ದೇಶದಲ್ಲಿ ಕಮಲ ಅರಳಿಸಿದ್ದೇ ಅಟಲ್‌

Team Udayavani, Aug 17, 2018, 11:21 AM IST

m1-deshadali.jpg

ಮೈಸೂರು: ಜಾತಿ, ಧರ್ಮ, ಪಕ್ಷವನ್ನೂ ಮೀರಿ ನಿಂತು ರಾಷ್ಟ್ರ ಹಿತವನ್ನೇ ಉಸಿರಾಡಿದ ಮೇರು ವ್ಯಕ್ತಿತ್ವವುಳ್ಳ ಮಹಾ ಸಂತ ಅಟಲ್‌ ಬಿಹಾರಿ ವಾಜಪೇಯಿ. ಸಾರ್ವಜನಿಕ ಬದುಕಿನಲ್ಲಿ ಕೈ-ಬಾಯಿ ಶುದ್ಧವಾಗಿಟ್ಟುಕೊಂಡು ಹೇಗೆ ಕೆಲಸ ಮಾಡಬಹುದು ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಧೀಮಂತ ರಾಜಕಾರಣಿ. ಅವರದು ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ.

ಅವರು ಮರೆಯಾಗಿವುದನ್ನು ಊಹಿಸಿಕೊಳ್ಳುವುದೂ ಕಷ್ಟ ಎಂದು ಮಾಜಿ ಸಚಿವ ವಿಜಯಶಂಕರ್‌ ಕಂಬನಿ ಮಿಡಿದರು. ಅವರ ವ್ಯಕ್ತಿತ್ವವನ್ನು ಯಾರಿಗೂ ಹೋಲಿಸಲಾಗದು. ಅವರಿಗೆ ಅವರೇ ಸಾಟಿ. ಮೌಲ್ಯಗಳು ನಶಿಸುತ್ತಿರುವ ಇಂದಿನ ರಾಜಕಾರಣದಲ್ಲಿ ಅಟಲ್‌ಜೀ ಅವರಂತಹ ನಾಯಕತ್ವ ಕಾಣುವುದು ಕಷ್ಟ.

ಅಂತಹ ಉತ್ತಮರ ಸರ್ಕಾರದಲ್ಲಿ ನಾನೊಬ್ಬ ಲೋಕಸಭಾ ಸದಸ್ಯನಾಗಿದ್ದೆ ಎಂದು ಹೇಳಿಕೊಳ್ಳುವುದೇ ನನಗೆ ಹೆಮ್ಮೆಯಾಗುತ್ತಿದೆ. 1991ರಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೇಳೆ ಚುನಾವಣಾ ಪ್ರಚಾರಕ್ಕೆ ಬಂದಿದ್ದರು. ಆಗ ಅವರನ್ನು ಮೊದಲ ಬಾರಿಗೆ ಹತ್ತಿರದಿಂದ ಕಾಣಲು ಸಾಧ್ಯವಾಗಿತ್ತು. 

ವಾಮಮಾರ್ಗ ಅನುಸರಿಸಲ್ಲ: ವಾಜಪೇಯಿ ಪ್ರಧಾನಮಂತ್ರಿಯಾಗಿದ್ದ ವೇಳೆ ಸಂಸತ್‌ ಸದನದಲ್ಲಿ ಅವರನ್ನು ಹತ್ತಿರದಿಂದ ಕಂಡಿದ್ದೆ. 1999ರಲ್ಲಿ ವಾಜಪೇಯಿಯವರ ಎನ್‌ಡಿಎ ಸರ್ಕಾರಕ್ಕೆ ಜಯಲಲಿತಾ ಬೆಂಬಲ ವಾಪಸ್‌ ಪಡೆದಾಗ ವಾಜಪೇಯಿ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಬಿಜೆಪಿ ಸಂಸದೀಯ ಸಭೆಯಲ್ಲಿ ಲೋಕಸಭಾ ಸದಸ್ಯರ ಸಂಖ್ಯೆ ಲೆಕ್ಕಹಾಕಿದಾಗ ಓರ್ವ ಸದಸ್ಯರ ಕೊರತೆ ಕಂಡು ಬರುತ್ತದೆ.

ಆಗ ಇತರೆ ನಾಯಕರು ಬಹುಮತಕ್ಕೆ ಬೇಕಾದ ಸಂಖ್ಯೆಯನ್ನು ನಾವು ಹೊಂದಿಸುತ್ತೇವೆ, ನೀವು ಒಪ್ಪಿಗೆ ಕೊಡಿ, ಮತ್ತೆ ಚುನಾವಣೆಗೆ ಹೋಗುವುದು ಬೇಡ ಎಂದಾಗ ನಾನು ವಾಮಮಾರ್ಗದಿಂದ ಅಧಿಕಾರ ಉಳಿಸಿಕೊಳ್ಳಲು ತಯಾರಿಲ್ಲ, ವಿಶ್ವಾಸವನ್ನು ಕಳೆದುಕೊಂಡು ಅಧಿಕಾರದಲ್ಲಿ ಉಳಿಯಲ್ಲ ಎಂದು ಹೇಳಿದ ಮೇರು ವ್ಯಕ್ತಿತ್ವ ಅವರದು.

ಉತ್ತಮ ವಾಗ್ಮಿ: ಅಟಲ್‌ಜೀ ಮಾತಿನಲ್ಲಿ ಸ್ಪಷ್ಟ ಸಂದೇಶ ಇರುತ್ತಿತ್ತು. ಹೀಗಾಗಿ ರಾಜಕೀಯ ವಿರೋಧಿಗಳೂ ಅವರ ಭಾಷಣವನ್ನು ತಪ್ಪಿಸಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಅವರೆಂದೂ ಬರೆದು ಸಿದ್ಧಪಡಿಸಿಕೊಂಡು ಭಾಷಣ ಮಾಡಿದವರಲ್ಲ. ನಿರರ್ಗಳವಾಗಿ ಮಾತನಾಡುವ ಕಲೆ ಅವರಿಗೆ ಕರಗತವಾಗಿತ್ತು.

ಸ್ವಾರ್ಥ ಮತ್ತು ಸ್ವಂತಕ್ಕಾಗಿ ಯಾವತ್ತೂ ಯೋಚನೆ ಮಾಡಿದವರಲ್ಲ. ಕವಿ, ರಾಜಕಾರಣಿಯ ಜೊತೆಗೆ ಅವರ ಬಾಡಿ ಲಾಂಗ್ವೇಜ್‌ ತುಂಬಾ ಇಷ್ಟವಾಗುತ್ತಿತ್ತು. ವೈಯಕ್ತಿಕ ದಿನಚರಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಯಾರ ಜೊತೆ ಹೇಗೆ ಮಾತನಾಡಬೇಕು ಎಂಬುದನ್ನು ಸೂಚ್ಯವಾಗಿ ತಿಳಿ ಹೇಳುತ್ತಿದ್ದರು. 

ಮೈಸೂರು ಅತಿಥಿಗೆ ಆತ್ಮೀಯ ಸ್ವಾಗತ: ಮೈಸೂರಿನ ಜಿಎಸ್‌ಎಸ್‌ಎಸ್‌ ಎಂಜಿನಿಯರಿಂಗ್‌ ಕಾಲೇಜನ್ನು ಅಟಲ್‌ ಬಿಹಾರಿ ವಾಜಪೇಯಿ ಕೈಯಲ್ಲೇ ಉದ್ಘಾಟಿಸಬೇಕು ಎಂಬುದು ಕಾಲೇಜು ಸಂಸ್ಥಾಪಕ ಪ್ರೊ.ಬಿ.ಎಸ್‌.ಪಂಡಿತ್‌ರ ಬಯಕೆಯಾಗಿತ್ತು. ಅದಕ್ಕಾಗಿ ದೆಹಲಿಗೆ ಬಂದು ಸಂಸದನಾಗಿದ್ದ ನನ್ನ ನಿವಾಸದಲ್ಲಿ 23 ದಿನ ಉಳಿದಿದ್ದರು.

ವಿರೋಧಪಕ್ಷದ ನಾಯಕರಾಗಿದ್ದ ವಾಜಪೇಯಿ ಭೇಟಿ ಸಾಧ್ಯವಾಗಿರಲಿಲ್ಲ. 23ನೇ ದಿನ ಬೆಳಗ್ಗೆಯೇ ಅಟಲ್‌ಜೀಯವರ ಮನೆಗೆ ಹೋದೆವು, ಬಾಗಿಲು ತೆರೆದ ಕೂಡಲೇ ಎದುರಿಗೆ ಅಟಲ್‌ಜೀ ನಿಂತಿದ್ದರು. ನೀವು ಇಲ್ಲಿಯವರೆಗೆ ಬರುವುದೇ ಎಂದಾಗ, ಮೈಸೂರಿನಿಂದ ಅತಿಥಿಗಳು ಬಂದಿರುವಾಗ ನಾನು ಒಳಗೆ ಕೂರುವುದೇ ಎಂದು ಆತ್ಮೀಯತೆಯಿಂದ ಒಳಗೆ ಕರೆದೊಯ್ದರು. 

ಗೆದ್ದಾಗ ಬೆನ್ನುತಟ್ಟಿದ್ದರು: ಯಾರನ್ನೇ ಆಗಲಿ ಮೈದಡವಿ ಮಾತನಾಡಿಸುವ ಅಪರೂಪದ ವ್ಯಕ್ತಿತ್ವ ಅವರದು, ಲೋಕಸಭೆಯಲ್ಲಿ ಎದುರಾದಾಗಲೆಲ್ಲಾ ವಿಜಯ್‌ ಕೈ ಸೇ ಹೈ ಎಂದು ವಿಚಾರಿಸುತ್ತಿದ್ದರು. ಮೈಸೂರು ಭಾಗಕ್ಕೆ ಬಂದಾಗ ಅನೇಕ ಬಾರಿ ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡುವ ಅವಕಾಶವು ನನಗೆ ಒದಗಿಬಂದಿತ್ತು ಎಂದು ಸ್ಮರಿಸಿಕೊಂಡ ವಿಜಯಶಂಕರ್‌ ಕಣ್ಣಾಳಿ ಒದ್ದೆಯಾದವು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.