CONNECT WITH US  

ಅತೀಂದ್ರಿಯ ಶಕ್ತಿ ನಮಗೆ ಹೇಗೆ ಬರುತ್ತದೆ ಗೊತ್ತಾ?

ನಾವೆಲ್ಲರೂ ಒಂದು ರೀತಿಯ ಶಕ್ತಿಯ ಆಜಾnನುಧಾರರಾಗಿದ್ದೇವೆ ಎಂಬುದನ್ನು ಮರೆಯಬಾರದು. ಗಾಯತ್ರಿ ಮಂತ್ರವನ್ನು ಉತ್ಛರಿಸಿ, ನಿರಂತರವಾದ ಜಪಧ್ಯಾನದಲ್ಲಿ ತಲ್ಲೀನರಾಗುವುದನ್ನೇ ಗಮನಿಸಿ. ಒಂದು ರೀತಿಯ ಆತ್ಮವಿಶ್ವಾಸವನ್ನು ಪಡೆದ ವಿಚಾರ ನಮ್ಮ ಮನಸಿಗೆ ಅನಿಸುತ್ತಲೇ ಹೋಗುತ್ತದೆ. ಈ ಅನಿಸುವಿಕೆ ಕೇವಲ ಒಂದು ಭ್ರಮೆಯಲ್ಲ. ಜಾnನವನ್ನು ಪ್ರಚೋದಿಸುವ ಬುದ್ಧಿಯನ್ನು ಅನುಗ್ರಹಿಸು ಎಂದು ಅಂದ ಮಾತ್ರಕ್ಕೆ ಬುದ್ಧಿಯ ಚೌಕಟ್ಟು ವಿಸ್ತರಿಸುತ್ತದೆಯೇ? ಈ ಪ್ರಶ್ನೆ ಎದ್ದೇಳಬಹುದು. ಹೌದು ನಿಜ, ಈ ಪ್ರಶ್ನೆಗೆ ಉತ್ತರ ಕಷ್ಟವೇನಲ್ಲ. ಮನುಷ್ಯನಿಗೆ ರಾಕ್ಷಸನಾಗಿ ಉಳಿದಾಗಲೂ ಸಂತೋಷವಿದೆ. ಸಾûಾತ್‌ ದೇವರೇ ಆಗದೆ ಉಳಿದಾಗಲೂ ಸಂತೋಷವಿದೆ. ಮನುಷ್ಯ ಮನುಷ್ಯನಾದಾಗ ಜೀವನದ ಪರಮ ಸಂತೋಷ ಪ್ರಾಪ್ತವಾಗುತ್ತದೆ. ಜಾnನಿಯಾಗಲು ಅವಕಾಶ. 

ಜಾnನದ ಹಂತಗಳು ವೈವಿಧ್ಯಪೂರ್ಣವಾಗಿದೆ. ಏಕೆಂದರೆ ಇರುವ ಜಾnನವನ್ನು ಹಲವಾರು ಹಂತಗಳಲ್ಲಿ ವೈವಿಧ್ಯತೆಗೆ ತೆರೆದುಕೊಳ್ಳುವ ಸಂಕಲ್ಪವನ್ನು ಕೂಡಾ ಮಾಡಿಕೊಳ್ಳಬೇಕಾಗುತ್ತದೆ.ನಮ್ಮ ದೇಹದ ಒಳಗಡೆ ಅಸ್ಥಿಮಂಡಲವಿದೆ. ನರಮಂಡಲವಿದೆ ಸ್ನಾಯು ಮಂಡಲವಿದೆ. ಈ ಎಲ್ಲದಕ್ಕೂ ಪರಿಣಾಮಕಾರಿಯಾದ ಚೈತನ್ಯ ಒದಗಿಸಲು ಸೂಕ್ತವಾದ ಆಹಾರವನ್ನು ಒದಗಿಸಬೇಕಾಗುತ್ತದೆ. ಜೀರ್ಣಾಂಗ ವ್ಯವಸ್ಥೆಗೆ ಹಸಿವಿನ ಅರಿವಾಗುತ್ತದೆಯೇ ವಿನಾ ಅಸ್ಥಿಮಂಡಲ, ನರಮಂಡಲ, ಸ್ನಾಯುಮಂಡಲಗಳಿಗೆ ಹಸಿವಿನ ಬಾಧೆ ಇಲ್ಲ. ಹಸಿವಿನ ಬಾಧೆಗೊಳಪಡುವ ಜೀರ್ಣಾಂಗ ದೇಹದ ಅವಶ್ಯಕತೆಗಳನ್ನು ತಾನು ಸ್ವೀಕರಿಸಿ ಆಹಾರದ ನೆಲೆಯಲ್ಲಿ ಚೈತನ್ಯಪೂರ್ಣವಾಗಿ ಕಟ್ಟಿಕೊಡುತ್ತದೆ. ಪಂಚೇಂದ್ರಿಯಗಳು ಜೀರ್ಣಾಂಗದ ಅಸ್ಥಿಮಂಡಲ, ನರಮಂಡಲ, ಸ್ನಾಯುಮಂಡಲದ ಸಹಕಾರ ಪಡೆಯದೆ ದೇಹದ ಸುರಕ್ಷತೆಯ ಬಗೆಗಾಗಿನ ಸುಪರ್ದಿಯನ್ನು ಪಡೆದುಕೊಳ್ಳುತ್ತದೆ. ಈ ಎಲ್ಲಾ ಸುಪರ್ದಿಗೆ ಒಳಗೊಳಗಿನ ಸಂಪರ್ಕಗಳ ಅನಿವಾರ್ಯತೆಗೆ ಮೆದುಳು ತನ್ನ ಅಂತರ್ಗತವಾದ ಹಲವು ಸೂಕ್ಷ್ಮ ವಿಧಾನಗಳಲ್ಲಿ ಮತ್ತೂಂದು ರೀತಿಯ ಸುಪರ್ದಿಯನ್ನು ಪಡೆದುಕೊಳ್ಳುತ್ತದೆ. ಈ ಎಲ್ಲಾ ಸುಪರ್ದಿಗೆ ಒಳಗೊಳಗಿನ ಸಂಪರ್ಕಗಳ ಅನಿವಾರ್ಯತೆಗೆ ಮೆದುಳು ತನ್ನ ಅಂತರ್ಗತವಾದ ಹಲವು ಸೂಕ್ಷ್ಮವಿಧಾನಗಳಲ್ಲಿ ಮತ್ತೂಂದು ರೀತಿಯ ಸುಪರ್ದಿಯನ್ನು ಪಡೆದುಕೊಳ್ಳುತ್ತದೆ. ಇದು ಬುದ್ಧಿಗೆ ಸಂಬಂಧಿಸಿದ್ದು. ಬುದ್ಧಿ ಅನುಷ್ಠಾನದಿಂದ ಪ್ರಖರಗೊಳ್ಳುವಂಥದ್ದು. ನಮ್ಮ ದೇಹದೊಳಗಿನ ವಿದ್ಯುತ್‌ ವರ್ತುಲ ಏನಿದೆ ಅದು ಪಂಚೇಂದ್ರಿಯಗಳಿಗೆ ಮೀರಿ ನಿಂತಿದ್ದು ಈ ವಿದ್ಯುತ್ತಿನಲ್ಲೇ ದೈವತ್ವದ ನಿಕ್ಷೇಪವಿದೆ. ಇದು ಬರಿಗಣ್ಣಿಗೆ ಕಾಣಲಾರದ್ದು. ಕಿವಿಗೆ ಕೇಳಿಸಲಾರದ್ದು. ನಾಲಿಗೆ ರುಚಿಗೆ ಸಿಗಲಾರದ್ದು. ಚರ್ಮದ ಸಂವೇದನೆಗೆ ದೊರಕಲಾರದ್ದು. ಮೂಗಿನ ಆಘ್ರಾಣಕ್ಕೆ ದಕ್ಕಲಾರದ್ದು. ಆದರೂ ಈ ಪಂಚೇಂದ್ರಿಯಗಳು ದೇಹದೊಳಗಿನ ವಿದ್ಯುತ್‌ನಿಂದ ದೊರೆತಕಾವನ್ನು ಇಡೀ ದೇಹದಲ್ಲಿ ಪ್ರವಹಿಸುತ್ತಲೇ ಇರುತ್ತದೆ. ಈ ವಿದ್ಯುತ್‌ ಪ್ರವಾಹವೇ ಅತೀಂದ್ರಿಯ ಶಕ್ತಿಯನ್ನು ವಿಸ್ಮಯಕಾರಕವಾಗಿ ಸಾಮಾನ್ಯವಾದ ಪಂಚೇದ್ರಿಯಗಳಿಗೆ ದೊರಕಿಸಿಕೊಳ್ಳಲು ಸಾಧ್ಯವಾಗದ ಆರನೇ ಇಂದ್ರಿಯದ ರೂಪದಲ್ಲಿ ಒದಗಿಸುತ್ತದೆ. ನಿಗೂಢವಾದ ಅಲೌಕಿಕ ಶಕ್ತಿಯೊಂದಿಗೆ ಸಂಪರ್ಕಕ್ಕೆ ತರುವ ಯಕ್ಷಿಣಿಯನ್ನು ಈ ಆರನೆಯ ಇಂದ್ರಿಯ ನಿರೂಪಿಸುತ್ತದೆ. ನಮ್ಮ ಮೈಮೇಲೆ ದೇವರು ಬರುವ ವಿಚಾರವನ್ನು ಕೇವಲ ಮೂಢನಂಬಿಕೆ ನೆಲೆಯಲ್ಲೇ ಯೋಚಿಸಿ ವಿಶ್ಲೇಷೀಸಲು ಹೊರಟರೆ ಉಪಯೋಗವಾಗದು. ಮೈಮೇಲೆ ದೇವರು ಬರುವುದನ್ನು ಸೂಕ್ಷ್ಮವಾಗಿ ಗಮನಿಸಿ. 

ಮೈಮೇಲೆ ದೇವರು ಬರುವುದು

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಇದು ಸಂಭವನೀಯವಲ್ಲ. ಪಾಶ್ಚಾತ್ಯರಲ್ಲೂ ಸುಮೇರಿಯನ್‌ ಚೈನೀಸ್‌ ಸಂಸ್ಕೃತಿಯನ್ನು ಆಳವಾಗಿ ಅಭ್ಯಾಸ ಮಾಡಿದಾಗ ಮಾನವ ಶಕ್ತಿಯನ್ನು ಮೀರಿದ ಅನ್ಯ ಅನನ್ಯ ಶಕ್ತಿ ಪ್ರವಾಹ ಮೈಯಲ್ಲಿ ಸಂಚಯನಗೊಳ್ಳುವುದನ್ನು ನಾವು ಕಾಣಬಹುದು. ಸಾಮಾನ್ಯವಾಗೇ ಇದ್ದ ಮನುಷ್ಯರು ಅದರತೊಡಗುತ್ತಾರೆ. ಅವರು ಅದುರ ತೊಡಗಿದ ರೀತಿಯಲ್ಲಿ ನಾವು ಅದುರಲು ಸಾಧ್ಯವಿಲ್ಲ. ಕೈಕಾಲು, ಕುತ್ತಿಗೆ, ಸೊಂಟಗಳು ದೇವರು ಮೈಮೇಲೆ ಬಂದವರ ರೀತಿಯಲ್ಲಿ  ಕುಣಿದಾಡಿಸಲು ಸಾಧ್ಯವಿಲ್ಲ. ನಾವು ಹಾಗೆ ಕುಣಿಸಲು ಹೋದರೆ ನಮಗೆ ದಣಿವಾಗುತ್ತದೆ. ಹಲವು ರೀತಿಯ ಕುಚೇಷ್ಟೆಗಳನ್ನು ಹಲವಾರು ಢೋಂಗಿಜನರ ಬಗೆಗೆ ಮಾಡಬಹುದು. ಆದರೆ ಅತೀಂದ್ರಿಯವಾದುದು ಮೈಮೇಲೆ ದೇವರು ಬಂದಾಗ ಮಾತನಾಡುವ ಕ್ರಮವನ್ನು ಗಮನಿಸಬೇಕು. ದೊಡ್ಡ ದೊಡ್ಡ ಶಾಸ್ತ್ರ ಸಿದ್ಧಾಂತ ಗ್ರಂಥ ವ್ಯಾಖ್ಯಾನಗಳನ್ನು ಅರಗಿಸಿಕೊಂಡಿರದ ಜನ, ಮೈಮೇಲೆ ದೇವರು ಬಂದಾಗ ಮಾತ್ರ ನಿರರ್ಗಳವಾಗಿ ಮಾತನಾಡಲು ಶುರು ಮಾಡುತ್ತಾರೆ. ಗ್ರಾಂಥಿಕವಾದ ಭಾಷೆಯಲ್ಲಿ ಒಂದೊಮ್ಮೆ ಮಾತನಾಡದಿದ್ದರೂ ನಿತ್ಛಳವಾಗಿ ಆತ್ಮ, ಪರಮಾತ್ಮ, ವೇದ, ವೇದಾಂಗಗಳ ಬಗ್ಗೆ ಗ್ರಾಮ್ಯಭಾಷೆಯಲ್ಲಿಯೇ ಇವರು ಮಾತನಾಡತೊಡಗುತ್ತಾರೆ. ಇದೊಂದು ಸೋಜಿಗದ ಷಯ. ಹಲವು ಸಲ ಯಾವ ಸಂದರ್ಭದಲ್ಲಿಯೂ ತಿಳಿದಿರಲು ಅಸಾಧ್ಯವಾದ ಅನ್ಯಭಾಷೆಗಳ ಮೇಲೆ ಇವರುಗಳು ದೇವರು ಬಂದಾಗ ಸಂಪನ್ನವಾದ ಡಿತ ಸಾಧಿಸಿ ಮಾತನಾಡುತ್ತಾರೆ, ಇದೂ ಸೂಕ್ಷ್ಮವಾದ ಷಯ

 ರಾಮಾಯಣ ಹನುಮಂತನನ್ನೇ ಗಮನಿಸಿ. ಅವನಿಗೆ ತನ್ನ ಶಕ್ತಿಯ ಅರಿಲ್ಲ. ಇತರರು ನೀನು ಮಾಡಬಲ್ಲೆ ನಿನ್ನಲ್ಲಿ ಶಕ್ತಿ ಇದೆ ಎಂದು ಅಂದಾಗಲೇ ಸಾತ್ವಿಕ ಕಾರಣಕ್ಕಾಗಿ ತನ್ನನ್ನು ಕ್ರಿಯಾಶೀಲಗೊಳಿಸಿಕೊಳ್ಳುತ್ತಾನೆ. ಶರಧಿಯನ್ನೇ ಜಿಗಿದು ಲಂಕೆಯನ್ನು ತಲುಪುವ ಸಾಹಸ ನಡೆಸುತ್ತಾನೆ. ವಜ್ರದೇಗೆ ಸೂಕ್ಷ್ಮವನ್ನೂ ಬೃಹತ್‌ ಸ್ತಾರವನ್ನೂ ಪಡೆಯುವ ಚೈತನ್ಯ ಕೇಲ ಮನೋಸಂಕಲ್ಪದ ಮೂಲಕ ಸಾಧ್ಯತ್ತು. ರಾಮನ ಕೆಲಸ ಎಂಬುದೇ ಅವನಿಗೆ ಚೈತನ್ಯವನ್ನು ಗ್ಗಿಸಿಕೊಳ್ಳುವ ಮೂಲ ಇಂಧನವನ್ನು ಸಂಪಾದಿಸಿಕೊಳ್ಳುವಂತಾಯ್ತು. 

ಸರ್ವೇಶ್ವರನಿಗೂ ಅತೀಂದ್ರಿಯ ಶಕ್ತಿ ಅನಿವಾರ್ಯವಾಯ್ತು. ನಾವು ದೇಪುರಾಣವನ್ನು ಓದಿದರೆ ಗಮನಕಲೆ ಬರುವ ಚಾರವೆಂದರೆ ದೈತ್ಯರನ್ನು ಅಮೂಲಾಗ್ರವಾಗಿ ನಾಶ ಮಾಡಿದ ದೇಯ ಅತೀಂದ್ರಿಯ ಶಕ್ತಿಯನ್ನು ಒಂದು ಹೊಸ ವ್ಯಾಖ್ಯಾನಕ್ಕೆ ಹಚ್ಚುತ್ತದೆ. ದೈತ್ಯರು ಯಾವ ರೀತಿಯ ಮಾಯೆಗೆ ತಮ್ಮನ್ನು ಬದ್ಧ ಗೊಳಿಸಿಕೊಂಡಿದ್ದರೆಂದರೆ ಅವರ ಒಂದು ಹನಿ ರಕ್ತ ನೆಲಕ್ಕೆ ಬಿದ್ದರೂ ಸಾಕು ಮತ್ತೂಬ್ಬ ದುಷ್ಟ ದೈತ್ಯನ ಉಗಮಕ್ಕೆ ಕಾರಣವಾಗುತ್ತಿತ್ತು. ರಕ್ತವೇ ಹೊಸ ದೈತ್ಯನ ಜಯಕ್ಕೆ ಬೀಜವಾಗಿ ರಕ್ತ ಬೀಜಾಸುರ ಸಂತತಿ ಮುಗಿಯದ ಕಥೆಯಾಗಿತ್ತು. ಹೀಗಿರುವಾಗ ದೇವಿಯು ಸರ್ವಮಂಗಳೆಯಾದವಳು ತಾನೂ ಕಾಳಿಯ ರೂಪಕ್ಕೆ ಪರಿವರ್ತನೆಗೊಳ್ಳುತ್ತಾಳೆ. ಅತಿಮಾನುಷ ಸ್ವರೂಪದ ಕಾಳಿ ರಾಕ್ಷಸರನ್ನು ರಾಕ್ಷಸರ ಸ್ವರೂಪದಲ್ಲೇ ಎದುರಿಸಿ ಅತಿಮಾನುಷ ಅತೀಂದ್ರಿಯ ಶಕ್ತಿಯಲ್ಲಿ ಸಜಾjಗಿ ರಾಕ್ಷಸರ ವಿರುದ್ಧ ಜಯಸಾಧಿಸುತ್ತಾಳೆ. ಇದು ಒಂದು ಪರಿವರ್ತನೆ. ಸುಲಭವಾದುದಲ್ಲಿ ಈ ಪರಿವರ್ತನೆ. ಆದರೆ ಅತೀಂದ್ರಿಯ ಶಕ್ತಿಗೆ ಸಜಾjಗಿರುವ ದೇವಿಯ ಒಳಜಾಗೃತ ಜೈಹಿಕ ಪ್ರವಾಹಕ್ಕೆ ಹೊಸದೇ ಆದ ಹರಿತ ಉದ್ದೇಶ ಅವಗಾಹನ ಯೋಗ್ಯ ಸಂಪನ್ನತೆ ಉಂಟು. ಇವುಗಳನ್ನು ಗಮನಿಸಿದಾಗ ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಜಾರುವ ವಿಚಾರ ತಿಳಿದಷ್ಟು ಕಷ್ಟವೂ ಅಲ್ಲ, ಸುಲಭವೂ ಅಲ್ಲ. ಒಂದು ನಂಬಿಕೆ, ಸಾಧನೆ, ಸಾತ್ವಿಕತೆ ಬೇಕೇ ಬೇಕು. ಇಚ್ಛಾಶಕ್ತಿ ಪ್ರಬಲವಾಗಿರಬೇಕು. ಮಾಟ ಮಂತ್ರಗಳ ವಿಚಾರವೇ ಆಗಿರಲಿ ನಾವು ಇದನ್ನು ಸುಲಭವಾಗಿ ನಿರಾಕರಿಸಲಾಗದು. ಆದರೆ ಒಬ್ಬ ವ್ಯಕ್ತಿಯ ನಾಶಕ್ಕಾಗಿ ಯಾವುದೇ ವಿಚಾರ ಬಳಸುವಂತಾಗಬಾರದು. 

ಶ್ರೀ ದುರ್ಗಾ ಸಪ್ತಶತಿಯಲ್ಲಿ  :ಅತಿ ಸೌಮ್ಯಾತಿ ರೌದ್ರಾಯೇ ನತಾಸ್ತಸ್ಯೆà ನಮೋನಮಃ| ನಮೋ ಜಗತ್‌ ಪ್ರತಿಷ್ಟಾಯೇ ದೇವೈ ಕೃತ್ಯೇ ನಮೋನಮ,ಃ| ಎಂಬ ಮಾತು ಬರುತ್ತದೆ. ದೇವಿಯ ಬಗೆಗಾಗಿನ ಪ್ರಶಂಸೆ ಇದು. ಪ್ರಾರ್ಥನಾ ಸ್ವರೂಪದಲ್ಲಿ. ಅವಳಿಗೆ ಶರಣಾಗುವ ಸ್ವರೂಪದಲ್ಲಿದೆ. ಅತಿ ಸೌಮ್ಯಳೂ ಅತಿ ರೌದ್ರಳು ಆದ ದೇವಿಗೆ ನಿರಂತರ ನಮನಗಳು. ಜಗತ್ತಿನ ಆಧಾರಳಾದ ತಾಯಿ ದೇವರಿಗೆನಮಸ್ಕಾರ  ಎಂಬುದು ಇದರ ಅರ್ಥ. ಸೌಮ್ಯತೆಯನ್ನೂ ರೌದ್ರಾವತಾರವನ್ನೂ ಒಳಿತಿನ ಸಂದರ್ಭದ ಉಳಿವಿಗಾಗಿ ಧಾರುಣ ಮಾಡಲೇ ಬೇಕಾಗುತ್ತದೆ. ಇದನ್ನು ದೇ ಮಾಡಬಲ್ಲಳು. ಹೀಗಾಗಿ ಜಗತ್ತಿನ ಮೂಲಾಧಾರಳಾದ ಅವಳ ಕೃಪೆ ನಮಗೆ ಬೇಕಾಗಿದೆ. ರಕ್ಷೆಯೂ ಬೇಕಾಗಿದೆ. 

ಅತೀಂದ್ರಿಯ ಶಕ್ತಿಯನ್ನು ದೇವಿಯು ನಮಗೆ ಕರುಣಿಸಬಲ್ಲವಳಾಗಿದ್ದಾಳೆ. ಅದು ಅವಳಿಗೆ ಸಾಧ್ಯವಾಗುವುದು ನಮಗೆ ಪ್ರಕೃತಿದತ್ತವಾದ ಇಂದ್ರಿಯಗಳ ಮೂಲಕ ಅನನ್ಯವಾದ ಇನ್ನೊಂದು ಜಾಗೃತ ಶಕ್ತಿಯನ್ನು ರೂಪಿಸಿಕೊಳ್ಳಬಹುದು. ಧ್ಯಾನ ಜಪ ಮಂತ್ರಗಳು ಇವನ್ನು ಆವಾಹನಗೊಳಿಸಬಲ್ಲವು. ಆದರೆ ಹಲವರಿಗೆ ಜನ್ಮದತ್ತವಾಗಿಯೇ ಅತೀಂದ್ರಿಯ ಶಕ್ತಿ ಜಾಗೃತವಾಗಿರುತ್ತದೆ. ಈ ಶಕ್ತಿಯು ಒಬ್ಬ ಪ್ರಾಜ್ಞನಲ್ಲೂ ಕಂಡುಬರಬಹುದು. ಅರೆಹುಚ್ಚನಲ್ಲೂ ಕಂಡುಬರಬಹುದು. ಆದರೆ ಕೆಲವರು ಢೋಂಗಿತನದಿಂದ ಇಂಥ ಶಕ್ತಿ ಇರುವುದಾಗಿ ಸ್ವಪ್ರಶಂಸೆ ಮಾಡಿಕೊಳ್ಳುತ್ತಾರೆ. ಆದರೆ ಸಾಮಾನ್ಯವಾದ ನರಮಂಡಲದ ಮೂಲಕವಾಗಿ ಹುರಿಗೊಳಿಸಲ್ಪಟ್ಟ ಘಟ್‌ ಚಕ್ರಗಳು ನಮ್ಮೊಳಗೆ ಏನಿವೆ ಮೂಲಾಧಾರ ಎಂಬ ಚಕ್ರದಿಂದ ಸಹಸ್ರಾರ ಎಂಬ ಚಕ್ರದವರೆಗೆ ವಿಶೇಷವಾದ ಸಿದ್ದಿಯನ್ನು ನಿಯಂತ್ರಣವನ್ನು ಒದಗಿಸುತ್ತದೆ. ಇವು ಹೇಗೆ ಕಾರ್ಯತತ್ಪರವಾಗುತ್ತದೆ ಎಂಬುದನ್ನು ಮುಂದಿನ ಕಂತಿನಲ್ಲಿ ತಿಳಿಯೋಣ. 

Trending videos

Back to Top