ಜೀವ ಮತ್ತು ಆತ್ಮ ಒಂದೇನಾ? 


Team Udayavani, Dec 29, 2018, 5:24 AM IST

8.jpg

ನಮ್ಮ ದೇಹ ಎಂಬುದು ಒಂದು ಮಾಧ್ಯಮ ಅಷ್ಟೆ. ಜೀವ ಮತ್ತು ಆತ್ಮಗಳು ವಾಸಿಸುವ ಸ್ಥಳ. ನಾವು ಜೀವವನ್ನಷ್ಟೇ ಅರಿತುಕೊಳ್ಳುತ್ತೇವೆ. ಜೀವವು ಜೀವನದ ಆಗುಹೋಗುಗಳನ್ನು ಅನುಭವಿಸುತ್ತದೆ. ಅದರಿಂದಾಗಿಯೇ ಒಮ್ಮೆ ಸಂತಸವನ್ನೂ ಇನ್ನೊಮ್ಮೆ ದುಃಖವನ್ನೂ ಅನುಭವಿಸುತ್ತೇವೆ.

ಜೀವ ಮತ್ತು ಆತ್ಮ ಒಂದೇನಾ? ಅಥವಾ ಇವೆರಡರ ನಡುವೆ ವ್ಯತ್ಯಾಸ ಇದೆಯೇ? ಎಂಬ ಪ್ರಶ್ನೆ ಉದಯಿಸಿದಾಗ ವಾಸ್ತವವಾಗಿ ಎರಡೂ ಒಂದೇ. ಜೀವ ಮತ್ತು ಆತ್ಮ ಎಂಬುದು ಬೇರೆಬೇರೆಯಲ್ಲ.  ಜೀವವು ನಾನೇ (ಭಗವಂತನೇ) ಆಗಿರುವುದರಿಂದ ಇವೆರಡರ ನಡುವೆ ಗುರುತರವಾದ ವ್ಯತ್ಯಾಸ ಇಲ್ಲ ಎಂದು ಶ್ರೀಕೃಷ್ಣನು ಹೇಳುತ್ತಾನೆ. ಶ್ರೀಕೃಷ್ಣನು ಉದ್ಧವನ ಕೌತುಕಗಳಿಗೆ ಉತ್ತರಿಸುತ್ತ ಈ ಆತ್ಮ ಮತ್ತು ಜೀವಗಳ ಬಗೆಗೂ ಹೇಳಿ¨ªಾನೆ.

ಈ ಸಂಗತಿ ಶ್ರೀ ಮದ್ಭಾಗವತದ ಹನ್ನೊಂದನೆಯ ಅಧ್ಯಾಯದಲ್ಲಿದೆ. ಜೀವ ಮತ್ತು ಆತ್ಮಕ್ಕಿರುವ ಪರಸ್ಪರ ಭೇದವನ್ನು ಇಲ್ಲಿ ಹೇಳಲಾಗಿದೆ. ಭಗವಂತನು ಆಳುವವನೂ, ಜೀವಿಯು ಆಳಲ್ಪಡುವವನೂ ಆಗಿರುತ್ತಾರೆ. ಆತ್ಮವು ಆನಂದಸ್ವರೂಪವಾದುದು. ಆದರೆ, ಜೀವಿಯು ಶೋಕಮೋಹಗಳಿಂದ ಗ್ರಹಿಸಿತನಾಗಿ ಸುಖದುಃಖಗಳನ್ನು ಅನುಭವಿಸುವವನಾಗಿರುತ್ತಾನೆ. ಆತ್ಮ ಮತ್ತು ಜೀವಗಳು ಶರೀರರೂಪೀ ವೃಕ್ಷದಲ್ಲಿ ಗೂಡುಕಟ್ಟಿಕೊಂಡು ಜೊತೆಜೊತೆಗೆ ವಾಸಿಸುವ ಎರಡು ಪಕ್ಷಿಗಳಾಗಿವೆ. ಅಲ್ಲದೆ ಆತ್ಮ ಮತ್ತು ಜೀವ ಎರಡೂ ಸಮಾನಧರ್ಮಿಗಳೂ ಆಗಿವೆ. ಇದರಲ್ಲಿ ಒಂದು ಅಂದರೆ ಜೀವವು ಈ ಶರೀರದ ಮೂಲಕ ಗೈಯಲ್ಪಟ್ಟ ಕರ್ಮಗಳ ಫ‌ಲವನ್ನು ಉಪಭೋಗಿಸುತ್ತದೆ. ಆದರೆ ಇದನ್ನು ಉಪಭೋಗಿಸಿಯೂ ಇದು ಕ್ಷೀಣವಾಗುತ್ತದೆ. ಆತ್ಮವು ಆ ಫ‌ಲವನ್ನು ಉಪಭೋಗಿಸುವುದಿಲ್ಲ. ಆದರೂ, ಅದು ಸಾಕಷ್ಟು ಬಲಶಾಲಿಯಾಗಿದೆ.   

   ಹೀಗೆ ಫ‌ಲವನ್ನು ಭೋಗಿಸದಿರುವ ಆತ್ಮವು ತನ್ನನ್ನೂ ಅರಿತುಕೊಳ್ಳುತ್ತದೆ ಮತ್ತು ಜೀವವನ್ನೂ ಅರಿಯಲು ಸಾಧ್ಯ. ಭೋಗಗಳನ್ನು ಉಪಭೋಗಿಸುವ ಜೀವಕ್ಕೆ ಆತ್ಮದ ಸ್ವರೂಪವನ್ನು ತಿಳಿಯಲು ಆಗದು. ಆತ್ಮದಸ್ವರೂಪವನ್ನು ತಿಳಿಯಲು ಯೋಗ್ಯವಾದವನು ತನ್ನನ್ನು ತಾನು ಅರಿತುಕೊಂಡು ನಿತ್ಯಮುಕ್ತನಾಗುತ್ತಾನೆ. ಆತ್ಮದ ಸ್ವರೂಪವನ್ನರಿಯದೆ ಭೋಗಗಳನ್ನು ಅನುಭವಿಸುವವನು ನಿತ್ಯಬದ್ಧನಾಗುತ್ತಾನೆ. ಈ ಬದ್ಧತೆಯಿಂದ ಮಿಥ್ಯವಾಗಿರುವ ಸ್ವಪ್ನದ ಪ್ರಪಂಚದಲ್ಲಿರುತ್ತಾನೆ ಮತ್ತು ಬಂಧನದಲ್ಲಿರುತ್ತಾನೆ. ಮಿಥ್ಯೆಯ ಪ್ರಪಂಚದಿಂದ ಹೊರಬಂದು ತನ್ನ ಆತ್ಮವನ್ನು ಅರಿತುಕೊಂಡು ನಿತ್ಯಮುಕ್ತನಾದವನು ಮೋಕ್ಷವನ್ನು ಹೊಂದುತ್ತಾನೆ.

ನಮ್ಮ ದೇಹ ಎಂಬುದು ಒಂದು ಮಾಧ್ಯಮ ಅಷ್ಟೆ. ಜೀವ ಮತ್ತು ಆತ್ಮಗಳು ವಾಸಿಸುವ ಸ್ಥಳ. ನಾವು ಜೀವವನ್ನಷ್ಟೇ ಅರಿತುಕೊಳ್ಳುತ್ತೇವೆ. ಜೀವವು ಜೀವನದ ಆಗುಹೋಗುಗಳನ್ನು ಅನುಭವಿಸುತ್ತದೆ. ಅದರಿಂದಾಗಿಯೇ ಒಮ್ಮೆ ಸಂತಸವನ್ನೂ ಇನ್ನೊಮ್ಮೆ ದುಃಖವನ್ನೂ ಅನುಭವಿಸುತ್ತೇವೆ. ಆದರೆ, ಆತ್ಮವು ಇದರಿಂದ ಹೊರತಾದುದು. ಇದೆಲ್ಲವುಗಳಿಂದ ಮುಕ್ತವಾದುದು. ಜೀವವು ಶರೀರದ ಕರ್ಮಗಳಲ್ಲಿ ಬಂಧಿತ. ಕೆಟ್ಟ ಕಾರ್ಯಗಳಿಗೆ ಕಾರಣವಾಗುವುದು ಮನಸ್ಸು ಮತ್ತು ಇಂದ್ರಿಯಗಳು. ಈ ಕೆಟ್ಟ ಕಾರ್ಯಗಳ ಫ‌ಲವಾಗಿ ಕೆಡುಕನ್ನೇ ಪಡೆಯುತ್ತೇವೆ. ಹಾಗಾಗಿ, ಆತ್ಮವನ್ನು ಅರಿತುಕೊಳ್ಳಬೇಕು. ಜೀವ ಮತ್ತು ಆತ್ಮಗಳ ವ್ಯತ್ಯಾಸವನ್ನು ತಿಳಿದುಕೊಂಡು ಜ್ಞಾನಿಯಾಗಬೇಕು. ಹಿತಕ್ಕೂ ವಿಹಿತಕ್ಕೂ ಹಿಗ್ಗದೆಕೊರಗದೆ ಇರುವ ಆತ್ಮವಾಗಿ ಜೀವಿಸಬೇಕು. ಗುಣಾತೀತನಾಗಬೇಕು.

ಗುಣಾತೀತನಾದಾಗ ಆತ್ಮವು ಪರಮಾತ್ಮನನ್ನು ಸೇರುತ್ತದೆ. ತ್ರಿಗುಣವನ್ನು ಮೀರಿ ಗುಣಾತೀತನಾಗುವುದು ಹೇಗೆ? ಎಂಬುದನ್ನು ಭಗವಂತ ಹೀಗೆ ಹೇಳಿದ್ದಾ ನೆ: ಪ್ರಾಣ, ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಸಂಕಲ್ಪದಿಂದ ಪೂರ್ಣವಾಗಿ ನಿವೃತ್ತನಾದವನು, ಪ್ರಾಪಂಚಿಕ ಕರ್ಮಗಳನ್ನು ಮಾಡುವ ಪರಂಪರೆ ನಾಶವಾದವನು ದೇಹದಲ್ಲಿ ಸ್ಥಿತನಾಗಿದ್ದರೂ ಅದರ ಗುಣಗಳಿಂದ ಸರ್ವಥಾ ಆತೀತನಾಗಿರುತ್ತಾನೆ. ಅರ್ಥಾತ್‌ ಅವನು ಗುಣಾತೀತ ಅವಸ್ಥೆಯನ್ನು ಪಡೆಯುತ್ತಾನೆ.

ಗುಣಾತೀತನಾಗುವ ಪ್ರಯತ್ನ ಜಾರಿಯಲ್ಲಿದ್ದಾ ಗ ಪ್ರಪಂಚವೇ ಗುಣಾತೀತವಾಗಿ ಎಲ್ಲರ ಜೀವನ ಬಂಧಮುಕ್ತವಾಗಿರುತ್ತದೆ.

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.