ಧನಯೋಗದಲ್ಲಿ ಚಂದ್ರ,ಕುಜ,ಶನಿ ಗ್ರಹಗಳ ಪಾತ್ರ ಹೀಗಿದೆ…


Team Udayavani, Oct 28, 2016, 9:30 PM IST

7.jpg

ಹಿಂದಿನ ವಾರ ಧನಯೋಗ ಧನಲಾಭ ಹಾಗೂ ಧನಲಾಭದ್ದೂ ಪ್ರಾರಬ್ಧಗಳು ಸುತ್ತಿಕೊಳ್ಳುವ ಅಸಂಗತೆಗಳ ಬಗೆಗೆ ಬರೆದಿದ್ದೆ. ಮುಖ್ಯವಾಗಿ ಗುರು ಶುಕ್ರ ಬುಧ ಗ್ರಹಗಳು ಕೂಡಾ ಧನಲಾಭ ಅಥವಾ ಧನಗಳಿಕೆಯ ವಿಚಾರದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆಯಾದರೂ ಚಂದ್ರ, ಕುಜ ಹಾಗೂ ಶನಿ ಗ್ರಹಗಳು ಜನ್ಮ ಕುಂಡಲಿಯ ಮೂಲಕ ಒಬ್ಬ ವ್ಯಕ್ತಿಯ ಜಾತಕದಲ್ಲಿ ನಿರ್ವಹಿಸುವ ಭೂಮಿಕೆಗೆ ಪ್ರತ್ಯೇಕವಾದೊಂದು ತೂಕವೇ ಇದೆ. ಸೂರ್ಯ ರಾಹು ಮತ್ತು ಕೇತುಗಳು ಕೂಡಾ ಆರ್ಥಿಕ ವಿಚಾರದಲ್ಲಿ ಸಕಾರಾತ್ಮಕವಾದ ಬಲವನ್ನು ನೀಡಬಲ್ಲದಾದರೂ ಈ ಗ್ರಹಗಳು ಬೇರೊಂದು ಗ್ರಹಗಳ ಜೊತೆಗೂಡಿದಾಗ ಧನಹಾನಿಯನ್ನು ಸೃಷ್ಟಿಸುವ ದುಡಿದು ಹಣ ಗಳಿಸಿದರೂ ಉಳಿಸಲಾಗದ ಪರದಾಟಗಳನ್ನು ಸೃಷ್ಟಿಸಿಬಿಡುತ್ತದೆ. ಚಂದ್ರ, ಕುಜ ಹಾಗೂ ಶನಿ ಗ್ರಹಗಳು ವಿಪತ್ತುಗಳನ್ನು ಸೃಷ್ಟಿಸ ಬಲ್ಲವಾದರೂ ಆರ್ಥಿಕವಾಗಿ ಒಬ್ಬ ವ್ಯಕ್ತಿಯನ್ನು ಬಲಾಡ್ಯವಾಗಿಸುವಲ್ಲಿ ಹಲವು ಅನ್ಯ ರೀತಿಯ ಜಿಗುಟುತನ ಸ್ಥೈರ್ಯ ಮುನ್ನುಗುವಿಕೆಗಾಗಿನ ಪ್ರೇರಣೆ ನೀಡಿ ಮುಂದಡಿ ಇಡಲು ತುಡಿತಗಳನ್ನು ಸೃಷ್ಟಿಸುತ್ತದೆ. ಈ ಗ್ರಹಗಳು ಏಟು ನೀಡಿದರೆ ಅದು ಬಹು ದೊಡ್ಡ ಏಟೇ ಆಗುತ್ತದೆ. 

ಆಲೈಡ್‌ ನೊಬೆಲ್‌, ಅಂಬಾನಿ, ಬಿಲ್‌ ಗೇಟ್‌
 ಹೆಸರಿಸುತ್ತಾ ಹೋದರೆ ಇಂತಹ ನೂರಾರು ಹೆಸರನ್ನು ಹೇಳಬಹುದು. ಸೂಕ್ಷ್ಮವಾದ ನೆಲೆಯಲ್ಲಿ ಇವರುಗಳು ಧನವಂತರಾಗುವ ಭಾಗ್ಯವನ್ನು ಹುಟ್ಟಿನಿಂದಲೇ ಪಡೆದವರಲ್ಲ. ಬಾಲ್ಯದಲ್ಲಿನ ಬಡತನ ಆರ್ಥಿಕತೆಯಲ್ಲಿನ ಪೂರ್ವಾಶ್ರಮದ ಬವಣೆಗಳು ಇತ್ಯಾದಿ ಹೇರಳವೇ ಆಗಿದ್ದ  ಇವರುಗಳ ವಿಚಾರದಲ್ಲಿ. ಆದರೂ ನೊಬೆಲ್‌ ವಿಚಾರ ಗಮನಿಸಿ. ತನ್ನ ಸಂಶೋಧನೆಯಾದ ಡೈನಾಮೇಟ್‌ ಆವಿಷ್ಕಾರದ ಮೂಲಕ ಅಪಾರವಾದ ಸಂಪತ್ತನ್ನುಗಳಿಸಿದ. ಚಂದ್ರ ಹಾಗೂ ಕುಜ ಗ್ರಹಗಳ ಕೇಂದ್ರಾಧಿಪತ್ಯ ಯೋಗ ಚಂದ್ರನ ದುಷ್ಟತನವನ್ನು ನಾಶ ಮಾಡಿತು. ಯೋಗಕಾರಕನಾದ ಶನೈಶ್ಚರ ನೀಚ ಭಂಗ ರಾಜಯೋಗಕ್ಕೆ ಕಾರಣನಾದ. ಶುಕ್ರನ ಜೊತೆ ಸೇರಿ ಉತ್ತಮವಾದ ಕೆಲಸಕ್ಕೆ ತಳಹದಿಯಾಗುವ ಉನ್ನತ ಧ್ಯೇಯವೊಂದನ್ನು ನೊಬೆಲ್‌ಗೆ ಕರುಣಿಸಿದ. ಇಂದೂ ನೊಬೆಲ್‌ ಪುರಸ್ಕಾರ ಧನಗಳಿಕೆಗಾಗಿನ ನೊಬೆಲ್‌ ಪರಿಶ್ರಮದಲ್ಲಿ ದಿವ್ಯತೆ ಒದಗಿಸಿದೆ. ಚಂದ್ರ, ಕುಜ ಹಾಗೂ ಶನೈಶ್ಚರರು ಈ ಸಿದ್ಧಿಯನ್ನು ನೊಬೆಲ್‌ಗೆ ಕೊಡಮಾಡಿದರು. ಇಂದೂ ಜನಮಾನಸದಲ್ಲಿ ಜೀವಂತೆ.

ಇನ್‌ಫ‌ರ್‌ವೆುàಷನ್‌ ಟೆಕ್ನಾಲಜಿಯಲ್ಲಿ ದೊಡ್ಡ ಕ್ರಾಂತಿಗೆ ಕಾರಣನಾದ ಹರಿಕಾರ ಅಮೆರಿಕಾದ ಬಿಲ್‌ ಗೇಟ್‌ ಜಗತ್ತಿನ ಪ್ರಮುಖಾತಿ ಪ್ರಮುಖ ಶ್ರೀಮಂತರಲ್ಲಿ ಒಬ್ಬ. ಅತಂಗತ ದೋಷ ಕಳೆದುಕೊಂಡ ಉತ್ಛ ಶನಿಗ್ರಹ ಆರ್ಥಿಕ ಸ್ಥಾನದ ಅಧಿಪತಿಯಾದ  ಸೂರ್ಯನ ಮೂಲಕ ಬಿಲ್‌ಗೇಟ್ಸ್‌ಗೆ ನೀಚಭಂಗ ರಾಜಯೋಗ ಕೊಡಮಾಡಿತು. ಕುಜ ಹಾಗೂ ಚಂದ್ರರು ಬಲಾಡ್ಯವಾದ ಧೈರ್ಯ ಹಾಗೂ ಭಾಗ್ಯ ಸ್ಥಾನಗಳನ್ನು ಸಂಪನ್ನಗೊಳಿಸಿ ಧನದೇವತೆ ಮಹಾಲಕ್ಷಿ$¾ ಬಿಲ್‌ ಗೇಟ್ಸ್‌ ಗೆ ಒಲಿಯುವಂತೆ ಮಾಡಿದರು. ಪರಿಶ್ರಮದ ಕುರಿತಾದ ಸಂಕಲ್ಪ ಧೈರ್ಯ ಸ್ಥೈರ್ಯಗಳನ್ನು ಕುಜ ಒದಗಿಸಿದ್ದೂ ಗಮನಾರ್ಹ.

ಧೀರೂಬಾಯಿ ಅಂಬಾನಿ ಕೂಡಾ ಮುಂಬೈ ಎಂಬ ಮಾಯಾನಗರಿಗೆ ಬರುವಾಗ ಆರ್ಥಿಕವಾಗಿ ಬಲಾಡ್ಯರಲ್ಲ. ಏನೋ ಕಿಂಚತ್‌ ಹಣ ಸಂಪಾದಿಸುವ ಮನೋಗತದಿಂದ ಬಂದರಾದರೂ ಶನೈಶ್ಚರ ಧೀರೂಭಾಯಿ ಅವರನ್ನು ಆರ್ಥಿಕವಾಗಿ ಪ್ರಚಂಡರನ್ನಾಗಿಸಿದ. ಚಂದ್ರ, ಗುರು ಕೇಂದ್ರ ಯೋಗ ಕುಜ ಸಂಪನ್ನ ಭಾಗ್ಯ ಯೋಗ, ಎಲ್ಲಾ ಸೇರಿ ಪ್ರಪಂಚದ ಕೆಲವೇ ಶ್ರೀಮಂತರ ಪಟ್ಟಿಗೆ ಅಂಬಾನಿ ಸೇರಿದರು. ಉತ್ತಮವಾದ ಮಾನವ ಸಂಪನ್ಮೂಲ ಶಕ್ತಿಯನ್ನು ಶನೈಶ್ಚರ ಅಂಬಾನಿಯವರಿಗೆ ಒದಗಿಸಿ ಕೊಟ್ಟ. ಉದ್ಯಮಿಯಾಗಿ ಸಫ‌ಲತೆ ಪಡೆದಿರುವ ಅವರ ಯಶಸ್ಸಿನ ಹಿಂದಿನ ಶಕ್ತಿ ಲೇಬರ್‌ ಶಕ್ತಿಯನ್ನು ಯುಕ್ತವಾಗಿ ಕ್ರೋಢೀಕರಿಸಿಕೊಂಡಿದ್ದು.  ಇದಕ್ಕೆ ಶನೈಶ್ಚರನೇ ಕಾರಣನಾಗಿದ್ದಾನೆ. ಶನಿ ದಶಾದ ಸಂದರ್ಭದಲ್ಲಿ ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸ್ಥಿತಿ ಬಂದಿತ್ತು. ಆದರೆ ಅದೇ ಕಾಲಕ್ಕೆ ಕೂಡಿ ಬಂದ ಸಾಡೇ ಸಾತಿ ಪೀಡೆ ಜೀವನ್ಮುಕ್ತಿಗೂ ಕಾರಣವಾಯ್ತು. ಶನೈಶ್ಚರನು ಮಾರಕ ಗ್ರಹವೂ ಆಗಿ ಚಂದ್ರ ಮರಣ ಸ್ಥಾನದ ಅಧಿಪತಿಯಾಗಿ ಶನಿ ಚಂದ್ರರ ಕೊಂಡಿಯ ಕಾರಣದಿಂದ ಉಂಟಾಗುವ ಶನಿ ಪೀಡೆ ಅಂಬಾನಿಯವರ ಇಹಲೋಕದ ವ್ಯಾಪಾರಕ್ಕೆ ಸಮಾಪ್ತಿ ತಂದಿತ್ತು. ಎಪ್ಪತ್ತು ವಸಂತಗಳನ್ನು ಅಂಬಾನಿ ಆಗಲೇ ಜೀವನದ ಸಂದರ್ಭದಲ್ಲಿ ಮುಗಿಸಿದ್ದರು. 

ಧನನಾಶಕ್ಕೂ ಕಾರಣರಾಗುವ ಚಂದ್ರ ಕುಜ ಹಾಗೂ ಶನೈಶ್ಚರರು
ಚಂದ್ರ, ಕುಜ ಹಾಗೂ ಶನೈಶ್ಚರರಲ್ಲಿ ಯಾರೇ ಒಬ್ಬರಿಗೂ ದೋಷ ಒದಗಿದರೂ ಅಮೂಲ್ಯವಾಗಬೇಕಾದ ಧನಯೋಗದ ಸಿದ್ಧಿಗೆ ಭಂಗ ತರುತ್ತಾರೆಂದು ಚಿತ್ರ. ಆದರೆ ಸತ್ಯ. ಚಂದ್ರನ ಮೂಲಕ ಧನ ಸಂಚಯನಕ್ಕೆ ಬೇಕಾದ ಮಾನಸಿಕ ಬಲಾಡ್ಯತೆ ಅದರದ್ದೇ ಆದ ಸಂಪನ್ನತೆ ಇದೆ. ನಂಬಿಗಸ್ಥ ಆಳುಕಾಳುಗಳು  ಶ್ರಮಜೀಗಳು ಸಹಾಯಕರು ಕೂಡಿ ಬರಲು ಶನೈಶ್ಚರ ಸ್ವಾಮಿಯ ಸಿದ್ದಿಗೆ ಕಾರಣವಾಗುತ್ತದೆ. ಹೀಗಾಗಿ ಜಾತಕ ಕುಂಡಲಿಯಲ್ಲಿ ಧನ ಪ್ರಾಪ್ತಿಗೆ ಶನೈಶ್ಚರ ಸ್ವಾಮಿಯ ಅನುಗ್ರಹವು ದಿವ್ಯಕ್ಕೆ ದಾರಿಯಾಗುವ ಸೋಜಿಗಕ್ಕೆ ಅವಕಾಶಗಳು ಬೇಕಾಗುತ್ತದೆಂದು ಗಮನಾರ್ಹ. ಒಂದೊಮ್ಮೆ ಧನಯೋಗಗಳು ಬೇರೆಯ ಕಾರಣಕ್ಕಾಗಿ ಹೇರಳವಾಗಿಯೇ ಇದ್ದರೂ ಚಂದ್ರ ಕುಜ ಅಥವಾ ಶನಿ ಗ್ರಹಗಳಿಗೆ ದೋಷ ಇದ್ದಲ್ಲಿ ಆ ಜಾತಕ ಕುಂಡಲಿಯ ವ್ಯಕ್ತಿಗೆ ಧನಲಾಭದ ಅದೃಷ್ಟ ಇದ್ದರೂ ಜೀವನದ ಸಂದರ್ಭದ ಮಹತ್ವಿಕೆಗೆ ಅದು ಕಾರಣವಾಗುವುದಿಲ್ಲ. ಈ ಕುರಿತಾಗಿ ವಿವರವಾಗಿ ಬರೆಯಬಹುದೇ ಹೊರತು ಉದಾಹರಣೆಯಾಗಿ ಕೆಲವು ಹೆಸರುಗಳನ್ನು ನೇರವಾಗಿನೀಡಲು ಇದು ಸೂಕ್ತ ಜಾಗವಲ್ಲ. ಆದರ ಚಿತ್ರರಂಗದ ಕೆಲ ಮಹಾನ್‌ ತಾರೆಗಳು ರಾಜಕೀಯ ರಂಗದ ಅನೇಕ ಗಣ್ಯ ಮುತ್ಸದ್ದಿಗಳು ಸಾಂಸ್ಕೃತಿಕ ರಂಗದ ದಿಗ್ಗಜರು ಕ್ರೀಡಾಳುಗಳಾಗಿ ದೇಶಕ್ಕೆ ಸಂಭ್ರಮ ಒದಗಿಸಲು ಕಾರಣವಾಗಿಯೂ ಆರ್ಥಿಕವಾಗಿ ನರಳುತ್ತಿರುವ ಅನೇಕ ಬಲಾಡ್ಯರು ನಮಗೆ ಸಿಗುತ್ತಲೇ ಇರುತ್ತಾರೆ. ಇಂಥವರ ಹೆಸರಿನಯಾದಿ ದೊಡ್ಡದೇ ಇದೆ. 

ನಮ್ಮ ದೇಶದ ಮಹಾನ್‌ ಚಲನಚಿತ್ರ ನಟ ನಿರ್ದೇಶಕರೊಬ್ಬರು ಕುಖ್ಯಾತನೊಬ್ಬನ ಬಳಿ ತಮ್ಮ ಚಿತ್ರಗಳಿಗಾಗಿ ಹಣ ಹೊಂದಿಸಿಕೊಳ್ಳುತ್ತಿದ್ದರು. ಮಹಾನ್‌ ನಟಿಯೋರ್ವಳು ಸಾವಿನ ನೆರಳಿನ ದಿನಗಳಲ್ಲಿ  ಚಿಕಿತ್ಸೆಗಾಗಿ ಹಣರದೆ ಪರದಾಡಿದ್ದು ವೇದಿಕೆಯ ಮೇಲೆ ಮಹಾನ್‌ ಪ್ರತಿಭಾಶಾಲಿಗಳಾಗಿ ಮಿಂಚುವ ಜನರಿಗೆ ಹಣ ಸಂದಾಯವಾಗುತ್ತಿದ್ದಂತೆ ಆ ಹಣವನ್ನು ಸರ್ರನೆ ಕಿತ್ತುಕೊಳ್ಳುವ ಕೈಗಳು ಕೇವಲ ಐದು ಸಾವಿರ ರೂಪಾಯಿಗಳ ಆದ್ಯತೆ ನೀಗಿಸಿಕೊಳ್ಳಲಾಗದೆ, ಪ್ರಮುಖ ಧನಸ್ಥರೊಬ್ಬರ ಬಳಿಯಿಂದ ಕೆಲ ವರ್ಷಗಳ ಹಿಂದೆ ಅನಿವಾರ್ಯವಾಗಿ ತರಿಸಿಕೊಂಡ ರಾಜ್ಯದ ಮುಖ್ಯಮಂತ್ರಿಯೊಬ್ಬರು ಬಿರುದು ಬಾವಲಿ ಪುರಸ್ಕಾರದ ರಾಶಿಯೇ ಇದ್ದರೂ ಹಣಕ್ಕಾಗಿ ಪರದಾಡುತ್ತಿದ್ದಾರೆ. ಅಂದರೆ ಅದು ಚಂದ್ರ, ಕುಜ ಶನೈಶ್ಚರರ ವಕ್ರತೆಯಲ್ಲದೆ ಮತ್ತೇನೂ ಅಲ್ಲ. ಹೀಗಾಗಿ ಧನಯೋಗವಿದ್ದರೆ ಸಾಲದು ಅದನ್ನು ಅನುಭವಿಸಲು ಅದೃಷ್ಟವೂ ಬೇಕು.  

ಅನಂತಶಾಸ್ತ್ರೀ 

ಟಾಪ್ ನ್ಯೂಸ್

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.