ದಸರಾ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌


Team Udayavani, Oct 14, 2018, 11:50 AM IST

m1-dasara.jpg

ಮೈಸೂರು: ಯುವಜನರ ಸಂಭ್ರಮಕ್ಕೆ ಕಿಚ್ಚು ಹಚ್ಚಿದ ಹಾಡು, ನೃತ್ಯ, ಪುಟಾಣಿ ಮಕ್ಕಳನ್ನು ರಂಜಿಸಿದ ಕಲಾ ಶಿಬಿರ, ಖಾದ್ಯಪ್ರಿಯರು ಬಾಯಿ ಚಪ್ಪರಿಸುವಂತೆ ಮಾಡಿದ ತಿಂಡಿ-ತಿನಿಸುಗಳು, ನೋಡುಗರ ಮೈನವಿರೇಳಿಸಿದ ಸೈಕಲ್‌ ಮತ್ತು ಬೈಕ್‌ ಸ್ಟಂಟ್ಸ್‌… ಹೀಗೆ ಎಲ್ಲಾ ವರ್ಗದವರ ಆಕರ್ಷಣೆಗೆ ಸಾಕ್ಷಿಯಾಗಿದ್ದು ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌. 

ನಾಡಹಬ್ಬ ದಸರೆಯ ಅಂಗವಾಗಿ ಶನಿವಾರ ಆಯೋಜಿಸಿದ್ದ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ ಎಲ್ಲರ ಪಾಲಿಗೂ ಹಬ್ಬವಾಗಿತ್ತು. ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ಜತೆಗೆ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ ನಾಡಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಶನಿವಾರ ಬೆಳಗ್ಗೆ 7 ರಿಂದ ರಾತ್ರಿ 10ರವರೆಗೂ ಆಯೋಜಿಸಿದ್ದ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಚಾಲನೆ ನೀಡಿದರು. ನಗರದ ಕೃಷ್ಣ ಬುಲೇವಾರ್ಡ್‌ ರಸ್ತೆಯಲ್ಲಿ ನಡೆದ ಸ್ಟ್ರೀಟ್‌ ಫೆಸ್ಟಿವಲ್‌ ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಎಲ್ಲರನ್ನು ರಂಜಿಸಿತು. 

ಎಲ್ಲೆಲ್ಲೂ ಸಂಭ್ರಮ: ಸ್ಟ್ರೀಟ್‌ ಫೆಸ್ಟಿವಲ್‌ ನಡೆದ ಕೃಷ್ಣ ಬುಲೇವಾರ್ಡ್‌ ರಸ್ತೆಯಲ್ಲಿ ಬೆಳಗ್ಗಿನಿಂದಲೇ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ದಿನವಿಡಿ ನಡೆದ ಸ್ಟ್ರೀಟ್‌ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡ ಕೆಲವರು ಯೋಗ ಮಾಡುವಲ್ಲಿ ನಿರತರಾದರೆ, ಇನ್ನು ಕೆಲವರು ಸ್ಕೇಟಿಂಗ್‌ ಮೂಲಕ ಜನರನ್ನ ರಂಜಿಸುತ್ತಿದ್ದರು.

ಇನ್ನೊಂದೆಡೆ ಚಿಣ್ಣರು, ಪುಟಾಣಿ ಮಕ್ಕಳು ತಾವೇನು ಕಡಿಮೆ ಎಂಬಂತೆ ಗೊಂಬೆ ಆಡಿಸುತ್ತಾ, ಚಿತ್ರ ಬಿಡಿಸುತ್ತಾ ಸಂಭ್ರಮಿಸಿದರು. ಇನ್ನು ಯುವಜನತೆ ಸ್ಟ್ರೀಟ್‌ ಫೆಸ್ಟಿವಲ್‌ನಲ್ಲಿ ಕೇಳಿಬರುತ್ತಿದ್ದ ಸಂಗೀತದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಹುಚ್ಚೆದು ಕುಣಿಯುತ್ತಾ ಕಾಲ ಕಳೆದರು. 

ಸೈಕಲ್‌-ಬೈಕ್‌ ಸ್ಟಂಟ್‌: ಸ್ಟ್ರೀಟ್‌ ಫೆಸ್ಟಿವಲ್‌ ಅಂಗವಾಗಿ ನಡೆದ ಸೈಕಲ್‌ ಹಾಗೂ ಬೈಕ್‌ ಸ್ಟಂಟ್‌ ಎಲ್ಲರ ಆಕರ್ಷಣೆಯನ್ನು ಹೆಚ್ಚಿಸಿತು. ಭಾರೀ ಜನದಟ್ಟಣೆಯ ರಸ್ತೆಯಲ್ಲೂ ಹಲವು ಸಾಹಸಿಗರು ಬೈಕ್‌ ಹಾಗೂ ಸೈಕಲ್‌ ಸ್ಟಂಟ್‌ ಪ್ರದರ್ಶನ ನೀಡುತ್ತಾ ಗಮನ ಸೆಳೆದರು.

ಇನ್ನೊಂದೆಡೆ ಮರಗಾಲು ಗೊಂಬೆ, ಚಂಡೆ, ವೀರಗಾಸೆ, ಹುಲಿವೇಷಧಾರಿಗಳ ಕುಣಿತ, ಕೀಲು ಕುದುರೆ ವೇಷಾಧಾರಿಗಳು ಇದೇ ಮುಂತಾದ ಕಲಾತಂಡಗಳು ಕಾರ್ಯಕ್ರಮಕ್ಕೆ ಮೆರಗು ತಂದವು. ಪಾಲಕರ ಜತೆ ಬಂದ ಚಿಣ್ಣರು, ಪುಟ್ಟ ಪುಟ್ಟ ಮಕ್ಕಳು ತಾವೇನು ಕಡಿಮೆ ಎಂಬಂತೆ ಗೊಂಬೆಗಳನ್ನು ಆಡಿಸುತ್ತಾ ಮಕ್ಕಳು ಅವುಗಳ ಜತೆ ಹೆಜ್ಜೆ ಹಾಕಿ ಖುಷಿಪಟ್ಟವು. ಅವುಗಳೊಂದಿಗೆ ಫೋಟೋಗೆ ಪೋಸ್‌ ಕೂಡ ನೀಡಿದವು. 

ಸೆಲ್ಫಿ ಕ್ರೇಜ್‌ ಜೋರು: ಸ್ಟ್ರೀಟ್‌ ಫೆಸ್ಟಿವಲ್‌ ಸಂಭ್ರಮದಲ್ಲಿ ಪಾಲ್ಗೊಂಡ ಯುವಜನತೆ ಸಾಂಸ್ಕೃತಿಕ ಮೆರಗು ಹೆಚ್ಚಿಸಿದ್ದ ಮರಗಾಲು ಗೊಂಬೆ, ಚಂಡೆ, ವೀರಗಾಸೆ, ಹುಲಿವೇಷಧಾರಿಗಳೊಂದಿಗೆ ಕುಣಿತ, ಕೀಲು ಕುದುರೆ ಕಲಾವಿದರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ದೃಶ್ಯಗಳು ನಿರಂತರವಾಗಿ ಕಂಡು ಬಂದವು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ವೃತ್ತಾಕಾರವನ್ನು ರಚಿಸಿಕೊಂಡು ಕುಣಿಯುವುದಲ್ಲದೇ, ಗುಂಪು ಗುಂಪಾಗಿ ನಿಂತು ಸೆಲ್ಫಿಗೆ ವಿವಿಧ ಭಂಗಿಯಲ್ಲಿ ಪೋಸ್‌ ಕೊಡುತ್ತಿದ್ದ ದೃಶ್ಯಗಳು ನೋಡುಗರನ್ನು ಆಕರ್ಷಿಸುತ್ತಿದ್ದವು.   

ಫೆಸ್ಟಿವಲ್‌ ವಿಶೇಷತೆ: ಸ್ಟ್ರೀಟ್‌ ಫೆಸ್ಟಿವಲ್‌ ಅಂಗವಾಗಿ ನಡೆದ ಹಲವು ಕಾರ್ಯಕ್ರಮಗಳು ಈ ಬಾರಿಯೂ ಬೆಳಗ್ಗಿನಿಂದ ರಾತ್ರಿವರೆಗೂ ನಡೆಯಿತು. ಮ್ಯೂಸಿಕ್‌ ಬ್ಯಾಂಡ್‌, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ಸೆಳೆದವು. ಮಕ್ಕಳ ಚಿತ್ರಕಲಾ ಶಿಬಿರ, ಸ್ಟ್ರೀಟ್‌ ಆರ್ಟ್‌, ಮಕ್ಕಳ ಆಟಿಕೆ ವಿಭಾಗಗಳನ್ನು ರೂಪಿಸಲಾಗಿತ್ತು.

ರಸ್ತೆಯ ಎರಡು ಬದಿಯಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ವಿವಿಧ ಕಲಾ ತಂಡಗಳಿಂದ ನೃತ್ಯ, ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. 3ಡಿ ಆರ್ಟ್‌, ಚಿತ್ರಸಂತೆ, ಫೇಸ್‌ ಪೇಂಟಿಂಗ್‌, ಡ್ರಮ್‌ ಜಾಮ್‌, ಸ್ಕೇಟಿಂಗ್‌, ಟ್ಯಾಟೋ ಶಾಪ್‌, ಪೇಪರ್‌ ಆರ್ಟ್‌, ವಾಕ್‌ ಮ್ಯಾನ್‌, ರೋಡ್‌ ಪೇಂಟ್‌, 15 ಫ‌ುಡ್‌ ಟ್ರಕ್‌ ತೆರೆಯಲಾಗಿತ್ತು.

ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಆರ್ಟ್‌ ಎಂಬ ತಂಡ ನೃತ್ಯ ಪ್ರದರ್ಶನ ನೀಡುವುದಲ್ಲದೇ, ಪಾಲಿಕೆ ವತಿಯಿಂದಲೂ ಸ್ವತ್ಛತೆ ಕುರಿತು ಜಾಗೃತಿ ಮೂಡಿಸಲು ಮಳಿಗೆ ನಿರ್ಮಿಸಲಾಗಿತ್ತು. ಮಕ್ಕಳ ಚಿತ್ರಕಲಾ ಶಿಬಿರದಲ್ಲಿ ಪುಟಾಣಿ ಮಕ್ಕಳು ವಿವಿಧ ಚಿತ್ರಗಳನ್ನು ಬಿಡಿಸಿ ಆನಂದಿಸಿದರು. 

ವೈವಿಧ್ಯಮಯ ಸ್ಟಾಲ್‌ಗ‌ಳ ಆಕರ್ಷಣೆ: ನಗರದಲ್ಲಿ ಮೂರನೇ ಬಾರಿಗೆ ನಡೆದ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ಗೆ ಭಾರೀ ಜನಮನ್ನಣೆ ಲಭಿಸಿತು. ಕಾರ್ಯಕ್ರಮದಲ್ಲಿ ಮೈಸೂರಿಗರ ಜತೆಗೆ ದಸರಾ ವೀಕ್ಷಣೆಗೆಂದು ಹೊರ ರಾಜ್ಯಗಳಿಂದ ಆಗಮಿಸಿದ್ದ ಪ್ರವಾಸಿಗರು ಪಾಲ್ಗೊಂಡಿದ್ದರು.

ಸ್ಟ್ರೀಟ್‌ ಫೆಸ್ಟಿವಲ್‌ನಲ್ಲಿ ಪೇಂಟಿಂಗ್‌, ಬಟ್ಟೆ, ಮಕ್ಕಳ ಆಟಿಕೆಗಳು, ಯುವತಿಯರ ವಸ್ತ್ರಾಲಂಕಾರದ ಸಾಮಗ್ರಿಗಳು, ಐಸ್‌ಕ್ರೀಂ, ವಿದೇಶಿ ತಿನಿಸುಗಳ ಮಳಿಗೆಗಳು ಸೇರಿದಂತೆ 90ಕ್ಕೂ ಹೆಚ್ಚು ವೈವಿಧ್ಯಮಯ ವಸ್ತುಗಳ ಮತ್ತು ತಿನಿಸುಗಳ ಸ್ಟಾಲ್‌ಗ‌ಳನ್ನು ಹಾಕಲಾಗಿತ್ತು. ಇದರಿಂದ ಫೆಸ್ಟಿವಲ್‌ನಲ್ಲಿ ಭಾಗವಹಿಸಿದವರು ಸಂಭ್ರಮದ ಕ್ಷಣಗಳನ್ನು ಕಳೆಯುವ ಜತೆಗೆ ಶಾಪಿಂಗ್‌ ಮಾಡುತ್ತಾ ಖುಷಿಪಟ್ಟರು. 

ಟಾಪ್ ನ್ಯೂಸ್

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Jamyang Tsering Namgyal missed bjp ticket in ladakh

Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್‌ ಹಾಲಿ ಸಂಸದ ನಮ್‌ಗ್ಯಾಲ್‌ ಗೆ ಕೊಕ್‌

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.