CONNECT WITH US  

ಓವರ್‌ ಲೋಡ್‌ಗೆ ಸಿಕ್ಕಿತು ಭಾರಿ ಮೆಚ್ಚುಗೆ

ಓವರ್‌ ಲೋಡ್‌ ಅಂದರೆ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರನ್ನು ವಾಹನಗಳಲ್ಲಿ ಕರೆದುಕೊಂಡು ಹೋಗುವುದು ಅಥವಾ ಸರಕು ಸಾಗಣೆಗೆ ನಮ್ಮ ದೇಶದಲ್ಲಿ ದಂಡ ವಿಧಿಸಲಾಗುತ್ತದೆ. ಆದರೆ ಅಮೆರಿಕದ ಮೆಸಾಚ್ಯುಸೆಟ್ಸ್‌ ನಲ್ಲಿ ಚಾಲಕ ಮಾಡಿದ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಪಿಕ್‌ಅಪ್‌ ಟ್ರಕ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆತ ವಸ್ತುಗಳನ್ನು ಸಾಗಿಸಿದ್ದ. ಎರಡು ಬಾರಿ ಆತ ಇಂಥ ಸಾಹಸ ಮಾಡಿದ್ದ.

ಮೊದಲ ಬಾರಿ ಟೇಬಲ್‌, ಕುರ್ಚಿ ಮತ್ತು ಇತರ ವಸ್ತುಗಳನ್ನು ಸಾಗಿಸಿದ್ದ. ಎರಡನೇ ಬಾರಿ ಆತ ಗಿಡಗಳನ್ನು ಸಾಗಿಸಿದ್ದ. ಗಮನಾರ್ಹ ಅಂಶವೆಂದರೆ ಅದನ್ನು ಬಿಗಿಯಾಗಿ ಹಗ್ಗದಿಂದ ಕಟ್ಟಿರಲೂ ಇಲ್ಲ. ಪೊಲೀಸರೂ ಕೂಡ ಆರಂಭದಲ್ಲಿ ಚಾಲಕನನ್ನು ಕರೆದು ತರಾಟೆಗೆ ತೆಗೆದುಕೊಂಡಿದ್ದರು. ಆತನ ಸಾಹಸದ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಅದಕ್ಕೂ ಭಾರಿ ಮೆಚ್ಚುಗೆ ಮತ್ತು ವೈರಲ್‌ ಆಗಿದೆ.


Trending videos

Back to Top