CONNECT WITH US  

ಕವಿಗಳಲ್ಲಿ ರಾಜಕೀಯ ಬದ್ಧತೆ: ಕಳವಳ

ಮೈಸೂರು: ಪ್ರಸ್ತುತದ ದಿನಗಳಲ್ಲಿ ಕೆಲವು ಕವಿಗಳು ಸಾಹಿತ್ಯದ ಬದ್ಧತೆಗೆ ಬದಲಿಗೆ ರಾಜಕೀಯ ಬದ್ಧತೆ
ಮೈಗೂಡಿಸಿಕೊಳ್ಳುತ್ತಿದ್ದಾರೆ ಎಂದು ಕವಯತ್ರಿ ಡಾ. ಲತಾ ರಾಜಶೇಖರ್‌ ಕಳವಳ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ದಿಲೀಪ್‌ ಎನ್ಕೆ ಅವರ "ಋತುಮಾನಕ್ಕಷ್ಟೇ ಪ್ರೀತಿ ಚೊಚ್ಚಲ' ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾರಸ್ವತ ಲೋಕದಲ್ಲಿ ಕವಿಗಳು ಸರಸ್ವತಿ ಪ್ರಭಾವಕ್ಕೊಳ ಗಾಗಿ ಜಾnನಜ್ಯೋತಿ ಬೆಳಗಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ರಾಜಕೀಯ ಮಳೆ ಬಿರುಸಾಗಿ ಸುರಿಯುತ್ತಿದ್ದು, ಇದರಿಂದ ಕವಿಗಳು ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೊಳಗಾಗಿ ಸಾಹಿತ್ಯ ಲೋಕವನ್ನೇ ಸಂಕ್ರಮಣ ಸ್ಥಿತಿಗೆ ಕೊಂಡೊಯ್ಯುತ್ತಿದ್ದಾರೆ. ಹೀಗಾಗಿ ಸಾಹಿತಿಗಳು ಈ ವಿಷಯದ ಬಗ್ಗೆ ಆತ್ಮಶೋಧನೆ ಮಾಡಿಕೊಳ್ಳುವ ಮೂಲಕ ಸಾಹಿತ್ಯ ಲೋಕದ ಬೆಳವಣಿಗೆಗೆ ಶ್ರಮಿಸಬೇಕು ಎಂದರು.

ಯಾವುದೇ ವ್ಯಕ್ತಿ ಸಾಹಿತ್ಯ ಲೋಕದಲ್ಲಿ ಸಾಧನೆ ಮಾಡಬೇಕಾದರೆ ಭಾಷೆ ಅಭಿವ್ಯಕ್ತಿ ಪ್ರಮುಖ ಪಾತ್ರವಹಿಸುತ್ತದೆ. ಭಾಷೆಯಲ್ಲಿ ಹಿಡಿತ ಇಲ್ಲದಿದ್ದರೆ ಉತ್ತಮ ಕಾವ್ಯ ರಚಿತವಾಗಲು ಸಾಧ್ಯವಿಲ್ಲ. ಕಾವ್ಯದಲ್ಲಿ ಲಾಲಿತ್ಯ, ಬೆರಗು ಸೇರಿದಂತೆ ವಿಶಿಷ್ಟ ಅಂಶವನ್ನು ವೈಭವೀಕರಿಸುವಾಗ ಭಾಷೆ ಅಭಿವ್ಯಕ್ತಿ ಉತ್ತಮ ವಾಗಿದ್ದರೆ ಮಾತ್ರ ಓದುಗರನ್ನು ತಲುಪಲು ಸಾಧ್ಯ. ನವ್ಯ ಸಾಹಿತ್ಯ ಸಹೃದಯರನ್ನು ತಲುಪುವಲ್ಲಿ ವಿಫ‌ಲವಾಗಿದ್ದಕ್ಕೆ ಭಾಷೆ ಅಭಿವ್ಯಕ್ತಿ ಕೊರತೆಯೇ ಕಾರಣ. ಕಾವ್ಯಕ್ಕೆ ಸ್ಪಷ್ಟತೆ ನ್ಯೂನತೆ ಯಾದರೆ ಅಸ್ಪಷ್ಟತೆ ದೋಷವಾಗಿರುತ್ತದೆ. ಹೀಗಾಗಿ ಸ್ಪಷ್ಟತೆ ಮತ್ತು ಅಸ್ಪಷ್ಟತೆ ನಡುವಿನ ಮಧ್ಯಮ ಮಾರ್ಗದಲ್ಲಿ ಸುಲಲಿತ ಭಾಷೆಯೊಂದಿಗೆ ರಚಿತವಾದ ಕಾವ್ಯ ಶ್ರೇಷ್ಠ ಕಾವ್ಯವಾಗಿ ನಿಲ್ಲುತ್ತದೆ. 

ಉದಯೋನ್ಮುಖ ಬರಹಗಾರರು ಆತ್ಮವಿಶ್ವಾಸ, ಭಾಷೆ ಹಿಡಿತದ ಜತೆಗೆ ಮುಗ್ಧತೆಯನ್ನು ರೂಢಿಸಿ ಕೊಳ್ಳಬೇಕೆಂದು ಹೇಳಿದರು. ಪೊ›.ಸಿ.ನಾಗಣ್ಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ. ಆರ್‌. ರಾಮಕೃಷ್ಣ, ಲೇಖಕ ದಿಲೀಪ್‌ ಎನ್ಕೆ, ಸಂಶೋಧಕ ಅಂಬಳೆ ಎಂ.ಮಹಾದೇವಸ್ವಾಮಿ ಇದ್ದರು.

Trending videos

Back to Top