ನಾಗರಹೊಳೆ: ಹುಲಿ ಗಣತಿ ಅಂಕಿ-ಅಂಶ ಸಂಗ್ರಹ 

Team Udayavani, Nov 19, 2017, 12:15 PM IST

m4-tiger.jpg

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಕ್ಯಾಮರಾ ಆಧಾರಿತ ಹುಲಿ ಗಣತಿ ಎಲ್ಲಾ 8 ವಲಯಗಳಲ್ಲೂ ನಡೆಸಲಾಗುತ್ತಿದ್ದು ಅಂಕಿ ಅಂಶಗಳನ್ನು ದಾಖಲಿಸಲಾಗುತ್ತಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಎಲ್ಲಾ 8 ವಲಯಗಳಲ್ಲೂ ಕಳೆದ ಮೂರ್‍ನಾಲ್ಕು ದಿನಗಳಿಂದ ಸಿಬ್ಬಂದಿಗಳು 402 ಕ್ಯಾಮರಾ ಅಳವಡಿಸಿದ್ದು, ಎರಡು ವರ್ಷಕ್ಕಿಂತ ಕಡಿಮೆ ಇರುವ ಚಿಕ್ಕ ಹುಲಿಗಳನ್ನು ಎಣಿಕೆ ವೇಳೆ ಗಣನೆಗೆ ತೆಗೆದುಕೊಳ್ಳದೆ ಉಳಿದಂತೆ ಹುಲಿಗಳನ್ನು ಎಣಿಕೆ ಮಾಡಲಾಗುತ್ತದೆ.

2018ರಲ್ಲಿ ನಡೆಯುವ ಮುಖ್ಯ ಹುಲಿಗಣತಿ ಅಂಗವಾಗಿ ಇದೀಗ ಕ್ಯಾಮರಾ ಟ್ಯಾಪ್‌ ಬಳಸಿ ನ.15 ರಿಂದ 2 ತಿಂಗಳ ಕಾಲ ನಿರಂತರ ಗಣತಿ ನಡೆಸಿ, ಹುಲಿಗಳ ತಲೆ ಎಣಿಕೆ ಮಾಹಿತಿ ಆಧರಿಸಿ ವೈಜ್ಞಾನಿಕವಾಗಿ ಹುಲಿಗಳ ಸಂಖ್ಯೆ ಗುರುತಿಸುವ ಕಾರ್ಯಾರಂಭಗೊಂಡಿದೆ.

ಅಳವಡಿಸಿರುವ ಕ್ಯಾಮರಾಗಳಿಂದ 2-3 ದಿನಕ್ಕೊಮ್ಮೆ ಕ್ಯಾಮರಾ ಚಿಪ್‌ಗ್ಳಿಂದ ಡಾಟಾ ಸಂಗ್ರಹಿಸಿ, ಕೇಂದ್ರ ಕಚೇರಿಗೆ ಕಳುಹಿಸುವುದು. ಆನಂತರ ಕ್ರೋಡೀಕರಿಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ  ಕಳುಹಿಸಿ ಹುಲಿಗಳ ಸಂಖ್ಯೆಯನ್ನು ಅಂತಿಮಗೊಳಿಸಲಾಗುತ್ತದೆ. 

ನಾಗರಹೊಳೆ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಮಣಿಕಂಠನ್‌, ಎಸಿಎಫ್ಗಳಾದ ಪ್ರಸನ್ನಕುಮಾರ್‌, ಪೌಲ್‌ಅಂಟೋಣಿ,  ಪೂವಯ್ಯ ಮಾರ್ಗದರ್ಶನದಲ್ಲಿ ಕಲ್ಲಹಳ್ಳದ ವಲಯ ಅರಣ್ಯಾಧಿಕಾರಿ ಶಿವರಾಂ, ವೀರನಹೊಸಹಳ್ಳಿ ಮಧುಸೂದನ್‌, ನಾಗರಹೊಳೆ ಅರವಿಂದ್‌, ಮತ್ತಿಗೋಡು ವಲಯದ ಕಿರಣ್‌ಕುಮಾರ್‌, ಹುಣಸೂರು ವಲಯದ ಸುರೇಂದ್ರ,

ಡಿ.ಬಿ.ಕುಪ್ಪೆ ಸುಬ್ರಹ್ಮಣ್ಯ ಸೇರಿ 8 ವಲಯಗಳಲ್ಲಿಯೂ ಆಯಾ ಆರ್‌ಎಫ್ಒಗಳ ನೇತತ್ವದಲ್ಲಿ ತರಬೇತಿ ಪಡೆದ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಕಲ್ಲಹಳ್ಳ ವಲಯದ 28, ವೀರನಹೊಸಹಳ್ಳಿ ವಲಯದ 22 ಕಡೆ ಸೇರಿದಂತೆ ಉದ್ಯಾನವನದ ಎಲ್ಲೆಡೆ 201 ಕಡೆ ಸೇರಿದಂತೆ ತಲಾ ಎರಡು ಅತ್ಯಾಧುನಿಕ ತಂತ್ರಜ್ಞಾನವುಳ್ಳ 402 ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಹುಲಿ ಪತ್ತೆ ಕಾರ್ಯ ಹೇಗೆ: ಪ್ರತಿ ವಲಯದ ಹುಲಿಗಳ ಆವಾಸ ಸ್ಥಾನ-ಓಡಾಟ ಹಾಗೂ ವಿಸ್ತೀರ್ಣ ಗುರುತಿಸಿ ಹುಲಿಗಳು ಓಡಾಡುವ ಮಾರ್ಗದಲ್ಲಿ ಎದುರು-ಬದುರಾಗಿ ಕ್ಯಾಮರ ಅಳವಡಿಸಲಾಗುತ್ತದೆ. ಅಲ್ಲಿ ಆಧುನಿಕ ತಂತ್ರಜ್ಞಾನ ಬಳಸಿದ ಕ್ಯಾಮರಾದಲ್ಲಿ ಎಲ್ಲಾ ಪ್ರಾಣಿಯ ಓಡಾಟದ ನಿಖರ ಸಮಯ ದಾಖಲಾಗಲಿದೆ.

3-4 ದಿನಕ್ಕೊಮ್ಮೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕ್ಯಾಮರಾದಿಂದ ಚಿಪ್‌ ಹೊರತೆಗೆದು ಸ್ಥಳದಲ್ಲೇ ಇಲಾಖೆ ವತಿಯಿಂದ ನೀಡಿರುವ ಲ್ಯಾಪ್‌ ಟ್ಯಾಪ್‌ನಲ್ಲೇ ಡಾಟಾ ಸಂಗ್ರಹಿಸಿ, ಅಲ್ಲೇ ಚಿಪ್‌ ಅಳವಡಿಸುತ್ತಾರೆ. ಒಂದೇ ಹುಲಿ  2-3 ಕಡೆಗಳಲ್ಲಿ ಕ್ಯಾಮರಾ ಟ್ರ್ಯಾಪ್‌ ಆಗಿದ್ದಲ್ಲಿ ಅದನ್ನೂ ಗುರುತಿಸುತ್ತಾರೆ.

ಈ ಹಿಂದೆ ಹಲವು ಎನ್‌ಜಿಒ ಸೇರಿದಂತೆ ಇತರರ ಸಹಕಾರದಿಂದ ಹುಲಿ ಗಣತಿ ಕಾರ್ಯ ನಡೆಯುತ್ತಿತ್ತು. ಕಳೆದ 3 ವರ್ಷಗಳಿಂದ ರಾಷ್ಟ್ರೀಯ ಹುಲಿ ಪ್ರಾಧಿಕಾರದ ವತಿಯಿಂದಲೇ ಇಲಾಖೆ ಅಧಿಕಾರಿಗಳು, ಆಯ್ದ ಸಿಬ್ಬಂದಿಗೆ ತರಬೇತಿ ನೀಡಿ ಕ್ಯಾಮರಾ ಟ್ರಾಪಿಂಗ್‌ ಗಣತಿ ನಡೆಸಲಾಗುತ್ತಿದೆ.

* ಸಂಪತ್‌ ಕುಮಾರ್‌

ಟಾಪ್ ನ್ಯೂಸ್

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

11-

UPSC ಪರೀಕ್ಷೆಯಲ್ಲಿ ಹುಣಸೂರಿನ ಲೇಖನ್‌ಗೆ 77ನೇ ರ‍್ಯಾಂಕ್

ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

Congress ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.