ದೇವರು ಎಲ್ಲಿ ವಾಸಿಸುತ್ತಾನೆ?

Team Udayavani, Dec 1, 2018, 9:20 AM IST

66.jpg

ಜೀವಿಯ ದೇಹದಲ್ಲಿಯೇ ದೇವರು ವಾಸಿಸುತ್ತಾನೆ. ಈ ದೇವೋತ್ತಮ ಅಥವಾ ಪರಮಪುರುಷನು ಜೀವಿಗಳ ದೇಹದಲ್ಲಿದ್ದುಕೊಂಡೇ ವಿಶ್ವವನ್ನು ನಿಯಂತ್ರಿಸುತ್ತಾನೆ. ನವದ್ವಾರಗಳುಳ್ಳ ಶರೀರವೆಂಬ ಪುರದಲ್ಲಿ ದೇವರು ಇದ್ದುಕೊಂಡೇ ಹೊರಗೆಲ್ಲ ಚಲಿಸುತ್ತಾನೆ ಎಂಬ ವಿವರಣೆ ಶ್ವೇತಾಶ್ವತರೋಪನಿಷತ್ತಿನಲ್ಲಿದೆ.

ನಮ್ಮೊಳಗಿನ ನಾನು ಯಾರು? ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ನಮ್ಮ ದೇಹ, ವಿದ್ಯೆ, ಉದ್ಯೋಗ, ಇನ್ನಾವುದೋ ವಿಶೇಷತೆಗಳಿಂದ ಗುರುತಿಸಿಕೊಳ್ಳುತ್ತಿದ್ದೇವೆಯೇ ಹೊರತು ಅದರಿಂದಾಚೆಗೆ ನಾನು ಎಂದರೆ ಯಾರು? ಏನು? ಎಂಬುದು ಉತ್ತರವಿಲ್ಲದ ಪ್ರಶ್ನೆ. ದೇಹಮಾತ್ರವೇ ನಮಗೆ ನಾನು ಎಂಬುದರ ರೂಪವಾಗಿ ಹೊರಗಣ್ಣಿಗೆ ಕಾಣುತ್ತಿರುತ್ತದೆ. ಆದರೆ ನಮ್ಮ ಆತ್ಮವು ಏನು? ಎಲ್ಲಿಂದ ಬಂದುದು? ಎಂಬುದಕ್ಕೆ ಕಾರಣವಾಗಿ ನಾವು ಕಂಡುಕೊಂಡಿದ್ದು ದೇವರು. ಎಲ್ಲವನ್ನೂ ನಿಯಂತ್ರಿಸುವ ಶಕ್ತಿಯಾದ ಈ ನಿರಾಕಾರ, ನಿರ್ಮಲವಾದ ಪರಮಾತ್ಮ ಎಲ್ಲಿ ನೆಲೆಸುತ್ತಾನೆ? ಎಂಬ ಪ್ರಶ್ನೆಗೆ ಶ್ವೇತಾಶ್ವತರ ಉಪನಿಷತ್ತಿನಲ್ಲಿದೆ.
ನವದ್ವಾರೇ ಪುರೇ ದೇಹೀ
ಹಂಸೋ ಲೇಲಾಯತೇ ಬಹಿಃ |
ವಶೀ ಸರ್ವಸ್ಯ ಲೋಕಸ್ಯ
ಸ್ಥಾವರಸ್ಯ ಚರಸ್ಯ ಚ || (3. 18)
ಜೀವಿಯ ದೇಹದಲ್ಲಿಯೇ ದೇವರು ವಾಸಿಸುತ್ತಾನೆ. ಈ ದೇವೋತ್ತಮ ಅಥವಾ ಪರಮಪುರುಷನು ಜೀವಿಗಳ ದೇಹದಲ್ಲಿದ್ದುಕೊಂಡೇ ವಿಶ್ವವನ್ನು ನಿಯಂತ್ರಿಸುತ್ತಾನೆ. ನವದ್ವಾರಗಳುಳ್ಳ ಶರೀರವೆಂಬ ಪುರದಲ್ಲಿ ದೇವರು ಇದ್ದುಕೊಂಡೇ ಹೊರಗೆಲ್ಲ ಚಲಿಸುತ್ತಾನೆ 

ಎಂಬ ವಿವರಣೆ ಶ್ವೇತಾಶ್ವತರೋಪನಿಷತ್ತಿನಲ್ಲಿದೆ. ಈ ದೇವನು ಕೈಕಾಲುಗಳಿಲ್ಲದವನು. ಆದರೆ ವೇಗವಾಗಿ ಚಲಿಸುವವನೂ ಕೈಗಳಿಲ್ಲದಿದ್ದರೂ ಎಲ್ಲವನ್ನೂ ಪಡೆಯುವವನೂ ಕಣ್ಣುಗಳಿಲ್ಲದೆಯೂ ನೋಡಬಲ್ಲವನೂ ಕಿವಿಗಳಿಲ್ಲದೆಯೂ ಕೇಳಬಲ್ಲವನೂ ಮನಸ್ಸಿಲ್ಲದೆಯೂ, ಎಲ್ಲವನ್ನೂ ಅರಿಯಬಲ್ಲವನೂ ಆಗಿದ್ದಾನೆಂದು ಈ ಉಪನಿಷತ್ತಿನಲ್ಲಿ ವಿವರಿಸಲಾಗಿದೆ. ಇಂಥವನನ್ನು ಅರಿಯಬಲ್ಲವರು ಯಾರೂ ಇಲ್ಲ. ಹಾಗಾಗಿ, ದೇವನು ಸರ್ವಕಾರಣನಾದ ಪರಿಪೂರ್ಣ ಸ್ವರೂಪನು, ಮಹಾಂತನು ಎಂದು ಋಷಿಗಳು ಹೇಳುತ್ತಾರೆ.

ಭಗವದ್ಗೀತೆಯ ಐದನೆಯ ಅಧ್ಯಾಯದಲ್ಲಿ ಇಂತಹ ದೇವನು ನೆಲೆಯಿರುವ ನಮ್ಮ ದೇಹ ಮತ್ತು ಮನಸ್ಸು ಪರಿಶುದ್ಧವಾಗಿರಬೇಕು ಎಂದು ಹೇಳಲಾಗಿದೆ. ಕರ್ಮಫ‌ಲಗಳಿಗೆ ಮಾರುಹೋಗುವವನು ತೊಡಕಿನಲ್ಲಿ ಸಿಲುಕಿಕೊಳ್ಳುತ್ತಾನೆ. ಕರ್ಮಫ‌ಲಗಳನ್ನು ಯೋಚಿಸದೆ ಒಂದೇ ರೀತಿಯಾದ ನಿಷ್ಠೆಯಿಂದಿರುವವನ ಆತ್ಮ ಪರಿಶುದ್ಧವಾದ ಶಾಂತಿಯನ್ನು ಹೊಂದಲು ಸಾಧ್ಯ.
ಸರ್ವಕರ್ಮಾಣಿ ಮನಸಾ
ಸನ್ನ್ಯಾಸ್ಯಾಸ್ತೇ ಸುಖಂ ವಶೀ |
ನವದ್ವಾರೇ ಪುರೇ ದೇಹೀ ನೈವ
ಕುರ್ವನ್ನ ಕಾರಯನ್‌ ||13|| ಅಧ್ಯಾಯ 5||
ದೇಹಸ್ಥ ಜೀವಿಯು ತನ್ನ ಸ್ವಭಾವಗಳನ್ನು  ನಿಯಂತ್ರಣದಲ್ಲಿಟ್ಟುಕೊಂಡು ಮಾನಸಿಕವಾಗಿ ಎಲ್ಲ ಕರ್ಮಗಳನ್ನೂ ತ್ಯಜಿಸಿದಾಗ ಅವನು ನವದ್ವಾರಗಳ ನಗರದಲ್ಲಿ ಸುಖವಾಗಿ ವಾಸಿಸುತ್ತಾನೆ. ಅವನು ಕಾರ್ಯಗಳನ್ನು ಮಾಡಿಸುವುದೂ ಇಲ್ಲ, ಮಾಡುವುದೂ ಇಲ್ಲ ಎಂದು ಗೀತೆ ಹೇಳುತ್ತದೆ.

ನವದ್ವಾರಗಳಿಂದಲೇ ನಮ್ಮ ದೇಹ ನಿರ್ಮಿತವಾಗಿದೆ. ಎರಡು ಕಣ್ಣುಗಳು, ಎರಡು ಕಿವಿಗಳು, ಎರಡು ಮೂಗಿನ ಹೊಳ್ಳೆಗಳು, ಒಂದು ಬಾಯಿ, ಗುದದ್ವಾರ ಮತ್ತು ಜನನೇಂದ್ರಿಯ ಇವೇ ದೇಹದ ನವರಂಧ್ರಗಳು. ಇವುಗಳನ್ನೇ ಪುರವನ್ನಾಗಿಸಿಕೊಂಡು ದೇವರು ವಾಸಿಸುತ್ತಾನೆ. ಇವೆಲ್ಲವುಗಳ ನಿಯಂತ್ರಣವೇ ಉತ್ತಮ ಸ್ವಭಾವಕ್ಕೆ ಕಾರಣವಾಗುತ್ತದೆ. ಮನುಷ್ಯನು ಈ ನವರಂಧ್ರಗಳಿರುವುದರಿಂದಲೇ ಬದುಕುತ್ತಿದ್ದಾನೆ. ಈ ನವದ್ವಾರಗಳನ್ನು ಮೊದಲು ಪರಿಶುದ್ಧವಾಗಿಡ  ಬೇಕೆಂಬುದು ಇದರ ಮತಿತಾರ್ಥ.

ನವದ್ವಾರ ಗಳೂ ದೇವರ ವಾಸಸ್ಥಾನವಾದ್ದರಿಂದ ನಾವು ನೋಡುವ, ಕೇಳುವ ಸಂಗತಿಗಳು ಉತ್ತಮವಾದುದೇ ಆಗಿರಬೇಕು. ಸೇವಿಸುವ ಆಹಾರ ದೇಹವನ್ನು ಸಮಸ್ಥಿತಿಯಲ್ಲಿಡು ವಂತಿರಬೇಕು. ಮೂಗು ಹುಡುಕಿದ ಪರಿಮಳವನ್ನು ಅರಸಿಕೊಂಡು ಕಣ್ಣು ಹೋಗುತ್ತದೆ. ಅದು ಒಳ್ಳೆಯದೇ ಆಗಿದ್ದರೆ ಒಳಿತಾಗುತ್ತದೆ. ಇಲ್ಲವೆಂದಾದಲ್ಲಿ ಕೆಟ್ಟದಾಗುತ್ತದೆ. ಹಾಗಾಗಿ ಪರಿಮಳವನ್ನೂ ಪರಾಂಬರಿಸುವ ಯುಕ್ತಿ ನಮ್ಮಲ್ಲಿರಬೇಕು. ದೇಹದ ಪರಿಶುದ್ಧತೆಯಿಂದ ಆತ್ಮವೂ ಶುದ್ಧವಾಗಿ ಶಾಂತಿಯನ್ನು ಹೊಂದುತ್ತದೆ. ದೇವರು ವಾಸಿಸುವ ದೇಹ ದೇವರ ಗುಡಿ. ಈ ಗುಡಿಯನ್ನು ಶುದ್ಧವಾಗಿಟ್ಟು ಕೊಳ್ಳುವುದು ನಮ್ಮ ಗುರಿಯಾಗ ಬೇಕು. ನಮ್ಮೊಳಗಿನ ದೇವರನ್ನು ನಾವು ಕಂಡುಕೊಂಡಾಗ ಸಿಗುವ ಆನಂದವೇ ದೈವತ್ವ.

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.