ಬಿಕಾನೇರ್‌ನಲ್ಲಿ ಕಂಡ ಬೆರಗು


Team Udayavani, Mar 10, 2018, 11:54 AM IST

30.jpg

ರಾಜಾಸ್ಥಾನ ಪ್ರವಾಸಕ್ಕೆ ಹೋಗುವವರು ಬಿಕಾನೇರ್‌ಗೆ ಹೋಗೋದು ಕಡಿಮೆಯೇ. ಅಲ್ಲಿ ಅಂಥ ಆಕರ್ಷಣೆಗಳೇನೂ ಇಲ್ಲವಾದರೂ, ನಾವು ಅಲ್ಲಿನ ಮುಖ್ಯ ಸ್ಥಳವಾದ ನ್ಯಾಷನಲ… ರಿಸರ್ಚ್‌ ಸೆಂಟರ್‌ ಆನ್‌ ಕ್ಯಾಮೆಲ್‌ (ಒಂಟೆ ಸಂಶೋಧನಾ ಕೇಂದ್ರ)ಕ್ಕೆ ಭೇಟಿ ನೀಡಿದಾಗ ನಮ್ಮ ಪ್ರವಾಸಕ್ಕೊಂದು ಹೆಚ್ಚಿನ ಗರಿ ಮೂಡಿದ ಹಾಗನ್ನಿಸಿತು. ಏಕೆಂದರೆ, ಇಡೀ ಏಷಿಯಾದಲ್ಲೇ  ಅತಿದೊಡ್ಡ ಒಂಟೆ ಸಂತಾನೋತ್ಪತ್ತಿ ಕೇಂದ್ರ ಇದು. ಪಟ್ಟಣದಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ಈ ಸಂಸ್ಥೆ ಕೇಂದ್ರ ಸರಕಾರದ ಅಧೀನದಲ್ಲಿದ್ದು, 1984 ರಲ್ಲಿ ಸ್ಥಾಪನೆಯಾಗಿದೆ.

    ಹೆಚ್ಚು ಉಷ್ಣತೆಯ ಈ ಪ್ರದೇಶದಲ್ಲಿ, ಉರಿಬಿಸಿಲಿನ ಮಧ್ಯಾಹ್ನ ಮರುಭೂಮಿಯಿಂದ ಒಂಟೆಗಳು ಹಿಂತಿರುಗುತ್ತವಾದ್ದರಿಂದ ಆಗಷ್ಟೇ ಫಾರ್ಮ್ ಒಳಗೆ ಪ್ರವೇಶ. ಮೊದಲಿಗೆ ಕಾಣಸಿಗುವ ಮ್ಯೂಸಿಯಂನಲ್ಲಿ ಒಂಟೆ ಮತ್ತು ಆ ಸಂಸ್ಥೆಗೆ ಸಂಬಂಧಿಸಿದ ವಿವರಗಳು, ಚಿತ್ರಗಳು, ಒಂಟೆ ಉತ್ಪನ್ನಗಳು ಎಲ್ಲದರ ಮಾಹಿತಿಯಿದೆ. ಪಕ್ಕದಲ್ಲೇ  ಇರುವ ಒಂದೆರಡು ಅಂಗಡಿಗಳಲ್ಲಿ ಒಂಟೆಗಳ ಚರ್ಮ,ಮೂಳೆ, ಕೂದಲು, ಹಲ್ಲುಗಳಿಂದ ಮಾಡಿದ ಉತ್ಪನ್ನಗಳಾದ ಕೋಟ…,ಜಾಕೆಟ್‌, ಕಾಪೆìಟ್‌, ಟೋಪಿ,ರಜಾಯಿ,ಹಗ್ಗ,ಚೀಲ,ಪರ್ಸ್‌,ಬೆಲ್ಟ…,ಚಪ್ಪಲಿ ಮುಂತಾದ ವಸ್ತುಗಳು ಸಿಗುತ್ತವೆ. ಅದನ್ನು ದಾಟಿ ಮುಂದೆ ಹೋಗುತ್ತಿದ್ದಂತೆ ಕಣ್ಣಿಗೆ ಬೀಳುವುದು ಒಂಟೆಗಳು, ಕೇವಲ ಒಂಟೆಗಳು..

     ಒಂದು ಕಡೆ ವಂಶಾಭಿವೃಧಿœಗಾಗಿಯೇ ವೈದ್ಯರ ನಿಗಾದಲ್ಲಿರುವ ಒಂಟೆಗಳಿದ್ದರೆ, ಮತ್ತೂಂದು ಕಡೆ ಮರಿ ಒಂಟೆಗಳಿವೆ. ಇನ್ನೊಂದೆಡೆ ಹಾಲು ಕರೆಯುವ ಒಂಟೆಗಳು, ಮಗದೊಂದೆಡೆ ಉಳಿದೆಲ್ಲ ಒಂಟೆಗಳ ಸಾಲುಸಾಲು…ನೂರಾರು ಒಂಟೆಗಳು ಒಂದೇ ಜಾಗದಲ್ಲಿ ಕಾಣಸಿಗುವುದು ಇಲ್ಲಿಯೇ. ಅದರಲ್ಲೂ ವಿವಿಧ ಬಣ್ಣ, ಜಾತಿಯ, ಆಕಾರ, ಗಾತ್ರದ ಒಂಟೆಗಳು..ಅತಿ ಉಷ್ಣತೆಯ ಮರಳುಗಾಡಿನಲ್ಲೂ ವಯಸ್ಕ ಒಂಟೆಯೊಂದು ಸರಾಸರಿ ನೂರು ಕಿ.ಮೀ.ಗಳಷ್ಟು ದೂರವನ್ನು ಗಂಟೆಗೆ ಹದಿನೈದು ಮೈಲುಗಳಂತೆ ಕ್ರಮಿಸಬಲ್ಲದು. 6-7 ಕ್ವಿಂಟಾಲ… ತೂಗುವ ಮರಳುಗಾಡಿನ ಈ  ಹಡಗು, ನಾವು ನಡೆಯಲೂ ಕಷ್ಟಪಡುವ ಮರಳಿನಲ್ಲಿ, ಸುಮಾರು 20 ಕ್ವಿಂಟಾಲ… ಭಾರವನ್ನು ಹೊತ್ತು ಸುಮಾರು 20 ಕಿ.ಮೀ.ಗಳನ್ನು 4-5 ಗಂಟೆಗಳಲ್ಲಿ ತಲುಪಬಲ್ಲದು ಎಂದರೆ ಆಶ್ಚರ್ಯವಾಗಬಹುದಲ್ಲವೇ? 

     ಒಂಟೆಗಳಲ್ಲಿ ಮುಖ್ಯವಾಗಿ ನಾಲ್ಕು ವಿಧಗಳನ್ನು ನಮ್ಮ ಗೈಡ್‌ ತೋರಿಸಿದರು. ಇಲ್ಲಿನ ಸ್ಥಳೀಯ ತಳಿ ಬಿಕಾನೇರಿ ಒಂಟೆ ಅತ್ಯಂತ ಸದೃಢ ಮತ್ತು ಆಕರ್ಷಕ ಮೈಕಟ್ಟನ್ನು ಹೊಂದಿದೆ. ಇವುಗಳನ್ನು ಹಾಲಿನ ಉತ್ಪಾದನೆಗೆ ಹೆಚ್ಚಾಗಿ ಸಾಕಲಾಗುತ್ತವೆ. ಇವು ಕಂದು/ಕಪ್ಪು ಬಣ್ಣವನ್ನು ಹೊಂದಿವೆ.  ಕಣ್ಣಿನಭಾಗ, ಹುಬ್ಬು, ಕಿವಿಗಳ ಮೇಲೆ ಕೂದಲು ದಟ್ಟವಾಗಿರುತ್ತದೆ. ದುಂಡನೆಯ ಆಕಾರ,ದಪ್ಪ ಕತ್ತು ಇದರ ವಿಶೇಷ. 
ಎಂಥ ನೀರಿನ ಅಭಾವದ ಕಾಲದಲ್ಲೂ ಬಾಳಿ ಬದುಕುವಂಥ ಶಕ್ತಿ ಇವುಗಳದ್ದು. ಮಧ್ಯಮ ಗಾತ್ರದ ಜೈಸಲ್ಮೇರಿ ಒಂಟೆಗಳು ತಿಳಿ ಕಂದು ಬಣ್ಣ ಹೊಂದಿರುತ್ತವೆ. ಸಣ್ಣದಾದ, ಉದ್ದವಾದ ಕಾಲುಗಳು, ಚಿಕ್ಕ ತಲೆ, ಬಾಯಿ, ತೆಳು ಕೂದಲು ಇವುಗಳ ವಿಶೇಷ. ಇವು ವೇಗವಾಗಿ ಓಡಬಲ್ಲವು.
    
 ಇನ್ನು ಗುಜರಾತಿ ತಳಿಯಾದ ಕಚ್ಚಿ ಒಂಟೆ ತೆಳು ಅಥವಾ ಗಾಢ ಕಂದು ಬಣ್ಣದಿಂದ ಕೂಡಿರುತ್ತದೆ. ಮಧ್ಯಮ ಗಾತ್ರದ, ಚಿಕ್ಕ ಆದರೆ ಶಕ್ತಿಯುತ ಕಾಲುಗಳನ್ನು ಪಡೆದಿದೆ. ಕಣ್ಣು, ಕಿವಿಯ ಸುತ್ತ ಶೇವ್‌ ಮಾಡಿದಂತೆ  ನೀಟಾಗಿ ಕಾಣುತ್ತವೆ. ಮತ್ತೂಂದು ವಿಧ ಮಾದರಿ ಒಂಟೆಗಳು. ಇವನ್ನೂ ಸಹ ಹಾಲು ಉತ್ಪಾದನೆಗೆ ಬಳಸಲಾಗುತ್ತದೆ. ಇದು ಬಿಳಿ/ತೆಳು ಕಂದು ಬಣ್ಣ ಹೊಂದಿದ್ದು, ದಪ್ಪ ಬಾಲ ಇದಕ್ಕಿದೆ. ಎತ್ತರದ ಪ್ರದೇಶಗಳನ್ನೇರಲು, ಭಾರ ಹೊರಲು, ಪ್ರವಾಸಿಗರನ್ನು ಹೊತ್ತೂಯ್ಯುವುದಕ್ಕಾಗಿಯೂ ಇವುಗಳನ್ನು ಬಳಸುವುದುಂಟು.

     ಒಂಟೆಗಳ ಬಗೆಗಿನ ಸಂಶೋಧನೆಗಾಗಿಯೇ ಸ್ಥಾಪಿತವಾದ ಈ ಕೇಂದ್ರದಲ್ಲಿ ಒಂಟೆಗಳ ಸಂತಾನೋತ್ಪತ್ತಿ, ಜೆನೆಟಿಕ್‌ ಗುಣಗಳು, ಶೀಘ್ರ ಬೆಳವಣಿಗೆ, ಅಭಿವೃಧಿœಗಾಗಿ ಸಂಶೋಧನೆಗಳನ್ನು ನಡೆಸಲಾಗುತ್ತದೆ. ವಾತಾವರಣದ ಪ್ರಭಾವ, ಆಹಾರ, ಪೌಷ್ಟಿಕತೆಯ ಬಗೆಗಿನ ಅಧ್ಯಯನವೂ ಇಲ್ಲಿ ನಡೆಯುತ್ತದೆ. ಒಂಟೆಗಳ ಬೆಳವಣಿಗೆ, ಗರ್ಭಧಾರಣೆಯ ಸಮಯದಲ್ಲಿ ಅವುಗಳÇÉಾಗುವ ದೈಹಿಕ, ರಾಸಾಯನಿಕ, ಹಾರ್ಮೋನ್‌ ಬದಲಾವಣೆಗಳ ಬಗ್ಗೆ ಸಂಶೋಧನೆ ನಡೆಯುತ್ತದೆ. ಒಂದು ಮತ್ತು ಎರಡು ಡುಬ್ಬಗಳ ಒಂಟೆಗಳ ಬೆಳವಣಿಗೆ, ಆರೋಗ್ಯದ ಕಾಳಜಿ, ರೋಗರುಜಿನಗಳ ಪತ್ತೆ ಮತ್ತು ಪರಿಹಾರ ಇದರ ಮುಖ್ಯ ಗುರಿ. ಹೊಸ ತಳಿಗಳ ಅಭಿವೃಧಿœ, ಹಾಲು ಉತ್ಪಾದನೆಯಲ್ಲಿ ಹೆಚ್ಚಳ ಮತ್ತು ಹಾಲಿನ ಉತ್ಪನ್ನಗಳ ಹೊಸ ಆವಿಷ್ಕಾರಗಳು ಈ ಸಂಸ್ಥೆಯ ಹಿರಿಮೆ. 

    ಒಂಟೆಗಳನ್ನು ಗೃಹೋಪಯೋಗಿ ಉತ್ಪನ್ನಗಳಿಗಾಗಿ ಅಷ್ಟೇ ಅಲ್ಲದೇ, ಅತ್ಯಂತ ಪೌಷ್ಟಿಕವಾದ ಹಾಲಿಗಾಗಿಯೂ ಅವಲಂಬಿಸಲಾಗಿದೆ.  ಮರಳುಗಾಡಿನಲ್ಲಿ ಭಾರ ಹೊರಲು, ಮತ್ತು  ಮಾನವ ಸಾರಿಗೆಯಾಗಿಯೂ ಇದನ್ನೇ ಅವಲಂಬಿಸಿದ್ದಾರೆ. ವ್ಯವಸಾಯದಲ್ಲಿಯೂ ಒಂಟೆಯನ್ನು ಬಳಸುವ ರೂಢಿಯೂ ಇದೆ. ಮತ್ತೂಂದು ವಿಶೇಷವೆಂದರೆ, ಸೈನ್ಯದಲ್ಲಿ ಒಂಟೆಗಳು ದೇಶಸೇವೆ ಮಾಡುತ್ತಿರುವುದು… ಒಟ್ಟಿನಲ್ಲಿ ಅಪರೂಪದ ಪ್ರಾಣಿಯ ಅಭಿವೃದ್ಧಿಗಾಗಿ ಮೀಸಲಾಗಿರುವ ಅಪರೂಪದ ಈ ಜಾಗಕ್ಕೆ ಭೇಟಿ ಕೊಡುವ ಅದೃಷ್ಟ ನಮ್ಮದಾಯಿತು. ವಾಪಸ್‌ ಬರುವಾಗ ಒಂಟೆಹಾಲಿನ ರುಚಿಕರ ಐಸ್‌ಕ್ರೀಂ ಸವಿದು ಬಾಯಾರಿಕೆಯಿಂದ ಸುಧಾರಿಸಿಕೊಂಡೆವು.

ಅಮೃತ ಮೆಹಂದಳೆ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.