ನಿಮ್ಮ ಜಾತಕದಲ್ಲಿ ಗುರುಭ್ಯೋ ನಮಃ 


Team Udayavani, Jun 9, 2018, 12:01 PM IST

5.jpg

ಜಾತಕದಲ್ಲಿ ಗುರುವನ್ನು ಜೀವಕಾರಕ ಎನ್ನುತ್ತಾರೆ.  ಗುರುವೊಬ್ಬನು ಚೆನ್ನಾಗಿದ್ದರೆ ಆ ಜಾತಕದವರಿಗೆ ಜೀವನ ನಿರ್ವಹಣೆಗೆ ಯಾವುದೇ ತೊಂದರೆ ಇರುವುದಿಲ್ಲ. ಗುರು ಎಂದಿಗೂ ಕಂಡಾಪಟ್ಟೆ ದುಡ್ಡು, ಶ್ರೀಮಂತಿಕೆ ಕೊಡುವುದಿಲ್ಲ. ನಮಗೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಕೊಡುತ್ತಾನೆ. ಆದರೆ ವಿದ್ಯೆ, ಕೀರ್ತಿ, ಗೌರವಗಳನ್ನು ಹೇರಳವಾಗಿ ನೀಡುತ್ತಾನೆ. 

ಹಂಸಯೋಗವೆನ್ನುವುದು ಜಾತಕದಲ್ಲಿ ಗುರುವಿನಿಂದ ಉಂಟಾಗುವ ಒಂದು ಯೋಗ. ಈ ಯೋಗಕ್ಕೆ ಗುರುವೇ ಅಧಿಪತಿ. ಧನುರ್‌ ಲಗ್ನದಲ್ಲಿ ಹುಟ್ಟಿ ಗುರು ಮೀನರಾಶಿಯಲ್ಲಿರಬೇಕು ಅಥವಾ ಮೀನಲಗ್ನದಲ್ಲಿ ಹುಟ್ಟಿ ಗುರು ಧನುಸ್ಸುರಾಶಿಯಲ್ಲಿ ಇರಬೇಕು. ಅಥವಾ, ಧನುಸ್ಸು ರಾಶಿ ಲಗ್ನವಾಗಿ ಗುರು ಲಗ್ನದಲ್ಲೇ ಇರಬೇಕು ಅಥವಾ ಮೀನರಾಶಿ ಲಗ್ನವಾಗಿ ಗುರು ಮೀನದಲ್ಲಿ ಇರಬೇಕು. ಇಲ್ಲವೇ ಕಟಕ ಲಗ್ನವಾಗಿ ಲಗ್ನದಲ್ಲಿ ಗುರುವಿರಬೇಕು. ಹೀಗಾದಲ್ಲಿ ಮಾತ್ರ ಅದು ಹಂಸಯೋಗದ ಜಾತಕವಾಗುತ್ತದೆ. ಈ ಯೋಗದ ಜಾತಕದವರು ಕೀರ್ತಿವಂತರೂ, ಯಶೋವಂತರೂ, ಜಾnನಿಗಳೂ, ವಿದ್ವಾಂಸರೂ ಆಗಿರುತ್ತಾರೆ. ಮಠಾಧಿಪತಿಗಳಾಗಿರಬಹುದು, ಧರ್ಮಾಧಿಕಾರಿಗಳಾಗಿರಬಹುದು ಅವರು ವಿದ್ಯಾಸಂಸ್ಥೆಗಳನ್ನು ಕಟ್ಟಿ ನಡೆಸಬಹುದು. ಅಪಾರ ಧರ್ಮಕಾರ್ಯಗಳನ್ನು ಮಾಡಬಹುದು. ಒಟ್ಟಿನಲ್ಲಿ ಸಮಾಜದಲ್ಲಿ ಗೌರವಾನ್ವಿತರಾಗಿ ಬಾಳುತ್ತಾರೆ.  ವಾಮಮಾರ್ಗದಲ್ಲಿ ಹಣ ಸಂಪಾದನೆಯನ್ನು ಈ ಯೋಗದವರು ಮಾಡುವುದಿಲ್ಲ.  ಏನೇ ಸಂಪಾದಿಸಿದರೂ ಅದು ಸತ್ಯ ನ್ಯಾಯದಿಂದ ಕೂಡಿರುತ್ತದೆ. ತಮ್ಮದಲ್ಲದ ಒಂದು ರೂಪಾಯಿಗೂ ಇವರು ಆಸೆ ಪಡುವುದಿಲ್ಲ. ಒಳ್ಳೆಯ ಕೆಲಸ ಮಾಡಲು ಗುರುಬಲ ಇರಬೇಕು ಎನ್ನುತ್ತಾರೆ. ಮದುವೆ, ಮುಂಜಿ, ಗೃಹಪ್ರವೇಶ ಯಾವುದೇ ಮಾಡಬೇಕೆಂದರೂ ಗುರುಬಲ ಇರಬೇಕು. ಈ ವರ್ಷ ಗುರುಬಲ ಇದೆ. ನಿಮಗೆ ಏನೋ ಒಳ್ಳೆದಾಗುತ್ತದೆ ಅನ್ನುತಾರೆ. ಗಮನಿಸಿದ್ದೀರ ತಾನೆ? ಜ್ಯೋತಿಷ್ಯ ಹೇಳುವಾಗ- ಈ ಸಲ ಗುರುಬಲ ಇಲ್ಲ ನಿನಗೆ ಯಾವ ಕೆಲಸವೂ ಕೈಗೆ ಹತ್ತಲ್ಲ. ನಿಧಾನ ಆಗುತ್ತದೆ ಎನ್ನುತ್ತಾರೆ. ಯಾಕೆ ಹೀಗೆ? ಗುರುವಿಗೂ, ನಮ್ಮ ಅದೃಷ್ಟಕ್ಕೂ ಏನು ಸಂಬಂಧ? ಜಾತಕದಲ್ಲಿ ಗುರುವನ್ನು ಜೀವಕಾರಕ ಎನ್ನುತ್ತಾರೆ.  ಗುರುವೊಬ್ಬನು ಚೆನ್ನಾಗಿದ್ದರೆ ಆ ಜಾತಕದವರಿಗೆ ಜೀವನ ನಿರ್ವಹಣೆಗೆ ಯಾವುದೇ ತೊಂದರೆ ಇರುವುದಿಲ್ಲ. ಗುರು ಎಂದಿಗೂ ಕಂಡಾಪಟ್ಟೆ ದುಡ್ಡು, ಶ್ರೀಮಂತಿಕೆ ಕೊಡುವುದಿಲ್ಲ. ನಮಗೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಕೊಡುತ್ತಾನೆ. ಆದರೆ ವಿದ್ಯೆ, ಕೀರ್ತಿ, ಗೌರವಗಳನ್ನು ಹೇರಳವಾಗಿ ನೀಡುತ್ತಾನೆ. ಗುರು ಒಂದು ರಾಶಿಯಲ್ಲಿ ಒಂದು ವರ್ಷ ನೆಲೆಸಿರುತ್ತಾನೆ. ಹೀಗಾಗಿ ಗುರುವಿನ ಸಂಚಾರ ಗೋಚಾರದಲ್ಲಿ ಬಹಳ ಮುಖ್ಯ. 

ಜ್ಯೋತಿಷಿಗಳು ಯಾರದ್ದಾದರೂ ಜಾತಕ ನೋಡುವಾಗ ಲಗ್ನ ಯಾವುದೆಂದು ನೋಡುವ ಹಾಗೇ, ಮೊದಲು ಗುರು ಯಾವ ಮನೆಯಲ್ಲಿ ಇದ್ದಾನೆಂದೂ ನೋಡುತ್ತಾರೆ. ಗುರು ಯುಕ್ತವಾದ ಸ್ಥಾನದಲ್ಲಿದ್ದರೆ ಒಂದು ಸಮಾಧಾನ. ಗುರು ಚೆನ್ನಾಗಿದಾನೆ. ಬಾಕಿ ಗ್ರಹಗಳು ಎಲ್ಲೆಲ್ಲಿ ಇದ್ದರೂ ತೊಂದರೆ ಇಲ್ಲ ಎಂಬ ನಿರಾಳ ಭಾವ.  ಗುರು ಜಾತಕದಲ್ಲಿ ಲಗ್ನ, ಎರಡ‌ನೇ ಮನೆ, ನಾಲ್ಕನೇ ಮನೆ, ಐದನೇ ಮನೆ, ಏಳನೇ ಮನೆ, ಒಂಭತ್ತನೇ ಮನೆ,  ಹತ್ತನೇ ಮನೆ ಹಾಗೂ ಹನ್ನೊಂದನೇ ಮನೆಯಲ್ಲಿದ್ದರೆ ಶುಭ. ಲಗ್ನದಲ್ಲಿ ಗುರುವಿಗೆ ಅಪಾರ ಶಕ್ತಿ ಇರುತ್ತದೆ. ಲಗ್ನದ ಗುರು ದಿಕºಲವನ್ನು ಕೊಡುತ್ತಾನೆ. ಕಟಕರಾಶಿ ಗುರುಗೆ ಉತ್ಛರಾಶಿ. ಇಲ್ಲಿ ಗುರುವಿದ್ದರೆ ಸಾಕು ಬೇರೆ ಯಾವ ಗ್ರಹ ಎಲ್ಲಿದ್ದರೂ ಜೀವನ ಸರಾಗವಾಗಿ ಸಾಗಿಬಿಡುತ್ತದೆ. ಹಾಗೆಯೇ ಮಕರ ರಾಶಿ ಗುರುವಿಗೆ ನೀಚಸ್ಥಾನ. ಮಕರದಲ್ಲಿದ್ದರೆ ಆ ಜಾತಕದವರು ಗುರುಬಲ ಹೀನರಾಗಿರುತ್ತಾರೆ. ಇವರು ಯಶಸ್ಸಿನ ಮೆಟ್ಟಿಲೇರಲು ಬಹಳ ಕಾಯಬೇಕಾಗುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಅರ್ಧ ಕೆಲಸವಾಗುತ್ತದೆ. ಮಕರದಲ್ಲಿ ಗುರು ಇದ್ದು ಜೊತೆಗೆ ಚಂದ್ರನೋ, ಸೂರ್ಯನೋ ಅಥವಾ ಕುಜನೋ ಇದ್ದರೆ ಗುರುವಿಗೆ ಸಂಪೂರ್ಣ ಬಲ. ಸೂರ್ಯನೊಂದಿಗಿದ್ದರೆ ಅವನ ಪ್ರಖರತೆಗೆ ಗುರು ಕೊಂಚ ಮಂಕಾಗುವ ಸಾಧ್ಯತೆಯೂ ಇದೆ. 

ಯಾರದ್ದಾದರೂ ಜನ್ಮ ಲಗ್ನದಲ್ಲಿ ಗುರುವಿದ್ದರೆ ಅದು ದಿಕºಲವನ್ನು ಕೊಡುತ್ತದೆ. ಲಗ್ನದಲ್ಲಿ ಗುರು ಬಲಿಷ್ಠ. ಈ ಜಾತಕದವರು ಕೊನೆಯವರೆಗೂ ಜೀವನಕ್ಕೆ ಯಾವುದೇ ಕುಂದು, ಕೊರತೆ ಇಲ್ಲದಂತೆ ನೆಮ್ಮದಿಯಾಗಿ ಇರುತ್ತಾರೆ. ಇಂಥವರಿಗೆ ಅಪಮೃತ್ಯು ಹತ್ತಿರಕ್ಕೂ ಸುಳಿಯುವುದಿಲ್ಲ. ಜನ್ಮಲಗ್ನದಲ್ಲಿ ಗುರು ಇರುವವರು ಎಂಥ ದೊಡ್ಡ ಅಪಘಾತಕ್ಕೆ ಸಿಕ್ಕಿಕೊಂಡರೂ ಪವಾಡಸದೃಶರಾಗಿ ಪಾರಾಗಿಬಿಡುತ್ತಾರೆ.

ಅನ್ಯಲಗ್ನದಲ್ಲಿ ಗುರು ಇದ್ದರೆ ಅಣ್ಣ ತಮ್ಮರೊಂದಿಗೆ ಸಾಮರಸ್ಯವಿರುವುದಿಲ್ಲ.  ಗುರು ಎರಡನೇ ಮನೆಯಲ್ಲಿದ್ದರೆ ಕುಟುಂಬ ಸೌಖ್ಯ. ಹಣದ ಹರಿವು ಉತ್ತಮವಾಗಿರುತ್ತದೆ. ಇವರ ಮಾತು ಸೌಜನ್ಯದಿಂದ ಕೂಡಿರುತ್ತದೆ. ಕೆಟ್ಟ ಶಬ್ದಗಳನ್ನು ಬಳಸುವುದು ಕಡಿಮೆ. ಮೂರನೆ ಮನೆಯಲ್ಲಿದ್ದರೆ ಅನುಕೂಲಕರವಾದ ಸಹೋದರರು ಇರುತ್ತಾರೆ. ಈ ಜಾತಕದವರು ಧೈರ್ಯವಂತರೂ ಆಗಿರುತ್ತಾರೆ. ನಾಲ್ಕನೇ ಮನೆಯಲ್ಲಿ ಗುರುವಿದ್ದರೆ ಎಲ್ಲಾ ಬಗೆಯ ಸುಖಗಳನ್ನು ಅನುಭವಿಸುತ್ತಾರೆ. ಐದನೇ ಮನೆಯಲ್ಲಿ ಗುರುವಿದ್ದರೆ ಇವರು ಬಹು ದೊಡ್ಡ ವಿದ್ವಾಂಸರೂ ಜಾnನಿಗಳೂ ಆಗಿರುತ್ತಾರೆ. ಬಹಳ ದೊಡ್ಡ ಹುದ್ದೆ, ಪದವಿ ಇವರದಾಗಿರುತ್ತದೆ. ಪೊ›ಫೆಸರ್‌ ಆಗಬಹುದು, ಪಿಎಚ್‌ ಡಿ ಮಾಡಬಹುದು. ಜೀವನದಲ್ಲಿ ಬಹಳ ಗೌರವವನ್ನು ಸಂಪಾದಿಸುತ್ತಾರೆ. ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿ ಇರುತ್ತಾರೆ. ಆರನೇ ಮನೆಯಲ್ಲಿ ಗುರು ಜಠರ ಸಂಬಂಧಿ ರೋಗಗಳನ್ನು ಕೊಡುತ್ತಾನೆ. ಹೊಟ್ಟೆ ನೋವು, ಗ್ಯಾಸ್ಟ್ರಿಕ್‌, ಕರುಳಿಗೆ ಸಂಬಂಧಿಸಿದ ಕಾಯಿಲೆಗಳು ಇತ್ಯಾದಿಗಳು ಬರುವ ಸಂಭವ ಇರುತ್ತದೆ. ಏಳನೇ ಮನೆಯಲ್ಲಿ ಗುರು ಒಳ್ಳೆಯ ಸಂಗಾತಿಯನ್ನು ಕೊಡುತ್ತಾನೆ. ಯೋಗ್ಯರಾದ, ವಿದ್ಯಾವಂತರಾದ ಸಂಸ್ಕಾರವಂತರಾದ ಗೌರವಾನ್ವಿತರಾದ ಸಂಗಾತಿ ಪರಸ್ಪರರಿಗೆ ದೊರೆಯುತ್ತಾರೆ. ಸಂಗಾತಿಯೂ ಕೊಂಚ ಸ್ಥೂಲದೇಹಿಯಾಗಿರುವ ಸಾಧ್ಯತೆಗಳಿವೆ. ಇಬ್ಬರೂ ಪರಸ್ಪರ ಅರಿತು ಬೆರೆತು ಸಾಮರಸ್ಯದಿಂದ ಇರುತ್ತಾರೆ. 

ಎಂಟನೇ ಮನೆ ಮಾರಕ ಸ್ಥಾನ. ಅಂದರೆ ಆಯುಸ್ಸಿಗೆ ಸಂಬಂಧಿಸಿದ ಮನೆ. ಗುರು ಎಂಟನೇ ಮನೆಯಲ್ಲಿದ್ದರೆ ಅಂಥವರ ಆಯಸ್ಸು 70-80 ಆಚೀಚೆಯವರೆಗೂ ಇರುತ್ತದೆ ಹಾಗೂ ಅವರು ತಮ್ಮ ಕೊನೆಯ ದಿನಗಳನ್ನು ನೆಮ್ಮದಿಯಾಗಿ ಕಳೆಯುತ್ತಾರೆ. ಒಂಭತ್ತನೇ ಮನೆಯ ಗುರು ವಿಪುಲವಾದ ಭಾಗ್ಯವನ್ನು ಕೊಡುತ್ತಾನೆ. ಸದ್ಬುದ್ಧಿಯನ್ನು, ಧರ್ಮಬುದ್ಧಿಯನ್ನು ಕೊಡುತ್ತಾನೆ. ದೇವತಾ ಕಾರ್ಯಗಳನ್ನು ಮಾಡಿಸುತ್ತಾನೆ. ದೇವರಲ್ಲಿ ಗುರು ಹಿರಿಯರಲ್ಲಿ ಭಕ್ತಿ ಗೌರವವನ್ನು ಕೊಡುತ್ತಾನೆ. ಪುಣ್ಯಕ್ಷೇತ್ರಗಳ ಯಾತ್ರೆ ಮಾಡಿಸುತ್ತಾನೆ. ಸಜ್ಜನರ ಸ್ನೇಹ ಮಾಡಿಸುತ್ತಾನೆ. ಆಪತ್ಕಾಲದಲ್ಲಿ ಸಜ್ಜನರಿಂದ ಸಹಾಯ ಮಾಡಿಸುತ್ತಾನೆ. ಸಜ್ಜನರನ್ನು ಕಷ್ಟಕಾಲದಲ್ಲಿ ಬೆನ್ನಿಗೆ ರಕ್ಷೆಯಾಗಿ ನಿಲ್ಲಿಸುತ್ತಾನೆ. ಹತ್ತನೆ ಮನೆ ಗುರು ಒಳ್ಳೆಯ ಗೌರವಾನ್ವಿತ ಹುದ್ದೆ ಕೊಡಿಸುತ್ತಾನೆ. ಸಮಾಜದಲ್ಲಿ ಸರೀಕರಲ್ಲಿ ಗೌರವ ಸಂಪಾದಿಸುವಂತೆ ಮಾಡುತ್ತಾನೆ. ಶಾಲಾಕಾಲೇಜುಗಳನ್ನು ಕಟ್ಟಿಸುವುದು, ವಿದ್ಯಾದಾನ ಮಾಡುವುದು ಮುಂತಾದ ಯೋಗ್ಯ ಕಾರ್ಯಗಳನ್ನು ಮಾಡುತ್ತಾರೆ. ಅನಗತ್ಯವಾಗಿ ಒಂದು ಪೈಸೆಯನ್ನು ಸಂಪಾದಿಸಲು ಬಿಡುವುದಿಲ್ಲ. ಲಂಚರುಷುವತ್ತಿಗೆ ಇವರು ಆಸೆ ಪಡರು.  ಕರ್ಮಸ್ಥಾನದ ಗುರು ಅಪಾರ ಸೌಭಾಗ್ಯಗಳನ್ನು ಕೊಡುತ್ತಾನೆ. ಹನ್ನೊಂದನೇ ಮನೆ ಸದ್ಬುದ್ಧಿ ಸಚ್ಚಾರಿತ್ರ ಮಿತ್ರರನ್ನು ಕೊಡುತ್ತಾನೆ. ಅನ್ಯಾಯ ಮೂಲದಿಂದ ಹಣ ಬರಲು ಬಿಡುವುದಿಲ್ಲ. ಹನ್ನೆರಡನೇ ಮನೆ ಗುರು ಧರ್ಮ ಕಾರ್ಯಗಳಿಗೆ ಖರ್ಚು ಮಾಡಿಸುತ್ತಾನೆ. ದೇವತಾ ಕಾರ್ಯಗಳಿಗೂ ಇವರು ಖರ್ಚು ಮಾಡಲು ಹಿಂದೆ ಮುಂದೆ ಯೋಚಿಸುವುದಿಲ್ಲ. ದೇವಸ್ಥಾನಗಳನ್ನು ಕಟ್ಟಿಸುವುದು ದೇವಾಲಯಗಳ ಜೀರ್ಣೋದ್ಧಾರದ ಕೆಲಸ ಇವೆಲ್ಲವನ್ನೂ ಸಂತೋಷದಿಂದ ಮಾಡುತ್ತಾರೆ. ದಾನಧರ್ಮಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ. 

ಇಷ್ಟೆಲ್ಲವೂ ಗುರು ಅನುಗ್ರಹಿಸುವುದು ತಾನು ಸ್ವತಂತ್ರನಾಗಿ ಯಾವುದೇ ಶತೃಗ್ರಹದ ದೃಷ್ಟಿಯಿಂದ ಪೀಡಿತನಲ್ಲದೆ ಇರುವಾಗ. ಗುರುವಿನ ಮೇಲೆ ರಾಹು ದೃಷ್ಟಿಯೋ ಅಥವಾ ಶನಿದೃಷ್ಟಿಯೋ ಇದ್ದರೆ ಗುರು ಮಂಕಾಗುತ್ತಾನೆ. ಗುರು ಮಕರದಲ್ಲಿದ್ದರೂ ಶುಭಫ‌ಲಗಳು ಕಡಿಮೆ. ಗುರು ಕಟಕದಲ್ಲಿ, ಧನುಸ್ಸು ಮೀನದಲ್ಲಿ ಇದ್ದರೆ ಪೂರ್ಣಫ‌ಲ ಸಿಗುತ್ತದೆ. ಸಿಂಹದಲ್ಲಿ, ಮೇಷದಲ್ಲಿ, ವೃಶ್ಚಿಕದಲ್ಲಿ ಇದ್ದರೂ ಧಾರಾಳವಾಗಿ ಶುಭಫ‌ಲಗಳನ್ನು ಕೊಡುತ್ತಾನೆ. ವೃಷಭ, ತುಲಾ ಮಿಥುನ ಕನ್ಯಾ ಇವು ಗುರುವಿಗೆ ಶತೃನ ಮನೆ. ಇಲ್ಲಿ ಗುರುವಿದ್ದಾಗ ಶುಭಫ‌ಲಗಳನ್ನು ಕೊಟ್ಟರೂ ನಿಧಾನ. ಕುಂಭದಲ್ಲಿ ಗುರುವಿದ್ದರೂ ಅದು ಶನಿಯ ಮನೆಯಾದ್ದರಿಂದ ಶುಭ ಫ‌ಲಗಳನ್ನು ಕೊಡುವುದು ನಿಧಾನವಾಗುತ್ತದೆ. ನಾವು ಹೇಗೆ ನಮಗೆ ಬೇಡದವರ ಮನೆಯಲ್ಲಿ ಇದ್ದರೆ ಕಿರಿಕಿರಿ ಅನುಭವಿಸುತ್ತೇವೋ ಹಾಗೆಯೇ ಗ್ರಹಗಳು ಕೂಡ ಅವರಿಗೆ ತವಲ್ಲದ ರಾಶಿಗಳಲ್ಲಿ ಇದ್ದರೆ ಕಿರಿಕಿರಿ ಅನುಭವಿಸುತ್ತಾರೆ. ಅದರ ಫ‌ಲ ಆ ಜಾತಕದವರಿಗೆ ಲಭಿಸುತ್ತದೆ. 

ಗಜಕೇಸರಿ ಯೋಗ ಅಂದರೆ…
ಗುರು ಚಂದ್ರನೊಂದಿಗೆ ಇದ್ದರೆ ಅಥವಾ ಚಂದ್ರನಿಂದ ನಾಲ್ಕನೆ ಮನೆ, ಏಳನೇ ಮನೆ ಹಾಗೂ ಹತ್ತನೇ ಮನೆಯಲ್ಲಿದ್ದರೆ ಅದನ್ನು ಗಜಕೇಸರಿ ಯೋಗ ಎನ್ನುತ್ತಾರೆ. ಗಜ ಮತ್ತು ಕೇಸರಿ ಎರಡಕ್ಕೂ ಎಷ್ಟು ಶಕ್ತಿ ಇರುವುದೋ ಅಷ್ಟು ಮನೋಬಲ ಈ ಜಾತಕದವರಿಗೆ ಇರುತ್ತದೆ. ಇವರು ಯಾವುದೇ ಕೆಲಸವನ್ನಾದರೂ ಲೀಲಾಜಾಲವಾಗಿ ಮಾಡಬಲ್ಲರು. ಯಾವುದೇ ಅಡೆತಡೆಗಳನ್ನು ಎದುರಿಸಬಲ್ಲರು. ಆ ಗೋಡೆಗಳನ್ನು ಮುರಿದುಕೊಂಡು ಮುನ್ನುಗ್ಗುತ್ತಾರೆಯೇ ವಿನಾ ಹೆದರಿ ಹಿಂಜರಿಯುವುದಿಲ್ಲ.  ಗಜಕೇಸರಿ ಯೋಗವೆಂಬುದು ಇದ್ದರೆ ಅದು ಹುಟ್ಟಿದಾಗಿನಿಂದ ಕೊನೆಯವರೆಗೂ ಇರುವಂಥದ್ದು. ಇದು ಹಣವನ್ನು ಕೊಡುವ ಯೋಗವಲ್ಲ. ಕಷ್ಟನಷ್ಟಗಳನ್ನು ಸಮರ್ಥವಾಗಿ ಎದುರಿಸುವ ಮನೋಬಲವನ್ನು ಕೊಡುವ ಯೋಗ. ಆ ಮನೋಬಲದಿಂದಲೇ ತಮ್ಮ ಕಷ್ಟಗಳಿಗೆ ಪರಿಹಾರವನ್ನು ಕಂಡುಕೊಂಡು ಜಯಶಿಲರಾಗುತ್ತಾರೆ. ತೀರಾ ಕುತ್ತಿಗೆಗೆ ಬಂದಿದೆ ಎನ್ನುವಾಗ ಯಾವುದೋ ಒಂದು ಅದೃಶ್ಯಶಕ್ತಿ ಇವರನ್ನು ಕಾಪಾಡುತ್ತದೆ.  ಚಂದ್ರನಿಂದ ಗುರು ಐದನೇ ಮನೆ ಅಥವಾ ಒಂಭತ್ತನೇ ಮನೆಯಲ್ಲಿ ಇದ್ದರೆ ಅದನ್ನು ಸರಸ್ವತಿ ಯೋಗವೆನ್ನುತ್ತಾರೆ. ಇವರು ಅಪಾರ ವಿದ್ಯಾವಂತರೂ, ವಿದ್ಯಾದಾನಿಗಳು ಆಗಿರುತ್ತಾರೆ. ಗುರುಗ್ರಹದ ಅಧಿಪತಿ ದೇವಗುರು ಬೃಹಸ್ಪತಿ. ಇದರ ಅಧಿದೇವತೆ ಈಶ್ವರ. ಗುರುನ ಧಾನ್ಯ ಕಡಲೆ. ಬಣ್ಣ ಹಳದಿ. ಲೋಹ ಚಿನ್ನ. ರತ್ನ ಪುಷ್ಯರಾಗ.  

ವೀಣಾ ಚಿಂತಾಮಣಿ

ಟಾಪ್ ನ್ಯೂಸ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.