ಭವಿಷ್ಯದ ಕ್ರೀಡಾಪಟುಗಳಿಗೆ ಇಲಿಯಾಸ್‌ ಪೋಷಕ


Team Udayavani, Jun 23, 2018, 1:31 PM IST

366.jpg

ಸಾಧನೆಗೆ ಗುರಿ ಎಷ್ಟು ಮುಖ್ಯವೋ  ಗುರುವೂ ಅಷ್ಟೇ ಮುಖ್ಯ. ಪ್ರತಿಭೆ ಇದ್ದರೆ ಮಾತ್ರ ಸಾಲದು. ಅದನ್ನು ಪೋಷಿಸುವ ಮನಸ್ಸೂ ಕೂಡ ಇರಬೇಕು. ಅಗಷ್ಟೇ ಉನ್ನತ ಮಟ್ಟದ ಸಾಧನೆ ಸಾಧ್ಯವಾಗಬಲ್ಲದು. ಅಂತೆಯೇ ಇಲ್ಲೊಬ್ಬ ವ್ಯಕ್ತಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಪೋಷಿಸಿ ಈಗ ಸುದ್ದಿಯಾಗಿದ್ದಾರೆ. 

ಹೆಸರು ಇಲಿಯಾಸ್‌ ಪಾಷ. ಅವರಿಗೆ 23 ವರ್ಷ. ಮೈಸೂರಿನ ಗಾಂಧಿನಗರದ ನಿವಾಸಿಯಾಗಿರುವ ಪಾಷಾ, ಕಿರಿಯ ವಯಸ್ಸಿನಲ್ಲೇ ಕ್ರೀಡಾಪಟುಗಳಿಗೆ ಸಹಾಯ ಮಾಡುವ, ಅವರ ಪ್ರತಿಭೆಯನ್ನು ಬೆಳೆಸಿ ಪೋಷಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇವರಿಂದ ಅದರಂತೆ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ. ಹೀಗಾಗಿ ಪಾಷಾ ಬಗ್ಗೆ ಈಗ ಸ್ಥಳೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಪಾಷಾ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಸಾಧನೆ
ಇಲಿಯಾಸ್‌ ಅವರು ಮಕ್ಕಳಿಗೆ ಕ್ರೀಡಾ ತರಬೇತಿ ನೀಡಲು ಆರಂಭಿಸುವ ಸಮಯದಲ್ಲಿ ಆರಂಭದಲ್ಲಿ ಮೈದಾನದ ಕೊರತೆ ಇತ್ತು, ಆಗ ಶಾಲೆಯ ಬಳಿಯಲ್ಲಿರುವ ಪಾರ್ಕಿನಲ್ಲಿ ಎಲ್ಲಾ ಮಕ್ಕಳು ಕ್ರೀಡಾ ತರಬೇತಿ ಆರಂಭಿಸಿದರು. ಹೀಗೆ ನಾನಾ ಕ್ರೀಡೆಗಳ  ತರಬೇತಿ ಪಡೆದಿರುವ ಮಕ್ಕಳು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ತಮಿಳುನಾಡು, ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ, ಜಿಮ್ನಾಸ್ಟಿಕ್‌ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಚಿನ್ನದ ಪದಕ ಗಳಿಸಿದ್ದಲ್ಲದೆ, ಹಲವು ಬಾರಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ನಗರಕ್ಕೆ ಕೀರ್ತಿ ತಂದುಕೊಡುವ ಕೆಲಸ ಮಾಡಿದ್ದಾರೆ. ಇಷ್ಟೆಲ್ಲ ಆದರೂ ಇಲಿಯಾಸ್‌ ಮಾತ್ರ ತಾವಾಯಿತು ತಮ್ಮ ಕಾಯಕವಾಯಿತು ಎಂದು ಭವಿಷ್ಯದ ಕ್ರೀಡಾಪಟುಗಳನ್ನು ಕಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ. ಪ್ರಸ್ತುತ ಒಟ್ಟಾರೆ 35ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಅವರು ದಾರಿ ದೀಪವಾಗಿದ್ದಾರೆ. 

ಸಾಹಸಿ ಯುವಕ 
ಇಲಿಯಾಸ್‌ ಪಾಷ, ತಮ್ಮ ಶಾಲಾ ದಿನಗಳಲ್ಲಿ ಕಬಡ್ಡಿ ಆಟದಲ್ಲಿ ಬಹಳ ಆಸಕ್ತಿ ಹೊಂದಿದ್ದು, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದರು. ಆದರೆ ಕಿತ್ತು ತಿನ್ನುವ ಬಡತನದಿಂದಾಗಿ ಅವರಿಗೆ ಮುಂದುವರಿಯಲು ಆಗಲಿಲ್ಲ. ಹೀಗಾಗಿ, ಮುಂದೇನು? ಮಾಡುವುದು ಎನ್ನುವುದನ್ನು ಯೋಚಿಸಿದ ಪಾಷಾ ಕ್ರೀಡಾ ಪೋಷಕನಾಗಿ ಬೆಳೆಯುವ ಸಂಕಲ್ಪ ಮಾಡಿಕೊಂಡರು. ಅದರಂತೆಯೇ ಮಕ್ಕಳ ಆಸಕ್ತಿಗೆ ತಕ್ಕಂತೆ ಕ್ರೀಡಾ ತರಬೇತಿ ನೀಡಲು ಮುಂದಾದರು. 

ಮೈಸೂರಿನ ಬಹುತೇಕ ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲದೆ ಅನೇಕ ಮಕ್ಕಳು ಹೊರಾಂಗಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಹವ್ಯಾಸವನ್ನೇ ಮರೆತಿದ್ದಾರೆ. ಇಂತಹುದೇ ಪರಿಸ್ಥಿತಿ ಮೈಸೂರಿನ ಕ್ಯಾತಮಾರನಹಳ್ಳಿಯ ಶಾಲಾ ಮಕ್ಕಳಿಗೂ ಎದುರಾಗಿತ್ತು. ಸುಸಜ್ಜಿತವಾದ ಆಟದ ಮೈದಾನದ ಕೊರತೆ ಇದ್ದ ಕಾರಣ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ನಶಿಸಿ ಹೋಗುವ ಅಪಾಯವಿತ್ತು. ಇಂತಹ ಪರಿಸ್ಥಿತಿಯಲ್ಲಿ  ಶಾಲಾ ಮಕ್ಕಳಿಗೆ ಇಲಿಯಾಸ್‌ ಪಾಷಾ ನೆರವಾಗಿರುವುದು ವಿಶೇಷ. 

ಮನೆಮನೆಗೆ ತೆರಳಿ ಜಾಗೃತಿ 
ಆರಂಭದಲ್ಲಿ ತಮ್ಮ ಊರಿನ ಸುತ್ತಮುತ್ತ ಸಂಚರಿಸಿ ಇಲಿಯಾಸ್‌ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಕೆಲವರು ಆರಂಭದಲ್ಲಿ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕಿದರು. ಆದರೆ ನಂತರದ ಹಂತದಲ್ಲಿ ಇಲಿಯಾಸ್‌ ಕ್ರೀಡೆಯ ಮಹತ್ವ ಮತ್ತು ಭವಿಷ್ಯದ ದಾರಿಯ ಬಗ್ಗೆ ಪೋಷಕರಿಗೆ ತಿಳಿಸಿ ಅರಿವು ಮೂಡಿಸಿದರು. ಇದಾದ ಬಳಿಕ ಉಚಿತ ಕ್ರೀಡಾ ತರಬೇತಿ ಆರಂಭವಾಯಿತು. ಆರಂಭದಲ್ಲಿ ಮಕ್ಕಳಿಗೆ ತರಬೇತಿ ನೀಡಲು ಕ್ರೀಡಾ ಪರಿಕರಗಳು, ಸಮವಸ್ತ್ರ ಇರಲಿಲ್ಲ, ಆಗ ಸ್ವಂತ ಹಣದಿಂದ ಎಲ್ಲಾ ಕ್ರೀಡಾ ಪರಿಕರಗಳನ್ನು ಕೊಡಿಸಿ, ಮಕ್ಕಳಿಗೆ ಆಸಕ್ತಿ ಇರುವ ಕ್ರೀಡೆಗಳ ಬಗ್ಗೆ ಕೋಚಿಂಗ್‌ ನೀಡುತ್ತಿದ್ದರು.  

ಶಾಲಾ ದಿನಗಳಲ್ಲಿ ಕ್ರೀಡಾಪಟುವಾಗಿ ಸಾಧನೆ ಮಾಡುವ ಕನಸಿತ್ತು. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ ಕ್ರೀಡೆಯಲ್ಲಿ ಮುಂದುವರಿಯಲು  ಸಾಧ್ಯವಾಗಲಿಲ್ಲ. ಆದರೆ ನನಗೆ ಎದುರಾದ ಪರಿಸ್ಥಿತಿ ಬೇರೆ ಮಕ್ಕಳಿಗೂ ಆಗಬಾರದೆಂಬ ಕಾರಣಕ್ಕೆ ಉಚಿತ ತರಬೇತಿ ನೀಡುತ್ತಿದ್ದೇನೆ. 
ಇಲಿಯಾಸ್‌ ಪಾಷ, 
ಕ್ರೀಡಾ ಪೋಷಕ, ತರಬೇತುದಾರ

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.