ದೊಡ್ಡ ಗುಪ್ಪಿ 


Team Udayavani, Sep 29, 2018, 11:44 AM IST

4.jpg

 ಕಳೆದ ವಾರ ಕೆಸರು ಗುಪ್ಪಿ ಬಗ್ಗೆ ತಿಳಿದೆವು. ಈ ವಾರ ಅದೇ ಕುಟುಂಬಕ್ಕೆ ಸೇರಿದ ದೊಡ್ಡ ಗುಪ್ಪಿ ತಿಳಿಯೋಣ. 
ಇದೂ ಕೂಡ ಕೊಕ್ಕರೆ ಕುಟುಂಬಕ್ಕೆ ಸೇರಿದ ಪಕ್ಷಿ. 

ದೊಡ್ಡಗುಪ್ಪಿಯನ್ನು ಯುರೇನ್‌ ಗುಪ್ಪಿಅಂತಲೂ ಕರೆಯುತ್ತಾರೆ.The Eurasian bittern or great bittern (Botaurus stellaris)RM -Indian Pond heron+, Village hen  ಇದು 69 ರಿಂದ 81 ಸೆಂ.ಮೀ. ದೊಡ್ಡದಾಗಿರುತ್ತದೆ. ಈ ಭಾರೀ ಗಾತ್ರದ ಕಾರಣದಿಂದಲೇ ಇದಕ್ಕೆ ದೊಡ್ಡ ಗುಪ್ಪಿ ಎಂಬ ಹೆಸರು ಬಂದಿದೆಯೇನೋ ಎನಿಸುತ್ತದೆ.  ಇದರ ರೆಕ್ಕೆಯ ಅಗಲ 100 ರಿಂದ 130 ಸೆಂ.ಮೀ.  ಇದರ ದೇಹ 2 ಕೆ.ಜಿಯವರೆಗೂ ಭಾರ ಇರುತ್ತದೆ. 

  ಗಂಡು ಹಕ್ಕಿ -750 ಗ್ರಾಂ. ದಿಂದ 2050 ಗ್ರಾಂ. ತೂಗುವ  ಭಾರದ ಹಕ್ಕಿ ಸಹ ಇದೆ.  ಹೆಣ್ಣು ಗುಪ್ಪಿಯ ಜುಟ್ಟು ಮತ್ತು ನೆತ್ತಿ ಕಪ್ಪಾಗಿದ್ದು, ಇದರ ಗರಿಗಳು ಉದ್ದ ಮತ್ತು ಒತ್ತೂತ್ತಾಗಿರುತ್ತವೆ.   ಗರಿಯ ಅಂಚಲ್ಲಿ ಕಪ್ಪು ಗೀರು ಇರುತ್ತದೆ. ಇದು ಹಾರುವಾಗ ಇಲ್ಲವೇ ರೆಕ್ಕೆ ಅಗಲಿಸಿ ಕುಳಿತಾಗ ಕಾಣುವುದು. ರೆಕ್ಕೆ ಅಡಿಯ ಮತ್ತು ಅಂಚಿನಲ್ಲಿರುವ ಚಿತ್ತಾರ ಮಸುಕು  ಮುಸುಕಾಗಿ ಕಾಣುತ್ತದೆ.  ಹಾರುವಾಗ ಮಾತ್ರ ಸ್ಪಷ್ಟವಾಗಿ ಕಾಣುವುದು. ಕಣ್ಣಿನ ಸುತ್ತ, ತಿಳಿ ಕಂದು ಬಣ್ಣದ ಗೀರು ಇದೆ.  ಮಧ್ಯ ಚಿಕ್ಕ ಚುಕ್ಕೆ ಮತ್ತು ಗೆರೆಯ ಚಿತ್ತಾರ ಕಾಣಿಸುತ್ತದೆ.  ತಲೆ, ಹಳದಿ ಮಿಶ್ರಿತ ಮಾಸಲುಬಿಳಿಯಿಂದ ಕೂಡಿದೆ.  

  ಚುಂಚಿನ ಮೇಲಾºಗದಲ್ಲಿ ಬಣ್ಣ ಅಚ್ಚವರ್ಣ ಇರುವುದು.  ಕಾಲು ಮತ್ತು ಬೆರಳು, ಹಳದಿ ಮಿಶ್ರಿತ ಹಸಿರಿನಿಂದ ಕೂಡಿದೆ.   ಮೆಡಿಟೇರಿಯನ್‌ ಸಮುದ್ರ ಮತ್ತು ಕಪ್ಪು ಸಮುದ್ರದ ಪ್ರದೇಶದಲ್ಲಿ ಇದು ಕಾಣಸಿಗುತ್ತದೆ. ಇದರ ಕೂಗನ್ನು ಆಧರಿಸಿ, ಇದಕ್ಕೆ ಪ್ರಾದೇಶಿಕವಾಗಿ ಅನೇಕ ಜಾನಪದ ಹೆಸರುಗಳು ಬಂದಿವೆ.   ಕೆಲವೊಮ್ಮೆ ಚುಂಚನ್ನು ಆಕಾಶದ ಕಡೆ ಎತ್ತಿ ರೆಕ್ಕೆ ಯನ್ನು ಅಗಲಿಸಿ, ಮಡಚಿ ಗರಿಗೆದರಿ ಹೂಂಕರಿಸುತ್ತದೆ. ಮಿಲನದ ಸಂದರ್ಭದಲ್ಲಿ ಗಂಡು ಹಕ್ಕಿ ಹೊರಡಿಸುವ ದನಿಯ ಅರ್ಥ, ಭಿನ್ನತೆ ಕುರಿತು ಅಧ್ಯಯನ ನಡೆಯಬೇಕಿದೆ. 

ಇದು ಯುರೋಪ್‌,  ಏಶಿಯಾ. ಆಫ್ರಿಕಾದ ಸಮುದ್ರತೀರದಲ್ಲೂ ಪತ್ತೆಯಾಗಿದೆ.  ಜೊಂಡು ಹುಲ್ಲಿನ ನಡುವೆ ಅಡಗಿ ಸುಮ್ಮನೆ ಕುಳಿತು ಮೀನು, ಚಿಕ್ಕ ಮೃದ್ವಂಗಿ, ಸುಕ್ಕು ಹುಲ್ಲು, ಶೀಗಡಿ, ಚಿಕ್ಕ ಏಡಿ ಬಂದಾಗ ತನ್ನ ಕುತ್ತಿಗೆಯನ್ನು ಚಕ್ಕನೆ ಮುಂದೆ ಚಾಚಿ ಚೂಪಾದ ಕೊಕ್ಕಿನಲ್ಲಿ ಬೇಟೆಯಾಡುತ್ತದೆ.    

ಮಾರ್ಚ್‌- ಏಪ್ರಿಲ್‌ ಇದು ಮರಿಮಾಡುವ ಸಮಯ.  ಹೆಣ್ಣು ಹಕ್ಕಿ 26 ದಿನ ಕಾವು ಕೊಡುತ್ತದೆ. ಮರಿಯಾದ ಮೇಲೆ ಗೂಡಿನಲ್ಲೇ 2 ವಾರ ಕಳೆಯುತ್ತದೆ.  ಹೆಣ್ಣು ಹಕ್ಕಿ ಗಂಡು ಹಕ್ಕಿಯ ಸಹಾಯವಿಲ್ಲದೇ ಮರಿಗಳ ಆರೈಕೆ ಮಾಡುತ್ತದೆ. ಹೆಣ್ಣು ಗುಪ್ಪಿ ಮರಿಗಳ ಬಾಯಲ್ಲಿ ಗುಟುಕನ್ನು ತುರುಕುವುದು.  8 ವಾರಗಳಲ್ಲಿ ಮರಿ ಬಲಿತು ದೊಡ್ಡದಾಗಿ ನೀರಿನಲ್ಲಿ ಈಜಿಬಿಡುತ್ತದೆ.  ಗಂಡು ಹಕ್ಕಿಯ ಮಿಲನದ ಸಂದರ್ಭದ ಕೂಗು ನಾಲ್ಕೈದು ಕಿಲೋಮೀಟರ್‌ ದೂರದ ತನಕ

ಕೇಳುತ್ತದೆ.  ಈ ಚಿಕ್ಕ ಹಕ್ಕಿ -ಕ್ಷೀಣವಾಗಿ ದನಿ ತೆಗೆಯುವುದು ವಿಶೇಷ.  ಕುತ್ತಿಗೆ ಸುತ್ತ ಇರುವ ಮಾಂಸಖಂಡಗಳ ಸಹಾಯದಿಂದ ಇದು ದನಿ ಹೊರಡಿಸುವುದು. ಅನೇಕ ಗಂಡು ಇಂಥ ದನಿ ಹೊರಡಿಸುವಾಗ ಅದು ಯಾವ ಹಕ್ಕಿಯ ದನಿ ಎಂದು ತಿಳಿಯುವ ಸಾಮರ್ಥ್ಯ ಹೆಣ್ಣು ಹಕ್ಕಿಗೂ ಇದೆ.  ಅದರ ಭಿನ್ನತೆಯನ್ನು ಹೇಗೆ ಹೆಣ್ಣು ತಿಳಿಯುವುದು ಎಂಬುದು ಕುತೂಹಲ ಸಂಗತಿ.

ಪಿ.ವಿ.ಭಟ್‌ ಮೂರೂರು

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.