ಮಂಜೂಷಾ ಎಂಬ ಮಾಯಾ ಲೋಕ 


Team Udayavani, Mar 2, 2019, 4:20 AM IST

manjusha-2.jpg

ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯವಿದೆಯಲ್ಲ; ಅದೇ ಒಂದು ಜಗತ್ತು. ನಾವು ಹೆಚ್ಚು ಕಮ್ಮಿ 40 -50 ವರ್ಷಗಳಷ್ಟು ಹಿಂದೆ ಹೋಗುತ್ತೇವೆ. ಅಲ್ಲಿ ಸಂಗ್ರಹಿಸಿಟ್ಟಿರುವ ಪ್ರತಿ ವಸ್ತುವಿನ ಹಿಂದೆಯೂ ಒಂದೊಂದು ಕಥೆಯಿದೆ. ಹಾಗೇನೇ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕಕ್ಕುಲತೆಯೂ ಕಾಣುತ್ತದೆ. “ಮಂಜೂಷಾ’ವನ್ನು ಒಂದು ರೌಂಡ್‌ ಹೊಡೆದು ಬರುವ ಹೊತ್ತಿಗೆ ಕರ್ನಾಟಕ ದರ್ಶನವೇ ಆಗುತ್ತದೆ.

ಧರ್ಮಸ್ಥಳಕ್ಕೆ ಹೋದರೆ ಮಂಜುನಾಥನ ದರ್ಶನದ ಜೊತೆಗೆ ಜಗತ್ತಿನ ದರ್ಶನ ಕೂಡ ಮಾಡಬಹುದು. ಅದು ಹೇಗೆ ಅನ್ನಬೇಡಿ. ಅಲ್ಲೇ, ಹೊಸದಾಗಿ ನಿರ್ಮಾಣಗೊಂಡಿರುವ ಮಂಜೂಷಾಗೆ ಹೋಗಿ. ಹೌದು, ಅದೇ ವಸ್ತು ಸಂಗ್ರಹಾಲಯ. ನೀವು ಇದರೊಳಗೆ ಕಾಲಿಟ್ಟಿರೋ ಮಾಯಲೋಕಕ್ಕೆ ಹೊಕ್ಕಂತೆಯೇ. ಹಾಗೆಂದು ವಸ್ತು ಸಂಗ್ರಹಾಲಯ ಸ್ಥಾಪಿಸಲೇ ಬೇಕು ಎನ್ನುವ ಉದ್ದೇಶದಿಂದಲೇ ಮಂಜೂಷಾದ ವಸ್ತುಗಳು ಸಂಗ್ರಹವಾಗಿರಲಿಲ್ಲ. ಅದರ ಹಿಂದೆ ರೋಚಕ ಕತೆಯೇ ಇದೆ. ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರಿಗೆ ವಿಶೇಷ ವಸ್ತುಗಳನ್ನು ಸಂಗ್ರಹಿಸಿಡುವ ಹವ್ಯಾಸ ಇತ್ತು. ಕ್ಷೇತ್ರಕ್ಕೆ ಬರುವ ಕೆಲವು ಮಂದಿ ಭಕ್ತರು ಅವರಿಗೆ ಅಪರೂಪದ ವಸ್ತುಗಳನ್ನು ತಂದು ಕೊಟ್ಟರೆ ಜೋಪಾನವಾಗಿ ತೆಗೆದಿಡುತ್ತಿದ್ದರು. ಪಾತ್ರೆಗಳು, ಕೃಷಿಗೆ ಬೇಕಾಗುವ ಸಲಕರಣೆಗಳು ಮುಂತಾದ ಯಾವ ವಸ್ತುವನ್ನೂ ಎಸೆಯದೆ ಅಲ್ಲಿಗೆ ಸೇರಿಸುತ್ತಿದ್ದರು. ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಕ್ತರಾದ ಆರಂಭದಲ್ಲಿ ದೇವಾಲಯದ ಉಗ್ರಾಣದಲ್ಲಿ ಒಮ್ಮೆ ಯಕ್ಷಗಾನದ ಬಹು ಹಿಂದಿನ ಕಾಲದ ವೇಷ
ಭೂಷಣಗಳು, ಕಿರೀಟಗಳು, ತೋಳ್ಕಟ್ಟುಗಳು ಮೊದಲಾದ ಮಣಿಗಳಿಂದ ನಿರ್ಮಿಸಿದ ಅಲಂಕಾರ ಸಾಮಗ್ರಿಗಳನ್ನು
ನೋಡಿದರು. ಇದೆಲ್ಲವನ್ನೂ ಒಂದೇ ಕಡೆ ಇರಿಸಿದರೆ ನೋಡುವವರಿಗೂ ಖುಷಿಯಾಗಬಹುದು ಎಂದು ಭಾವಿಸಿ
ಬೀಡಿನ ಮಾಳಿಗೆಯಲ್ಲಿ ಈ ಸಲಕರಣೆಗಳ ಸಮೂಹವನ್ನೂ ಒಟ್ಟುಗೂಡಿಸಿ ಇರಿಸಿದರು.


ಸಾರ್ವಜನಿಕ ವೀಕ್ಷಣೆಗಾಗಿ ಅದು ಒಂದುಗೂಡಿದ ಕ್ಷಣವೇ “ಮಂಜೂಷಾ’ ಎಂಬ ವಸ್ತು ಸಂಗ್ರಹಾಲಯದ ಹುಟ್ಟು ಮತ್ತು ಬೆಳವಣಿಗೆಗೆ ನಾಂದಿಯಾಯಿತು ಎಂದು ಸ್ಮರಿಸಿಕೊಳ್ಳುತ್ತಾರೆ ಪೂಜ್ಯ ಧರ್ಮಾಧಿಕಾರಿಗಳು. “ಬೆಂಗಳೂರಿನ ಗಾಜಿನ ಮನೆ ನೋಡಿದ ವಿದೇಶೀಯನೊಬ್ಬ ಅಲ್ಲಿ ಜೋಡಿಸಿಟ್ಟ ಕೆಲವು ಅಪರೂಪದ ವಸ್ತುಗಳನ್ನು ನೋಡಿದ
ಬಳಿಕ, ಇದೂ ಒಂದು ವಸ್ತು ಸಂಗ್ರಹಾಲಯವೆ? ಎಂಬ ಧಾಟಿಯಲ್ಲಿ ಲಘುವಾಗಿ ಮಾತನಾಡಿದ ವಾಕ್ಯ ನನ್ನ
ಹೃದಯವನ್ನು ಘಾಸಿ ಮಾಡಿತು’ ಎನ್ನುವ ಹೆಗ್ಗಡೆಯವರು, ಅಮೂಲ್ಯವಾದ ವಸ್ತು ವಿಶೇಷಗಳನ್ನು ಅಚ್ಚುಕಟ್ಟಾಗಿ
ಜೋಡಿಸಿಟ್ಟಿರುವ ಒಂದು ಸಂಗ್ರಹಾಲಯವನ್ನು ಧರ್ಮಸ್ಥಳದಲ್ಲಿ ಸ್ಥಾಪಿಸಬೇಕೆಂಬ ಕನಸು ಕಂಡರು. ಇದರ
ಅನುಷ್ಠಾನಕ್ಕೆ ಅವರು ಆರಿಸಿಕೊಂಡದ್ದು ಖ್ಯಾತ ವರ್ಣಚಿತ್ರ ಕಲಾವಿದರಾದ ಪಿ. ಆರ್‌. ತಿಪ್ಪೇಸ್ವಾಮಿ ಮತ್ತು ತಮ್ಮೊಂದಿಗೆ ಬಹು ಕಾಲದಿಂದ ಹಿತವಾದ ಸಂಬಂಧ ಬೆಳೆಸಿಕೊಂಡಿದ್ದ ಗೋವಿಂದರಾಜು ಅವರನ್ನು. ಗೋವಿಂದರಾಜು ತಂದೆಗೆ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರೊಂದಿಗೂ ನಿಕಟ ಬಾಂಧವ್ಯ ಇತ್ತು. ಗೋವಿಂದರಾಜು, ರಾಜ್ಯದ ಮೂಲೆಮೂಲೆಗಳಲ್ಲೂ ಹುಡುಕಿ ಅಪರೂಪದ, ಬಳಕೆ ಇಲ್ಲದ, ಅಟ್ಟ ಸೇರಿದ ವಿಶೇಷ ವಸ್ತುಗಳನ್ನು ಸಂಗ್ರಹಿಸಿ ತಂದುಕೊಡುತ್ತಿದ್ದರು. ತಿಪ್ಪೇಸ್ವಾಮಿಯವರು ಧರ್ಮಸ್ಥಳದಲ್ಲಿ ಇದ್ದು ಕಲಾ ರಚನೆಯ ಜೊತೆಗೆ ಇಂತಹವಸ್ತುಗಳನ್ನು ವರ್ಗೀಕರಿಸುವ ಕೆಲಸದಲ್ಲಿ ತೊಡಗಿದರು. ಧರ್ಮಾಧಿಕಾರಿ ವೀರೇಂದ್ರ
ಹೆಗ್ಗಡೆಯವರು ದೂರದ ಊರುಗಳಿಗೆ ಹೋದಾಗ, ಕಣ್ಣಿಗೆ ಕಾಣಿಸಿದ ವಿಶೇಷ ಸಾಮಗ್ರಿಗಳನ್ನು ತರುತ್ತಿದ್ದರು. ಭಕ್ತರು ನೀಡಿದ ವಸ್ತುಗಳನ್ನು ಸ್ವಂತಕ್ಕೆ ಬಳಸದೆ ಜೋಪಾನ ಮಾಡುತ್ತಿದ್ದರು. ಇದೆಲ್ಲವೂ ಒಂದುಗೂಡಿದಾಗ ಮಂಜೂಷಾ ಎಂಬ ವಸ್ತು ಸಂಗ್ರಹಾಲಯದ ಸ್ಥಾಪನೆಗೆ ಭದ್ರವಾದ ಬುನಾದಿಯಾಯಿತು. ಧರ್ಮಾಧಿಕಾರಿಗಳು ಕರ್ನಾಟಕವಲ್ಲದೆ ಕೇರಳ, ತಮಿಳುನಾಡು ಮೊದಲಾದೆಡೆಗಳಿಂದಲೂ ತಂದಿರುವ ಕರಕುಶಲ ವಸ್ತುಗಳು, ಚೀನಾದೇಶದ ಪಿಂಗಾಣಿ ಕಲಾಕೃತಿಗಳು, ಸುಂದರವಾದ ಬೇರೆ ಬೇರೆ ಪರಿಕರಗಳು ಮಂಜೂಷಾದ ಶೋಭೆ ಹೆಚ್ಚಿಸಿದವು. ಇಂಥ ಪ್ರತಿಯೊಂದು ವಸ್ತುಗಳ ವೈವಿಧ್ಯವನ್ನು ಸಾಲುಸಾಲಾಗಿ ಜೋಡಿಸಿ ಅದರ ಬಳಿಯಲ್ಲೇ ಆಯಾ ವಸ್ತುವಿನ ಸಮಗ್ರ ವಿವರವನ್ನು ಬರೆದಿಡುವ ಫ‌ಲಕಗಳನ್ನಿರಿಸುವ ಮೂಲಕ ಮಾಹಿತಿಯನ್ನು ಲಭಿಸುವಂತೆ ಮಾಡಿದ್ದಾರೆ.


ಇತಿಹಾಸ ದರ್ಶನ

ಹೀಗೆ ಸಂಗ್ರಹಿಸಿದ ವಸ್ತುಗಳ ಸಾಲುಗಳು ಜಗತ್ತಿನ ಇತಿಹಾಸದ ಪ್ರತ್ಯಕ್ಷ ದರ್ಶನವನ್ನೂ ಮಾಡುತ್ತವೆ. ನಾಣ್ಯಗಳ ವಿಭಾಗದಲ್ಲಿ ಕ್ರಿಸ್ತಪೂರ್ವ 700ರ ಗ್ರೀಕ್‌ ನಾಣ್ಯದಿಂದ ಆರಂಭಿಸಿ ನಮ್ಮ ದೇಶವನ್ನಾಳಿದ ಇತಿಹಾಸ ಪ್ರಸಿದ್ಧ ದೊರೆಗಳ ಯುಗವನ್ನೊಳಗೊಂಡು ಇಂದಿನ ತನಕ ಬೇರೆ ಬೇರೆ ಆಕೃತಿ, ಮೌಲ್ಯ, ಲೋಹಗಳ ವಿಶ್ವದ ಬಹುಭಾಗದ ನಾಣ್ಯಗಳು ಇವೆ. ಹಾಗೆಯೇ, ಕರೆನ್ಸಿ ನಡೆದ ಬಂದ ಹಾದಿಯ ಚಿತ್ರಣ ನೀಡುವ ಸಂಗ್ರಹವೂ ಇದೆ. ಶಿಲಾಯುಗದಲ್ಲಿ ಉಪಯೋಗಿಸುತ್ತಿದ್ದ ಪಾತ್ರೆಗಳಿಂದ, ಕಂಚು, ಹಿತ್ತಾಳೆಯಂಥ ಲೋಹಯುಗದ ಸಮಗ್ರ ಪಥವನ್ನೂ ಇಲ್ಲಿರುವ ಸಂಗ್ರಹಗಳಿಂದ ಮನಗಾಣಬಹುದು.

ಒಂದೆಡೆ ಭೂತಾರಾಧನೆಗೆ ಸಂಬಂಧಿಸಿದ ಮೊಗಗಳು, ಕಡ್ತಲೆಗಳ ವೈವಿಧ್ಯಗಳಿದ್ದರೆ ಇನ್ನೊಂದೆಡೆ ಇತಿಹಾಸ ಯುಗದ ಆಯುಧಗಳು, ಗುರಾಣಿಗಳು, ಯುದ್ಧಕಲೆಯ ವಿಧವಿಧದ ಅಸ್ತ್ರ ಶಸ್ತ್ರಗಳೂ ನೆಲೆಯಾಗಿವೆ. ಬಂದೂಕುಗಳು, ರಂಗಿಗಳೂ ಇದರೊಂದಿಗೆ ಸೇರಿಕೊಂಡಿವೆ. ಆದಿ ಮಾನವರ ಶಿಲಾಯುಧಗಳು, ವಿಜಯಪುರದಲ್ಲಿ ಲಭಿಸಿದ ಮರದ ಆಯುಧಗಳು, ಬನವಾಸಿ, ಚಂದ್ರವಳ್ಳಿಗಳ ಇತಿಹಾಸಕ್ಕೆ ಬೆಳಕು ಬೀರುವ ಆಯುಧಗಳೂ ಇಲ್ಲಿವೆ. ಹೈದರಾಬಾದಿನ ನಿಜಾಮರ ಕಾಲದ ಶಸ್ತ್ರಗಳಿವೆ. ಆಧುನಿಕ ಸಮರಾಂಗಣದ ಬಳಕೆಯ ಮಾದರಿಗಳೂ ಇಲ್ಲಿ ಕಾಣ ಸಿಗುತ್ತವೆ. 

ವಿಶಿಷ್ಟ ವಸ್ತುಗಳ ಸಾಲು ದೀಪ…
ಸ್ವತಃ ಅದ್ಭುತ ಛಾಯಾಗ್ರಾಹಕರಾಗಿರುವ ಡಾ| ಹೆಗ್ಗಡೆಯವರಿಗೆ ಈ ಕಲೆಯ ಕುರಿತ ಅಪಾರಜ್ಞಾನವಿದೆ ಎಂಬುದನ್ನು ಮಂಜೂಷಾದಲ್ಲಿರುವ ಕ್ಯಾಮರಾಗಳೇ ಹೇಳಿಬಿಡುತ್ತವೆ. ನೀರಿನ ಕೆಳಗೆ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮರಾಗಳು, ಆರಂಭದಲ್ಲಿ ಬಳಕೆ ಮಾಡುತ್ತಿದ್ದ ಕ್ಯಾಮರಾದ ಕೂಡ ಸಂಗ್ರಹದಲ್ಲಿ ಸಾಲು ಹಿಡಿದಿವೆ. ಹಾಗೆಯೇ, ಗಡಿಯಾರಗಳು ನಡೆದು ಬಂದ ದಾರಿಯ ಅವಲೋಕನ ಮಾಡಬಹುದು. ಗ್ಯಾಸ್‌ ದೀಪದಿಂದ ಆರಂಭಿಸಿ ನಾನಾ ದೀಪಗಳ ವೈವಿಧ್ಯಗಳಿವೆ. ಲೇಖನಿಗಳ ಬಗೆಗಳಿಗೆ ಲೆಕ್ಕವಿಟ್ಟವರಿಲ್ಲ.ದೂರವಾಣಿ ಸಲಕರಣೆಗಳ ಪ್ರತ್ಯಕ್ಷ ದರ್ಶನ ಮಾಡಬಹುದು. ಸಿನಿಮಾ ಪೊ›ಜೆಕ್ಟರ್‌ ಸವೆಸಿದ ಹಾದಿಯ ಚಿತ್ರಣವೂ ಗಮನ ಸೆಳೆಯುತ್ತದೆ. ಸಂಗೀತ ವಾದ್ಯಗಳ ಸಂಗ್ರಹ ಬೆರಗು ಮೂಡಿಸುವಂತಿದೆ. ತಂತಿ ವಾದ್ಯಗಳು, ಊದುವ ವಾದ್ಯಗಳು ಎಷ್ಟೊಂದು ಬಗೆ! ಡಾ| ಶಿವರಾಮ ಕಾರಂತರು ಉಲ್ಲೇಖೀಸಿದ್ದ “ಕಾಡ್ಯ’ ಎಂಬ ಜನಪದೀಯ ವಾದ್ಯವನ್ನು ವಿಶೇಷ ಆಸಕ್ತಿ ವಹಿಸಿ ಸಂಗ್ರಹಿಸಲಾಗಿದೆ. ಟೈಪ್‌ರೈಟರ್‌ಗಳು, ಗ್ರಾಮಾಫೋನ್‌ ಹೇಗೆ ಕಾಲವಾಯಿತೆಂಬುದಕ್ಕೆ ಸಾಲು ಸಾಲು ಮಾದರಿಗಳಿವೆ. ಸೀಮೆಣ್ಣೆಯ ಬುಡ್ಡಿಯೂ ಇದೆ. ಆಧುನಿಕ ಕಾಲದ ಝಗಮಗಿಸುವ ದೀಪದ ಮಾದರಿಯೂ ಇದೆ. ಜನಪದ ಬಳಕೆಯ ಸಾಮಗ್ರಿಗಳ ಸಾಲಿನಲ್ಲಿ ಮನೆಯಲ್ಲಿ ಉಪಯೋಗಿಸುವ ಶ್ಯಾವಿಗೆ ಮಣೆ, ಚೆನ್ನೆಮಣೆ, ತಾಂಬೂಲ ಪರಿಕರಗಳು, ಹೊಲಿಯುವ ಯಂತ್ರಗಳು ಸೇರಿಕೊಂಡಿವೆ. ಪೂಜೆಗೆ ಬಳಸುವ ಆರತಿಗಳು, ದೀಪಗಳು, ಪಾತ್ರೆಗಳು ಬೆರಗಿನ ನೋಟ ಹರಿಸಿಬಿಡುತ್ತವೆ. ಪಂಚಲೋಹ, ಕಂಚು, ತಾಮ್ರಗಳಿಂದ ಎರಕ ಹೊಯ್ದ ಕೈದೀಪ, ಕಾಲುದೀಪಗಳು, ಉದ್ಧರಣೆಗಳು, ಘಂಟಾಮಣಿಗಳು ಕಲಾತ್ಮಕವಾಗಿಯೂ ಮೌಲ್ಯಯುತವಾಗಿವೆ. ಭಕ್ತರ ಮನೆಗಳಲ್ಲಿ ಪೂಜೆ ನಿಂತು ಹೋದ ಪ್ರಯುಕ್ತ ಇಲ್ಲಿಗೆ ಸೇರಿಕೊಂಡ ದೇವರ ಲೋಹದ ವಿಗ್ರಹಗಳನ್ನೂ ಇಲ್ಲಿ ಕಣ್ತುಂಬಿ ಕೊಳ್ಳಬಹುದು. ವೈಷ್ಣವ, ಶೈವ ಮತ್ತು ಜೈನ ಧರ್ಮ ಸಂಪ್ರದಾಯದ ಇಂತಹ ವಿಗ್ರಹಗಳು ಮೂರು ಹಂತಗಳಲ್ಲಿ ವಿರಾಜಮಾನಗೊಂಡಿವೆ. ಇನ್ನು ಗಂಜಿಫಾದಂತಹ ಕಲಾಕೃತಿಗಳು, ಶ್ರೀಗಂಧ ಮತ್ತು ಹಸ್ತಿದಂತದ ಕೆತ್ತನೆಗಳು, ವರ್ಣಚಿತ್ರಗಳು, ಹಳೆಯ ಹಸ್ತಪ್ರತಿಗಳು ಮಂಜೂಷಾದ ಘನತೆಯನ್ನು ಹೆಚ್ಚಿಸಿಬಿಡುತ್ತವೆ. ಚಿನ್ನದ ಲೇಪನ, ದಂತದ ಕುಸುರಿಇರುವ ಪುರಾಣ, ಕಾವ್ಯಗಳ ಅಪೂರ್ವ ಹಸ್ತಪ್ರತಿಗಳು, ತಾಳೆಗರಿಯ ಗ್ರಂಥಗಳೂ ಸಂಗ್ರಹಗೊಂಡಿವೆ. ಧರ್ಮ, ಸಂಸ್ಕೃತಿಗಳ ಇತಿಹಾಸವೇ ಇಲ್ಲಿ ಮೇಳೈಸಿದೆ. ಕ್ರಿಸ್ತಪೂರ್ವ 1500ರ ಸಿಂಧೂ ಸಂಸ್ಕೃತಿಯ ಇತಿಹಾಸದಿಂದ ಮೊಹೆಂಜೊದಾರೊ, ಹರಪ್ಪ ಸಂಸ್ಕೃತಿಯ ಉತನನಗಳ ಅವಶೇಷಗಳೂ ಸ್ಥಾನ ಗಳಿಸಿವೆ. ಹೀಗೆ, ವಸ್ತುಗಳ ಸಂಗ್ರಹ ಹೆಚ್ಚುತ್ತಲೇ ಹೋದಾಗ ಹೊಸ ಕಟ್ಟಡದ ನಿರ್ಮಾಣ ಅನಿವಾರ್ಯವಾಯಿತು. ನೂತನ ಕಟ್ಟಡ ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ. ಹದಿನೆಂಟನೆಯ ಶತಮಾನದ ಶ್ರೀರಂಗಪಟ್ಟಣದ ಶಿಲೆಯ ರಥ ನಮ್ಮನ್ನು ಬಾಗಿಲಲ್ಲೇ
ಬರಮಾಡಿಕೊಳ್ಳುವಾಗ ಅದರಲ್ಲಿರುವ ಸೂಕ್ಷ್ಮವಾದ ಕುಸುರಿ ಕಲೆ ಮನ ಸೆಳೆಯದಿರದು

ಲಕ್ಷ  ಚದರ ಅಡಿ ಜಾಗ
ನವೀಕೃತ ಮಂಜೂಷಾ ಒಂದು ಲಕ್ಷ ಚದರಡಿಗಳನ್ನು ದಾಟಿದ ಪ್ರಾಂಗಣವನ್ನು ಹೊಂದಿದ್ದು, ವಿಶ್ವದ ದರ್ಶನಕ್ಕೆ ತೆರೆದುಕೊಂಡಿದೆ. ಇದರ ನಿರ್ಮಾಣಕ್ಕೆ 3. 12 ಕೋಟಿ ರೂಪಾಯಿಗಳ ವೆಚ್ಚವೂ ಆಗಿದೆ. ಒಳಗೆ ಸೆಕೆಯ ಅನುಭವವಾಗಬಾರದೆಂದು ವಿಶೇಷವಾದ ಗಾಳಿಯಾಡುವ ಕಿಂಡಿಗಳನ್ನಿಡಲಾಗಿದೆ. ಎಲ್ಲ ವಸ್ತುಗಳೂ ನಿಚ್ಚಳವಾಗಿ ಕಾಣಿಸಬೇಕೆಂದು ಆದರೆ ಬೆಳಕಿನ ತೀಕ್ಷ್ಣತೆ ವಸ್ತುಗಳಿಗೆ ಹಾನಿ ತರಬಾರದೆಂದು ವಿಶೇಷವಾಗಿ ಸಂಯೋಜಿಸಲಾಗಿದೆ. 35 ಗ್ಯಾಲರಿಗಳು, 15 ಭಾಗಗಳಾಗಿ ಸಂಗ್ರಹಾರವನ್ನು ವರ್ಗೀಕರಿಸಲಾಗಿದೆ. ಈ ಸಲ ನವೀಕೃತ ಮಂಜೂಷಾದ ಹೊಸ ಸೇರ್ಪಡೆಯೆಂದರೆ ಕಲಾತ್ಮಕವಾದ, ಚಿತ್ರಮಯವಾಗಿ ಚಿತ್ತ ಸೆಳೆಯುವ ಬಾಗಿಲುಗಳ ವೈಭವ. ತಮಿಳುನಾಡು, ಆಂಧ್ರ ಮೊದಲಾದ ಕಡೆಯಿಂದ ಸಂಗ್ರಹಿಸಿ ತಂದ ಪುರಾತನವಾದ ಈ 70 ಬಾಗಿಲುಗಳು ಒಂದೊಂದು ಕೂಡ ಅಮೂಲ್ಯ, ಅತ್ಯಮೂಲ್ಯ. ಹಾಗೆಯೇ, ಪೀಠೊಪಕರಣಗಳ ಸಾಲಿನಲ್ಲಿ ಬೆರಗಿಗೆ ಗ್ರಾಸವಾಗಬಲ್ಲ ಆಸನಗಳೂ ಇವೆ. ಒಂದು ಕುರ್ಚಿಯಲ್ಲಿ ಕುಳಿತ ಕೂಡಲೇ ಸನಿಹದಲ್ಲಿ ಭಾರ ತಿಳಿಸುವ ಯಂತ್ರ ಕುಳಿತವನ ತೂಕವೆಷ್ಟು ಎಂಬುದನ್ನು ಹೇಳುತ್ತದೆ. ಹಳೆಯ ಉಗಿ ರೈಲಿನ ಎಂಜಿನ್‌, ಹೆಲಿಕಾಪ್ಟರ್‌ ಕೂಡ ಈ ಸಂಗ್ರಹಾಲಯದ ಒಂದು ಭಾಗವೆನಿಸಿದೆ. ಹೊರಭಾಗದಲ್ಲಿರುವ ಹಳೆಯ ಕಾರುಗಳ ಸಂಗ್ರಹಾಲಯವೂ ಒಂದು ವಿಸ್ಮಯದ ಪ್ರಪಂಚವನ್ನೇ ನಮ್ಮ ಮುಂದೆ ತೆರೆದಿಡುತ್ತದೆ. ಮಂಜೂಷಾದ ಎಲ್ಲ ವಸ್ತುಗಳ ಬಗೆಗೂ ವಿವರಿಸುವ ವ್ಯವಸ್ಥಿತ ಪಟ್ಟಿಯೂ ಈಗ ಸಿಗುತ್ತದೆ.

ಪ. ರಾಮಕೃಷ್ಣ ಶಾಸ್ತ್ರೀ    

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.