CONNECT WITH US  

ಗಣೇಶ ಮೂರ್ತಿ ವಿಸರ್ಜನೆಗೆ ಸಂಚಾರಿ ವಾಹನ

ಮೈಸೂರು: ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಸೆ.13ರಂದು ಮೂರು ವಾಹನಗಳ ಮೂಲಕ ಪರಿಸರ ಸ್ನೇಹಿ ಸಂಚಾರಿ ವಿಸರ್ಜನಾ ವ್ಯವಸ್ಥೆ ಮಾಡಲಾಗಿದೆ.      

ಮೊದಲನೇ ವಾಹನ ಸಂಜೆ 4 ರಿಂದ 5.15 ರವರಗೆ ಮೇಟಗಳ್ಳಿ ಆರಕ್ಷಕ ಠಾಣೆ ಹತ್ತಿರ, ಸಂಜೆ  5.30ರಿಂದ 6.45 ಜಯನಗರ 2ನೇ ಹಂತದ ಕೆ.ಡಿ. ವೃತ್ತದ ಹತ್ತಿರ, ಸಂಜೆ 7ರಿಂದ 8.15 ಒಂಟಿಕೊಪ್ಪಲ್‌ ಚಂದ್ರಮೌಳೇಶ್ವರ ದೇವಸ್ಥಾನ/ ಮಾತೃಮಂಡಳಿ ಹತ್ತಿರ, ರಾತ್ರಿ 8.30 ರಿಂದ 10.30 ಕುಕ್ಕರಹಳ್ಳಿಕೆರೆ ಮುಖ್ಯದ್ವಾರದಲ್ಲಿ ನಿಲುಗಡೆಯಾಗಲಿದೆ. ಈ ವಾಹನಕ್ಕೆ ಸಂಬಂಧಿಸಿದಂತೆ ಎಂ.ಸಿದ್ದಯ್ಯರನ್ನು ಮೊ: 9880164745 ಸಂಪರ್ಕಿಸಬಹುದು. 

ಎರಡನೇ ವಾಹನವು ಸಂಜೆ 4 ರಿಂದ 5.15 ರವರಗೆ ಯಾದವಗಿರಿ ವಿಕ್ರಮ್‌ ಆಸ್ಪತ್ರೆ ಹತ್ತಿರ, ಸಂಜೆ  5.30 ರಿಂದ 6.45 ಶಾಂತಲಾ ಚಿತ್ರಮಂದಿರ ಹತ್ತಿರ, ರಾತ್ರಿ 7ರಿಂದ 8.15 ಚಾಮುಂಡಿಪುರಂ ವೃತ್ತ, ರಾತ್ರಿ 8.30 ರಿಂದ 10.30 ಕಾರಂಜಿ ಕೆರೆ ಮುಖ್ಯದ್ವಾರದ ಬಳಿ ನಿಲುಗಡೆಯಾಗಲಿದೆ. ಈ ವಾಹನಕ್ಕೆ ಸಂಬಂಧಿಸಿದಂತೆ ಶಿವಣ್ಣ ಅವರನ್ನು ಮೊ: 9900479002 ಸಂಪರ್ಕಿಸಬಹುದು. 

ಮೂರನೇ ವಾಹನವು ಸಂಜೆ 4 ರಿಂದ 5.15ರವರಗೆ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪ, ಸಂಜೆ 5.30 ರಿಂದ 6.45 ಜಯನಗರ ರೈಲ್ವೇ ಗೇಟ್‌ ಹತ್ತಿರ, ರಾತ್ರಿ 7 ರಿಂದ 8.15 ಜೆ.ಪಿ ನಗರ ಗೊಬ್ಬಳಿ ಮರದ ಬಸ್‌ ನಿಲ್ದಾಣ, ರಾತ್ರಿ 8.30 ರಿಂದ 10.30 ಶ್ರೀರಾಂಪುರ ಮಾರ್ಗವಾಗಿ ಲಿಂಗಾಂಬುದಿ ಕೆರೆ ಮುಖದ್ವಾರದಲ್ಲಿ ನಿಲುಗಡೆಯಾಗಲಿದೆ. ಈ ವಾಹನಕ್ಕೆ ಸಂಬಂಧಿಸಿದಂತೆ ಎಚ್‌.ಸಿ.ಲಕ್ಷಣ್‌ ಅವರನ್ನು ಮೊ.9845307419 ಸಂಪರ್ಕಿಸಬಹುದು. 

ಹೆಚ್ಚಿನ ಮಾಹಿತಿಗಾಗಿ ಕೆ.ಎಲ್‌.ಮಂಜುನಾಥ್‌ ಮೊ:9844972002, ಅಶ್ವಿ‌ನಿ ಮೊ: 9742345840 ಮತ್ತು ಸಬಿಕೆ ನೂಬಿಯಾ ಮೊ: 9538912357, ಉಮ್ಮೇ ಹುವೀದ ಮೊ: 9972999511 ಅವರನ್ನು ಸಂಪರ್ಕಿಸಬಹುದು. ಸಾರ್ವಜನಿಕರು ಈ ಅವಕಾಶವನ್ನು ಉಪಯೋಗಿಸಿಕೊಳ್ಳುವಂತೆ ಹಾಗೂ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಪರಿಸರಕ್ಕೆ ಹಾನಿಯಾಗದಂತೆ ಸ್ನೇಹಮಹಿಯಾಗಿ ಮಾಡುವಂತೆ ಮೈಸೂರು ನಗರದ ಪರಿಸರ ಅಧಿಕಾರಿ ಕೋರಿದ್ದಾರೆ.

Trending videos

Back to Top