CONNECT WITH US  

ಬುಮ್ರಾ ಬೆಂಕಿ ಚೆಂಡು 

ಇಂಗ್ಲೆಂಡ್‌ನ‌ಲ್ಲಿ ಈಗ ವೇಗಿ ಜಸ್‌ಪ್ರೀತ್‌ ಬುಮ್ರಾ ಸ್ಮರಣೆ 

 ಟಿ20 ಕ್ರಿಕೆಟ್‌ ಬರುವ ಮುನ್ನ ಏಕದಿನ ಕ್ರಿಕೆಟ್‌ನಲ್ಲಿ ವಿವಿಯನ್‌ ರಿಚರ್ಡ್ಸ್‌, ಕೃಷ್ಣಮಾಚಾರಿ ಶ್ರೀಕಾಂತ್‌ ಮಾದರಿಯ ಅರೆಕಾಲಿಕ ಬೌಲರ್‌ಗಳು ಒಂದಕ್ಕಿಂತ ಹೆಚ್ಚು ಬಾರಿ ಇನಿಂಗ್ಸ್‌ವೊಂದರಲ್ಲಿ ಐದು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದುಂಟು. 

ಅದೇ ಪಂದ್ಯದಲ್ಲಿ ಶತಕ ಬಾರಿಸಿ ಅಸಲಿ ಆಲ್‌ರೌಂಡರ್‌ ಸಾಧನೆ ಮಾಡಿದ್ದಾರೆ ಎಂದು ಶಹಭಾಷ್‌ಗಿರಿ ಪಡೆದ ದಿನಗಳು ಇತಿಹಾಸದಲ್ಲಿವೆ. ಆದರೆ ವಿಕೆಟ್‌ಗೆ ಮೌಲ್ಯವನ್ನೂ ನಿಗದಿಪಡಿಸುವುದಾದರೆ ಇವರ ಸಾಧನೆಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ವೆಸ್ಟ್‌ ಇಂಡೀಸ್‌ ತಂಡದ ವೇಗಿಗಳ ಎದುರು ರನ್‌ ಮಾಡಲು ಅಸಾಧ್ಯವಾಗಿರುವಾಗ ಪಾರ್ಟ್‌ಟೈಮ್‌ ಬೌಲರ್‌ ರಿಚರ್ಡ್ಸ್‌ರ ಆಫ್‌ ಸ್ಪಿನ್‌ನ ಗರಿಷ್ಠ 10 ಓವರ್‌ಗಳಲ್ಲಿ ಆದಷ್ಟು ರನ್‌ ಬಾಚಿಬಿಡೋಣ ಎಂಬ ಆಟಗಾರರ ಹವಣಿಕೆಯಿಂದ ವಿಕೆಟ್‌ ಬೀಳುತ್ತಿದ್ದವು. ಕ್ರಿಶ್‌ ಶ್ರೀಕಾಂತ್‌ರ ಕಥೆಯೂ ಅದೇ. ರಿಚರ್ಡ್ಸ್‌ ಏಕದಿನದಲ್ಲಿ 2 ಬಾರಿ 5 ವಿಕೆಟ್‌ ಸಾಧನೆ ಸೇರಿದಂತೆ 118 ವಿಕೆಟ್‌ ಸಂಪಾದಿಸಿದ್ದಾರೆ. ಟೆಸ್ಟ್‌ನಲ್ಲಿ 32 ವಿಕೆಟ್‌ ಸಿಕ್ಕಿದೆಯಾದರೂ ಒಂದೇ ಒಂದು 5 ವಿಕೆಟ್‌ ಸಾಹಸ ಇಲ್ಲ. ಇತ್ತ ಕೆ.ಶ್ರೀಕಾಂತ್‌ 2 ಐದು ವಿಕೆಟ್‌ ಸಾಧನೆ ಸಹಿತ ಏಕದಿನ ಕ್ರಿಕೆಟ್‌ನಲ್ಲಿ 25 ವಿಕೆಟ್‌ ಪಡೆದಿದ್ದರೆ ಟೆಸ್ಟ್‌ನಲ್ಲಿ ಒಂದೇ ಒಂದು ವಿಕೆಟ್‌ ಪಡೆದಿಲ್ಲ!

ಕ್ರಿಶ್‌ ಸಾಧನೆಯನ್ನು ಕುಗ್ಗಿಸಿ ವಿಷಯವನ್ನು ಪ್ರತಿಪಾದಿಸಬೇಕಾಗಿಲ್ಲ. ಆದರೆ ಟೆಸ್ಟ್‌ ಕ್ರಿಕೆಟ್‌ನ ಬೌಲಿಂಗ್‌ಗಿರುವ ಮಹತ್ತು, ಅಲ್ಲಿ ಗಳಿಸುವ ವಿಕೆಟ್‌ಗಳ ಮೌಲ್ಯ ಹೇಳುವಾಗ ಪ್ರತಿಭಾವಂತ ಬೌಲರ್‌ಗಳು ನೆನಪಾಗುತ್ತಾರೆ. ಇಂಗ್ಲೆಂಡ್‌ ವಿರುದ್ಧದ ಮೂರನೇ ಟೆಸ್ಟ್‌ ನಂತರ ಭಾರತ ಕೂಡ ಪಂದ್ಯ ಗೆಲ್ಲಿಸಬಲ್ಲ ಬೌಲರ್‌ ಇದ್ದರೆ ಮಾತ್ರ ಜಯದ ಹಾದಿ ತೆರೆದುಕೊಳ್ಳುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡಿದೆ. ಇಷ್ಟಕ್ಕೂ ಟೆಸ್ಟ್‌ನಲ್ಲಿ 20 ವಿಕೆಟ್‌ ಪಡೆದರೆ ಮಾತ್ರ ಗೆಲುವು!

ಬುಮ್ರಾ ಆಗಮನದಿಂದ ಜಯ!
ಜಸ್ಪೀತ್‌ ಬುಮ್ರಾ ತರಹದ ವೇಗಿಯ ಆಗಮನ ಇಂಗ್ಲೆಂಡ್‌ನ‌ಲ್ಲಿರುವ ಭಾರತದ ಟೆಸ್ಟ್‌ ಹಾದಿಯಲ್ಲಿ ಗೆಲುವಿವು ತಂದುಕೊಟ್ಟಿದೆ. ಐರ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಬೆರಳಿಗೆ ಗಾಯ ಮಾಡಿಕೊಂಡ ಬುಮ್ರಾ ಇಂಗ್ಲೆಂಡ್‌ ಎದುರು ನಡೆದ ಯಾವುದೇ ಸೀಮಿತ ಓವರ್‌ ಪಂದ್ಯ ಆಡಲಿಲ್ಲ. ಮೊದಲ ಎರಡು ಟೆಸ್ಟ್‌ ಕೂಡ ತಪ್ಪಿಸಿಕೊಂಡು ಭಾರತದಲ್ಲಿ ಮನೆಯಲ್ಲಿ ಕುಳಿತು ಟಿವಿ ನೋಡಿದರು. 

 ಐರ್ಲೆಂಡ್‌ನ‌ಂತಹ ತಂಡದ ಎದುರು ಟಾಪ್‌ ಆಟಗಾರರನ್ನು ಆಟಕ್ಕಿಳಿಸುವ ರಿಸ್ಕ್ಗಿಂತ ಹೊಸ ವೇಗಿಗಳನ್ನು ಬಿಸಿಸಿಐ ಅಲ್ಲಿ ಪ್ರಯೋಗಿಸಬೇಕಿತ್ತು. ಐಪಿಎಲ್‌ನಲ್ಲಿ ಕೂಡ ಆಡುವ ಬೌಲರ್‌ಗಳಿಗೆ ಶ್ರಾಂತಿಯ ಅಗತ್ಯರುತ್ತದೆ. ದೇಶದ ಕರೆ ತಪ್ಪಿಸಿ ಐಪಿಎಲ್‌ ಮಾತ್ರ ಏಕೆ ಎಂಬ ಆಕ್ಷೇಪ ಹೇಳುವವರೂ ಅರ್ಥ ಮಾಡಿಕೊಳ್ಳಬೇಕು, ಆಟಗಾರನ ಕ್ಯಾರಿಯರ್‌ ಎಂಬುದು ಕೆಲವೇ ವರ್ಷಗಳ ಅವ . ಅದರಲ್ಲಿ ಅವರು ತಮ್ಮ ಬದುಕನ್ನು ಸುಸೂತ್ರಗೊಳಿಸಿಕೊಳ್ಳುವ ಆದಾಯ ಸಂಪಾದಿಸಿರಬೇಕು. ನಿಜಕ್ಕಾದರೆ ಗುಜರಾತ್‌ನ 25 ವರ್ಷದ ಜಸಿøàತ್‌ ಜಬ್ಬೀರ್‌ಸಿಂಗ್‌ ಬುಮ್ರಾ ಭಾರತೀಯ ತಂಡದಲ್ಲಿ ಕಾಣಿಸಲು ಇಂಡಿಯನ್‌ ಪ್ರೀುಯರ್‌ ಲೀಗ್‌ ಕಾರಣ!

ಬುಮ್ರಾ ಬೌಲಿಂಗ್‌ನಲ್ಲಿ ವೇಗದೆ, ಬೌಲಿಂಗ್‌ ಶೈಲಿ ಬ್ಯಾಟ್ಸ್‌ಮನ್‌ಗಳನ್ನು ಗೊಂದಲಕ್ಕೀಡುಮಾಡುತ್ತದೆ. ಬೌನ್ಸರ್‌ ಹಾಗೂ ಯಾರ್ಕರ್‌ ಹಾಕುವಲ್ಲಿ ಶೇಷ ಪರಿಣತಿಯನ್ನು ಪಡೆಯುತ್ತಿದ್ದಾರೆ. ಟೆಸ್ಟ್‌ನಲ್ಲಿ ಹರಿತವಾದ ಬೌನ್ಸರ್‌ ಹಾಕುವ ಕಲೆ ಬಂದರೆ ಮಾತ್ರ ಕೆಟ್‌ ಸುಗ್ಗಿ. ದಕ್ಷಿಣ ಆಫ್ರಿಕಾ ರುದ್ಧ ಅಲ್ಲಿನ ನೆಲದಲ್ಲಿ ಮೊದಲ ಟೆಸ್ಟ್‌ ಆಡಿದ ಬುಮ್ರಾ ಕೇವಲ ನಾಲ್ಕು ಟೆಸ್ಟ್‌ಗಳಲ್ಲಿ 21 ಕೆಟ್‌ ಪಡೆದಿದ್ದಾರೆ. ಇದು ಭಾರತೀಯ ವೇಗಿಯೊಬ್ಬನ ಗರಿಷ್ಠ ಸಂಪಾದನೆ, ವೆಂಕಟೇಶ್‌ ಪ್ರಸಾದ್‌ ಹಾಗೂ ಮುನಾಫ್‌ ಪಟೇಲ್‌ರ 19ನ್ನು ದಾಟಿದಂತಾಗಿದೆ. ಖುದ್ದು ಬುಮ್ರಾ ಹೇಳುತ್ತಾರೆ, ಟೆಸ್ಟ್‌ ಬೌಲಿಂಗ್‌ನಲ್ಲಿ ಅತಿ ಹೆಚ್ಚಿನ ನಿಖರ ಬೌಲಿಂಗ್‌ ಬೇಕಾಗುತ್ತದೆ. ನಾಟಿಂಗ್‌ಹ್ಯಾಮ್‌ನಲ್ಲಿನ 5 ಕೆಟ್‌ ಸಾಧನೆ ಸೇರಿ ಈಗಾಗಲೇ ಈ ವ್ಯಕ್ತಿ ಎರಡು ಬಾರಿ ಇದನ್ನು ಮರುಕಳಿಸಿರುವುದು ಗಮನಾರ್ಹ. ಮುದಸ್ಸರ್‌ ನಜರ್‌, ಮನೋಜ್‌ ಪ್ರಭಾಕರ್‌ರ ಸಾಧನೆ ಸಮ ಮಾಡಿದ ಕೀರ್ತಿ ಬುಮ್ರಾರದ್ದು.

ನೋ ಬಾಲ್‌!
ಈಗಲೂ ಹಲವರಿಗೆ ಬಿಳಿ ಚೆಂಡಿನಲ್ಲಿ ಸಾಧ್ಯ ಮಾಡಿದ್ದನ್ನು ಬುಮ್ರಾ ಕೆಂಪು ಚೆಂಡಿನಲ್ಲಿ ಮಾಡಲಾರರು ಎಂಬ ಅನುಮಾನಗಳಿವೆ. ಟಿ20, ಐಪಿಎಲ್‌, ಏಕದಿನದ ಸಾಧನೆಗಳಷ್ಟು ಬುಮ್ರಾರ ರಣಜಿ ತರಹದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇಲ್ಲ. 29 ಪಂದ್ಯಗಳಿಂದ ಅವರಿಗೆ ಕೇವಲ 103 ಕೆಟ್‌ ಮಾತ್ರ ಪಡೆಯಲು ಸಾಧ್ಯವಾಗಿದೆ. ತಮ್ಮ ಮೊದಲ ಟೆಸ್ಟ್‌ ಕೆಟ್‌ ಆಗಿ ದಕ್ಷಿಣ ಆಫ್ರಿಕಾದ ಎ.ಬಿ.ಡಿಲಿಯರ್ರನ್ನು ಬಲಿ ತೆಗೆದುಕೊಂಡ ಬುಮ್ರಾ ಭಾರತದ ಮಾಜಿ ವೇಗಿಗಳಾದ ಜಾವಗಲ್‌ ಶ್ರೀನಾಥ್‌, ಆರ್‌.ಪಿ.ಸಿಂಗ್‌ ಅವರ ಅಭಿಮತವನ್ನು ಹುಸಿಗೊಳಿಸಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ.

ಬುಮ್ರಾ ಬಗ್ಗೆ ಟೀಕೆಗಳನ್ನು ಕೇಳುತ್ತಿದ್ದರೆ, ಅದು ಅವರ ನೋಬಾಲ್‌ಗ‌ಳ ಬಗ್ಗೆ ಬಹುಪಾಲು ಕೇಂದ್ರೀಕೃತವಾಗಿರುತ್ತದೆ. ಅಬ್ದುಲ್‌ ರಶೀದ್‌ ರುದ್ಧ ಬೂಮ್ರಾ ನೋ ಬಾಲ್‌ ಹಾಕಿರದಿದ್ದರೆ ಇಂಗ್ಲೆಂಡ್‌ ರುದ್ಧದ ಮೂರನೇ ಟೆಸ್ಟ್‌ ನಾಲ್ಕನೇ ದಿನಕ್ಕೆ ಮುಗಿದಿರುತ್ತಿತ್ತು. ಅದಕ್ಕೂ ಮುಖ್ಯವಾಗಿ, 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಸಾಂಪ್ರದಾುಕ ಎದುರಾಳಿ ಪಾಕಿಸ್ತಾನದ ರುದ್ಧ ಅಂತಿಮ ಓವರ್‌ನಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗೆ ನೋಬಾಲ್‌ ಹಾಕಿದ ಮೇಲೆ ಅವರೆಡೆ ನೋ ಬಾಲ್‌ ಟ್ರೋಲ್‌ ಹೆಚ್ಚಾಗಿದೆ. 

ಬುಮ್ರಾ ಸೀುತ ಓವರ್‌ಗಳಲ್ಲಿ ುಂಚಲು ಕಾರಣವಾಗಿರುವುದು ಅವರ ಅತ್ಯುತ್ತಮ ಯಾರ್ಕರ್‌ಗಳು. ಮೊನ್ನೆ ಬಟ್ಲರ್‌, ಬ್ರಿಸ್ಟೋವ್‌ರ ಕೆಟ್‌ ಪಡೆದು ಹ್ಯಾಟ್ರಿಕ್‌ಗೆ ಗುರಿುಡಲು ಬುಮ್ರಾ ಹಾಕಿದ್ದು ಯಾರ್ಕರ್‌, ಸ್ವಾರಸ್ಯವೆಂದರೆ ಇಡೀ ಪಂದ್ಯದಲ್ಲಿ ಅವರು ಹಾಕಿದ್ದು ಅದೊಂದೇ ಯಾರ್ಕರ್‌!

ಅಮ್ಮ ಮಲಗಿದ್ದಾಗ ಯಾರ್ಕರ್‌ ಹುಟ್ಟಿತ್ತು!
ಅಪಾರ್ಥಗಳಿಗೆ ಈಡಾಗುವ ಮುನ್ನ ಬುಮ್ರಾ ಕಥೆ ಓದಿಕೊಳ್ಳಿ. ತಮ್ಮ ಎಂಟರ ಎಳವೆಯಲ್ಲಿ ಹೆಪಟೈಸಸ್‌ ಬಿ ಗೆ ತಂದೆಯನ್ನು ಬುಮ್ರಾ ಕಳೆದುಕೊಂಡಿದ್ದರು. ಅತ್ತ ವಿದ್ಯೆಯೂ ತಲೆಗೆ ಹತ್ತಲಿಲ್ಲ. ಮೂರು ಹೊತ್ತೂ ಕ್ರಿಕೆಟ್‌ ಹುಚ್ಚು ಇದ್ದಿದ್ದು ನಿಜ. ಆದರೆ ಬೇಸಿಗೆ ಸಮಯದ ಮಧ್ಯಾಹ್ನದ ವೇಳೆ ಹೊರಗಡೆ ಹೋಗಿ ಕ್ರಿಕೆಟ್‌ ಆಡುವುದು ಕಷ್ಟವೇ ಆಗಿತ್ತು. ಇತ್ತ ಮನೆಯಲ್ಲಿಯೇ ಬೌಲಿಂಗ್‌ ಪ್ರಾಕ್ಟೀಸ್‌ ಮಾಡುವುದಕ್ಕೆ ಅಮ್ಮನ ಸುಗ್ರೀವಾಜ್ಞೆಯ ತಡೆಯಿತ್ತು. 

ಅಂತೂ ಕಾಡಿಬೇಡಿದ ಮೇಲೆ ಮನೆಯೊಳಗೆ ಬೌಲ್‌ ಮಾಡಲು ಅವಕಾಶವಿತ್‌ ದಲ್ಜಿತ್‌ ಬುಮ್ರಾ ಒಂದು ಸೂಚನೆಯನ್ನು ಕೂಡ ಕೊಟ್ಟರು, ಆದಷ್ಟು ಕಡಿಮೆ ಶಬ್ಧ ಬರುವಂತೆ ಬೌಲ್‌ ಮಾಡು, ನನಗೆ ಮಧ್ಯಾಹ್ನದ ಚಿಕ್ಕ ನಿದ್ದೆಯನ್ನು ಮಾಡಲಿಕ್ಕಿದೆ! 12ರ ಬಾಲ ಬುಮ್ರಾ ಇದಕ್ಕೊಂದು ಪರಿಹಾರವನ್ನು ಕಂಡುಕೊಂಡ. ಮನೆಯ ಗೋಡೆ ಹಾಗೂ ನೆಲ ಒಂದಕ್ಕೊಂದು ಬೆಸೆಯುವ ಜಾಗಕ್ಕೆ ಬೌಲ್‌ ಮಾಡಿದರೆ ಶಬ್ಧ ಕಡಿಮೆ ಬರುತ್ತದೆ ಎಂಬುದನ್ನು ಕಂಡುಕೊಂಡಿದ್ದ, ಆ ಜಾಗಕ್ಕೇ ನೇರವಾಗಿ ಎಸೆಯಲಾರಂಭಿಸಿದ. ಅದೇ ಇಂದು ಟ್ರೇಡ್‌ಮಾರ್ಕ್‌ ಯಾರ್ಕರ್‌ ಆಗಿ ಪರಿಣಮಿಸಿದೆ. ಅದಕ್ಕೇ ಹೇಳುವುದು, ಅಮ್ಮಾ ಮಾಡುವುದೆಲ್ಲ ತನ್ನ ಕುಡಿಯ ಒಳ್ಳೆಯದಕ್ಕೆ!

-ಮಾ.ವೆಂ.ಸ.ಪ್ರಸಾದ್‌


Trending videos

Back to Top