ಬದುಕಲ್ಲಿ ಶುಕ್ರನ ಫ‌ಲಾಫ‌ಲ ಏನು ಗೊತ್ತಾ?


Team Udayavani, May 5, 2018, 2:15 PM IST

3652.jpg

ಶುಕ್ರನಿಗೆ ಮಿತ್ರ ಗ್ರಹಗಳು ಬುಧ, ಶನಿ, ರಾಹು, ಕೇತು. ಶತ್ರುಗ್ರಹಗಳು ಗುರು, ಸೂರ್ಯ. ಶುಕ್ರನ ಮನೆಯಾದ ವೃಷಭರಾಶಿ ಚಂದ್ರನಿಗೆ ಉತ್ಛರಾಶಿಯಾದ್ದರಿಂದ ಚಂದ್ರನು ಮಿತ್ರನಲ್ಲದಿದ್ದರೂ ಬಾಧಕಾರಕನಲ್ಲ. ಕುಜನು ಸಮನಾಗುತ್ತಾನೆ. ಗುರು ಗ್ರಹವು ಶುಕ್ರನ ಶತ್ರುವಾದರೂ ಎರಡೂ ಸೌಮ್ಯಗ್ರಹಗಳಾದ್ದರಿಂದ ಅವೆರಡರ ಪರಸ್ಪರ ದೃಷ್ಟಿ ಭಾದಕವಲ್ಲ.

ಶುಕ್ರ ಕಳತ್ರಕಾರಕ ಗ್ರಹ. ಅಷ್ಟಭೋಗಭಾಗ್ಯಗಳನ್ನು ಕೊಡುವವನು. ಜಾತಕದಲ್ಲಿ ಉಳಿದೆಲ್ಲಾ ಗ್ರಹಗಳೂ ಉತ್ತಮ ಸ್ಥಾನದಲ್ಲಿದ್ದು ಶುಕ್ರನ ಸ್ಥಾನ ಉತ್ತಮವಾಗಿಲ್ಲದಿದ್ದರೆ ಆ ಜಾತಕದವರು ಸುಖವನ್ನು ಅನುಭವಿಸುವುದಿಲ್ಲ. ಶುಕ್ರನು ಕಳತ್ರಕಾರಕ ಎಂದರೆ ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು. ಜಾತಕದಲ್ಲಿ ಶುಕ್ರನು ಬಲಾಡ್ಯನಾಗಿದ್ದರೆ ಮಾತ್ರ ವೈವಾಹಿಕ ಸುಖ ದೊರೆಯುತ್ತದೆ. ಇಲ್ಲವಾದಲ್ಲಿ, ಆ ಸುಖಕ್ಕೆ ಕೊರತೆಯಾಗುವುದರಲ್ಲಿ ಸಂದೇಹವೇ ಇಲ್ಲ. 

ಲಗ್ನ ಕುಂಡಲಿಯಲ್ಲಿ ಒಂದುವೇಳೆ ಶುಕ್ರ ಬಲಹೀನನಾಗಿದ್ದರೂ ಅಂಶ ಕುಂಡಲಿಯಲ್ಲಿ ಅವನ ಸ್ಥಾನ ಚೆನ್ನಾಗಿದ್ದರೆ ಆ ದೋಷ ಪರಿಹಾರವಾಗುತ್ತದೆ. ಶುಕ್ರ ವಾಹನಕಾರಕ. ಶುಕ್ರನು ಉತ್ತಮನಾಗಿದ್ದರೆ ಆ ಜಾತಕದವರು ಒಂದಕ್ಕಿಂತ ಹೆಚ್ಚು ವಾಹನಗಳಿಗೆ ಒಡೆಯರಾಗಿರುತ್ತಾರೆ. ಶುಕ್ರನು ಕಟ್ಟಡಕಾರಕ. ಅವನು ಜಾತಕದಲ್ಲಿ ಬಲಾಡ್ಯನಾಗಿದ್ದರೆ ಆ ಜಾತಕದವರು ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದಿರುತ್ತಾರೆ.

ಶುಕ್ರನಿಗೆ ರಾಹು ಕೇತುಗಳು ಅಧೀನರು.  ಶನಿಯು ಅವನಿಗೆ ಮಿತ್ರ.  ಹಾಗಾಗಿ, ಜಾತಕದಲ್ಲಿ ಶುಕ್ರನು ರಾಹುಕೇತುಗಳ ಹಾಗೂ ಶನಿಯ ದೃಷ್ಟಿಗೆ ಪಾತ್ರನಾಗಿದ್ದರೂ ದೋಷವಿಲ್ಲ.

ಶುಕ್ರ ನು ಸೂರ್ಯನ ದೃಷ್ಟಿಗೆ ಒಳಪಟ್ಟಿರಬಾರದು. ಸೂರ್ಯನೊಂದಿಗೆ ಯುವತಿಯೋಗದಲ್ಲೂ ಇರಬಾರದು. ಏಕೆಂದರೆ ಸೂರ್ಯ ಪ್ರಖರವಾದ ಗ್ರಹವಾದ್ದರಿಂದ ಅವನ ಪ್ರಖರತೆಗೆ ಶುಕ್ರನು ಮಂಕಾಗುವ ಸಾಧ್ಯತೆಗಳಿರುತ್ತದೆ. ಶುಕ್ರನು ಮಂಕಾದಾಗ ಅಥವಾ ಅಸ್ತನಾದಾಗ ಅವನಿಂದ ಸಿಗುವ ಫ‌ಲಗಳಲ್ಲಿ ಕೊರತೆಯುಂಟಾಗುತ್ತದೆ. 

ಶುಕ್ರನಿಗೆ ಮಿತ್ರ ಗ್ರಹಗಳು ಬುಧ, ಶನಿ, ರಾಹು, ಕೇತು. ಶತ್ರುಗ್ರಹಗಳು ಗುರು, ಸೂರ್ಯ. ಶುಕ್ರನ ಮನೆಯಾದ ವೃಷಭರಾಶಿ ಚಂದ್ರನಿಗೆ ಉತ್ಛರಾಶಿಯಾದ್ದರಿಂದ ಚಂದ್ರನು ಮಿತ್ರನಲ್ಲದಿದ್ದರೂ ಬಾಧಕಾರಕನಲ್ಲ. ಕುಜನು ಸಮನಾಗುತ್ತಾನೆ. ಗುರು ಗ್ರಹವು ಶುಕ್ರನ ಶತ್ರುವಾದರೂ ಎರಡೂ ಸೌಮ್ಯಗ್ರಹಗಳಾದ್ದರಿಂದ ಅವೆರಡರ ಪರಸ್ಪರ ದೃಷ್ಟಿ ಭಾದಕವಲ್ಲ. ಗುರು-ಶುಕ್ರ ಇಬ್ಬರೂ ಬಲಾಡ್ಯ ಗ್ರಹಗಳಾದ್ದರಿಂದ ಇಬ್ಬರೂ ಕೊಡುವ ಫ‌ಲಗಳು ಸಮನಾಗಿರುತ್ತವೆ. 

ವೃಷಭ ಹಾಗೂ ತುಲಾ ರಾಶಿಗಳಿಗೆ ಅಧಿಪತಿ ಶುಕ್ರ. ವೃಷಭ ರಾಶಿಗೆ ಎಂಟನೇ ಹಾಗೂ ಹನ್ನೊಂದನೇ ಅಧಿಪತಿ ಗುರು. ಎಂಟನೇ ಅಧಿಪತಿಯಾಗಿ ಗುರು ಮಾರಕನಾದರೂ, ಲಾಭಸ್ಥಾನಾಧಿಪತಿಯಾಗಿ ಗುರು ಶುಭನಾಗುತ್ತಾನಾದ್ದರಿಂದ ದೋಷ ಕಡಿಮೆಯಾಗುತ್ತದೆ. ಗುರುವಿನ ಮನೆಯಾದ ಮೀನ ರಾಶಿ ಶುಕ್ರನಿಗೆ ಉತ್ಛಸ್ಥಾನವಾದ್ದರಿಂದ ಮಾರಕಾಧಿಪತಿಯಾದರೂ ಲಾಭಸ್ಥಾನದ ಶುಭಫ‌ಲಗಳನ್ನೇ ಹೆಚ್ಚು ಕೊಡುತ್ತಾನೆ. ತುಲಾರಾಶಿಗೆ ಗುರು ಮೂರನೇ ಹಾಗೂ ಆರನೇ ಅಧಿಪತಿಯಾದ್ದರಿಂದ ಮತ್ತು ಆರನೇ ಮನೆಯಾದ ಮೀನ ರಾಶಿ ಶುಕ್ರನಿಗೆ ಉಚ್ಚ ಸ್ಥಾನ ವಾದ್ದರಿಂದ ಆರನೇ ಮನೆಯ ದೋಷ ಕಡಿಮೆಯಾಗುತ್ತದೆ. ಗುರು ಶುಕ್ರರು ಶತ್ರುಗಳಾದರೂ ಸಾತ್ವಿಕ ಶತ್ರುಗಳಾದ್ದರಿಂದ ದೋಷಕಾರಕವಾಗುವುದಿಲ್ಲ. 

ಶುಕ್ರನ ಸ್ವಂತ ಮನೆ ವೃಷಭ ಹಾಗೂ ತುಲಾ, ಉತ್ಛರಾಶಿ ಮೀನ, ಮೂಲತ್ರಿಕೋಣಸ್ಥಾನ ತುಲಾರಾಶಿ, ನೀಚಸ್ಥಾನ ಕನ್ಯಾರಾಶಿ. ಪ್ರಕೃತಿಯ ವೈಚಿತ್ರ್ಯವೆಂದರೆ ಬುಧನು ಶುಕ್ರನಿಗೆ ಪರಮಾಪ್ತ, ಶುಕ್ರ-ಬುಧರು ಪರಸ್ಪರ ದೃಷ್ಟಿಯಲ್ಲಿದ್ದರೂ, ಯುತಿಯೋಗದಲ್ಲಿದ್ದರೂ ಹಾಲುಜೇನು ಬೆರೆತಂತೆ ಎನ್ನುತ್ತಾರೆ. ಆದರೆ ಬುಧನ ಮನೆಯಾದ ಕನ್ಯಾರಾಶಿ ಶುಕ್ರನಿಗೆ ನೀಚಸ್ಥಾನ!, ಶತ್ರುವಿನ ಮನೆಯಾದ ಮೀನರಾಶಿ ಉಚ್ಚಸ್ಥಾನ!.

ಶುಕ್ರನು ಸ್ತ್ರೀ ಕಾರಕ ಗ್ರಹವಾದ್ದರಿಂದ ಅವನು ಕಳತ್ರಕಾರಕ. ಜಾತಕದಲ್ಲಿ ಶುಕ್ರನು ಉತ್ತಮ ಸ್ಥಾನದಲ್ಲಿ ಅಥವಾ ಏಳನೇ ಮನೆಯಲ್ಲಿ ಇದ್ದರೆ ಆ ಜಾತಕರಿಗೆ ಉತ್ತಮ ಸಂಗಾತಿ ಹಾಗೂ ವೈವಾಹಿಕ ಜೀವನ ಸಂತೋಷದಾಯಕವಾಗಿರುವುದರಲ್ಲಿ ಸಂದೇಹವಿಲ್ಲ.  ಶುಕ್ರನಿಂದ ಮಾಳವೀಯ ಯೋಗವಾಗುತ್ತದೆ. ಲಗ್ನದಿಂದ ಶುಕ್ರನು ಕೇಂದ್ರದಲ್ಲಿ ಸ್ಥಿತನಾಗಿ ಅದು ವೃಷಭ, ತುಲಾ, ಮೀನರಾಶಿಯಾಗಿದ್ದರೆ ಅದನ್ನು ಮಾಳವೀಯ ಯೋಗವೆನ್ನುತ್ತಾರೆ. ಈ ಯೋಗವು ಆಜೀವ ಪರ್ಯಂತ ಈ ಜಾತಕದವರಿಗೆ ರಕ್ಷೆಯನ್ನು, ಅಷ್ಟಭೋಗಭಾಗ್ಯಗಳನ್ನೂ ಕರುಣಿಸುತ್ತದೆ. ಇಂಥವರು ಲಲಿತ ಕಲೆಗಳಲ್ಲಿ ಪರಿಣಿತರಾಗಿರುತ್ತಾರೆ. ಶುಕ್ರನು ಲಲಿತಕಲೆಗಳ ಅಧಿಪತಿಯಾಗಿರುವುದರಿಂದ ಸಂಗೀತ, ನಾಟ್ಯ, ಇತರ ಯಾವುದೇ ಸೃಜನಶೀಲ ಕಲೆಗಳಲ್ಲಿ ಪರಿಣತಿಯನ್ನು ಕೊಡುತ್ತಾನೆ ಮತ್ತು ಅದರಿಂದ ಉನ್ನತವಾದ ಗೌರವವನ್ನು, ಹಣವನ್ನೂ ಕೊಟ್ಟು 
ಭಾಗ್ಯವಂತರನ್ನಾಗಿ ಮಾಡುತ್ತಾನೆ. 

ಶುಕ್ರನು ಜಾತಕದಲ್ಲಿ ಒಳ್ಳೆಯ ಸ್ಥಾನದಲ್ಲಿದ್ದರೆ ಅವರು ಅಲಂಕಾರಪ್ರಿಯರಾಗಿರುತ್ತಾರೆ. ನೋಡುವವರ ಕಣ್ಣಿಗೆ ಹಬ್ಬವಾಗುವಂತೆ ಅಲಂಕಾರ ಮಾಡಿಕೊಳ್ಳುವ ಕಲೆ ಗೊತ್ತಿರುತ್ತದೆ. ಉತ್ತಮ ಸಂಸ್ಕಾರವಂತರಾಗಿರುತ್ತಾರೆ. 
ವಸ್ತ್ರಾಭರಣ ಪ್ರಿಯರಾಗಿರುತ್ತಾರೆ. ಕಲಾವಿದರಾಗಿರುತ್ತಾರೆ, ಐಷಾರಾಮಿಯಾಗಿ ಯಾವುದಕ್ಕೂ ಕೊರತೆ ಇಲ್ಲದಂತೆ ಬದುಕುತ್ತಾರೆ. 

ಶುಕ್ರನ ರಾಶಿಯಾದ ವೃಷಭ, ತುಲಾ ರಾಶಿ ಅಥವಾ ಲಗ್ನಕ್ಕೆ ಶನಿಯು ಕೇಂದ್ರ ತ್ರಿಕೋಣಾಧಿಪತಿಯಾದ್ದರಿಂದ ಶನಿ, ವೃಷಭ, ತುಲಾ ರಾಶಿಗೆ ಯೋಗಕಾರಕನಾಗುತ್ತಾನೆ. ಶನಿ ಈ ಲಗ್ನದವರಿಗೆ ದುಃಸ್ಥಾನದಲ್ಲಿದ್ದರೂ ಕೆಡಕು ಮಾಡುವುದಿಲ್ಲ, ಒಳ್ಳೆಯ ಸ್ಥಾನದಲ್ಲಿದ್ದರೆ ಯೋಗಕಾರಕನಾಗಿ ಉತ್ತಮಫ‌ಲಗಳನ್ನು ಕೊಡುತ್ತಾನೆ.

 ಶುಕ್ರನು ದುಃಸ್ಥಾನ ಅಥವಾ ನೀಚಸ್ಥಾನದಲ್ಲಿದ್ದು ಮಿತ್ರಗ್ರಹ/ಶುಭಗ್ರಹ ದೃಷ್ಟಿ ಇಲ್ಲದೆ ಕುಜನ ದೃಷ್ಟಿಗೆ ಪಾತ್ರನಾಗಿದ್ದರೆ ಅಂಥವರಿಗೆ ವಿವಾಹೇತರ ಸಂಬಂಧಗಳಿರುತ್ತವೆ. ದುವ್ಯìಸನಿಗಳೂ ಆಗಿರುತ್ತಾರೆ. ಸ್ತ್ರೀ ಜಾತಕದಲ್ಲಿ ಶುಕ್ರನು ನೀಚನಾಗಿಯೋ ದುಸ್ಥಾನದಲ್ಲಿಯೋ ಇದ್ದು ಕುಜನ ದೃಷ್ಟಿಗೆ ಪಾತ್ರನಾಗಿದ್ದರೆ ಅದನ್ನು ಜಾರಯೋಗವೆನ್ನುತ್ತಾರೆ ಅಥವಾ ವ್ಯಭಿಚಾರ ಯೋಗವೆನ್ನುತ್ತಾರೆ. ಲಗ್ನಾಧಿಪತಿಯು ಶುಕ್ರನೊಟ್ಟಿಗೆ ಅಥವಾ ಸಮಸಪ್ತಕದಲ್ಲಿದ್ದರೆ ಆ ಜಾತಕರಿಗೆ ಎರಡು ವಿವಾಹಯೋಗರುತ್ತದೆ ಅಥವಾ ವಿವಾಹವೇತರ ಸಂಬಂಧಗಳಿರುತ್ತದೆ. ಜಾತಕದಲ್ಲಿ ಶುಕ್ರನು ಬಲಹೀನನಾಗಿದ್ದರೆ ಒಳ್ಳೆಯ ವಜ್ರವನ್ನು ಬಲಗೈ ಕಿರುಬೆರಳಿಗೆ ಧರಿಸಿದರೆ ಉತ್ತಮ ಫ‌ಲಗಳನ್ನು ನಿರೀಕ್ಷಿಸಬಹುದು.
 
ಫ‌ಲಾಫ‌ಲ ಯಾವ ಮನೆಯಲ್ಲಿದ್ದರೆ ಹೇಗೆ?

ಶುಕ್ರನು ಜಾತಕದಲ್ಲಿ ಯಾವ ಮನೆಯಲ್ಲಿದ್ದರೆ ಯಾವ ಫ‌ಲಗಳನ್ನು ಕೊಡುತ್ತಾನೆ ಎಂಬುದನ್ನು ನೋಡೋಣ:
ಲಗ್ನದಲ್ಲಿ: ಶುಕ್ರ ಲಗ್ನದಲ್ಲಿದ್ದರೆ 10ಲಕ್ಷದೋಷಗಳನ್ನು ಪರಿಹರಿಸಿ ಉತ್ತಮ ಸಂಸ್ಕಾರವನ್ನು ನೀಡುತ್ತಾನೆ. 
2ನೇ ಮನೆ: ಉತ್ತಮ ಮಾತುಗಾರಿಕೆ, ಸೌಂದರ್ಯ, ಕುಟುಂಬಸೌಖ್ಯ, ಉತ್ತಮ ಧನ ಸಂಪತ್ತಿಯನ್ನು ಕೊಡುತ್ತಾನೆ. 
3ನೇ ಮನೆ: ಉತ್ತಮ ಸಹೋದರಿಯರು, ಆಕರ್ಷಕವಾದ ದೇಹಸಂಪತ್ತು. 
4ನೇ ಮನೆ: ಮಾತೃಸೌಖ್ಯ, ಗೃಹ, ವಾಹನ, ವಸ್ತ್ರ, ಆಭರಣ ಮೊದಲಾದಂತೆ ಅಷ್ಟಭೋಗಭಾಗ್ಯಗಳನ್ನು ಕೊಡುತ್ತಾನೆ. ಇವರು ಕಲಾವಿದರಾಗಿರುತ್ತಾರೆ. ವಾಹನಗಳನ್ನು ಹೊಂದಿರುತ್ತಾರೆ. 
 5ನೇ ಮನೆ: ಉನ್ನತ ವಿದ್ಯೆ, (ವಿದ್ಯುನ್ಮಾನ ಕ್ಷೇತ್ರ), ಸ್ತ್ರೀ ಸಂತಾನ, ಬಲವಾದ ಪೂರ್ವಪುಣ್ಯಸ್ಥಾನ. 
6ನೇ ಮನೆ: ಶತೃಗಳ ಕಾಟವಿರುವುದಿಲ್ಲ, ಆರೋಗ್ಯ ಕೆಟ್ಟರೂ ಬೇಗ ಸುಧಾರಣೆಯಾಗುತ್ತದೆ.
 7ನೇ ಮನೆ: ಉತ್ತಮ ಸಂಗಾತಿ, ಸುರೂಪಿಯಾದ ಸಂಗಾತಿ, ಉತ್ತಮ ವೈವಾಹಿಕ ಜೀವನ. 
8ನೇ ಮನೆ: ಅರಿಷ್ಟ ಸ್ಥಾನವಾದರೂ ರಂದ್ರವನ್ನು ಮುಚ್ಚುತ್ತಾನೆ, ಉತ್ತಮ ಆಯುಷ್ಯವನ್ನು ಕೊಡುತ್ತಾನೆ. 
9ನೇ ಮನೆ: ಪುಣ್ಯಕ್ಷೇತ್ರ ದರ್ಶನ, ವಿದೇಶ ಪ್ರಯಾಣಯೋಗ, ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ, ದೇಶ ಭಕ್ತರಾಗಿರುತ್ತಾರೆ. 
10ನೇ ಮನೆ: ವಾಹನ ವ್ಯಾಪಾರಿಗಳಾಗಿರುತ್ತಾರೆ, ಕಲಾವಿದರಾಗಿರುತ್ತಾರೆ, ವಿದ್ಯುನ್ಮಾನ ಕ್ಷೇತ್ರದಲ್ಲಿ ಅಥವಾ ಮಾಧ್ಯಮಗಳಲ್ಲಿ ವೃತ್ತಿಯನ್ನು ನಿರ್ವಹಿಸುತ್ತಾರೆ. ಕಾರ್ಯಕ್ಷೇತ್ರದಲ್ಲಿ ಗೌರವವನ್ನೂ, ಕೀರ್ತಿಯನ್ನೂ ಸಂಪಾದಿಸುತ್ತಾರೆ. 

11ನೇ ಮನೆ: ಸಜ್ಜನರ ಸ್ನೇಹ, ಪುಣ್ಯ ಸಂಪಾದನೆ, ಯಾವುದೇ ವ್ಯಾಪಾರ ಮಾಡಿದರೂ ಲಾಭ, ಮುಖ್ಯವಾಗಿ ರತ್ನಪಡಿ ವ್ಯಾಪಾರ, ವಾಹನ ವ್ಯಾಪಾರ, ವಿದ್ಯುನ್ಮಾನ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಾಪಾರ, ಅಲಂಕಾರಿಕ ವಸ್ತುಗಳ ವ್ಯಾಪಾರ ಹೂವು, ಸುಗಂಧ ದ್ರವ್ಯ ವ್ಯಾಪಾರ ಮೊದಲಾದವುಗಳಲ್ಲಿ ಅಧಿಕ ಲಾಭಗಳಿಸುತ್ತಾರೆ. 12ನೆ ಮನೆ; ಐಷಾರಾಮಿ ವಸ್ತುಗಳಿಗಾಗಿ ಖರ್ಚು ಮಾಡುತ್ತಾರೆ.  ಭೋಗವಸ್ತುಗಳಿಗಾಗಿ ಧನವ್ಯಯಿಸುತ್ತಾರೆ, ಶಯನಸುಖೀಗಳಾಗಿರುತ್ತಾರೆ. ಐಷಾರಾಮಿಗಳಾಗಿ ಜೀವಿಸುತ್ತಾರೆ.

ವೀಣಾ ಚಿಂತಾಮಣಿ

ಟಾಪ್ ನ್ಯೂಸ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.