ಸೋಲಿನ ಆಚೆಗಿನ ಹಸಿ ಸತ್ಯಗಳು! 


Team Udayavani, Aug 18, 2018, 10:39 AM IST

1-aa.jpg

ದಾಖಲೆಗಳು ಸುಳ್ಳು ಹೇಳಬಹುದು, ಆದರೆ ಅಂಕಿ -ಅಂಶ ಹಾಗೆ ಹೇಳಲು ಸಾಧ್ಯವಿಲ್ಲ. ಅತ್ಯಂತ ಕಡಿಮೆ ಎಸೆತದಲ್ಲಿ ಟೆಸ್ಟ್‌ ಶತಕ ಬಾರಿಸಿದ ಓರ್ವ ಆಟಗಾರ ಸಾರ್ವಕಾಲಿಕ ಶ್ರೇಷ್ಠ ಆಗಿರಬೇಕಾಗಿಲ್ಲ. ಅದೇ ಎರಡಂಕಿಯ ಇನಿಂಗ್ಸ್‌ಗಳನ್ನು ಆಡಿ 80 ಪ್ಲಸ್‌ ಸರಾಸರಿಯಲ್ಲಿ ರನ್‌ ಹೊಡೆದ ಆಟಗಾರ ಕಳಪೆಯಾಗಿರಲು ಸಾಧ್ಯವಿಲ್ಲ. ಭಾರತದ ಈ ಹಿಂದಿನ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ನ‌ಲ್ಲಿನ ಮೊದಲ ಎರಡು ಟೆಸ್ಟ್‌ಗಳ ನಂತರ ಭಾರತದ ಟಾಪ್‌ ಆಟಗಾರರ ಸರಾಸರಿಯನ್ನು ಗಮನಿಸಿದರೆ ಒಂದಂಶ ಸ್ಪಷ್ಟವಾಗುತ್ತದೆ. ವಿದೇಶಿ ಪಿಚ್‌ಗಳಲ್ಲಿ ಭಾರತೀಯರ ಫಾರಂ ಅನಿಶ್ಚಿತ!

ಇಂಗ್ಲೆಂಡ್‌ ಉತ್ತಮ ತಂಡವಲ್ಲ!
ಕೆ.ಎಲ್‌.ರಾಹುಲ್‌ ಶೇ. 8.12, ಅಜಿಂಕ್ಯ ರಹಾನೆ 11.4, ಮುರಳಿ ವಿಜಯ್‌ 12.8, ರೋಹಿತ್‌ ಶರ್ಮ 10.33, ಚೇತೇಶ್ವರ ಪೂಜಾರ 14.75, ಶಿಖರ್‌ ಧವನ್‌ 17.75 ಹಾಗೂ ತಂಡದ ನಾಯಕ ವಿರಾಟ್‌ ಕೊಹ್ಲಿ 52.6ರ ಸರಾಸರಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ನ‌ಲ್ಲಿ ರನ್‌ ಸಂಗ್ರಹಿಸಿದ್ದಾರೆ. ವಿಶ್ವದ ಟಾಪ್‌ ಒನ್‌ ಟೆಸ್ಟ್‌ ತಂಡ ಎಂಬ ಗೌರವ ಕೂಡ ಭಾರತವನ್ನು ರಕ್ಷಿಸುತ್ತಿಲ್ಲ. ಕಾರಣವಿಷ್ಟೇ, ರನ್‌ಗಳು ಬರದೆ ತಂಡದ 20 ವಿಕೆಟ್‌ ನಷ್ಟವಾದರೆ ಟೆಸ್ಟ್‌ನಲ್ಲಿ ಸೋಲಿನ ಹೊರತಾದ ಫಲಿತಾಂಶ ಬರಲು ಸಾಧ್ಯವಿಲ್ಲ!

ಭಾರತದ ಅಪ್ರತಿಮ ಟೆಸ್ಟ್‌ ಆಟಗಾರರಲ್ಲೊಬ್ಬರಾದ ಸಂಜಯ್‌ ಮಾಂಜ್ರೆàಕರ್‌ ವಿಶ್ಲೇಷಿಸುವುದು ಭಿನ್ನವಾಗಿ, ಪ್ರಶ್ನೆ ಪ್ರತಿಭೆಯದಲ್ಲ, ಪ್ರದರ್ಶನದ್ದು. ಪ್ರತಿಭೆಗೆ ಅಭ್ಯಾಸದ ಕೊರತೆ ಇದ್ದರೆ ರನ್‌ಗಳು, ವಿಕೆಟ್‌ಗಳು ಕಷ್ಟ. ಅದರಲ್ಲೂ ನೆಟ್‌ ಪ್ರಾಕ್ಟೀಸ್‌ ಎಂಬುದು ಯಾವ ರೀತಿಯಲ್ಲಿ ಕೋಚ್‌ ಸಂಘಟಿಸಿರುತ್ತಾರೆ ಎಂಬುದನ್ನು ಅತ್ಯಂತ ಮುಖ್ಯವಾಗಿ ಅವಲಂಬಿಸಿರುತ್ತದೆ. ಉದಾಹರಣೆಗೆ ರಿಷಬ್‌ ಪಂತ್‌ ನೆಟ್‌ನಲ್ಲಿ ಆಡುತ್ತಿದ್ದಾಗ ಆಫ್‌ಸ್ಟಂಪ್‌ ಆಚೆ ಎಸೆದ ಎಷ್ಟು ಚೆಂಡುಗಳನ್ನು ಅ ಕಾರಯುತವಾಗಿ ಹೊರಹೋಗಲು ಬಿಡುತ್ತಾರೆ ಎಂಬುದು ಗಮನೀಯ. ಅದೇ ರೀತಿ ಆರಂಭಿಕ ಶಿಖರ್‌ ಧವನ್‌ ಆಡುವ ಚೆಂಡುಗಳಲ್ಲಿ ಎಷ್ಟು ಮಧ್ಯದ ಬ್ಯಾಟ್‌ಗೆ ಸ್ಪರ್ಶಿಸಿದೆ ಎಂಬ ಅಂಕಿ-ಅಂಶದ ಆಧಾರದಲ್ಲಿ ಅವರ ಫಾರಂನ ಒಂದು ಮಜಲು ಬೆಳಕಿಗೆ ಬರುತ್ತದೆ. ಇದಕ್ಕಿಂತ ಮುಖ್ಯವಾಗಿ ಅಭ್ಯಾಸ ಪಂದ್ಯಗಳು ಆಟದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇತ್ತೀಚಿನ ದಿನಗಳಲ್ಲಿ ವಿದೇಶಿ ತಂಡಗಳು ಪ್ರವಾಸದ ಸಮಯವನ್ನು ಹೊಂದಾಣಿಕೆ ಮಾಡಲು ಅಭ್ಯಾಸ ಪಂದ್ಯಗಳನ್ನು ವೇಳಾಪಟ್ಟಿಗೆ ಸೇರಿಸದೆ ನಿರ್ಲಕ್ಷಿಸುತ್ತವೆ. ಪರಿಣಾಮವಾಗಿ ವಿದೇಶಿ ಪಿಚ್‌ ಸೋಲು ಸಾಮಾನ್ಯವಾಗಿದೆ.

ಸ್ವದೇಶದಲ್ಲೂ ಟೆಸ್ಟ್‌ ಸರಣಿ ಸೋಲುವಲ್ಲಿ ನಿಪುಣರಾಗಿರುವ ಇಂಗ್ಲೆಂಡ್‌ ತಂಡ ಯಾವ ಲೆಕ್ಕದಲ್ಲೂ ಅತ್ಯಂತ ಪ್ರಬಲ ಎನ್ನುವಂತಿಲ್ಲ. ಈ ತಂಡ ಎರಡು ಸರಣಿಗಳಲ್ಲಿ ಅತ್ಯಂತ ದುರ್ಬಲ ಪಾಕಿಸ್ತಾನಕ್ಕೆ ಮೂರು ಟೆಸ್ಟ್‌ಗಳಲ್ಲಿ ಸೋಲು ಉಂಡಿದೆ. ಇಂಗ್ಲೆಂಡ್‌ನ‌ ಟಾಪ್‌ ಮೂರು ಬ್ಯಾಟ್ಸ್‌ಮನ್‌ಗಳ ಪ್ರಥಮ ದರ್ಜೆ ಬ್ಯಾಟಿಂಗ್‌ ಸರಾಸರಿ ಅನುಕ್ರಮವಾಗಿ 31, 33 ಮತ್ತು 37! ಈ ಬಾರಿಯ ಸರಣಿಯ ಭಾರತದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಫಲಿತಾಂಶ ಹೇಗೂ ಆಗಬಹುದಿತ್ತು. ಈ ಎಲ್ಲ ಅಂಶಗಳ ಹೊರತಾಗಿಯೂ ಸತತ ಎರಡು ಟೆಸ್ಟ್‌ ಸೋತಾಗ ಒಂದು ಪ್ರಶ್ನೆ ಕಾಡುತ್ತದೆ, ಸರಣಿಯಲ್ಲಿ 5-0ಯ ಮುಖಭಂಗದ ಸಾಧ್ಯತೆ ಇದೆಯೇ?

ಆಫ್‌ಸ್ಟಂಪ್‌ ಆಚೆ ತಾಳ್ಮೆ!
ಎಜ್‌ಬಾಸ್ಟನ್‌ನಲ್ಲಿ ಒಟ್ಟಾರೆಯಾಗಿ ಭಾರತ ಬಾಳಿದ್ದು 130.2 ಓವರ್‌ಗಳಲ್ಲಿ ಮಾತ್ರ. ಲಾರ್ಡ್ಸ್‌ನಲ್ಲಂತೂ ಭಾರತದ ಮೊದಲ ಪಾಳಿ ಕೇವಲ 35.2 ಓವರ್‌ಗೆ ಸೀಮಿತವಾಗಿತ್ತು. ಈವರೆಗೆ ಭಾರತ ಎದುರಿಸಿದ ಚೆಂಡುಗಳಲ್ಲಿ ಶೇ. 32ರಷ್ಟನ್ನು ವಿರಾಟ್‌ ಒಬ್ಬರೇ ಎದುರಿಸಿದ್ದಾರೆ. ವಿಜಯ್‌, ಧವನ್‌, ರಾಹುಲ್‌, ಪುಜಾರ, ರಹಾನೆಯರೆಲ್ಲ ಸೇರಿ ಶೇ. 34ರಷ್ಟು ಚೆಂಡನ್ನು ಆಡಿದ್ದಾರೆ. ಕೇವಲ ಮೂರು 50 ಪ್ಲಸ್‌ ಜೊತೆಯಾಟ ಬಂದಿದೆ. ಭಾರತದ ಟಾಪ್‌ 10 ಜೊತೆಯಾಟದಲ್ಲಿ ಎಂಟರಲ್ಲಿ ಕೊಹ್ಲಿ ಇದ್ದಾರೆ. ಬಹುಷಃ ಕೋಚ್‌ ರವಿಶಾಸ್ತ್ರಿಯವರಿಗೂ ಭಾರತದ ಯಶಸ್ಸಿಗೆ ಮಾಡಬೇಕಾಗಿರುವುದು ಅರ್ಥವಾಗಿದೆ. ಟೆಸ್ಟ್‌ ಕ್ರಿಕೆಟ್‌ ಎಂದರೆ ಏನು ಎಂಬುದನ್ನು ಆಟಗಾರರು ಆಡಿಯೇ ಅರ್ಥ ಮಾಡಿಕೊಳ್ಳಬೇಕಿದೆ!

ಕಾಂಗರೂ ನಾಡಿನಲ್ಲಿ ಅನಿಲ್‌ ಕುಂಬ್ಳೆ ನಾಯಕತ್ವದಲ್ಲಿ 2007ರಲ್ಲಿ ಭಾರತ ಪ್ರವಾಸಗೈದಾಗ ಡಿಸೆಂಬರ್‌ನಲ್ಲಿ ನಡೆದ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಭಾರತ 337 ರನ್‌ಗಳ ಬೃಹತ್‌ ಅಂತರದಿಂದ ಸೋಲು ಅನುಭವಿಸಿತ್ತು. ಕ್ಯಾಲೆಂಡರ್‌ ಬದಲಾದರೂ ನಸೀಬು ಖುಲಾಯಿಸಲಿಲ್ಲ. 2008ರ ಜನವರಿಯ ಸಿಡ್ನಿ ಟೆಸ್ಟ್‌ನಲ್ಲಿ 122 ರನ್‌ ಪರಾಭವ ಎದುರಾಗಿತ್ತು. 4-0? ಪರ್ತ್‌ನಲ್ಲಿ ಅಮೋಘ ಜಯ ಹಾಗೂ ನಾಲ್ಕನೇ ಟೆಸ್ಟ್‌ನಲ್ಲಿ ಗೌರವಾನ್ವಿತ ಡ್ರಾ. ಪರಿಣಿತರು ಈಗಲೂ ಹೇಳುವುದು ಒಂದೇ ಮಾತು, ಭಾರತದ ಆಟಗಾರರು ವಿದೇಶಗಳಲ್ಲಿನ ತಮ್ಮ ಫಲಿತಾಂಶಗಳನ್ನು ನೋಡುತ್ತ ಕೂರುವ ಬದಲು ತಮ್ಮ ಪ್ರದರ್ಶನದ ಬಗ್ಗೆ ಮಾತ್ರ ಗಂಭೀರವಾಗಿ ಚಿಂತಿಸಬೇಕು. ಆಟಗಾರರ ರನ್‌ಗಳು ಸುಧಾರಿಸಿದರೆ, ವಿಕೆಟ್‌ ಕೀಳುವ ಪ್ರಮಾಣ ಹೆಚ್ಚಿದರೆ ವಿಜಯಗಳ ಉಡುಗೊರೆ ಸಿಗದೆ ಹೋಗದು. 2007-08ರ ಆಸ್ಟ್ರೇಲಿಯಾ ಸರಣಿ ಈಗಲೂ ನೆನಪಿನಲ್ಲಿದೆ. ಇಂಗ್ಲೆಂಡ್‌ ವಿರುದ್ಧದ ಸರಣಿಯನ್ನು ಸ್ಮರಣಾರ್ಹ ಮಾಡಲು ಈಗಲೂ ಅವಕಾಶವಿದೆ.

5-0? ನಾಲ್ಕು ವರ್ಷಗಳ ಕೆಳಗೆ ಇದೇ ಟ್ರೆಂಡ್‌ಬ್ರಿಡ್ಜ್ನಲ್ಲಿ ಭಾರತ ತಲೆ ಎತ್ತಿನಿಂತಿತ್ತು. ಮುರಳಿ ವಿಜಯ್‌ರ 146, ಭುವನೇಶ್ವರ್‌ ಕುಮಾರ್‌ರ ಎರಡು ಅರ್ಧ ಶತಕ ಹಾಗೂ ಒಂದು 5 ವಿಕೆಟ್‌ ಸಾಧನೆ, ಸ್ಟುವರ್ಟ್‌ ಬಿನ್ನಿಯವರ ಪಾದಾರ್ಪಣೆಯ 78 ಪಂದ್ಯವನ್ನು ಡ್ರಾ ಮಾಡಿಸಿಕೊಟ್ಟಿತ್ತು. ಟೆಸ್ಟ್‌ ಕ್ರಿಕೆಟ್‌ನ್ನು ಖುದ್ದು ಬಿಸಿಸಿಐ ಕೂಡ ಗಂಭೀರವಾಗಿ ಪರಿಗಣಿಸದಿರುವುದರಿಂದಲೇ ಭಾರತದ ಜಸ್‌ಪ್ರೀತ್‌ ಬುಮ್ರಾ ತರದವರು ಗಾಯಾಳುವಾಗುತ್ತಿದ್ದಾರೆ. ಕೊಹ್ಲಿ ಬೆನ್ನು ನೋವು ಎಂದು ಹೇಳುತ್ತಿದ್ದಾರೆ. ಅಭ್ಯಾಸ ಪಂದ್ಯಗಳು ರದ್ದಾಗುತ್ತಿವೆ. ಈ ಎಲ್ಲ ಸಮಸ್ಯೆ, ನಾಳೆ 5-0ದ ಸೋಲನ್ನು ಕೂಡ ಒಂದು ಐಪಿಎಲ್‌ ಟೂರ್ನಿ ಮರೆಸಿಬಿಡುತ್ತದೆ ಗೊತ್ತೇ?

ಬಿಸಿಸಿಐ ಮಾಡುವುದು ಎಡವಟ್ಟು!
ಭುವನೇಶ್ವರ ಕುಮಾರ್‌ ಗಾಯಾಳುವಾಗಿಯೇ ಇಂಗ್ಲೆಂಡ್‌ಗೆ ಪ್ರವಾಸ ಹೋದರೋ ಗೊತ್ತಿಲ್ಲ. ಬಿಸಿಸಿಐ ಭುವಿ ಫಿಟ್‌ ಆಗಿದ್ದಾರೆ ಎಂದು ತೋರಿಸಲು ಭುವಿ ಅವರ ಬೌಲಿಂಗ್‌ ನೆಟ್‌ ಪ್ರಾಕ್ಟೀಸ್‌ನ ವಿಡಿಯೋವನ್ನು ಅ ಕೃತ ಟ್ವಿಟರ್‌ ಖಾತೆಯಲ್ಲಿ ಹಾಕಿತು. ನೋಡಿದರೆ, ಭುವಿ ಮಾಡಿದ್ದು ಕಣ್ಣಿಗೆ ರಾಚುವ ನೋಬಾಲ್‌! ಟ್ವೀಟಿಗರು ಕಿಚಾಯಿಸಿದರು, ಮ್ಯಾಚ್‌ ಫಿಕ್ಸಿಂಗ್‌ ಮಾಡಲು ನೋ ಬಾಲ್‌ ತರಬೇತಿ!

2014ರ ಡಿಸೆಂಬರ್‌ನಲ್ಲಿ, 2017ರ ಜನವರಿಯಲ್ಲಿ ಮಹೇಂದ್ರಸಿಂಗ್‌ ಧೋನಿ ಅನುಕ್ರಮವಾಗಿ ಟೆಸ್ಟ್‌, ಸೀಮಿತ ಓವರ್‌ ಪಂದ್ಯಗಳ ನಾಯಕತ್ವವನ್ನು ತ್ಯಜಿಸಿದರು. ಮೊನ್ನೆ ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿ ಸಂದರ್ಭದಲ್ಲೂ ಬಿಸಿಸಿಐ ತನ್ನ ವೆಬ್‌ ಪುಟದಲ್ಲಿ ಭಾರತದ ನಾಯಕ ಎಂದೇ ಕರೆದು ಮುಖಭಂಗಕ್ಕೀಡಾಗಿತ್ತು!

ಆಸೀಸ್‌ ಬರುವ ವರ್ಷದ ಆ್ಯಷಸ್‌ಗಾಗಿ ಈ ವರ್ಷದ ಶೆಫೀಲ್ಡ್‌ಶೀಲ್ಡ್‌ ಸ್ಪರ್ಧೆಗೆ ಇಂಗ್ಲೆಂಡ್‌ನ‌ ಕೆಂಪು ಡ್ನೂಕ್‌ ಚೆಂಡು ಬಳಸಿ ಸಿದ್ಧತೆ ನಡೆಸುತ್ತದೆ. ಬಿಸಿಸಿಐ ವರ್ಷದ ಮುನ್ನ ನಿಗದಿಯಾದ ಅಭ್ಯಾಸದ ಎಸೆಕ್ಸ್‌ ವಿರುದ್ಧದ ಪಂದ್ಯವನ್ನು ರದ್ದುಮಾಡುತ್ತದೆ!

 ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.