CONNECT WITH US  

ಪತ್ನಿ,ಮಗಳನ್ನು ಬರ್ಬರವಾಗಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ 

ಮೈಸೂರು: ಪತ್ನಿ ಮತ್ತು ಮಗಳನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಟೆಕ್ಕಿಯೊಬ್ಬ  ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ರಾತ್ರಿ ನಗರದ ವಿಜಯನಗರ 4 ನೇ ಹಂತದಲ್ಲಿ ನಡೆದಿದೆ.

ಪ್ರಜ್ವಲ್‌ ಎಂಬ 42 ವರ್ಷದ ಟೆಕ್ಕಿ ಪತ್ನಿ ಸವಿತಾ (39) ಮತ್ತು ಸಿಂಚನಾ (10) ಳನ್ನು ಬುಧವಾರ ರಾತ್ರಿ ಕೊಲೆಗೈದಿದ್ದಾನೆ. ಹತ್ಯೆಯ ಒಂದು ದಿನದ ಬಳಿಕ ತಾನೂ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ನೆರೆ ಹೊರೆಯವರು ಸ್ಥಳಕ್ಕಾಗಮಿಸಿ ಆತನನ್ನು ತಪ್ಪಿಸಿ  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ವಿಜಯನಗರ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಯಾವ ಕಾರಣಕ್ಕಾಗಿ ಕೊಲೆ ಗೈದಿದ್ದಾನೆ ಎನ್ನುವ ವಿಚಾರ ತನಿಖೆಯಿಂದ ತಿಳಿದು ಬರಬೇಕಿದೆ. ಪ್ರಜ್ವಲ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 


Trending videos

Back to Top