ಭಕ್ತರ ಆರಾಧ್ಯ ದೈವ ಕಲ್ಲೋಳಿ ಹನುಮಪ್ಪ


Team Udayavani, Jun 16, 2018, 12:27 PM IST

2-aa.jpg

ಸವದತ್ತಿಯ ರಟ್ಟರ ಶಾಸನದಲ್ಲಿ ಇದನ್ನು ಸಿಂಧನಕಲ್ಲೋಳಿ ಎಂದು ಕರೆಯಲಾಗಿದೆ. ಘಟಪ್ರಭಾ ನದಿಯ ಉಪನದಿಯಾದ ಇಂದ್ರವೇಣಿ ನದಿ ದಂಡೆಯ ಮೇಲೆ ಈ ಊರು ಇದೆ.  ಇಲ್ಲಿನ ಜನ ಹನುಮಪ್ಪನನ್ನು ಮಾರುತೆಪ್ಪ ಕಲ್ಲೋಳೆಪ್ಪ ಎಂದು ಆರಾಧಿಸುತ್ತಾರೆ.  

 ರಾಮಾಯಣ ಮೊದಲುಗೊಂಡು, ಮಹಾಭಾರತದ ಆದಿಯಾಗಿ ನಾಡಿನೆಲ್ಲೆಡೆ ಹನುಮ ದೇವರ ಚರಿತ್ರೆಯನ್ನು ಮಹಾಗ್ರಂಥಗಳಲ್ಲಿ ಕಾಣುತ್ತೇವೆ. ಹನುಮನ ಆರಾಧಕರ ಸಂಖ್ಯೆಯಂತೂ ದಿನೇ ದಿನೆ ಹೆಚ್ಚುತ್ತಲೇ ಇದೆ.  ಅಂಜನಿಪುತ್ರ ಹನುಮಾನ್‌ನನ್ನು ಕುರಿತು ನೆನೆದರೆ ಸಾಕು, ಕಷ್ಟಗಳೆಲ್ಲ  ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.  ಹೀಗಾಗಿ, ನಾಡಿನೆಲ್ಲೆಡೆ ಹನುಮನ ದೇವಾಲಯಗಳಿವೆ. ಅವುಗಳಲ್ಲಿ ಗೋಕಾಕ ಮತ್ತು ಮೂಡಲಗಿಯ ಮಾರ್ಗ ಮಧ್ಯದಲ್ಲಿ ಬರುವ ಕಲ್ಲೋಳಿ ಹನುಮಪ್ಪ ದೇಗುಲವೂ ಒಂದು.  ಇದನ್ನು ಸಮರ್ಥ ರಾಮದಾಸರು ಪ್ರತಿಷ್ಟಾಪನೆ ಮಾಡಿದ್ದಾರೆ ಎಂಬ ಪ್ರತೀತಿ ಇದೆ.  ಮಹಾರಾಷ್ಟ್ರ-ಪುಣೆ, ಮುಂಬೈ ಪ್ರಾಂತ್ಯಗಳ ಜನರೂ ಕೂಡ ಇಲ್ಲಿನ ಹನುಮನ ಭಕ್ತರಾಗಿದ್ದಾರೆ.

   ಸಮರ್ಥ ರಾಮದಾಸರು, ಮಹಾರಾಷ್ಟ್ರದಲ್ಲಿ ಬಾಳಿದ ಸಂತರು.  ಶ್ರೀರಾಮನ ಭಕ್ತರಾಗಿ ಚಾಪಳದಲ್ಲಿ ಶ್ರೀರಾಮ ಮಂದಿರ ಸ್ಥಾಪಿಸಿದರು. ಹನ್ನೆರಡು ವರ್ಷಗಳ ತಪಸ್ಸಿನಿಂದ ಶ್ರೀರಾಮನನ್ನು ಸಾûಾತ್ಕರಿಸಿಕೊಂಡವರು. ಸಜ್ಜನಗಡದಲ್ಲಿ ನೆಲೆಸಿ ಜನರಲ್ಲಿ ಧರ್ಮ ಅಧ್ಯಾತ್ಮ ಚಿಂತನೆಯನ್ನು ಬಿತ್ತಿದವರು. ಶಿವಾಜಿ ಮಹಾರಾಜನಿಗೆ ಗುರುಗಳಾಗಿದ್ದ ಧರ್ಮಇವರು,   ಹನುಮನ ಮೂರ್ತಿಗಳನ್ನು ಪ್ರತಿಷ್ಟಾಪನೆಗೈದವರು. ಹೀಗೆ ಕಲ್ಲೋಳಿಯಲ್ಲಿಯೂ ಇವರ ಮೂಲಕ ಹನುಮನ ದೇಗುಲವಾಗಿದೆಯಂತೆ.

  ಕಲ್ಲೋಳಿ, ಗೋಕಾಕದಿಂದ 11 ಕಿ.ಮೀ, ಬೆಳಗಾವಿಯಿಂದ 69 ಕಿ.ಮೀ. ಬೆಂಗಳೂರಿನಿಂದ 548 ಕಿ.ಮೀ. ದೂರದಲ್ಲಿದೆ.      ಸವದತ್ತಿಯ ರಟ್ಟರ ಶಾಸನದಲ್ಲಿ ಇದನ್ನು ಸಿಂಧನಕಲ್ಲೋಳಿ ಎಂದು ಕರೆಯಲಾಗಿದೆ. ಘಟಪ್ರಭಾ ನದಿಯ ಉಪನದಿಯಾದ ಇಂದ್ರವೇಣಿ ನದಿ ದಂಡೆಯ ಮೇಲೆ ಈ ಊರು ಇದೆ.  

ಈ ಊರಿನ ಜನ ಹನುಮಪ್ಪನನ್ನು ಮಾರುತೆಪ್ಪ ಕಲ್ಲೋಳೆಪ್ಪ ಎಂದು ಆರಾಧಿಸುತ್ತಾರೆ.  ನಿಮ್ಮ ಬದುಕಿನ ಎಂತಹ ಕಷ್ಟವೇ ಬರಲಿ,  ಒಂದು ಸಲ ಪ್ರಾಣದೇವರ ಹೆಸರನ್ನು ನೆನೆಯಿರಿ. ಕಲ್ಲೋಳೆಪ್ಪ ಎಲ್ಲವನ್ನೂ ಪರಿಹರಿಸುವನು ಎನ್ನುವ ಮಾತು ಈ ಭಾಗದಲ್ಲಿ ಪ್ರಚಲಿತದಲ್ಲಿದೆ. ಗೋಕಾಕ ಮೂಲಕ ಕಲ್ಲೋಳಿಗೆ ಬಂದರೆ ಬಸ್‌ಸ್ಟಾಂಡ್‌ನಿಂದ ಅನತಿ ದೂರದಲ್ಲಿಯೇ ಈ ದೇವಾಲಯವುಂಟು. ಸುತ್ತಲೂ ಎತ್ತರದ ವಿಶಾಲವಾದ ಗೋಡೆ ಇದೆ.  ಮಹಾದ್ವಾರವನ್ನು ಪ್ರವೇಶಿಸಿ ಒಳಬಂದರೆ ಚಿಕ್ಕ ದಿಡ್ಡಿ ಬಾಗಿಲು ಕಾಣುತ್ತದೆ. ಅದರ ಮುಂದೆ ಬೋರಗಲ್‌ ಇದೆ.  ಈ ಬಾಗಿಲಿನಿಂದ ಒಳ ಪ್ರವೇಶಿಸಿದರೆ ವಿಶಾಲವಾದ ಪ್ರಾಂಗಣ, ಶಿವನ ಮೂರ್ತಿ ಹೊಂದಿದ ಪುಟ್ಟ ದೇಗುಲ. ದೇವಾಲಯದ ಕಾರ್ಯಾಲಯ. ಸಭಾಗೃಹಗಳು ಹೀಗೆ ಎಲ್ಲವನ್ನೂ ದೇಗುಲ ಒಳಗೊಂಡಿದೆ. ದೇವಾಲಯದ ಒಂದು ಬದಿಯಲ್ಲಿ  ದೀಪಸ್ತಂಭ ಕೂಡ ಇದೆ.
 ದೇವಾಲಯದ ಒಳಗೆ ನಿಂತಿರುವ ಹನುಮಪ್ಪನ ಮೂರ್ತಿ ಗಮನ ಸೆಳೆಯುತ್ತದೆ. ಇಲ್ಲಿ ಕಾಟಮುತ್ತೆಪ್ಪ ಮತ್ತು ಅಜ್ಜಪ್ಪ ಸ್ವಾಮಿಗಳ ಸನ್ನಿಧಾನ ಎಂಬ ಎರಡು ಪುಟ್ಟ ದೇಗುಲಗಳೂ ಉಂಟು.  ಭಕ್ತರಿಗೆ ವಸತಿ ಸಲುವಾಗಿ ದೇವಾಲಯದವರು ಒದಗಿಸುವ ಕೊಠಡಿಗಳು ಪ್ರಾಂಗಣದಲ್ಲಿ ಇವೆ.

ಈ ಹನುಮಪ್ಪನ ಪೂಜೆಯ ತೀರ್ಥಜಲವನ್ನು ಹಾಗೂ ಲಿಂಗದ ಪೂಜಾ ತೀರ್ಥದ ಜಲವನ್ನು ನಂಜು ನಿವಾರಕವಾಗಿ ಬಳಕೆ ಮಾಡುತ್ತಿರುವರು. ಆ ತೀರ್ಥದಲ್ಲಿ ಅಂತಹ ಶಕ್ತಿಯಿದೆ ಎಂದು ಹೇಳುವರು. ಅಷ್ಟೇ ಅಲ್ಲ, ಚಿಕ್ಕ ದಿಡ್ಡಿ ಬಾಗಿಲಿನ ಮುಂದಿರುವ ಬೋರಗಲ್‌ಗೆ ನಿಮ್ಮ ಶರೀರದ ತಲೆ, ಬೆನ್ನು, ಸೊಂಟ ಇತ್ಯಾದಿ ತಿಕ್ಕಿದರೆ(ಸ್ಪರ್ಶಿಸಿದರೆ) ಅವುಗಳಲ್ಲಿರುವ ವಾಯುಕಾರಕ ನೋವು ಮಾಯವಾಗುವುದೆಂಬ ನಂಬಿಕೆಯೂ ಇದೆ. ಹನುಮಪ್ಪ ದೇವರ ಬೃಹತ್‌ ಪಾದುಕೆಗಳನ್ನು ಭಕ್ತರು ತಲೆಯ ಮೇಲೆ ಇರಿಸಿಕೊಳ್ಳುವ ಮೂಲಕ ಆರ್ಶಿವಾದ ಪಡೆಯುವರು. 

 ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ ಜರುಗುವುದು. ಮಾರ್ಗಶಿರ ಮಾಸದಲ್ಲಿ ಪಲ್ಲಕ್ಕಿ ಉತ್ಸವವೂ ನಡೆಯುತ್ತದೆ. ಎರಡು ವಾರಗಳ ಕಾಲ ಅದ್ದೂರಿ ಜಾತ್ರೆ ಕೂಡ ಹನುಮಪ್ಪನಿಗೆ ಜರುಗುತ್ತದೆ. ಅಮಾವಾಸ್ಯೆ ಮತ್ತು ಶನಿವಾರಗಳಂದು  ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹನುಮಪ್ಪನ ದರ್ಶನ ಪಡೆಯುತ್ತಾರೆ. 

ವೈ.ಬಿ.ಕಡಕೋಳ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.