ್ರದಲ್ಲಿ ಥ್ರಿಲ್ಲರ್‌ ಅಂಶಗಳ ಜೊತೆಗೆ ಕಾಮಿಡಿಗೂ ಹೆಚ್ಚಿನ ಮಹತ್ವ ನೀಡಿದ್ದಾರೆ. ಹಾಗಾಗಿ, ಒಮ್ಮೊಮ್ಮೆ ತನಿಖೆಯನ್ನು ಪಕ್ಕಕ್ಕೆ ಸರಿಸಿ, ಕಾಮಿಡಿ, ಲವ್‌ ಮೊದಲ ಸ್ಥಾನದಲ್ಲಿ ಬಂದು ಕೂರುತ್ತದೆ. ಇನ್ನು, ಇಡೀ ಸಿನಿಮಾದ ಮಜಾ ಅಡಗಿರುವುದು ಕ್ಲೈಮ್ಯಾಕ್ಸ್‌ನಲ್ಲಿ. ಒಂದೊಂದು ಅಂಶಗಳು ಬಿಚ್ಚಿಕೊಳ್ಳುವ ಮೂಲಕ ಪ್ರೇಕ್ಷಕನ ಕುತೂಹಲ ಕೂಡಾ ಹೆಚ್ಚುತ್ತದೆ.

ಇದೇ ಕುತೂಹಲ ಚಿತ್ರದ ಆರಂಭದಿಂದಲೂ ಇದ್ದಿದ್ದರೆ ಪ್ರೇಕ್ಷಕ ಸಿನಿಮಾವನ್ನು ಇನ್ನಷ್ಟು ಎಂಜಾಯ್‌ ಮಾಡುತ್ತಿದ್ದ. ಚಿತ್ರದಲ್ಲಿ ಬರುವ ಒಂದಷ್ಟು ಸಸ್ಪೆನ್ಸ್‌ ಪಾಯಿಂಟ್‌ಗಳು ಈ ಸಿನಿಮಾದ ಹೈಲೈಟ್ಸ್‌. ಇದೊಂದು ರೆಟ್ರೋ ಶೈಲಿಯ ಚಿತ್ರ. ವೇಷ-ಭೂಷಣ ಹಾಗೂ ಅದಕ್ಕೆ ಹೊಂದುವಂತಹ ಪರಿಸರವನ್ನು ಕಟ್ಟಿಕೊಡಲಾಗಿದೆ. ಚಿತ್ರದ ಕಥೆಗೆ ಪೂರಕವಾಗಿರುವ ರಘು ನಿಡುವಳ್ಳಿ ಸಂಭಾಷಣೆ ಆಗಾಗ ನಗುತರಿಸುತ್ತದೆ.

ನಾಯಕ ರಿಷಭ್‌ ಶೆಟ್ಟಿ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ ಮತ್ತು ನಟನೆಗೂ ಸೈ ಎಂಬುದನ್ನು ಸಾಬೀತು ಮಾಡಿದ್ದಾರೆ. ನಾಯಕಿ ಹರಿಪ್ರಿಯಾ, ಕುಸುಮ ಪಾತ್ರದಲ್ಲಿ  ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಯೋಗರಾಜ್‌ ಭಟ್‌, ಅಚ್ಯುತ್‌ ಕುಮಾರ್‌, ಪ್ರಮೋದ್‌ ಶೆಟ್ಟಿ, ಸುಜಯ್‌ ಶಾಸಿŒ, ಶಿವಮಣಿ ಸೇರಿದಂತೆ ಇತರರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತವೆ. ಅರವಿಂದ್‌ ಕಶ್ಯಪ್‌ ಛಾಯಾಗ್ರಹಣದಲ್ಲಿ ರೆಟ್ರೋ ರಂಗಿದೆ. 

ಚಿತ್ರ: ಬೆಲ್‌ ಬಾಟಮ್‌
ನಿರ್ಮಾಣ: ಸಂತೋಷ್‌ ಕುಮಾರ್‌ ಕೆ.ಸಿ
ನಿರ್ದೇಶನ: ಜಯತೀರ್ಥ
ತಾರಾಗಣ: ರಿಷಭ್‌ ಶೆಟ್ಟಿ, ಹರಿಪ್ರಿಯಾ, ಅಚ್ಯುತ್‌ ಕುಮಾರ್‌, ಯೋಗರಾಜ್‌ ಭಟ್‌, ಪ್ರಮೋದ್‌ ಶೆಟ್ಟಿ, ಶಿವಮಣಿ ಮತ್ತಿತರರು. 

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.