ದೇವರನ್ನೇ ನಂಬದವನು, ಕಷ್ಟವಿಲ್ಲದೇ ಬಾಳಲು ಹೇಗೆ ಸಾಧ್ಯ?


Team Udayavani, Oct 13, 2018, 12:08 PM IST

2fdfds.jpg

ಪರಮ ನಾಸ್ತಿಕನೊಬ್ಬ ದೇವರನ್ನು ಭಜಿಸದೆ, ಪೂಜಿಸದೇ ಇದ್ದರೂ ಆತ ಮತ್ತು ಆತನ ಕುಟುಂಬ ಯಾವುದೇ ಸಮಸ್ಯೆಯಿಲ್ಲದೆ ಬದುಕುತ್ತಿದೆ. ಅಂದರೆ ಆಸ್ತಿಕರಿಗೆ ಮಾತ್ರ ಕಷ್ಟ ಕಾರ್ಪಣ್ಯಗಳೇ? ಹೀಗೇಕೆ? ಎಂಬುದು ಕೆಲವರ ಪ್ರಶ್ನೆ. ಆದರೆ ಇಲ್ಲೊಂದು ನಾವು ಅರಿಯದ ಸತ್ಯವಿದೆ. ನಾಸ್ತಿಕ ದೇವರನ್ನು ನಂಬುವುದಿಲ್ಲವೆನ್ನುತ್ತಲೇ ಅವನಿಗೆ ಅರಿವಿಲ್ಲದೇ ದೇವರನ್ನು ಪೂಜಿಸುತ್ತಾನೆ… 

ಆಸ್ತಿಕತೆ ಎಂದರೇನು? ಎಂದು ಕೇಳಿದಾಕ್ಷಣ ಹೊಳೆಯುವ ಉತ್ತರ ದೇವರನ್ನು ನಂಬುವುದು, ಪೂಜಿಸುವುದು ಮತ್ತು ಭಜಿಸುವುದು ಇತ್ಯಾದಿ. ದೇವರನ್ನು ನಂಬದೇ ಇರುವುದೇ ನಾಸ್ತಿಕತೆ ಎಂಬ ಸರಳವಾದ ತಿಳುವಳಿಕೆ ಎಲ್ಲರಲ್ಲಿಯೂ ಇದೆ. ಆದರೆ, ಆಸ್ತಿಕತೆ ಎಂಬುದು ಕೇವಲ ದೇವರನ್ನು ನಂಬುವುದು ಎಂಬುದಕ್ಕೆ ಸೀಮಿತವಾದುದಲ್ಲ. ನಮ್ಮ ಮನಸ್ಸಿನ ನಿಗ್ರಹ ಮತ್ತು ಸದ್ವಿನಿಯೋಗ ಮಾಡುವುದು ಮುಖ್ಯವಾಗಿ ಆಸ್ತಿಕತೆ. ಅಂದರೆ ಧನಾತ್ಮಕವಾಗಿ, ನಿರಂತರವಾಗಿ ಮನಸ್ಸನ್ನು ಒಂದಲ್ಲ ಒಂದು ರೀತಿಯಲ್ಲಿ ಹಿಡಿತದಲ್ಲಿಟ್ಟುಕೊಂಡು, ಮನಸ್ಸು ಸಂಸ್ಕಾರಯುತವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು. ದೇವರು ಮೆಚ್ಚುವುದು ಶುದ್ಧ ಮನಸ್ಸನ್ನು. ಅದನ್ನು ಸಾಧಿಸುವ ರೀತಿ ಹೇಗೇ ಇರಲಿ, ಸನ್ಮಾರ್ಗದಲ್ಲಿದ್ದರೆ ಸಾಕು. ದೇವರ ಅಭಯ ಅವನ ಜೊತೆಗಿದ್ದೇ ಇರುತ್ತದೆ.

ಇನ್ನು ಕೆಲವರ ಅಳಲಿದೆ. ಪರಮ ನಾಸ್ತಿಕನೊಬ್ಬ ದೇವರನ್ನು ಭಜಿಸದೆ, ಪೂಜಿಸದೇ ಇದ್ದರೂ ಆತ ಮತ್ತು ಆತನ ಕುಟುಂಬ ಯಾವುದೇ ಸಮಸ್ಯೆಯಿಲ್ಲದೆ ಬದುಕುತ್ತಿದೆ. ಅಂದರೆ, ಆಸ್ತಿಕರಿಗೆ ಮಾತ್ರ ಕಷ್ಟ ಕಾರ್ಪಣ್ಯಗಳೇ? ಹೀಗೇಕೆ? ಎಂಬುದು. ಆದರೆ ಇಲ್ಲೊಂದು ನಾವು ಅರಿಯದ ಸತ್ಯವಿದೆ. ಅವನು ದೇವರನ್ನು ನಂಬುವುದಿಲ್ಲವೆನ್ನುತ್ತಲೇ ಅವನಿಗೆ ಅರಿವಿಲ್ಲದೇ ದೇವರನ್ನು ಪೂಜಿಸುತ್ತಾನೆ. ಅಂದರೆ, ತನ್ನ ಮನಸ್ಸನ್ನು ನಿಗ್ರಹಿಸುತ್ತಾನೆ. ಇದೇ ಅಲ್ಲವೇ ದೇವರನ್ನು ಕಾಣುವ ಮಾರ್ಗ. ಪರಮನಾಸ್ತಿಕನೊಬ್ಬನಿಗೆ ತನ್ನೂರಿನಲ್ಲಿರುವ ಅರಳೀಕಟ್ಟೆಗೆ ಜನರೆಲ್ಲ ಮುಗಿಬಿದ್ದು ಪೂಜಿಸುವುದನ್ನು ಕಂಡು ಕೋಪ ಬರುತ್ತಿತ್ತು. ಹಾಗಾಗಿ ಆತ, ಯಾರೂ ಇಲ್ಲದಾಗ ಆ ಮರವನ್ನು ಕಡಿದು ಮುಗಿಸಬೇಕೆಂದು ನಿರ್ಧರಿಸಿದ. ಪ್ರತಿಗಳಿಗೆಯೂ ಆ ಬಗ್ಗೆ ಯೋಚನೆ-ಯೋಜನೆಯನ್ನು ಹಾಕುತ್ತಾ ಕಾಲ ಕಳೆಯತೊಡಗಿದ. ಅದನ್ನೇ ಚಿಂತಿಸುತ್ತ ಅವನ ಮನಸ್ಸು ಏಕಾಗ್ರತೆಯತ್ತ ಸಾಗುತ್ತ ಶುದ್ಧವಾಗುತ್ತ ಹೋಯಿತು. ಕೊನೆಯ ತನಕವೂ ಅವನಿಗೆ ಆ ಮರವನ್ನು ಕಡಿಯಲಾಗಲಿಲ್ಲ. ಆದರೆ ಅದರ ಬಗೆಗೆ ಚಿತ್ತವನ್ನಿಟ್ಟದ್ದ ಆತನ ಮನಸ್ಸು ಕೆಟ್ಟಕಾರ್ಯಗಳಿಗೆ ಮುಂದಾಗಲಿಲ್ಲ. ಅಂದರೆ, ಅವನಿಗರಿವಿಲ್ಲದೆಯೇ ಆಸ್ತಿಕನಾಗಿದ್ದ. ಅಂದರೆ ಮನಸ್ಸು ಅಲ್ಲಿ ಕೇಂದ್ರೀಕೃತವಾಗಿದ್ದರಿಂದ ಕೆಟ್ಟಯೋಚನೆಗಳು ಬಾರದೆ ಸನ್ಮಾರ್ಗದಲ್ಲಿಯೇ ಬದುಕಿದ.

ಆದ್ದರಿಂದ ಆತ ನಾಸ್ತಿಕನಾಗಿದ್ದರೂ ಸುಖಜೀವನ ನಡೆಸಿದ್ದ. ಇದು, ಉದಾಹರಣೆಗೆ ಹೆಣೆದ ಕತೆ. ಆದರೆ ಸತ್ಯವೂ ಅದೇ. ನಾಸ್ತಿಕ ಎನಿಸಿಕೊಂಡವನು ದೇವರಿಲ್ಲ..ದೇವರಿಲ್ಲ ಎನ್ನುತ್ತಲೇ ಅದರ ಪ್ರತಿಪಾದನೆಯಲ್ಲಿಯೇ ಮನಸ್ಸನ್ನು ಕೇಂದ್ರೀಕರಿಸಿದುದರಿಂದ ಪಂಚೇಂದ್ರಿಯಗಳೂ, ಆಮೂಲಕ ಕರ್ಮೇಂದ್ರಿಯಗಳೂ ವಿಚಲಿತವಾಗದೇ ಸನ್ಮಾರ್ಗದಲ್ಲಿಯೇ ನಡೆದುದರಿಂದ ಆತ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಹಾಗಾಗಿ, ನನ್ನ ಪ್ರಕಾರ ನಾಸ್ತಿಕತೆ ಎಂಬುದೂ ಆಸ್ತಿಕತೆಯೇ. ಆಸ್ತಿಕತೆಯ ಮೂಲಸ್ವರೂಪ ಏಕಾಗ್ರತೆ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ದೇಹವನ್ನು ನಿಯಂತ್ರಿಸುವುದೇ ಆಸ್ತಿಕತೆ. ಇದನ್ನೇ ಸರಳ ಮತ್ತು ಸುಲಭವಾಗಿ ದೇವರ ಬಗೆಗೆ ನಂಬಿಕೆ ಎಂದು ಹೇಳಿಕೊಳ್ಳುತ್ತೇವೆ. ಕಿಟಕಿಯ ಮೂಲಕ ಕಸವನ್ನೋ ಸಣ್ಣ ಕಲ್ಲನ್ನೋ ಬಿಸಾಡುವಾಗ ಅದು ಹೆಚ್ಚಾಗಿ ಆ ಕಿಟಕಿಯ ಸರಳಿಗೇ ತಾಗುವುದನ್ನು ನಾವು ಗಮನಿಸಿರುತ್ತೇವೆ. ಏಕೆಂದರೆ, ನಾವು ಹೊರಗೆ ಬಿಸಾಡುವ ತವಕದಲ್ಲಿ ಮನಸ್ಸನ್ನು ನಮಗರಿವಿಲ್ಲದೇ ಸರಳಿನ ಮೇಲೆ ಕೇಂದ್ರೀಕರಿಸಿರುತ್ತೇವೆ. ಹಾಗಾಗಿ ಆ ಕಲ್ಲು ನೇರವಾಗಿ ಸರಳನ್ನು ತಟ್ಟುತ್ತದೆ.

ನಾಸ್ತಿಕತೆಯೂ ಹೀಗೆಯೇ. ಇಲ್ಲವೆನ್ನುತ್ತ ಮನವನ್ನು ಕೇಂದ್ರೀಕರಿಸಿದರೂ ದೇವರ ಸಾಕ್ಷಾತ್ಕಾರವಾಗಿಯೇ ಆಗುತ್ತದೆ. ಏಕಾಗ್ರತೆಯ ಮಾರ್ಗ: ನಾಸ್ತಿಕತೆ ಎಂಬುದು ಆಸ್ತಿಕತೆಯ ಇನ್ನೊಂದು ಹೆಸರು. ಏಕಾಗ್ರತೆಗೆ ಮತ್ತೂಂದು ದಾರಿ. ಆಚಾರ ಬದಲಿರಬಹುದು. ಮಾರ್ಗ ಬೇರೆಯದ್ದೇ ಇರಬಹುದು. ಚಿತ್ತಶುದ್ಧಿಗೆ ದಾರಿ ಸಾವಿರಾರು.

ವಿಷ್ಣು ಭಟ್ಟ ಹೊಸ್ಮನೆ 

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.