CONNECT WITH US  

ತಲೆಕೆಳಕಾಗಿ ಧುಮುಕುವ ಜೆರ್ಡನ್ಸ್‌ ಬಜ್ಸಾ 

ತಲೆ ಕೆಳಗಾಗಿ ಧುಮುಕಿ ಕಾಲಲ್ಲಿರುವ ದೃಢವಾದ ಉಗುರಿನ ಸಹಾಯದಿಂದ ಬೇಟೆಯನ್ನು ಹಿಡಿದು ಮರದ ತುದಿಗೆ ತೆಗೆದುಕೊಂಡು ಹೋಗಿ ಅದನ್ನು ಹರಿದು ತಿನ್ನುವುದು ಇದರ ಬೇಟೆಯ ವಿಧಾನ. ಇದರ ಕುತ್ತಿಗೆ ಭಾಗದಲ್ಲಿ ಬೂದು ಬಣ್ಣದ ಕಪ್ಪು ರೇಖೆ ಇರುತ್ತದೆ. Jerdon’s Baza (Aviceda jerdoni)  R  Crow + ನಮ್ಮಲ್ಲಿ ಇದನ್ನು ಗಿಡುಗ ಅಂತ ಕರೆಯುತ್ತಾರೆ. ಇಂಗ್ಲೀಷಿನಲ್ಲಿ ತಲೆಕೆಳಕಾಗಿ ಧುಮುಕುವ ಜೆರ್ಡನ್ಸ್‌ ಬಜ್ಸಾ  ಅಂತಾರೆ. ಇದು ಅತಿ ಸೂಕ್ಷ್ಮ ನೋಟ ಹೊಂದಿರುವ ಹಕ್ಕಿ. ಇದರ ಕಣ್ಣಿನ ರಚನೆ ಅತ್ಯಂತ ನಾಜೂಕಾಗಿದೆ. ಇದಕ್ಕೆ ದೂರದಿಂದಲೇ ತನ್ನ ಬೇಟೆಯನ್ನು ಗುರುತಿಸಬಲ್ಲ ತಾಕತ್ತಿದೆ. ಕೆಲವೊಮ್ಮೆ ಗಾಳಿಯಲ್ಲೆ ರೆಕ್ಕೆ ಬಡಿಯದೇ ಸ್ಥಬ್ದವಾಗಿ ನಿಲ್ಲುವ, ಅಂದರೆ-ಗಾಳಿಯಲ್ಲಿ ತೇಲುವ ಚತುರತೆಯೂ ಈ ಪಕ್ಷಿಗಿದೆ.  ಈ ಹಕ್ಕಿಯ ಹೆಸರಿನ ಜೊತೆ ಪ್ರಾಣಿ ಶಾಸ್ತ್ರಜ್ಞ ಮತ್ತು ಪ್ರಕೃತಿ ತಜ್ಞ ಜೊರxನ್ಸರ ಹೆಸರನ್ನು ಸೇರಿಸಲಾಗಿದೆ.  ಇದು ಸದಾ ಹಾರುವಾಗ ಕೂಗುತ್ತಿರುತ್ತದೆ. ಅದರಿಂದ ಬಜ್ಸಾ ಎಂಬ ಹೆಸರೂ ಸೇರಿರಬಹುದು. ಇಂಪಾದ ಮತ್ತು ಗಡುಸಾದ ದನಿ ಹೊರಡಿಸುವುದರಿಂದ ಇದಕ್ಕೆ ಭಜಂತ್ರಿ ಎಂದು ಕರೆಯುವ ರೂಢಿಯೂ ಇದೆ.

ಗಿಡುಗ ಮೋಸದ ಹಕ್ಕಿ. ಹೊಂಚು ಹಾಕಿ, ಎರಗಿ -ಎದುರಾಳಿಗೆ ಸುಳಿವು ಕೊಡದೇ ಹಿಡಿಯುತ್ತದೆ. ಇದರ ತಲೆಯಲ್ಲಿರುವ ಬಿಳಿ ಮತ್ತು ಕಪ್ಪು ಗರಿಗಳಿಂದ ಕೂಡಿದ ಜುಟ್ಟಿನಿಂದ ಇದನ್ನು ಸುಲಭವಾಗಿ ಗುರುತಿಸಬಹುದು.  ಇದರ ಜುಟ್ಟು ನವಿಲಿನ ತಲೆಯ ಶಿಖೆಯಂತೆ, ಎದ್ದು ನಿಂತಂತೆ ಇರುವುದು. ಕೆಲವೊಮ್ಮ ಮುಮ್ಮುಖವಾಗಿಯೂ ಇರುವುದು , ಕೆಲವುಸಲ ಈ ಎಲ್ಲಾ ಗರಿ ಸೇರಿ ಒಂದು ಗರಿಯಂತೆ ಕಾಣುವುದು. ಇನ್ನು ಕೆಲವು ಸಲ ಎಲ್ಲಾ ಗರಿ ಬಿಚ್ಚಿದಾಗ 2-3 ಗರಿಗಳು ಪ್ರತ್ಯೇಕವಾಗಿ ಕಾಣುತ್ತವೆ.  ಆಗ ಅದರ ಗರಿಯಲ್ಲಿರುವ ಬಿಳಿ ಮತ್ತು ಕಪ್ಪು ಬಣ್ಣ ಸ್ಪಷ್ಟವಾಗಿ ಕಾಣುವುದು. ಇದರ ಮೈ ಬಣ್ಣ ಮಣ್ಣು ಕಪ್ಪು. ಮೈಮೇಲೆಲ್ಲಾ ತಿಳಿ ಮತ್ತು ಅಚ್ಚ ಮಣ್ಣುಗಪ್ಪು ಬಣ್ಣದ ಚಿತ್ತಾರವು ಗಮನವಿಟ್ಟು ನೋಡಿದಾಗ ಕಾಣಸಿಗುತ್ತದೆ. 

ಇದರ ಚುಂಚು, ಮಾಂಸಾಹಾರಿ ಹಕ್ಕಿಗಿರುವಂತೆ ಚೂಪಾಗಿದೆ. ತುದಿ ಕೊಕ್ಕಿನಂತಿದೆ. ಇದರಿಂದ ಬೇಟೆಯನ್ನು ಹರಿದು ತಿನ್ನಲು ಅನುಕೂಲವಾಗಿದೆ.  ಈ ಹಕ್ಕಿ ಹಾರುವ ರೀತಿ ಮತ್ತು ಮೈಬಣ್ಣಕ್ಕೆ ಹತ್ತಿರದ ಸಾಮ್ಯತೆ ಇದೆ. 

ಜೆರ್ಡನ್‌ ಜೆರ್ಡನ್ಸ್‌ ಬಜ್ಸಾ  -ಗಿಡುಗ ಹಕ್ಕಿ -ಚಿಕ್ಕದು. ಆದರೆ ಕ್ರಿಸ್ಟೆಡ್‌ ಹವಾಕ್‌ ಈಗಲ್‌ ದೊಡ್ಡದು. ಅಲ್ಲದೆ ತಲೆಯ ಜುಟ್ಟು- ದೊಡ್ಡದು ಮತ್ತು ಮೈ ಬಣ್ಣ -ಹೆಚ್ಚು ಕಪ್ಪು. ರೆಕ್ಕೆಯ ಮೇಲೆ ಚುಕ್ಕೆ ಮತ್ತು ಗೆರೆ ಮಾತ್ರ ಇದೆ. ಆದರೆ ಜೊರ್ಡನ್ಸ್‌ ಗಿಡುಗ ಹಕ್ಕಿಯ ರೆಕ್ಕೆಯ ಮೇಲೆ ಮಧ್ಯದಿಂದ ಆರಂಭವಾಗಿ ವರ್ತುಲಾಕಾರದ ತಿಳಿ ಕಂದು ರೇಖೆ ಎರಡು ಸಾಲು ಇದೆ. ಬೆನ್ನು ,ರೆಕ್ಕೆ ಬುಡದ ಪಾರ್ಶದಲ್ಲೂ ಅರ್ಧ ಚಂದ್ರಾಕಾರದ ರೇಖೆಯನ್ನು ಕಾಣಬಹುದು. 

ಬಾಲದ ಪುಕ್ಕ ಉದ್ದವಾಗಿದೆ. ಆದರೆ ಗಿಡುಗದ ಬಾಲ ಚಿಕ್ಕದು. ಜೆರ್ಡನ್‌ ಗಿಡುಗದ ಗರಿಯ ಬದಿಯ ರೇಖೆ ಮತ್ತು ಅಂಚು ಇದನ್ನು ಗುರುತಿಸಲು ಇರುವ ಗುರುತು. ಸಮಶೀತೊಷ್ಣ ವಲಯದ -ದೊಡ್ಡ ಮರಗಳಿರುವ -ಬೆಟ್ಟದ ತಪ್ಪಲು ಪ್ರದೇಶ , ದೊಡ್ಡ ಮರದ ಕಾಡಿನ ಸಮೀಪದ ಜಾಗ, ಭಾರತದ ಉತ್ತರದ ಪೂರ್ವ ಭಾಗ, ಬಾಂಗ್ಲಾದೇಶ, ಸಿಕ್ಕಿಂನಿಂದ ಅಸ್ಸಾಂವರೆಗೆ, ಬರ್ಮಾ, ಸುಮಾತ್ರಾದಲ್ಲೂ ಈ ತಳಿಯ ಗಿಡುಗಗಳು ಇವೆ.

ತಲೆ ಕೆಳಗಾಗಿ ಧುಮುಕಿ ಕಾಲಲ್ಲಿರುವ ದೃಢವಾದ ಉಗುರಿನ ಸಹಾಯದಿಂದ ಬೇಟೆಯನ್ನು ಹಿಡಿದು ಮರದ ತುದಿಗೆ ತೆಗೆದುಕೊಂಡು ಹೋಗಿ ಅದನ್ನು ಹರಿದು ತಿನ್ನುವುದು ಇದರ ಬೇಟೆಯ ವಿಧಾನ. ಇದರ ಕುತ್ತಿಗೆ ಭಾಗದಲ್ಲಿ ಬೂದು ಬಣ್ಣದ ಕಪ್ಪು ರೇಖೆ ಇರುತ್ತದೆ. ಕುತ್ತಿಗೆಯಿಂದ ಅಲ್ಲದೇ ಹೊಟ್ಟೆ ಭಾಗದಲ್ಲೂ ಇದೇ ಬಣ್ಣದ ಗೆರೆಗಳಿವೆ.  ದಕ್ಷಿಣ ಭಾರತ, ಶ್ರೀಲಂಕಾದಲ್ಲೂ ಇವೆ.  ಚಿಕ್ಕ ಪ್ರಾಣಿ, ಇಲಿ, ಮೃದ್ವಂಗಿ, ಹರಣೆ, ಓತಿಕ್ಯಾತ, ಮೊಲ, ಚಿಕ್ಕ ಹಾವುಗಳನ್ನೂ ಇದು ತಿಂದು ತೇಗುವುದುಂಟು. 

ಕಾವುಕೊಡುವುದು, ಮರಿಗಳ ರಕ್ಷಣೆ, ಗುಟುಕು ನೀಡುವುದು ಮುಂತಾದ ಕೆಲಸಗಳನ್ನು ಗಂಡು ಹೆಣ್ಣು ಸೇರಿ ಒಟ್ಟಾಗಿ ನಿರ್ವಹಿಸುತ್ತದೆ. 

Trending videos

Back to Top