ರಾಜಕೀಯದ ಯಶಸ್ಸಿಗೆ ಸೂರ್ಯ ಸಿದ್ಧಿ ಅವಶ್ಯವೇ?


Team Udayavani, Apr 21, 2018, 3:25 AM IST

1-aa.jpg

  ಸೂರ್ಯನು ಸಿಂಹ ರಾಶಿಯ ಯಜಮಾನನಾಗಿದ್ದಾನೆ. ಕಾಲ ಪುರುಷನಿಗೆ ಸಿಂಹರಾಶಿಯ ಪೂರ್ವ ಪುಣ್ಯ ರಾಶಿಯಾಗಿದೆ. ಭಾವವಾಗಿದೆ. ಅಂದರೆ ಜಗತ್ಪಾಲಕನ ಜನ್ಮಜನ್ಮಾಂತರ ಪದರುಗಳು ಸಿಂಹ ರಾಶಿಯಲ್ಲಿ ಅಡಕವಾಗಿದೆ ಎಂದರ್ಥ.  ಜಗತ್ಪಾಲಕ ಎಂದರೆ ಯಾರು? ನಿರ್ದಿಷ್ಟವಾಗಿ ಈ ಪ್ರಶ್ನೆಯನ್ನು ಧಾರ್ಮಿಕ ನೆಲೆಯಲ್ಲಿ ವಿವರಿಸಬಹುದು. ಅಧ್ಯಾತ್ಮಿಕ ಚಿಂತನೆಯಲ್ಲಿ ಒಂದು ಮಟ್ಟದ ಹೆಚ್ಚಿನ ತರ್ಕ ಹಾಗೂ ವಾದ ಮಂಡನೆಯ ಮೂಲಕ ಅದನ್ನು ನಿರೂಪಿಸಬಹುದು. ಆದರೆ ಜಗತ್ಪಾಲಕ ಎಂಬ ಶಬ್ದವನ್ನು ದೃಷ್ಟಾಂತದ ಮೂಲಕ, ಅಂದರೆ ನಮ್ಮ ಮನದೊಳಗಿನ ಮಂಥನದ ಮೂಲಕ, ಪರಮೋಚ್ಚ ಅರಿವಿನ ಮೂಲಕ ಗ್ರಹಿಸಬಹುದಾದರೆ ಜಗತ್ಪಾಲಕನಿಗೆ ರೂಪವಿಲ್ಲ, ಆಕಾರವಿಲ್ಲ. ಆತ ನಿರ್ಗುಣನೂ, ನಿರ್ವೀಶೇಷನೂ ಆಗಿದ್ದಾನೆ ಎಂಬ ಪ್ರತಿಪಾದನೆ ಮಾಡುವಾಗಲೇ “ಆಗಿದ್ದಾಳೆ’ ಎಂಬುದನ್ನೂ ಗ್ರಹಿಸಬೇಕು. ಏಕೆಂದರೆ ಈ ಶಕ್ತಿಯಲ್ಲಿ ಪುರುಷತ್ವವೂ, ಸ್ತ್ರೀತ್ವದ ಪ್ರಕೃತಿ ಸ್ವರೂಪವೂ ಹಾಸು ಹೊಕ್ಕಾಗಿ ಸೇರಿಕೊಂಡಿದೆ. ಹೀಗಾಗಿ, ಲಕ್ಷಗಟ್ಟಲೆ ವರ್ಷಗಳ ಹಿಂದೆ ಸ್ತ್ರೀ, ಪುರುಷ ಎಂಬುದರ ಭೇದವಿರಲಿಲ್ಲ. ಮಾನಸ ( ಮನಸ್ಸಿನ ನಿರ್ಧಾರದ ಮೂಲಕ) ಪುತ್ರರು, ಮಾನಸ ಪುತ್ರಿಯರು ಬ್ರಹ್ಮನಿಗೆ ಇದ್ದರು ಎಂದು ನಾವು ಕಥೆ ಕೇಳಿದ್ದೇವೆ. ನಾರದ, ಲಕ್ಷಿ$¾à, ಭೃಗು ಮಹರ್ಷಿಯೂ ಸೇರಿದಂತೆ ಇಂದು ನಾವೇನು ಸಪ್ತರ್ಷಿ ಮಂಡಲು ಎಂಬ ನಕ್ಷತ್ರಗಳ ಒಕ್ಕೂಟವನ್ನು ರಾತ್ರಿ ಹೊತ್ತು ಗಗನದ ವೇದಿಕೆಯಲ್ಲಿ ಗಮನಿಸುತ್ತೇವೆಯೋ ಅವು ಎಂದರೆ ಸಪ್ತರ್ಷಿಗಳು, ನಾರದ, ಶಾರದೆ ಮುಂತಾದವರು ಬ್ರಹ್ಮನ ಮಾನಸ ಸಂಕಲ್ಪ ಮಾತ್ರದಿಂದ ಜನಿಸಿದವರು. ಹಾಗಾದರೆ ಬ್ರಹ್ಮನ ಉದಯ ಹೇಗಾಯ್ತು? ಇವನ ಉದಯ ಹೇಗಾಯ್ತು ಅಂದಿರಾ? ಅವನ ಉದಯ ಮಾಯೆಯ ಫ‌ಲವಾದ ನ್ಪೋಟದಿಂದ ಆಗಿರಬಹುದ. ಅಥವಾ ಅಗಾಧ ಶಕ್ತಿ ಸಂಚಯನ ತಂತಾನೇ ಆದ ಒಂದು ದಿವ್ಯ, ಅನೂಹ್ಯ, ಅನನ್ಯ, ಚೇತೋಹಾರಿ ಮಾಯೆಯಿಂದ ಸಂಭವಿಸಿರಬಹುದು. 

 ತದನಂತರ, ಮಾಯೆಯ ಮುಂಚೆ
 ಈ ಮೇಲಿನ ವಿವರಗಳನ್ನು ಗಮನಿಸುವುದಾದರೆ ಆಧುನಿಕ ವಿಜ್ಞಾನ ಪ್ರತಿ ಪಾದಿಸುವ Bigbang Theory)  ನಾವು ಭಾರತೀಯರ ಮಾಯೆಯ ಸಂಬಂಧಕ್ಕೆ ತಳುಕು ಹಾಕಿಕೊಂಡು ಉಂಟಾದ ಮಹಾನ್ಪೋಟದಿಂದ ಎಂಬ ಕಥೆಯಂತೆ ಹೇಳಲ್ಪಟ್ಟ ಆದರೆ ವೈಜ್ಞಾನಿಕವೇ ಆದ ರೀತಿಯಲ್ಲಿ ವಿಶ್ವದ ಹುಟ್ಟು ಸಂಭವಿಸಿದೆ ಎಂಬುದನ್ನು ನಂಬಬಹುದು.

  ಅಂದರೆ, ನಮ್ಮ ಮಹರ್ಷಿಗಳು ದೃಷ್ಟಾಂತದ ಮೂಲಕವಾಗಿ ಗ್ರಹಿಸಿದ್ದನ್ನು, ಆಧುನಿಕ ವಿಜ್ಞಾನ, ಸಿದ್ಧಾಂತದ ಮೂಲಕ ಹೇಳಲು ಪ್ರಯತ್ನಿಸುತ್ತಿದೆ. ನಾವು ಸೃಷ್ಟಿಯ ಪ್ರತಿ ಘಟ್ಟಗಳನ್ನೂ ಕಥೆಯ ಮೂಲಕ, ಪುರಾಣಗಳ ಮೂಲಕ ದಾಖಲಿಸಿ ಹೇಳಿದ್ದೇವೆ. ಇಲ್ಲಿ ರಕ್ತ, ಮಾಂಸ, ಜೀನ್‌, ವರ್ಣ, ವರ್ಣ ಬೇಧ, ಜ್ಞಾನ, ಸಂಪತ್ತು, ಶ್ರಮ ಇತ್ಯಾದಿಗಳ ಬಗ್ಗೆ, ಏಕ ಕೋಶ ಜೀವಿ ತನ್ನ ಚಲನವಲನಗಳನ್ನು ಕಂಡುಕೊಳ್ಳುವತ್ತ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಸಸ್ಯ ಮೂಲಗಳ ಬಗ್ಗೆ ( ಏಕ ಕೋಶ ಜೀವಿಗಳ ಆಹಾರ ಏನು ಎಂಬುದನ್ನೂ ವಿವರಿಸುತ್ತ ನಮ್ಮ ಭಾರತೀಯ ಮೀಮಾಂಸೆ ನೀರನ್ನು ವಿವಿಧ ನೆಲೆಯಲ್ಲಿ ವಿವರಿಸುವುದರ ಮೂಲಕ ) ಹೇಳುತ್ತ ವಿಕಾಸವಾದವನ್ನು, ಜೀವಶಾಸ್ತ್ರವನ್ನು ನಿಖರವಾಗಿ ಪ್ರತಿಪಾದಿಸುತ್ತದೆ. ಸಸ್ಯಗಳು, ಮರಗಿಡಗಳು ತಮ್ಮೊಳಗಿನ ಸಾರದಿಂದ ಬಹುಕೋಶ ಜೀವಿಗಳನ್ನು ಅಸ್ತಿತ್ವಕ್ಕೆ ತಂದ ವಿಧಾನವನ್ನು, ಕುಲ, ಗೋತ್ರ, ಜೀವಕ್ಕೆ ಮುಖ್ಯವಾದ ಒಂದೇ ಎಂಬಂತೆ ಕಾಣುವ ರಕ್ತ ಹಲವು ಬಗೆಯಲ್ಲಿ ವೈವಿಧ್ಯ ಹೊಂದಿರುವ ಸೂಕ್ಷ್ಮವನ್ನು ನಮ್ಮ ಪುರಾಣಗಳು ಬಹು ದೊಡ್ಡ ಅರಿವನ್ನು ಬಿಚ್ಚಿಡುತ್ತದೆ. ಆಧುನಿಕ ವಿಜ್ಞಾನ ರಕ್ತದಲ್ಲಿನ ಪ್ರಭೇದಗಳನ್ನು ಬಿಚ್ಚಿಟ್ಟಿದ್ದು ಇತ್ತೀಚೆಗೆ. ನಿಮ್ಮ ರಕ್ತದ ಗ್ರೂಪ್‌ ಯಾವುದು ಎಂಬುದನ್ನು ನಿಖರವಾಗಿ ತಿಳಿಸುವ ಸೂಕ್ಷ್ಮಗಳನ್ನು ನಮ್ಮ ಪುರಾಣಗಳು ಧ್ವನಿ ಎತ್ತಿಹೇಳಿರದಿದ್ದರೂ ರಕ್ತಗಳಲ್ಲಿನ ಪ್ರಭೇದಗಳನ್ನ, ಜೀನ್ಸ್‌, ಡಿಎನ್‌ಎ ಇತ್ಯಾದಿ ಘಟಕಗಳನ್ನ ವಿಂಗಡಿಸಿ ಹೇಳಿವೆ. ನಮ್ಮ ರಕ್ತದ ಮೂಲಕವಾಗಿ ಲಕ್ಷಿ$¾à ಪ್ರಸನ್ನತೆಯನ್ನು ಪಡೆದು ಧನ ಸಂಗ್ರಹ ಮಾಡಬಹುದೆಂಬುದಕ್ಕೆ ವಿವರ ನೀಡಿವೆ. 

   ರಾಜಕಾರಣಿಗಳಿಗೆ ಸೂರ್ಯನ ಬಲ ಕ್ಷೇಮವೆ ?
  ಹೌದು, ಸೂರ್ಯನಿಂದ ರಾಜಕಾರಣಿಗಳಿಗೆ ಶಕ್ತಿ ಸಿಗುತ್ತದೆ. ವಿಶ್ವವನ್ನು ಸೃಷ್ಟಿಸಿರುವ  ವಿಶ್ವತೋಮುಖನಿಗೆ, ಸೂರ್ಯನ ಕುರಿತಾದ ಅಭೂತಪೂರ್ವ ಒಲವು ಏನೆಂಬುದನ್ನು ಬಹು ವಿಸ್ತಾರವಾಗಿ ವಿಷ್ಣು ಪುರಾಣದಲ್ಲಿ ಉಲ್ಲೇಖೀಸಲಾಗಿದೆ. ಸೂರ್ಯನು ಸಿಂಹ ರಾಶಿಯ ಯಜಮಾನನಾಗಿ ಮಖ, ಪುಬ್ಟಾ ಹಾಗೂ ಉತ್ತರಾ ನಕ್ಷತ್ರಗಳನ್ನು ಸಮಾವೇಶಗೊಳಿಸಿಕೊಂಡಿದ್ದಾನೆ. ಮಖದ ನಕ್ಷತ್ರದ ಮೂಲಕವಾಗಿ ರಾಜಸೂಯಾಗದ ಪುಣ್ಯ ಫ‌ಲ, ಪುಬ್ಟಾ ನಕ್ಷತ್ರದ ಮೂಲಕವಾಗಿ ûಾತ್ರಾ, ಉತ್ತರಾ ನಕ್ಷತ್ರದ ಮೂಲಕವಾಗಿ ಧೀಶಕ್ತಿಯ ಕುಂಭಗಳು ಒಗ್ಗೂಡುವುದರಿಂದ ರಾಜ್ಯಾಭಿಷೇಕಕ್ಕೆ ಬೇಕಾದ ಅರ್ಹತೆ ಸಿಗುತ್ತದೆ. ಸ್ವಯಂ ಏವ ಮೃಗೇಂದ್ರತಾ ಎಂಬ ಮಾತೊಂದಿದೆ ಸಂಸ್ಕೃತದಲ್ಲಿ. ಕಾವ್ಯ ಮಹರ್ಷಿಯ ಮಗಳು ಕಾತ್ಯಾಯನಿ ಜ್ಞಾನ, ûಾತ್ರ ಹಾಗೂ ಅಗ್ನಿಯ (ರಾಜಸೂಯಾಗ) ದಿವ್ಯತೆಗಳನ್ನು ಒಳಗೊಂಡವಳಾಗಿ ಸಿಂಹದ ಮೇಲೆ ರಾರಾಜಿಸುತ್ತಾಳೆ. ಅಸುರರ ಸಂಹಾರದಲ್ಲಿ ಚಾಮುಂಡಿಯಾದ ದುರ್ಗೆ, ಇದೇ ಕಾತ್ಯಾಯಿನಿಯಾಗಿದ್ದಾಳೆ. ಮಹಿಷಾಸುರನನ್ನು ಸೀಳಿದ ಶಕ್ತಿ ಸಿಂಹದ್ದು. ಮುಂದಿನದನ್ನು ತಾಯಿ ದುರ್ಗಾ ನೆರವೇರಿಸಿ ಮಹಿಷನ ಕತ್ತು ಕತ್ತರಿಸಿ ಅಹಂಕಾರದ ಕತ್ತಲು ಛೇದಿಸಿದಳು. 

  ಹೀಗಾಗಿ ರಾಜಕಾರಣಿಗಳಿಗೆ ಸೂರ್ಯನ ಸಿದ್ಧಿ ದೊರಕಿದರೆ ದೇವಿಯನ್ನು ಸಿದ್ಧ, ಶ್ರದ್ಧೆ, ಮೇಧಾ, ಶಕ್ತಿ, ಯಶಸ್ಸು, ಪ್ರಜ್ಞೆ, ವಿದ್ಯೆ, ಬುದ್ಧಿ, ಧನ ಸಂಪತ್ತು, ಬಲ, ಆಯಸ್ಸು, ತೇಜಸ್ಸು, ಆರೋಗ್ಯಗಳೆಲ್ಲ ಒಗ್ಗೂಡುತ್ತದೆ. ಈ ಕಾರಣದಿಂದಾಗಿ ನಿಮ್ಮ ವ್ಯಕ್ತಿತ್ವ, ಸಂವಹನದ ವಿಚಾರವಾಗಿ ಮಾತಿನ ಶಕ್ತಿ, ಧೈರ್ಯ, ಪ್ರಜ್ಞೆ, ಪೂರ್ವ ಜನ್ಮದ ಪುಣ್ಯ ವಿಶೇಷ, ಭಾಗ್ಯ, ಕೆಲಸದಲ್ಲಿ ಪರಿಶ್ರಮಗಳನ್ನು ಒಗ್ಗೂಡಿಸಿ‌ಕೊಳ್ಳುವುದಕ್ಕೆ ಸಹಾಯವಾಗುತ್ತದೆ. ಜನರನ್ನು ತಲುಪುವುದು ಸುಲಭದ ಮಾತಲ್ಲ. ಆದರೆ ರಾಜಕಾರಣಿಗಳಿಗೂ ಸೂರ್ಯನು ಇದನ್ನು ಸರಳಗೊಳಿಸುತ್ತಾನೆ. ನಿಮ್ಮ ಅದೃಷ್ಟದ ಸಂಖ್ಯೆ ಅಥವಾ ಅಂಕಿಯನ್ನು ಕುಂಡಲಿಯ ಆಧಾರದಲ್ಲಿ ಪರಿಶೀಲಿಸಿ, ಸೂರ್ಯನ ನಿಟ್ಟಿನಿಂದಲೂ ಅದು ದೃಢೀಕರಣಗೊಳ್ಳಬೇಕು. ಮಾತು, ಸುಖ, ಭಾಗ್ಯ, ಲಾಭಗಳಿಂದ ವ್ಯಕ್ತಿತ್ವದ ಸಿದ್ಧಿ ಸಿಗಬೇಕು. ಸೂರ್ಯನ ಸಿದ್ಧಿ ಸಿಗಲು ಅದೃಷ್ಟ ಸಂಖ್ಯೆ ಅಂತೆಯೇ ಹೆಸರಿನ ಸಂಯೋಜನೆ ದಾರಿ ತೋರಿಸಬೇಕು. ಶನೈಶ್ವರ, ಕುಜ, ಸೂರ್ಯರು ಕ್ಷೀಣ ಚಂದ್ರನ ಬಾಧೆಯಿಂದ ಬಳಲುವಂತೆ ಆಗದಿದ್ದಾಗ ಹೆಸರಿಗೆ ಶಕ್ತಿ ಸಿಗುತ್ತದೆ. ಶಕ್ತಿಯನ್ನು ಕುಂದಿಸುವ ಅಕ್ಷರಗಳನ್ನು ಒಂದು ಹದ್ದು ಬಸ್ತಿನಲ್ಲಿಡಬೇಕು. 

  ಮಾಣಿಕ್ಯ, ಅದೃಷ್ಟ ಸಂಖ್ಯೆ…
ಎಲ್ಲರ ಜಾತಕದಲ್ಲೂ ಸೂರ್ಯ ಪ್ರಬಲ ಎಂದು ಹೇಳಲಾಗದು. ಇತ್ತೀಚೆಗೆ ತೊಂದರೆ ಗೊಳಗಾದ ಮಂತ್ರಿಗಳೊಬ್ಬರು ಸೂರ್ಯ ಸಿದ್ಧಿಯ ಕೊರತೆ ಎದುರಾಗಿಯೇ ಪ್ರಾಬಲ್ಯದ ಶಿಖರದಿಂದ ರಸತಾಳಕ್ಕೆ ಇಳಿದರು. ಒಬ್ಬರು ಅನಿರೀಕ್ಷಿತ ಶಕ್ತಿ ಸಂಚಯನವಾಗಿದ್ದರಿಂದ ಕನಸಿನಲ್ಲಿ ಊಹಿಸಲಾಗದ ಅಧಿಕಾರದ ಸ್ಥಾನ ಏರಿದರು. ಆದರೂ ಇವರ ಜಾತಕದ ಸೂರ್ಯ ಉಡಾಫೆತನದಿಂದ ಮಾತನಾಡುವಂತೆ ಮಾಡಿ ಅದೃಷ್ಟದ ಬಟ್ಟಲನ್ನು ಖಾಲಿ ಮಾಡಿಸುತ್ತಾನೆ. ಕುಟುಂಬ ವಿಪ್ಲವ, ಶಕುನ ಸವಕಳಿ ತಲೆದೋರಿ ಅಮೂಲ್ಯವಾದುದನ್ನು ಕಳಕೊಂಡರು. 

 ಪ್ರಾಬಲ್ಯ ಪಡೆಯಲು ಏನು ಮಾಡಬೇಕು?
 ಹಿರಿಯ ರಾಜಕಾರಣಿಗಳು ಯಾವತ್ತು ಪ್ರಬಲರೆ. ದೇಶದಪರಮೋತ್ಛ ಪ್ರಧಾನಿ ಪಟ್ಟ ಸಿಕ್ಕಿದರೂ ಆಶrರ್ಯವಿಲ್ಲ. ಕರ್ನಾಟಕದವರು. ಆದರೆ ಸೂರ್ಯ ಸಿದ್ಧಿ, ಶನೈಶ್ಚರನ ಸವಕಳಿಯಿಂದ ಕುಸಿದಿದೆ. ಮಾಣಿಕ್ಯದ ಹರಳನ್ನು, ಚಂದ್ರನ ಸಮಷ್ಟಿಗೆ ಕಾರಣವಾದ ಮುತ್ತಿನ ಜೊತೆ ಹಾಕಿಕೊಳ್ಳಬೇಕು.

ಅನಂತ ಶಾಸ್ತ್ರಿ   

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.