ದೇವರು ಎಲ್ಲಿ ಇದ್ದಾನೆ..?


Team Udayavani, Jun 30, 2018, 3:25 AM IST

2566.jpg

ದೇವರು ನಮ್ಮಲ್ಲಿಯೇ ಇದ್ದಾನೆ ಎಂಬುದು ಸತ್ಯವಾದ ಮಾತು. ಅದಕ್ಕೆ ತಕ್ಕಂತೆ ನಮ್ಮ ನಡೆನುಡಿಗಳನ್ನು ರೂಢಿಸಿಕೊಂಡಾಗ ಸದ್‌ಜ್ಯೋತಿಯಿಂದ ಜಗತ್ತು ಬೆಳಗುವುದರಲ್ಲಿ ಸಂಶಯವಿಲ್ಲ.

ಒಬ್ಬನಿಗೆ ದೇವರು ಎಲ್ಲಿದ್ದಾನೆ? ಎಂಬ ಪ್ರಶ್ನೆ ಬಹುವಾಗಿ ಕಾಡಿತಂತೆ. ಕಂಡಕಂಡವರಲ್ಲಿ ಕೇಳುತ್ತ ಹೋದನಂತೆ. ಎಲ್ಲರೂ ಅವರವರ ತಿಳುವಳಿಕೆಗೆ ತಕ್ಕಂತೆ ಉತ್ತರವನ್ನು ಕೊಟ್ಟರು. ಆದರೆ ಆತನಿಗೆ ಆ ಉತ್ತರದಿಂದ ತೃಪ್ತಿಯಾಗಲೇ ಇಲ್ಲ. ಇನ್ನೂ ಉತ್ತರವನ್ನು ಹುಡುಕುತ್ತಲೇ ಹೋದ. ದೇವಾಲಯಗಳಲ್ಲೂ ಆತನಿಗೆ ದೇವರು ಕಾಣಸಿಗಲೇ ಇಲ್ಲ. ಇಲ್ಲ, ಎಲ್ಲೂ ದೇವರಿಲ್ಲ ಎಂದು ಕೊಳ್ಳುತ್ತಿರುವಾಗಲೇ ಸಂತನ ರೂಪದಲ್ಲಿದ್ದ ತೀರಾ ಮುದುಕನೊಬ್ಬ ಎದುರಾದ. 

ಈ ಮಹಾರಾಯ ಅವನನ್ನೂ ಬಿಡಲಿಲ್ಲ. ಹೇಳು, ದೇವರೆಲ್ಲಿದ್ದಾನೆ ? ಎಂದು ವಿಚಾರಿಸಿದ. ಅದಕ್ಕೆ ಉತ್ತರವಾಗಿ ಆ ಸಂತ,  ಬಾ  ಎಂದು ನಿನಗೆ ದೇವರನ್ನು ತೋರಿಸುವುದಾಗಿ ಒಂದು ಕಾಡಿಗೆ ಕರೆದುಕೊಂಡು ಹೋದ.

   ಆ ಸಂತ ಒಂದೆಡೆ ನಿಂತು ಛೆ! ಎಂದು ಉದ್ಗರಿಸಿದ. ಯಾಕೆ ಏನಾಯ್ತು? ದೇವರು ಎಲ್ಲಿಯೂ ಇಲ್ಲ ಅಲ್ಲವೇ? ಎಂದು ಈತ ಅಣಕಿಸುವಂತೆ ನುಡಿದ. ಇಲ್ಲ, ಇಲ್ಲಿಯೇ ಇದ್ದ, ಆದರೆ ನೀನು ಬರುತ್ತಿರುವಂತೆ ಕಾಣಿಸದಾಗಿಬಿಟ್ಟ! ಎಂದ.  ಅದಕ್ಕೆ ಕೋಪಗೊಂಡ ಈತ ನನ್ನನ್ನೇ ತಪ್ಪಿತಸ್ಥನನ್ನಾಗಿ ಮಾಡುತ್ತಿರುವಿರೇನು? ನನ್ನನ್ನು ಕಂಡೊಡನೆ 
ಮಾಯವಾಗಲು ದೇವರಿಗೇನಾಗಿದೆ. ನನಗೆ ಇವತ್ತು ದೇವರೆಲ್ಲಿರುವನೆಂದು ನೀವು ತೋರಿಸಲೇ ಬೇಕು ಎಂದು ಜೋರು ಮಾಡಿದ.   ಆ ಸಂತ, ಗಾಬರಿಯಾಗುವುದು ಬೇಡ. ಅನುಮಾನವೂ ಬೇಡ. ನಿಮಗೆ ಖಂಡಿತವಾಗಿಯೂ ದೇವರನ್ನು  ತೋರಿಸುತ್ತೇನೆ ಎನ್ನುತ್ತ ಮುಂದೆ ನಡೆದ. ಮುಂದೆ ಹೋಗುತ್ತಿದ್ದಂತೆ ವಿಷದ ಹಾವೊಂದು ಆ ಸಂತನನ್ನು ಕಚ್ಚಲು ಮುಂದಾಯಿತು. ಕೂಡಲೆ ಅದನ್ನು ಹಿಡಿದು ದೂರ ಬಿಸಾಡಿಬಿಟ್ಟ. 

 ಸಂತ ನಸುನಗುತ್ತ ಕೇಳಿದ - ” ಈಗ ತಿಳಿಯಿತೇ ದೇವರೆಲ್ಲಿದ್ದಾನೆಂಬುದು?’ ಈತನಿಗೂ ಸಂತನ ಮಾತು ಅರ್ಥವಾಗಲಿಲ್ಲ.  “ಇಲ್ಲ, ದೇವರನ್ನು ನಾನು ಕಾಣಲೇ ಇಲ್ಲ! ಹೇಗೆ ತಿಳಿಯುತ್ತದೆ ನನಗೆ?’ ಎಂದ. 

 “ದೇವರೆ ನಿನ್ನಲ್ಲಿಯೇ ಇದ್ದಾನೆ’
“ಅಂದರೆ!?’
“ವಿಷದ ಹಾವಿನಿಂದ ನನ್ನನ್ನು ರಕ್ಷಿಸಿದೆಯಲ್ಲ; ಆ ಕ್ಷಣ ನೀನು ದೇವರಾಗಿ¨ªೆ’
“ಅದು ನಾನು ಮಾಡಬೇಕಾದ ಕರ್ತವ್ಯವಾಗಿತ್ತು. ನಿಮ್ಮನ್ನು ಕಾಪಾಡಿದೆ ಅಷ್ಟೆ. ಅದರಲ್ಲಿ ದೇವರು ಹೇಗೆ ಕಂಡ?’ 
 ಎಂದ ಈತ ನಗುತ್ತ.
“ನಿನ್ನಲ್ಲಿದ್ದ ದೇವರೇ ನನ್ನನ್ನು ಕಾಪಾಡಿದ್ದು’
“ನೀವು ನನ್ನ ಪ್ರಶ್ನೆಯ ಹಾದಿ ತಪ್ಪಿಸುತ್ತಿದ್ದೀರಿ ಅಷ್ಟೆ. ನನ್ನ ಮನಸ್ಸು ನಿಮ್ಮನ್ನು ಕಾಪಾಡು ಎಂದಿತು. ಆ ಕ್ಷಣಕ್ಕೆ ನಾನು 
ಆ ಹಾವನ್ನು ಹಿಡಿದು ಎಸೆದೆ. ಅದರಲ್ಲಿ ದೇವರ ಪಾತ್ರವೇನಿದೆ?’
“ನಿನ್ನ ಮನಸ್ಸು ಹೇಳಿತು, ಸರಿ. ಅದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಆ ಮನಸ್ಸು ಹಾಗೆ ಹೇಳುವಂತೆ ಮಾಡಿದ್ದಾದರೂ ಯಾವುದು?’
“ಇಲ್ಲ, ಈ ತರ್ಕವನ್ನು ನಾನು ಒಪ್ಪುವುದಿಲ್ಲ’
 “ಸರಿ. ಹಾಗಾದರೆ ನೀನು ಆ ಹಾವನ್ನು ಹಿಡಿದ ಕ್ಷಣ ಅದು ನಿನ್ನನ್ನೇ ನಿನ್ನನ್ನು ಕಚ್ಚಬಹುದೆಂಬ ಯೋಚನೆ ನಿನಗೇಕೆ ಬರಲಿಲ್ಲ? 
ನಿನ್ನ ಮನಸ್ಸಿಗೆ ತಿಳಿಯಲಿಲ್ಲವೇ?’
ಈಗ ಈತನಿಗೆ ಸಂತನ ಮಾತು ಅರ್ಥವಾಯಿತು. ನೋಡು, ದೇವರು ಎÇÉೆಲ್ಲಿಯೂ ಇ¨ªಾನೆ. ಅದರಲ್ಲೂ ಮುಖ್ಯವಾಗಿ ನಮ್ಮಲ್ಲಿಯೇ ಇದ್ದಾನೆ. ನಿನಗೆ ನನ್ನನ್ನು ಕಾಪಾಡುವ ಮನಸ್ಸು ಮತ್ತು ಶಕ್ತಿಯನ್ನು ಕೊಟ್ಟಿದ್ದೇ 
ಆ ದೇವರು. ಹಾಗಾಗಿ ನಾವು ದೇವರನ್ನು ಪೂಜಿಸಬೇಕು. ಈ ಪೂಜೆಗೆ ದೇವರಮೂರ್ತಿ ಒಂದು ಸಂಕೇತ. ಅದು, ಕಣ್ಣಿಗೆ ಕಾಣುವ ಆಕಾರ. ಆದರೆ ಪೂಜೆ ಎಂಬುದು ಮನಸ್ಸನ್ನು ಕಲ್ಮಶಗಳಿಲ್ಲದೆ ಶುದ್ಧವಾಗಿಡುವ ಒಂದು ಸರಳವಿಧಾನ.  ಹಾಗಾಗಿ ಮನಸ್ಸು ಶುದ್ಧವಾದಂತೆ ಎಲ್ಲರಲ್ಲಿಯೂ ದೈವತ್ವ ಹೆಚ್ಚುತ್ತದೆ. ಇದರಿಂದ ಒಳ್ಳೆಯ ಜಗತ್ತು ಆನಂದಮಯ  ಬದುಕು ಸಾಧ್ಯವಾಗುತ್ತದೆ ಎಂದ. ದೇವರೆಲ್ಲಿದ್ದಾನೆ? ಅವನನ್ನು ಪ್ರತ್ಯಕ್ಷ ನೋಡುವುದು ಹೇಗೆ ಎಂದು ಕೇಳಿದ್ದವನ ಪ್ರಶ್ನೆಗೆ ಉತ್ತರಸಿಕ್ಕಿತು. ಆ ಸಂತನೇ ದೇವರಂತೆ ಕಂಡ. ಈತ ತಕ್ಷಣವೇ ಕರಜೋಡಿಸಿ ನಮಸ್ಕರಿಸಿದ. ಈತನಿಗೆ ಆಶೀರ್ವದಿಸಿ ಸಂತ ಹೊರಟುಹೋದ.

ದೇವರು ನಮ್ಮಲ್ಲಿಯೇ ಇದ್ದಾನೆ ಎಂಬದು ಸತ್ಯವಾದ ಮಾತು. ಅದಕ್ಕೆ ತಕ್ಕಂತೆ ನಮ್ಮ ನಡೆನುಡಿಗಳನ್ನು ರೂಢಿಸಿಕೊಂಡಾಗ ಸದ್‌ಜ್ಯೋತಿಯಿಂದ ಜಗತ್ತು ಬೆಳಗುವುದರಲ್ಲಿ ಸಂಶಯವಿಲ್ಲ.
||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳವಾಗಿ ಜೀವಿಸಿ||

ವಿಷ್ಣು ಭಟ್ಟ ಹೊಸ್ಮನೆ

ಟಾಪ್ ನ್ಯೂಸ್

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.