ಬಣ್ಣದ ಬೆಳಕಿನಲ್ಲಿ ಮಿನುಗುತ್ತಿರುವ ಕೆಆರ್‌ಎಸ್‌


Team Udayavani, Oct 16, 2018, 5:00 PM IST

mys-1.jpg

ಶ್ರೀರಂಗಪಟ್ಟಣ: ಮೈಸೂರು ದಸರಾ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಕೆಆರ್‌ಎಸ್‌ ಅಣೆಕಟ್ಟು ಬಣ್ಣ ಬಣ್ಣದದ ಲೇಸರ್‌ ಲೈಟ್‌ ಬೆಳಕಿನಲ್ಲಿ ಝಗಮಗಿಸುತ್ತಿದೆ. ಕಣ್ಮನ ಸೆಳೆಯುವ ವಿವಿಧ ವರ್ಣಗಳ ಎಲ್‌ಇಡಿ ವಿದ್ಯುತ್‌ ದೀಪಗಳು ಬೃಂದಾವನದೊಳಗೆ ಬೇರೊಂದು ಲೋಕವನ್ನೇ ಸೃಷ್ಟಿ ಮಾಡುವುದರೊಂದಿಗೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ಜಲಸಂಪನ್ಮೂಲ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮದಿಂದ ವಿಶೇಷವಾಗಿ ಅಣೆಕಟ್ಟು ಸೇರಿದಂತೆ ಬೃಂದಾವನಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಅಣೆಕಟ್ಟೆಯುದ್ದಕ್ಕೂ ಬೀಳುವ ವಿವಿಧ ಬಣ್ಣದ ಲೇಸರ್‌ ಲೈಟ್‌ ನೋಡುಗರನ್ನು ಮೂಕವಿಸ್ಮಿತ ಗೊಳಿಸಿದೆ.
 
ಪ್ರವಾಸಿಗರು ಫಿದಾ: ಜಲಾಶಯದ ಕಾರಂಜಿ, ಬೋಟಿಂಗ್‌ ಪಾಯಿಂಟ್‌ ಸೇರಿದಂತೆ ಇಡೀ ಬೃಂದಾವನವೇ ಬಣ್ಣ ಬಣ್ಣದ ವಿದ್ಯುತ್‌ ದೀಪಗಳ ಬೆಳಕಿನಲ್ಲಿ ಮಿನುಗುತ್ತಿದೆ. ನೃತ್ಯ ಕಾರಂಜಿಗೆ ಹೊಸ ಮಾದರಿಯ ಸಂಗೀತ ಅಳವಡಿಸಲಾಗಿದೆ. ನೂತನ ಧ್ವನಿ-ಬೆಳಕು ವ್ಯವಸ್ಥೆಗೆ ಪ್ರವಾಸಿಗರು ಫಿದಾ ಆಗಿದ್ದು,
ವಿದ್ಯುತ್‌ ಬೆಳಕಿನಲ್ಲಿ ಕಂಗೊಳಿಸುತ್ತಿರುವ ಕೆಆರ್‌ಎಸ್‌ ನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ತಂಡೋಪ ತಂಡವಾಗಿ ಕೆಆರ್‌ಎಸ್‌ಗೆ ಲಗ್ಗೆ ಇಡುತ್ತಿದ್ದಾರೆ. 

ಕಳೆದ ವರ್ಷ ಕೃಷ್ಣರಾಜಸಾಗರ ಜಲಾಶಯಕ್ಕೆ ಲೇಸರ್‌ ಲೈಟ್‌ ಸ್ಪರ್ಶ ನೀಡುವುದಕ್ಕಾಗಿ 84 ಲಕ್ಷ ರೂ. ವೆಚ್ಚ ಮಾಡಲಾಗಿತ್ತು. ಐ-ಬೀಮ್‌ ಲೈಟ್ಸ್‌, ಫೋಕಸ್‌ ಲೈಟ್‌, ದೂರಕ್ಕೆ ಬೆಳಕಿನ ಕಿರಣಗಳನ್ನು ಹಾಯಿಸುವ ರೇ-ಲೈಟ್ಸ್‌ಗಳನ್ನು ಅಳವಡಿಸಲಾಗಿತ್ತು. ಈಗಲೂ ಇವು ಅಣೆಕಟ್ಟೆಯ ಮೇಲೆ ಚಿತ್ತಾಕರ್ಷಕವಾದ ಬೆಳಕಿನ ಕಿರಣಗಳನ್ನು ಮೂಡಿಸುತ್ತಾ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತಿವೆ. ಇವುಗಳ ಜೊತೆಗೆ ಇನ್ನೂ ಹೆಚ್ಚುವರಿಯಾಗಿ ಬೃಂದಾವನದ ಮರಗಳು, ಗಿಡಗಳ ಮೇಲೆ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ.

ವಿಡಿಯೋ ಮ್ಯಾಪಿಂಗ್‌: ವಿಡಿಯೋ ಮ್ಯಾಪಿಂಗ್‌, ಡ್ರಾಪ್‌ ಡೌನ್‌ ಎಲ್‌ಇಡಿ ಈ ಬಾರಿಯ ವಿಶೇಷ ವಾಗಿದೆ. ಡ್ರಾಪ್‌ ಡೌನ್‌ ಎಲ್‌ಇಡಿಯೊಳಗೆ ಹೊಳೆ ಹರಿಯುವಂತೆ, ಮಳೆ ಹನಿಗಳು ಬೀಳುವಂತೆ, ಆಗಸದಲ್ಲಿ ಮೋಡಗಳು ತೇಲಿಹೋಗುವಂತೆ ದೃಶ್ಯಗಳನ್ನು ಬಿಡಲಾಗುವುದು. ಇದು 10 ಅಡಿ ಉದ್ದ 15 ಅಡಿ ಅಗಲವಿರುತ್ತದೆ. ವಿಡಿಯೋ ಮ್ಯಾಪಿಂಗ್‌ನಲ್ಲಿ ಕೃಷ್ಣರಾಜಸಾಗರ ಜಲಾಶಯ ಕಟ್ಟಿದ ಶೈಲಿಯ ಫೋಟೋಗಳು ಸೇರಿದಂತೆ ಹಲವು ಐತಿಹಾಸಿಕ
ತಾಣಗಳ ಕುರಿತು ಐದು ನಿಮಿಷಗಳ ಚಿತ್ರ ಪ್ರದರ್ಶನ ವಿರುತ್ತದೆ ಎಂದು ಕೆಆರ್‌ಎಸ್‌ ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ “ಉದಯವಾಣಿ’ಗೆ ತಿಳಿಸಿದರು.

ಹತ್ತು ದಿನ ಅವಕಾಶ: ಬೃಂದಾವನ ಮತ್ತು ಅಣೆಕಟ್ಟೆಯ ಮೇಲೆ ಬೀಳುವ ಲೇಸರ್‌ ಲೈಟ್‌ ಹಾಗೂ ವಿದ್ಯುದ್ದೀಪಗಳ ಸೊಬಗನ್ನು ಯಾವಾಗಲೂ ಕಾಣಲಾಗುವುದಿಲ್ಲ. ಇದು ದಸರಾ ಸಮಯಕ್ಕಷ್ಟೇ ಸೀಮಿತ. ದಸರಾ ವೇಳೆ ಹತ್ತು ದಿನಗಳ ಕಾಲ ಪ್ರವಾಸಿಗರನ್ನು ಸೆಳೆಯಲು ಧ್ವನಿ-ಬೆಳಕಿನ ವ್ಯವಸ್ಥೆ ಮಾಡಲಾಗಿರುತ್ತದೆ.

ನೀರಿನ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ: ಪ್ರವಾಸಿಗರಿಗೆ ಸಾಂಸ್ಕೃತಿಕ ರಸದೌತಣ ನೀಡುವ ಸಲುವಾಗಿ ಬೃಂದಾವನದ ಬೋಟಿಂಗ್‌ ಕಾರಂಜಿಯ ಬಳಿ ನೀರಿನ ಮೇಲೆ ತೇಲುವ ವೇದಿಕೆ ನಿರ್ಮಿಸಲಾಗಿದೆ. ಅದರ ಮೇಲೆ ಕಲಾವಿದರು ಜನಪದ ಗೀತೆ, ಭಕ್ತಿ ಗೀತೆ, ಚಿತ್ರಗೀತೆ, ನೃತ್ಯ ಸೇರಿದಂತೆ ಗ್ರಾಮೀಣ ಸೊಗಡನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನೀಡುವಂತೆ ವ್ಯವಸ್ಥೆ ಮಾಡಲಾಗಿದೆ. 

ಬೆಳಕಿನ ವ್ಯವಸ್ಥೆ ಯಾವಾಗ?
ಕೃಷ್ಣರಾಜಸಾಗರ ಜಲಾಶಯದಲ್ಲಿ ಮೂರು ತಾಸುಗಳ ಕಾಲ ಈ ಬೆಳಕಿನ ವ್ಯವಸ್ಥೆಯನ್ನು ಕಾಣಬಹುದು. ಸಂಜೆ 6 ಗಂಟೆಯಿಂದ ರಾತ್ರಿ 9ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್‌ 25ರವರೆಗೆ ಮಾತ್ರ ಈ ಬೆಳಕಿನ ವ್ಯವಸ್ಥೆ ಇರುತ್ತದೆ. ಸಾಮಾನ್ಯ ದಿನಗಳಲ್ಲಿ 6 ಗಂಟೆಯಿಂದ ರಾತ್ರಿ 8 ಗಂಟೆ. ರಜಾ ದಿನಗಳಲ್ಲಿ 6 ಗಂಟೆಯಿಂದ 9 ಗಂಟೆಯ ವರೆಗೆ ವಿದ್ಯುತ್‌ ದೀಪಗಳ ವೈಭವವನ್ನು ಕಣ್ತುಂಬಿಕೊಳ್ಳಬಹುದು. ನವರಾತ್ರಿ ಮುಗಿದ ಬಳಿಕ ಇನ್ನೊಂದು ವರ್ಷದವರೆಗೆ ಬೃಂದಾವನವನ್ನು.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.