ಮೂಲ್ಕಿಯಲ್ಲಿ ಬಹುಜನ ಜಾಗೃತಿ ದಿನಾಚರಣೆ
Team Udayavani, Dec 29, 2017, 12:45 PM IST
ಮೂಲ್ಕಿ: ಹಿಂದುತ್ವದ ಹೆಸರಿನಲ್ಲಿ ಕೆಳವರ್ಗದ ಜನರನ್ನು ದುರುಪಯೋಗ ಪಡಿಸುತ್ತಿರುವ ರಾಜಕೀಯ ಪಕ್ಷಗಳ ಹುನ್ನಾರಕ್ಕೆ ಯುವ ಜನರು ಬಲಿ ಬೀಳದೆ ದೇಶ ಕಟ್ಟುವ ದಾರಿಯಲ್ಲಿ ಮುನ್ನಡೆಯುವುದು ಅಗತ್ಯ ಎಂದು ದಲಿತ ಸಂಘರ್ಷ ರಾಜ್ಯ ಸಮಿತಿಯ ಸಂಚಾಲಕ ಎಂ.ದೇವದಾಸ್ ಕರೆಯಿತ್ತರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಂಗಳೂರು ತಾಲೂಕು ಘಟಕದ ಆಶ್ರಯದಲ್ಲಿ ಮೂಲ್ಕಿಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ 61ನೇ ಪರಿನಿಬ್ಭಾಣ ದಿನದ ಅಂಗವಾಗಿ ನಡೆದ ಬಹುಜನ ಜಾಗೃತಿ ದಿನಾಚರಣೆಯ ಸಭಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. ದಲಿತ ಬಾಲಕಿ ದಾನಮ್ಮ ಪ್ರಕರಣದ ಬಗ್ಗೆ ಮೌನ ಆಚರಿಸಲಾಯಿತು.
ದಲಿತ ಸಂಘರ್ಷ ಸಮಿತಿ ಮಂಗಳೂರು ತಾಲೂಕಿನ ಅಧ್ಯಕ್ಷ ರುಕ್ಮಯ್ಯ ಕಟೀಲು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ
ರಘು ಕೆ.ಎಕ್ಕಾರ್, ಕೃಷ್ಣಾನಂದ ಡಿ., ಭಾಸ್ಕರ ಎಂ., ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ, ತಾಲೂಕು ಸಂಚಾಲಕರಾದ ಸುರೇಶ್ ಬೆಳ್ಳಾಯಾರು, ಶಿವಪ್ಪ ಅಟ್ಟೋಳೆ ಸವಣೂರು, ಹೊನ್ನಯ್ಯ ಬೆಂಜನ ಪದವು, ಭಾಸ್ಕರ ವಿಟ್ಲ, ರಾಜು ಪದಂಗಡಿ, ಸುರೇಶ್ ಪಡುಬಿದ್ರಿ, ನಾಗೇಶ್ ಚಿಲಿಂಬಿ, ಕೃಷ್ಣ ಎ.ಎಕ್ಕಾರು, ದೊಂಬಯ್ಯ ಕಟೀಲು, ರವಿ ಎಸ್.ಕೆಂಜಾರು, ರುಕ್ಮಯ ಅಮೀನ್, ಸಂಕಪ್ಪ ಕಾಂಚನ್, ಉಮೇಶ್ ಕರಂಬಾರು, ಸಚಿನ್ ಎಕ್ಕಾರು ಉಪಸ್ಥಿತರಿದ್ದರು. ರವಿ ಎಸ್.ಸ್ವಾಗತಿಸಿದರು. ಕೃಷ್ಣ ಎಕ್ಕಾರು ನಿರೂಪಿಸಿದರು. ರುಕ್ಮಯ್ಯ ವಿಟ್ಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ