CONNECT WITH US  

1ಲಕ್ಷ 25 ಸಾವಿರ ಜನರಿಗೆ ಹಣ ಹಂಚಿ ಗೆದ್ದಿದ್ದಾರೆ: ಪ್ರಸಾದ್ ಆರೋಪ

ಮೈಸೂರು:ನಾನು ರಾಜಕೀಯ ಜೀವನದಲ್ಲಿ ಯಾರಿಗೂ ತಲೆಬಾಗಿಲ್ಲ. ಆದರೆ ಜನ ನನ್ನ ಸ್ವಾಭಿಮಾನವನ್ನು ನೆಚ್ಚಿದ್ದಾರೆ. ನೀವು(ಕಾಂಗ್ರೆಸ್) ಈ ಉಪಚುನಾವಣೆಯಲ್ಲಿ ಯಾವ ರೀತಿ ಗೆದ್ದಿದ್ದೀರಿ ಎಂಬುದು ನಂಜನಗೂಡು ಜನತೆಗೆ ಗೊತ್ತಿದೆ. ಮತದಾನದ ಪಾವಿತ್ರ್ಯತೆಯನ್ನೇ ಕಾಂಗ್ರೆಸ್ ಹಾಳುಮಾಡಿ ಬಿಟ್ಟಿದೆ. ನನ್ನ ಆರಿಸಿ ತಂದಿದ್ದ ಜನರ ಸ್ವಾಭಿಮಾನ, ಆತ್ಮಗೌರವಕ್ಕೆ ಸೋಲಾಗಿದೆ... ಇದು ನಂಜನಗೂಡು ಕ್ಷೇತ್ರದಲ್ಲಿ ಸೋಲುಂಡ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಗಂಭೀರ ಆರೋಪ.

ಫಲಿತಾಂಶ ಪ್ರಕಟವಾದ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಬಹಳ ನೆಮ್ಮದಿಯಾಗಿ ಚುನಾವಣೆಯಲ್ಲಿ ಭಾಗವಹಿಸಿದ್ದೆ. ನಾನು ಸ್ವಾಭಿಮಾನ ಆತ್ಮಗೌರವ ಉಳಿಸಿಕೊಂಡು ಬಂದಿದ್ದೇನೆ. ನನ್ನ ಸ್ವಾಭಿಮಾನಕ್ಕೆ ಕಡಿಮೆ ಮತ ಸಿಕ್ಕಿದೆ ನಿಜ. ಆದರೆ ಜನ ನನ್ನ ಸ್ವಾಭಿಮಾನವನ್ನು ನೆಚ್ಚಿದ್ದಾರೆ. ನಂಜನಗೂಡಿನ 1ಲಕ್ಷದ 25 ಸಾವಿರ ಜನರಿಗೆ ಹಂಚಿಕೆ ಮಾಡಿ ಗೆದ್ದಿದ್ದಾರೆ. ಕೆಂಪಯ್ಯ ಪೊಲೀಸ್ ಇಲಾಖೆಯನ್ನು ಯಾವ ರೀತಿ ಬಳಸಿಕೊಂಡಿದ್ದಾರೆ ಎಂಬುದು ಗೊತ್ತು ಎಂದು ಹೇಳಿದರು.

ಇದುವರೆಗೆ ನಾನು 13 ಚುನಾವಣೆಗಳನ್ನು ಎದುರಿಸಿದ್ದೇನೆ. ಮುಂದೆ ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ ಎಂದು ಘೋಷಿಸಿದ ಅವರು, ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವೆ ಎಂದು ತಿಳಿಸಿದರು.

Trending videos

Back to Top