ಮಕ್ಕಳಲ್ಲಿ ಕಾಣಿಸುವ ಗ್ರಹಚಾರ ಅಂದರೆ ಏನು ಗೊತ್ತಾ?


Team Udayavani, Dec 30, 2017, 12:04 PM IST

55.jpg

ಕೆಲವು ಮಕ್ಕಳು ಹುಟ್ಟಿದಾಗಿನಿಂದಲೇ ತೀವ್ರವಾದ ಚೂಟಿತನ ಹೊಂದಿದ್ದು, ಚೆನ್ನಾಗಿಯೇ ಬೆಳೆಯುತ್ತಾರೆ. ಆದರೆ, ತದನಂತರ ಯಾವ್ಯಾವುದೋ ಕಾರಣಗಳಿಂದ ಕಾಯಿಲೆಗೆ ಬೀಳಬಹುದು. ಇನ್ನೂ ಹಲವು ಮಕ್ಕಳು ಹುಟ್ಟಿದಾಗಿನಿಂದಲೇ ತೀವ್ರತರವಾದ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ನಮ್ಮ ದೇಶದಲ್ಲಿ ಬಾಲ್ಯದ ಸಮಯದ ತಾಪತ್ರಯದಾಯಕವಾದ, ಕ್ರಿಯಾಶೀಲತೆಯ ಕೊರತೆಗಳನ್ನು ಬಾಲಾರಿಷ್ಟ ಎಂಬಹೆಸರಿನಿಂದ ಗುರುತಿಸಲ್ಪಡುತ್ತದೆ. ಪೌಷ್ಟಿಕಾಂಶದ ಕೊರತೆಯೋ, ಗರ್ಭಾವಸ್ಥೆಯಲ್ಲಿ ಬಿದ್ದ ಏಟು, ನೋವು, ಜಾರಿ ಬಿದ್ದದ್ದೇ ನೆಪವಾಗಿ ಭ್ರೂಣಾವಸ್ಥೆಯಲ್ಲಿಯೇ ಮಗು ಕೆಲವು ಕಗ್ಗಂಟುಗಳನ್ನು ಪಡೆದುಕೊಂಡು ಬಿಡುತ್ತವೆ. ಇದು ಬಿದ್ದ ಪೆಟ್ಟೋ, ಆಘಾತವೋ, ಪೌಷ್ಟಿಕಾಂಶದ ಕೊರತೆಯೋ ಇತ್ಯಾದಿಗಳ ಕಾರಣವೂ ಇರದೆಯೇಕೆ ಮಕ್ಕಳು ದುರ್ಬಲರಾಗಿ ಜನಿಸುತ್ತಾರೆ. ಸಶಕ್ತ ತಾಯಿ-ತಂದೆಯರ ಮಕ್ಕಳೂ ಕ್ರಿಯಾಶೀಲತೆ ಕಳಕೊಂಡು ಹುಟ್ಟುವುದುಂಟು. ಇದಕ್ಕೆ ವೈದ್ಯಕೀಯ ಲೋಕ ಅನೇಕಾನೇಕ ಕಾರಣಗಳನ್ನು ಕೊಡಬಹುದು. ಆದರೆ, ಬಂದಿಗೆ ಅಧೀನವಾದ ಬುಧ ಗ್ರಹವು, ಮಾನಸಿಕ ಸ್ತರದ ಮೇಲೆ ಅಲೆಗಳನ್ನು, ಸುಳಿಗಳನ್ನು ಎಬ್ಬಿಸಿ ಮನಶಾÏಂತಿಯನ್ನು ಕದಡುವ (ಉತ್ತಮರಾದರೆ ಮನೋಸ್ಥೈರ್ಯ ಮತ್ತು ಬೌದ್ಧಿಕ ಪ್ರಖರತೆಯನ್ನು ಗಟ್ಟಿಯಾಗಿ ಎತ್ತಿ ಹಿಡಿಯುತ್ತಾರೆ. ಅನೇಕ ಯಶಸ್ವಿ ವ್ಯಕ್ತಿಗಳ ಜಾತಕಗಳಲ್ಲಿ ಈ ಸಂಯೋಜನೆಯು ಕಾಣ ಸಿಗುತ್ತದೆ) ಚಂದ್ರನು ಪರಸ್ಪರರ ವೈಷಮ್ಯದ ಸಂಯೋಜನೆ ಹರಳುಗಟ್ಟಿದಾಗ ಬಾಲಾರಿಷ್ಟ ಗೋಚರವಾಗುತ್ತದೆ. 

ಮಂಕು ಕವಿದು ಸದಾ ನಿಷ್ಕ್ರಿಯರಾಗಿರುವ ಮಕ್ಕಳು
ಎಷ್ಟೋ ಮನೆಗಳಲ್ಲಿ ಮಂಕು ಕವಿದಂತೆ ಇರುವ ಮಕ್ಕಳು ಕಾಣಸಿಗುತ್ತಾರೆ. ಇವರ ಜಾತಕಗಳಲ್ಲಿ ನಿಸ್ಸಂದೇಹವಾಗಿ ಬುಧ ಮತ್ತು ಚಂದ್ರರ ವಿಷಮ ಸಂಯೋಜನೆಗಳು  (ಈ ಮಕ್ಕಳನ್ನು ಬಾಲಾರಿಷ್ಟದಿಂದ ಬಳಲುತ್ತಿರುವವರು ಎಂದು ಸಮಾಜ ಗುರುತಿಸುತ್ತದೆ) ಹರಳುಗಟ್ಟಿರುತ್ತವೆ. ಬುದ್ಧಿಮಾಂದ್ಯ ಎಂದರೆ ಹುಚ್ಚು ಹಿಡಿದ ಮಕ್ಕಳು ಎಂದು ಪರಿಗಣಿಸಲಾಗದು. ಆದರೆ, ಬಾಲ್ಯದಲ್ಲಿ ಇರಬೇಕಾದ ಲವಲವಿಕೆ, ಚೂಟಿತನ, ಹುರುಪು, ಉತ್ಸಾಹಗಳು ಅವರಲ್ಲಿ ಕಾಣುವುದಿಲ್ಲ. ಎಲ್ಲೋ ನೋಡುತ್ತಿರುವ ಮಕ್ಕಳು, ಸಪ್ಪೆ ಮೋರೆ ಹಾಕಿ ಬೆದರಿದಂತೆ ಕಾಣುವ ಮಕ್ಕಳು, ಲಗುಬಗೆಯಿಂದ ಹಿರಿಯರ ಸಹಾಯ ಪಡೆಯದೆ ಚಿನಕುರಳಿಯಂತೆ ಓಡಾಡುವ ಮಕ್ಕಳಾಗಿ ಇವರು ಇರುವುದಿಲ್ಲ. ಬೌದ್ಧಿ ಕ್ಷಮತೆ ಇರದೆಯೇ ಚಂದ್ರ ಮನೋಮಂಡಲವನ್ನು ಸಂವೇದನೆಗಳಿಗೆ (ಯುಕ್ತ ಅಥವಾ ಅಯುಕ್ತ) ದೂಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿಶ್ಚಲರಾಗುತ್ತಾರೆ. ಎಷ್ಟು ಜಡತ್ವ ಬಂದು ಬಿಡದಹುದೆಂದರೆ ಅನ್ಯರ ಮಾತು, ಬಾಯಿ, ತುಟಿ, ಚಲನೆಗಳನ್ನು ಗಮನಿಸದೆ, ಕೇಳಿಸಿಕೊಳ್ಳದೆ ಈ ಮಕ್ಕಳು ಯುಕ್ತ 
ವಯಸ್ಸಿನಲ್ಲಿ ಮಾತನಾಡಲು ಹಿಂದೇಟು ಹಾಕಬಹುದು. ಹೇಳಿದ್ದು ಅರ್ಥವಾದರೂ ತಮಗನಿಸಿದ್ದನ್ನು ವ್ಯಕ್ತಪಡಿಸಲು ಸಾಧ್ಯವಾಗದಿರುವ ಅಸಹನೀಯ ಸ್ಥಿತಿಗೆ ತಲುಪುತ್ತಾರೆ. ತೇಜಸ್ಸೇ ಇರದ ಕಣ್ಣುಗಳಲ್ಲಿ ಪೇಲವವಾಗಿ ಕಾಣಿಸಿಕೊಳ್ಳುತ್ತಾರೆ. ಅರಿವಿಗೇ ಬಾರದೆ ಬಾಯಲ್ಲಿ ಜೊಲ್ಲು ಸುರಿಯುವ ಸಾಧ್ಯತೆ ಕೂಡ ಇರುತ್ತದೆ. 

ಬುಧ ಗ್ರಹ ಮತ್ತು ಬೌದ್ಧಿಕ ಚಾತುರ್ಯ
 ಬಹುತೇಕವಾಗಿ  ಬೌದ್ಧಿಕವಾದ ಬೆಳವಣಿಗೆಗೆ ಬುಧ ಕಾರಣನಾಗಿರುತ್ತಾನೆ. ಸೂರ್ಯನ ಸಮೀಪದಲ್ಲಿಯೇ ಇವನ ಸಂಚಲನ ನಡೆಯುತ್ತಿರುತ್ತದೆ. ಹೀಗಾಗಿ ನಮ್ಮ ಆಷೇìಯ ವ್ಯಾಖ್ಯಾನಗಳು ಬುಧನನ್ನು ಸೂರ್ಯ  “ಪ್ರಿಯಕರೋ ವಿದ್ವಾನ್‌’ ಎಂದು ಕರೆದಿವೆ. ಸೂರ್ಯನ ಬಳಿ ಭಾರತೀಯ ಪರಂಪರೆ ಬದ್ಧಿಯನ್ನು ಪ್ರಚೋದಿಸು ಎಂದು ಪ್ರಾರ್ಥಿಸುತ್ತದೆ. ಉತ್ಪಾತ ರೂಪೀ ಜಗತಾಂಚಂದ್ವ ಪುತ್ರೋ ಮಹಾದ್ಯುತಿ’ ಎಂದು ಕೂಡ ನಮ್ಮ ಆಷೇìಯರ ಪ್ರಾರ್ಥನೆಗಳು ಬುಧನ ಸಲುವಾಗಿಯೇ ವಿಶೇಷವಾಗಿ ಉಲ್ಲೇಖೀಸಲ್ಪಟ್ಟಿದೆ. ಬುಧನ ಹೊಳಪು ರೂಪದಲ್ಲಿ ಅಪ್ರತಿಮ ಎಂಬ ವಿಶ್ಲೇಷಣೆಯನ್ನು ಭಾರತೀಯ ಶಾಸ್ತ್ರ, ಸ್ತೋತ್ರ, ಮೀಮಾಂಸೆಗಳಲ್ಲಿ ನಡೆಸುವಂತೆ ಮಾಡಿದೆ. ಬಂಧ ಮತ್ತು ಸೂರ್ಯರು ಒಂದೇ ಮನೆಯಲ್ಲಿ ಒಗ್ಗೂಡಿದ್ದರೆ ಬುಧಾದಿತ್ಯ ಯೋಗ ಎಂಬ ಹೆಸರಿನಲ್ಲಿ ಈ ಯೋಗವನ್ನು ಬಣ್ಣಿಸುತ್ತಾರೆ ಜಾತಕ ಶಾಸ್ತ್ರಜ್ಞರು. ಭಾರತೀಯ ಜ್ಯೋತಿಷ್ಯದಲ್ಲಿ ಈ ವಿಚಾರವನ್ನು ನಾವು ಮನಗಾಣುತ್ತೇವೆ. ಬುಧನು ಒಂದಿಷ್ಟು ಅಂತರವನ್ನು (ಕಟ್ಟ ಕಡೆಗೆ 9 ಡಿಗ್ರಿಗಳಷ್ಟನ್ನಾದರೂ) ಸೂರ್ಯನಿಂದ ಕಾದುಕೊಳ್ಳದಿದ್ದರೆ ಸೂರ್ಯನ ಪ್ರಭೆಯ ಎದುರು ಬುಧ ನಿಸ್ತೇಜನಾಗುತ್ತಾನೆ. ಇದನ್ನು ಅಸ್ತಂಗತ ದೋಷ ಎಂಬುದಾಗಿ ಭಾರತೀಯ ಜ್ಯೋತಿಷ್ಯ ಗುರುತಿಸುತ್ತದೆ. ಬುಧಾದಿತ್ಯ ಯೋಗದ ಬಗ್ಗೆ ಮುಂದೊಂದು ದಿನ ಇದೇ ಅಂಕಣದಲ್ಲಿ ಚರ್ಚಿಸೋಣ. ಅಸ್ತಂಗತ ದೋಷದ ಒಳಿತು, ಕೆಡುಕುಗಳ ಬಗೆಗೆ ಸೂಕ್ತವಾದ ವಿವರಗಳ ಬಗ್ಗೆಯೂ ಇನ್ನೊಮ್ಮೆ ಚರ್ಚಿಸೋಣ. 

ಸದ್ಯ ಹೇಳಬೇಕಾದ್ದು ವಿದ್ವತ್ತನ್ನು ಕೊಡಬೇಕಾದ ಬುಧ, ವಿಷಮ ಸಂಯೋಜನೆಗಳ ಸಂದರ್ಭದಲ್ಲಿ (ದುಷ್ಟತನವನ್ನೂ, ಮನೆಹಾಳು ಬುದ್ಧಿಯನ್ನೂ ಶನಿ, ರಾಹು ಹಾಗೂ ಕೇತುಗಳೊಂದಿಗೆ ಕೂಡಿದ್ದಾಗ ಕೊಡಬಹುದು) ಮಂಕುತನ ಕವಿಸುತ್ತಾನೆ. ಧೀ ಶಕ್ತಿಗೆ, ಚಾತುರ್ಯಕ್ಕೆ ಬೇಕಾದ ಸಂವೇದನೆಗಳು ಸೊರಗುತ್ತವೆ. ಚಂದ್ರನೂ ದುರ್ಬಲವಾಗಿದ್ದರೆ ಬುಧನ ಉಪಟಳದಲ್ಲಿ ಇನ್ನಿಷ್ಟು ಗಾಢವಾದ ಮೊನಚು ಉದ್ಭವಿಸುತ್ತದೆ. ಇದರಿಂದ ಬಾಲಾರಿಷ್ಟದ ಬಿಕ್ಕಟ್ಟುಗಳು ಉಲ್ಬಣ. ಚಂದ್ರನಿಗೆ ಮನಸ್ಸನ್ನು ನಿಗ್ರಹಿಸುವ ಧೃಡತೆ ಒದಗದು.

ಚಂದ್ರ ಮತ್ತು ಯೋಚನಾ ಶಕ್ತಿ
ಚಂದ್ರ ನೋಡಲು ಗಾತ್ರದಲ್ಲಿ ಪುಟ್ಟ ಬಟಾಣಿ ಕಾಳು. (ಸೂರ್ಯ ಮಂಡಲದ ಇತರ ಗ್ರಹಗಳನ್ನು ಗಮನಿಸಿದಾಗ) ಆದರೂ ಆತನ ಭೂಮಿಯ ಅತಿ ಹತ್ತರವೇ ನೆರವೇರಿರುವ ಸಾಮೀಪ್ಯದಿಂದಾಗಿ ಭೂಮಿಯ ಮೇಲೆ ಅಗಾಧ ಪರಿಣಾಮ. ಬರೀ ಮನುಷ್ಯನ ಮೇಲಲ್ಲ. ಭೂಮಿಯ ಸರ್ವ ಜೀವಿಗಳ ಮೇಲೂ ಅವನ ಪ್ರಭಾವವಿದೆ. ಸೂರ್ಯನಿಂದ ಪಡೆದ ಬೆಳಕನ್ನು ಹೊರಹೊಮ್ಮಿಸುವ ವಿಧಾನದಲ್ಲಿ ಅವನು ಯೋಚನಾಶಕ್ತಿಯನ್ನು ಪ್ರವಹಿಸುವ ಮೆದುಳಿನ ಮೇಲೆ ನಿಯಂತ್ರಣ ಪಡೆಯಲು ಕಾರಣನಾಗುತ್ತಾನೆ. ಹೀಗಾಗಿಯೇ ಅವನ ಶೀತಲ, ಬೆಳ್ಳಿಯ ಬೆಳಕಿನ ಸೌರಭಕ್ಕಾಗಿ ನಮ್ಮ ಶಾಸ್ತ್ರ ಅವನನ್ನು ರೋಹಿಣೇಶ ಎಂದು ಕರೆದಿದೆ. ರೋಹಿಣಿ ನಕ್ಷತ್ರ ಅವನ ಆಧಿಪತ್ಯಕ್ಕೆ ಬರುತ್ತದೆ. ರೋಹಿಣಿ ನಕ್ಷತ್ರವು ಪ್ರಧಾನವಾಗಿ ಸ್ತ್ರೀ ಗುಣಧರ್ಮಗಳನ್ನು (ನಮ್ಮ ಆಷೇìಯ ಪರಂಪರೆ) ಹೊಂದಿದೆ ಎಂಬುದು ನಂಬಿಕೆ. ಈ ನಕ್ಷತ್ರದ ವಿಸ್ತಾರವೇ (ಪ್ರಭಾವ ಎಂಬುದಾಗಿ ಗಮನಿಸಬೇಕು ನಾವಿದನ್ನು) ಚಂದ್ರ ಉಚ್ಚನಾಗಿ ಪರಮಾಧಿಕ ಬಲ ಪಡೆಯುತ್ತಾನೆ. ಹೀಗಾಗಿ ಚಂದ್ರ ರೋಹಿಣಿಯ ಅಧೀಶ. ಈತ 
ಸುಧಾಮೂರ್ತಿ, ಸುಧಾ ಗಾತ್ರ, ಸುಧಾಶನನೂ ಹೌದು. ಅಂದರೆ, ಸೊಗಸಾದ ಸುಧೆಗೆ ಸಮಾನವಾದ ಸುಹಾಸಕತೆ, ಸಂಪನ್ನತೆ (ಸುಧೆ ಎಂದರೆ ಜೇನು ಎಂಬುದು ಸಾಮಾನ್ಯ ಅರ್ಥ) ಇತ್ಯಾದಿಗಳನ್ನು ಚಂದ್ರ ಪ್ರಚಂಡ ಬಲಯುತನಾದಾಗ ಒದಗಿಸುತ್ತಾನೆ. ಆದರೆ ಚಂದ್ರ ದುಷ್ಟನಾಗುವುದು ದುರ್ಬಲನಾದಾಗ.

ಶನೈಶ್ಚರ, ರಾಹು, ಕೇತು, ಕುಜ, ಸೂರ್ಯರ ಸಂಪರ್ಕ ಬಂದಾಗ ಕ್ರಮವಾಗಿ ವಿಳಂಬವಾಗುವ ಕೆಲಸಗಳ ಸಂದರ್ಭದಲ್ಲಿ ಮೈ ಪರಚಿಕೊಳ್ಳುವ ದುರ್ಭರತೆ, ಮನೋ ವೇದಿಕೆಯಲ್ಲಿ ಉನ್ಮಾದ, ಅಸಹನೆಯ ಮಾತು, ಧನನಷ್ಟ, ಬುದ್ಧಿ ವಿಕಲ್ಪಗಳಿಗೆ ಕಾರಣನಾಗುತ್ತಾನೆ. ಬಾಲಾರಿಷ್ಟದ ಸಂದರ್ಭದಲ್ಲಿ ಬುಧನೂ, ಚಂದ್ರನೂ, ತಾಳಮೇಳ ಕಳೆದುಕೊಂಡು ಕ್ರಿಯಾಶೀಲತೆಯಿಂದ ವಿಮುಖವಾಗುವ ಕ್ರಿಯಾಶೂನ್ಯತೆ, ಕಾಂತಿಮಯ-ತೇಜೋಮಯ ವ್ಯಕ್ತಿತ್ವವನ್ನು ಒದಗಿಸದಿರುವ ದುರ್ಭರತೆಗಳಿಗೆ ಕಾರಣರಾಗುತ್ತಾರೆ. ಯಾವ ಧನಬಲವಿರಲಿ, ತಿಂದುಂಡು ಸುಖೀಸುವ ಅವಕಾಶಗಳಿದ್ದರೂ ದೇಹದಲ್ಲಿ ಚಟುವಟಿಕೆಗಳಿಲ್ಲದೆ ಮಕ್ಕಳಿಗೆ ಬಾಲಾರಿಷ್ಟ ಕಾಡುತ್ತದೆ. ಬಾಲ್ಯದ ಅನಿಷ್ಟ (ಅನಿಷ್ಟ ಎಂದರೆ ತೊಡಕು, ಅಭಾವ, ಪರದಾಟ, ದೈನೇಸಿ ಸ್ಥಿತಿ ಎಂದು ಅರ್ಥ ಕೊಡಬಹುದು. ಆದರೆ ಈ ಅರ್ಥಗಳನ್ನೂ ಮೀರಿ ಇದು ಕೊರತೆಗಳನ್ನು ವಿಸ್ತರಿಸುತ್ತದೆ) ಮಾತುಗಳನ್ನು ತೊದಲಿಸಬಹುದು, ನಡೆದಾಡಲು ವಿಳಂಬ ಮಾಡಬಹುದು, ಶಾಲೆಗೆ ಸೇರಿಸಿದರೂ ಅನ್ಯ ಮಕ್ಕಳಂತೆ ಬೇಗ ಕಲಿಯಲು ಸಾಧ್ಯವಾಗದೇ ಇರಬಹುದು. ಮೆದುಳಿಗೂ, ಬೆನ್ನು ಹುರಿಯ ನರತಂತುಜಾಲಗಳಿಗೂ ಹೊಂದಾಣಿಕೆ ಇರದೇ ಹೋಗಿ ನಿಜಕ್ಕೂ ದಾರುಣವಾದ ಸ್ಥಿತಿಗತಿ ಎದುರಾಗಬಹುದು. 

ಈ ಸ್ಥಿತಿಯಿಂದ ಹೊರಬರಲು ಸಾಧ್ಯವೇ?
ಹೊರಬರಲು ಸಾಧ್ಯವಾಗುವಂತೆ ಕ್ರಮೇಣ ಅನ್ಯ ಗ್ರಹಗಳ ಪ್ರಭಾವದಿಂದಾಗಿ ಉತ್ತಮ ಸ್ಥಿತಿಯ ಸಂಪನ್ನ ಆವರಣಗಳು ತಮ್ಮ ಸುಹಾಸಕತೆಯನ್ನು ಬೀರಬಲ್ಲವು. ಜಾತಕದ ಉಳಿದ ವಿಚಾರಗಳು ಎಷ್ಟು ಗಟ್ಟಿಯಾಗಿದೆ ಎಂಬುದರ ಮೇಲೆ ಇವು ತಿಳಿಯಬೇಕು. ರಾಹು, ಕೇತು, ಕುಜ, ಶನೈಶ್ಚರ, ಸೂರ್ಯರಂಥ ಅಶುಭ ಗ್ರಹಗಳು ದುರ್ದೈವವಶಾತ್‌ ಹಲವು ಸಲ ನಿರಂತರ ವೈಕಲ್ಯಕ್ಕೆ ಕಾರಣರಾಗುತ್ತಾರೆ.

ಆದರೆ, ದುರ್ಗಾ, ಗಣಪತಿ, ದತ್ತಾತ್ರೇಯ, ಮಾರುತಿ ಅಥವಾ ರಾಮರಕ್ಷ (ಸ್ತುತಿ, ಆರಾಧನೆ, ಶಕ್ತಿ ಪೂಜಾ ಕೈಂಕರ್ಯದ ಧಾತುಗಳು) ಪರಿಕ್ರಮಗಳು ಒಂದು ವಿಧವಾದ ಪವಾಡಗಳನ್ನು ನಿರ್ಮಿಸುವ ಸಂಜೀವಿನಿಗಳಾಗಿವೆ. ಆಧುನಿಕ ಚಿಕಿತ್ಸೆಗಳು, ಆರೋಗ್ಯ ಸಂವರ್ಧನ ವಿಧಾನಗಳು ಸೋತಲ್ಲಿ ಈ ಆಷೇìಯ ಶಕ್ತಿಗಳು ಪ್ರಯೋಜನಕ್ಕೆ ಒದಗಿದ ಉದಾಹರಣೆಗಳಿವೆ.  

ಅನಂತ ಶಾಸ್ತ್ರಿ  

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.