ಜಾತಕದ ಎರಡನೇ ಭಾವದಲ್ಲಿ ವರ್ಚಸ್ಸು, ವ್ಯಕ್ತಿತ್ವ…


Team Udayavani, Dec 16, 2017, 12:42 PM IST

varchasu-jataka.jpg

ಇರುವುದು ಕೇವಲ ಹನ್ನೆರಡು ಮನೆಗಳೇ ಆದರೂ ಜಾತಕ ಕುಂಡಲಿಯಲ್ಲಿ ಅವು ವಿಸ್ತಾರವಾದ ವಿಚಾರಗಳನ್ನು ಒಬ್ಬ ವ್ಯಕ್ತಿಯ ಕುರಿತಾಗಿ ಬಿಚ್ಚಿಡುತ್ತವೆ. ಬರೀ ಈ ಜನ್ಮವೊಂದನ್ನೇ ಅಲ್ಲ, ಜಾತಕದಲ್ಲಿರುವ ಐದನೇ ಭಾವವಾದ ಪೂರ್ವ ಪುಣ್ಯ ಸ್ಥಾನವನ್ನು ವಿಶ್ಲೇಷಿಸುತ್ತ, ಜಾತಕದ 3, 6 ಹಾಗೂ 8ರ ಜತೆಗೆ 12ನೇ ಭಾವಗಳನ್ನು 5ನೇ ಭಾವದ ಜತೆಗೆ ಪೂರಕವಾಗಿ ವಿಶ್ಲೇಷಣೆ ನಡೆಸಿದಲ್ಲಿ ಒಬ್ಬ ವ್ಯಕ್ತಿಯ ಹಿಂದಿನ ಹಾಗೂ ಮುಂದಿನ ಜನ್ಮಗಳ ಬಗೆಗೂ ಒಂದು ಪುಟ್ಟ ಚೌಕಟ್ಟನ್ನು ಕಟ್ಟಿಕೊಡಬಹುದು. ಆದರೆ, ಹಿಂದಿನ ಜನ್ಮವನ್ನಾಗಲೀ, ಮುಂದಿನ ಜನ್ಮವನ್ನಾಗಲೀ ತಿಳಿದು ಪ್ರಯೋಜನವೇನಿದೆ ಎಂಬುದನ್ನು ಗ್ರಹಿಸಿದರೆ, ಈ ವಿಶ್ಲೇಷಣೆಗಳಿಗೆ ಅರ್ಥವಿಲ್ಲ ಅನ್ನಬಹುದು. ಆದರೂ, ಹಲವರಿಗೆ ಇದನ್ನು ತಿಳಿಯುವ ಕುತೂಹಲ ಅಧಿಕವಾಗಿರುತ್ತದೆ. 

ಜಾತಕ ಶಾಸ್ತ್ರ ಬಹು ಸಂಕೀರ್ಣವಾದದ್ದು. ಇರುವುದು ಕೇವಲ ಹನ್ನೆರಡು ಮನೆಗಳೇ ಆದರೂ ಜಾತಕ ಕುಂಡಲಿಯಲ್ಲಿ ಅವು ವಿಸ್ತಾರವಾದ ವಿಚಾರಗಳನ್ನು ಒಬ್ಬ ವ್ಯಕ್ತಿಯ ಕುರಿತಾಗಿ ಬಿಚ್ಚಿಡುತ್ತವೆ. ಬರೀ ಈ ಜನ್ಮವೊಂದನ್ನೇ ಅಲ್ಲ, ಜಾತಕದಲ್ಲಿರುವ ಐದನೇ ಭಾವವಾದ ಪೂರ್ವ ಪುಣ್ಯ ಸ್ಥಾನವನ್ನು ವಿಶ್ಲೇಷಿಸುತ್ತ, ಜಾತಕದ 3, 6 ಹಾಗೂ 8ರ ಜತೆಗೆ 12ನೇ ಭಾವಗಳನ್ನು 5ನೇ ಭಾವದ ಜತೆಗೆ ಪೂರಕವಾಗಿ ವಿಶ್ಲೇಷಣೆ ನಡೆಸಿದಲ್ಲಿ ಒಬ್ಬ ವ್ಯಕ್ತಿಯ ಹಿಂದಿನ ಹಾಗೂ ಮುಂದಿನ ಜನ್ಮಗಳ ಬಗೆಗೂ ಒಂದು ಪುಟ್ಟ ಚೌಕಟ್ಟನ್ನು ಕಟ್ಟಿಕೊಡಬಹುದು.

ಆದರೆ, ಹಿಂದಿನ ಜನ್ಮವನ್ನಾಗಲೀ, ಮುಂದಿನ ಜನ್ಮವನ್ನಾಗಲೀ ತಿಳಿದು ಪ್ರಯೋಜನವೇನಿದೆ ಎಂಬುದನ್ನು ಗ್ರಹಿಸಿದರೆ, ಈ ವಿಶ್ಲೇಷಣೆಗಳಿಗೆ ಅರ್ಥವಿಲ್ಲ ಅನ್ನಬಹುದು. ಆದರೂ, ಹಲವರಿಗೆ ಇದನ್ನು ತಿಳಿಯುವ ಕುತೂಹಲ ಅಧಿಕವಾಗಿರುತ್ತದೆ. ಹಿಂದಿನ ವಾರ  ವರ್ಚಸ್ಸು  ಹಾಗೂ ವ್ಯಕ್ತಿತ್ವದ ವಿಚಾರವನ್ನು ಈ ಅಂಕಣದಲ್ಲಿ ಜನ್ಮಕುಂಡಲಿಯ ಹಿನ್ನೆಲೆಯಲ್ಲಿ ವಿವರಿಸಲಾಗಿತ್ತು. ಬಹಳಷ್ಟು ಜನ ತಮ್ಮ ವರ್ಚಸ್ಸು ಹಾಗೂ ವ್ಯಕ್ತಿತ್ವಗಳ ಕುರಿತು,

ಅವು ಹಾರ್ದಿಕವಾದ ಸಮತೋಲನ ಹಾಗೂ ವಿಶೇಷ ಸಮತೋಲನ ಒಂದನ್ನು ಪಡೆದಿರಬೇಕು ಎಂಬ ಒಲವನ್ನು ಹೊಂದಿದ್ದರು ಎಂಬುದು ಅವರ ಮಾತಿನಲ್ಲಿ ಸ್ಪಷ್ಟವಾಗಿತ್ತು. ನಿಜ, ಒಬ್ಬನ ಯಾ ಒಬ್ಬಳ ವ್ಯಕ್ತಿತ್ವಕ್ಕೆ ದೊಡ್ಡ ತೂಕ ಯಾವಾಗಲೂ ಇದ್ದೇ ಇದೆ. ಅದನ್ನು ಕಾಪಾಡಿಕೊಳ್ಳಲು ಬಹುತೇಕ ಎಲ್ಲರೂ ಅವಿರತ ಆಸೆ ಹೊಂದಿರುತ್ತಾರೆ. ಈ ಕುರಿತಾಗಿ ಅಂತಃಕರಣ ಪೂರ್ಣವಾಗಿ ಪ್ರಯತ್ನಿಸುತ್ತಾರೆ. ಆದರೂ ಅದೃಷ್ಟ ಕೈ ಕೊಡುತ್ತದೆ. 

ಹಲವಾರು ಜನ ಸಂಪರ್ಕಿಸಿ ತಮ್ಮ ವ್ಯಕ್ತಿತ್ವದಲ್ಲಿ ಏನೋ ದೋಷವಿದೆ ಇದನ್ನು ಸರಿಪಡಿಸಲು ಸಾಧ್ಯವೇ ಎಂದು ತಮ್ಮ ಬಗೆಗೇ, ತಮ್ಮ ವ್ಯಕ್ತಿತ್ವದ ಬಗೆಗೇ ಅನುಮಾನ ಹೊಂದಿದ್ದು ಅವರು ಮಾತನಾಡಿದಾಗ ಸ್ಪಷ್ಟವಾಗಿತ್ತು. ಒಬ್ಬ ಹೆಣ್ಣುಮಗಳಂತೂ ತಾನು ಐಶ್ವರ್ಯಾ ರೈ ರೀತಿಯಲ್ಲಿ ಸಿನಿಮಾ ರಂಗದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಇದು ನನ್ನ ಜಾತಕದಲ್ಲಿ ಇದ್ದಿರುವ ಸೌಭಾಗ್ಯವಾಗಿರಬಹುದೇ ಎಂದು ಕಳಕಳಿ, ಅತೀವವಾದ ಮಹತ್ವಾಕಾಂಕ್ಷೆಯ ವಿಚಾರಗಳನ್ನು ಮುಂದಿರಿಸಿ ಸೀರಿಯಸ್‌ ಆಗಿ ವಿಚಾರಿಸಿದ್ದರು. 

ಯಾವಾಗಲೂ ಒಬ್ಬರನ್ನು ಅನುಕರಿಸಬೇಡಿ: ಜಾತಕ ಕುಂಡಲಿಯ ವಿಚಾರ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಸಂಪೂರ್ಣವಾಗಿ ಬೇರೆಯದೇ ಆಗಿರುತ್ತದೆ. ಹೀಗಾಗಿ ಯಾರನ್ನೂ ಅನುಕರಿಸಬೇಡಿ. ಅನುಕರಣೆಗೆ ಮುಂದಾದರೆ ವೈಫ‌ಲ್ಯಕ್ಕೆ ತುಂಬಾ ಅವಕಾಶಗಳಿರುತ್ತವೆ. ಅಮಿತಾಭ್‌ ಬಚ್ಚನ್‌ ಅವರು ಮಹಾತ್ಮಾ ಗಾಂಧಿಯಂತಾಗಲು ಸಾಧ್ಯವಿಲ್ಲ. ಸಚಿನ್‌ ತೆಂಡೂಲ್ಕರ್‌ ದ್ರಾವಿಡ್‌ರಂತಾಗಲೂ ಸಾಧ್ಯವಿಲ್ಲ. ದ್ರಾವಿಡ್‌ ಪ್ರಧಾನರಾಗಬೇಕಾದರೆ ತೆಂಡೂಲ್ಕರ್‌ ಅವರಂತೆ ಶತಕಗಳ ಬೆನ್ನು ಹತ್ತುವ ಆಯಾಸಪೂರ್ಣ ಕೆಲಸ ಮಾಡಬೇಕಿತ್ತು.

ತೆಂಡೂಲ್ಕರ್‌ ದ್ರಾವಿಡರಂತೆ ಪ್ರಧಾನರಾಗಬೇಕಾದರೆ ಗೋಡೆಯಾಗುವ ಪಾಡು ಪಡಬೇಕಿತ್ತು. ಆಗ ಇಷ್ಟೊಂದು ಶತಕಗಳನ್ನು ಸಿಡಿಸಲು ಸಾಧ್ಯವಾಗುತ್ತಿರಲಿಲ್ಲ. ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದಾಗ ಅವರ ಮನೋಸ್ಥಿತಿಯ ರೂಪು ರೇಷೆಗಳು ಅಂಥದೊಂದು ಜೂಜನ್ನು ನಿರ್ವಹಿಸುವ ಸಂಕಲ್ಪ ಬಲಕ್ಕೆ ಮನಸ್ಸು ಸಿದ್ಧಗೊಂಡಿತ್ತು. ನರಸಿಂಹರಾವ್‌ ಪ್ರಧಾನಿಗಳಾದಾಗ ಬಾಬ್ರಿ ಮಸೀದಿ ಉರುಳಿದರೂ, ಉರುಳದಿದ್ದರೂ ಅದು ಕಾಂಗ್ರೆಸ್‌ಗೆ ವಿರೋಧವಾಗುವ ಪರಿಸ್ಥಿತಿಯನ್ನೇ ನಿರ್ಮಿಸುವಂಥ ರೀತಿಯಲ್ಲಿ ಇತ್ತು. ಅದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ವಿಶ್ಲೇಷಿಸುವುದು ಸೂಕ್ತವಾಗಿರದು.

ಒಟ್ಟಿನಲ್ಲಿ ಆಯಾ ವ್ಯಕ್ತಿಗಳು ಇರುವ ಕಾಲ, ವರ್ತಮಾನ, ಗತಿಸ್ಥಿತಿ, ಅನಿವಾರ್ಯವಾಗಿ ತೊಡಗಿಸಿಕೊಳ್ಳಬೇಕಾದ ಒತ್ತಡಗಳು ಕೂಡ ಒಬ್ಬ ವ್ಯಕ್ತಿತ್ವವನ್ನು, ವರ್ಚಸ್ಸನ್ನು ಎತ್ತಿ ಸಂಭ್ರಮಿಸುವ, ಪೂರ್ತಿ ಬುಡಮೇಲು ಮಾಡುವ ಮಾತೃವಾತ್ಸಲ್ಯವನ್ನ, ವಿಷದ ಬಟ್ಟಲಲ್ಲಿ ವಿಷ ಕುಡಿಸಿ ನಿರ್ನಾಮ ಮಾಡುವ ರಾಕ್ಷಸತ್ವವನ್ನು ನಿರ್ಮಿಸುತ್ತವೆ. ಹೀಗಾಗಿ ಯಾರೇ ಇರಲಿ ತಾನು ಇನ್ನೊಬ್ಬನಂತೆ, ಇನ್ನೊಬ್ಬಳಂತೆ ಆಗುತ್ತೇನೆ ಎಂದು ಸಂಕಲ್ಪ ಮಾಡುವುದು ಬೇಡ. ನಾನು ವಿಶಿಷ್ಟವಾದ ನೆಲೆಯಲ್ಲಿ, ಸಾತ್ವಿಕತೆಯೊಂದಿಗೇ ನಾನೇ ಆಗಿ ರೂಪಾಂತರಗೊಳ್ಳುತ್ತೇನೆ ಎಂಬುದನ್ನೇ ಪ್ರಧಾನವಾಗಿಸಿಕೊಳ್ಳುವುದು ಉತ್ತಮ. 

ಜಾತಕ ಕುಂಡಲಿಯ ಎರಡನೆಯ ಭಾವವೂ ಪ್ರಧಾನವಾಗಿವೆ: ಮನಸ್ಸನ್ನು ನಿಯಂತ್ರಿಸಲು, ತೂಕವನ್ನಾಗಲೀ, ತುಕ್ಕನ್ನಾಗಲೀ ಮನಸ್ಸಿನ ಮೇಲೆ ಉಂಟು ಮಾಡಲು ಚಂದ್ರನೇ ಪೂರ್ತಿ ಕಾರಣವಾಗಿರುತ್ತಾನೆ. ಚಂದ್ರನ ಮೂಲಕವಾದ ಮನೋವೇದಿಕೆಯ ಮೇಲಿನ ಏರುಪೇರುಗಳನ್ನು, ಸಂಪನ್ನತೆಗಳನ್ನು ಕುಜ, ಬುಧ ಹಾಗೂ ರವಿ ಗ್ರಹಗಳು ನಿಯಂತ್ರಿಸುವ ಶಕ್ತಿಯನ್ನು ಹೆಚ್ಚಾಗಿ ಮಾಡುತ್ತಿರುತ್ತವೆ. ಆದರೆ ವಿವೇಚನೆ ಎಂಬುದನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳಬೇಕಾದರೆ ಮಾತನ್ನು ಯುಕ್ತವಾಗಿ ಆಡುವ,

ಬೇಕಾಬಿಟ್ಟಿ ಮಾತನಾಡುವುದನ್ನು ತಡೆಯುವ ವಿಚಾರದಲ್ಲಿ ತರ್ಕವನ್ನು ಉಪಯೋಗಿಸಲೇಬೇಕು. ಹೀಗಾಗಿ ಮಾತಿನ ಸ್ಥಾನ (ಇದು ಒಬ್ಬನ ಜಾತಕದಲ್ಲಿ ಎರಡನೇ ಮನೆ/ಭಾವದ ಮೇಲಿಂದ ಒಂದು ತಳಹದಿಯನ್ನು ಸಂಪಾದಿಸಿಕೊಂಡಿರುತ್ತದೆ)ವು ಜಾತಕ ಕುಂಡಲಿಯಲ್ಲಿ ಪ್ರಾಧಾನ್ಯತೆಯನ್ನು ಪಡೆಯುತ್ತದೆ. ಹಾಗೆಂದು ಕೇವಲ ಮೂಕನಾಗಿ ಆಡಬೇಕಾದ ಮಾತನ್ನೂ ಆಡದಿರುವುದಿಲ್ಲ. ಒಂದು ಮಾತಿದೆ, ಅದೇನೆಂದರೆ- ಮಾತು ಬೆಳ್ಳಿ ಹಾಗೂ ಮೌನ ಬಂಗಾರ ಎಂದು. ಆದರೆ ಎಲ್ಲಾ ಕಾಲಕ್ಕೂ ಅದು ಸೂಕ್ತ ನಾಣ್ಣುಡಿಯಾಗುವುದಿಲ್ಲ. ಮಾತು ಬಂಗಾರವಾಗುವ ವಿಚಾರವೇ ಯಶಸ್ಸನ್ನು ಪಡೆದು ಜೀವನವನ್ನು ಸಾರ್ಥಕ ಪಡಿಸಿಕೊಂಡವರ ಶೇಕಡಾ 90ಕ್ಕೂ ಮಿಕ್ಕಿ ಉದಾಹರಣೆಗಳನ್ನು ಹೇಳಬಹುದು. 

ಒಟ್ಟಾರೆಯಾಗಿ ಸೂರ್ಯನಿರಲಿ ಅಥವಾ ಇನ್ನಿತರ ಯಾವುದೇ ಗ್ರಹಗಳಿರಲಿ; ಅವು ಎಲ್ಲಾ ಸಂದರ್ಭಗಳಲ್ಲಿ ಒಳ್ಳೆಯವರೇ ಆಗಿರುವುದಿಲ್ಲ. ಹಾಗೆಯೇ ಕೆಟ್ಟದ್ದನ್ನು ಮಾಡಲು ಹೋಗುವುದೇ ಈ ಗ್ರಹಗಳ ಎಲ್ಲಾ ಕಾಲದ ಕೆಲಸವೂ ಅಲ್ಲ. ನಾವು ಹುಟ್ಟಿದ ವೇಳೆಯಲ್ಲಿನ ಜಾತಕ ಕುಂಡಲಿ ನಮ್ಮ ಹಿಂದಿನ ಜನ್ಮದಲ್ಲಿ ನಾವು ಶೇಖರಿಸಿಟ್ಟ ಬ್ಯಾಂಕ್‌ ಬ್ಯಾಲೆನ್ಸ್‌ನಂತೆ ಎನ್ನಬಹುದು. ಅದು ಹೇಗಿದೆ, ಎಷ್ಟಿದೆ, ಅದು ಸಾತ್ವಿಕ ಬ್ಯಾಲೆನ್ಸೋ ಅಥವಾ ಕಪ್ಪುಹಣದ ಹಾಗೆ ಸಾತ್ವಿಕವಲ್ಲದ ಬ್ಯಾಲೆನ್ಸೋ ನಮ್ಮ ಕರ್ಮಫ‌ಲದ ಮೇಲೇ ಅವಲಂಬಿತ. ಆದರೂ ನಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಲು ಸಾಧ್ಯವಾಗುವ ಹಾಗೆ ಜಾತಕದಲ್ಲಿನ ಲಗ್ನಾಧಿಪತಿ ಹಾಗೂ ನಮ್ಮ ಮಾತಿನ ಭಾವದ ಅಧಿಪತಿಗಳು,

ಮಾತಿನ ಭಾವದಲ್ಲಿರುವ ಗ್ರಹಗಳು ನಮಗೆ ಜೀವನದ ಪ್ರತಿಕ್ಷಣದಲ್ಲೂ ವಿಭಿನ್ನವಾದ ಅವಕಾಶಗಳನ್ನು ಒದಗಿಸುತ್ತಿರುತ್ತವೆ. ಆಗ, ಕರಿಯನೆಂಬ ಕಾರಣಕ್ಕಾಗಿ ರೈಲಿನಿಂದ ಹೊರದೂಡಿಸಲ್ಪಡಿಸಿಕೊಂಡ ಮೋಹನ್‌ದಾಸ್‌ ಕರಮಚಂದ ಗಾಂಧಿ, ಮಹಾತ್ಮರಾಗುತ್ತಾರೆ. ಬಿದಿರಿನ ಕೋಲಿನಂತೆ ಪೇಲವವಾಗಿದ್ದೀಯಾ ಎಂದು ಅನಿಸಿಕೊಂಡ ಬಚ್ಚನ್‌ ಸೂಪರ್‌ಸ್ಟಾರ್‌ ಆಗುತ್ತಾರೆ, ತರಗೆಲೆಗಳಂತೆ ವಿಕೆಟ್‌ ಉರುಳಿದರೂ ದ್ರಾವಿಡ್‌ ಅಂಥವರು ಕಾಪಾಡುವ ಗೋಡೆಗಳಾಗುತ್ತಾರೆ. ಸಾಮಾನ್ಯ ಬೆಸ್ತರ ಮನೆಯಲ್ಲಿ ಹುಟ್ಟಿದ ಅಬ್ದುಲ್‌ ಕಲಾಂ ಪ್ರತಿ ಭಾರತೀಯನ ಕೃತಜ್ಞತೆಗೆ ಪಾತ್ರರಾಗುತ್ತಾರೆ.  

* ಸೂರ್ಯನಿರಲಿ ಅಥವಾ ಇನ್ನಿತರ ಯಾವುದೇ ಗ್ರಹಗಳಿರಲಿ ಅವು ಎಲ್ಲಾ ಸಂದರ್ಭಗಳಲ್ಲಿ ಒಳ್ಳೆಯವರೇ ಆಗಿರುವುದಿಲ್ಲ. ಹಾಗೆಯೇ ಕೆಟ್ಟದ್ದನ್ನು ಮಾಡಲು ಹೋಗುವುದೇ ಈ ಗ್ರಹಗಳ ಎಲ್ಲಾ ಕಾಲದ ಕೆಲಸವೂ ಅಲ್ಲ. ನಾವು ಹುಟ್ಟಿದ ವೇಳೆಯಲ್ಲಿನ ಜಾತಕ ಕುಂಡಲಿ ನಮ್ಮ ಹಿಂದಿನ ಜನ್ಮದಲ್ಲಿ ನಾವು ಶೇಖರಿಸಿಟ್ಟ ಬ್ಯಾಂಕ್‌ ಬ್ಯಾಲೆನ್ಸ್‌ನಂತೆ ಎನ್ನಬಹುದು.  ಅದು ಹೇಗಿದೆ, ಎಷ್ಟಿದೆ, ಅದು ಸಾತ್ವಿಕ ಬ್ಯಾಲೆನ್ಸೋ ಅಥವಾ ಕಪ್ಪುಹಣದ ಹಾಗೆ ಸಾತ್ವಿಕವಲ್ಲದ ಬ್ಯಾಲೆನ್ಸೋ ನಮ್ಮ ಕರ್ಮಫ‌ಲದ ಮೇಲೇ ಅವಲಂಬಿತ.

* ಅನಂತಶಾಸ್ತ್ರಿ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.