ಮಹತ್ವ ಸಾರುವ ಸ್ತಬ್ಧಚಿತ್ರಗಳಿಗೆ ಕಲಾತಂಡಗಳ ಸಾಥ್‌


Team Udayavani, Oct 20, 2018, 11:44 AM IST

m5-mahatva.jpg

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ದಸರಾ ಗಜಪಡೆಯ ಕ್ಯಾಪ್ಟನ್‌ ಅರ್ಜುನ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಿದರೆ, ಅರ್ಜುನನ ಎಡ -ಬಲಕ್ಕೆ ವರಲಕ್ಷ್ಮೀ ಹಾಗೂ ಕಾವೇರಿ ಆನೆಗಳು ಹೆಜ್ಜೆ ಹಾಕಿದವು. ನಿಶಾನೆ ಆನೆಯಾಗಿ ಬಲರಾಮ, ಅದರ ಹಿಂದೆ ನೌಪತ್‌ ಆನೆಯಾಗಿ ಅಭಿಮನ್ಯು, ವಿಜಯ, ಗೋಪಿ, ಪ್ರಶಾಂತ, ಧನಂಜಯ, ದ್ರೋಣ, ವಿಕ್ರಮ, ಚೈತ್ರ ಆನೆಗಳು ಮೆರವಣಿಗೆಯಲ್ಲಿ ಸಾಗಿದವು.

ನಾಡಿನ ಕಲೆ, ಸಂಸ್ಕೃತಿ, ಇತಿಹಾಸ, ಪರಂಪರೆ ಬಿಂಬಿಸುವ ಕಲಾ ತಂಡಗಳ ಪ್ರದರ್ಶನ, ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರಗು ನೀಡಿದವು. ಜಂಬೂಸವಾರಿ ಮೆರವಣಿಗೆಯಲ್ಲಿ ಮೊದಲಿಗೆ ಮೈಸೂರಿನ ಶ್ರೀ ಗೌರಿಶಂಕರ ನಂದೀಧ್ವಜ ಸಂಘ ಹಾಗೂ ಶ್ರೀ ಗುರು ಮಲ್ಲೇಶ್ವರ ನಂದೀಧ್ವಜ ಕಲಾ ತಂಡದ ಜೋಡಿ ನಂದೀಧ್ವಜ ಕುಣಿತ, ವೀರಭದ್ರ ಕುಣಿತ, ನಾದಸ್ವರ, ನಿಶಾನೆ ಮತ್ತು ನೌಪತ್‌ ಆನೆಗಳು ಸಾಗಿದವು. 

ಕೂಡಲ ಸಂಗಮ ಸ್ತಬ್ಧಚಿತ್ರ: ಅವುಗಳ ಹಿಂದೆ ಕೊಂಬುಕಹಳೆ, ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು-ಕಾಯಕವೇ ಕೈಲಾಸ-ಕೂಡಲ ಸಂಗಮ ಸ್ತಬ್ಧಚಿತ್ರ. ಡೊಳ್ಳು ಕುಣಿತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಐತಿಹಾಸಿಕ ಘಾಟಿ ಸುಬ್ರಹ್ಮಣ್ಯ ದೇವಾಲಯ ಮತ್ತು ದೇವನಹಳ್ಳಿ ಕೋಟೆಯ ಸ್ತಬ್ಧಚಿತ್ರ, ಬೆಳಗಾವಿ-ಧಾರವಾಡ, ಗದಗ ಜಿಲ್ಲೆಗಳ ಜಗ್ಗಲಗಿ ಮೇಳ, ಬೆಂಗಳೂರು ನಗರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ ಸ್ತಬ್ಧಚಿತ್ರ, ತಮಟೆ-ನಗಾರಿ, ಎನ್‌ಸಿಸಿಯ ಪ್ರವಾಹ ಸಂತ್ರಸ್ತರಿಗೆ ನೆರವು ಹಾಗೂ ಸಾಹಸ ಕ್ರೀಡೆಗಳ ಸ್ತಬ್ಧಚಿತ್ರ, ವಿಜಯಪುರ ಅಕ್ಕ ಮಹಾದೇವಿ ಮಹಿಳಾ ವಿವಿ ಬ್ಯಾಂಡ್‌ ತಂಡ, ಉನ್ನತ ಶಿಕ್ಷಣ ಇಲಾಖೆಯ ವಿಶ್ವವಿದ್ಯಾನಿಲಯಗಳು ನಡೆದು ಬಂದ ದಾರಿ ಕುರಿತ ಸ್ತಬ್ಧಚಿತ್ರ.

ಗೊಂಡರಡಕ್ಕೆ, ಬೆಳಗಾವಿ ಜಿಲ್ಲೆಯ ಕಿತ್ತೂರಿನ ವೈಭವ ಕುರಿತ ಸ್ತಬ್ಧಚಿತ್ರ, ಬೀಸು ಕಂಸಾಳೆ, ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಜಲಾಶಯ ಸ್ತಬ್ಧಚಿತ್ರ, ಹುಬ್ಬಳ್ಳಿ-ಗದಗ-ಹಾವೇರಿ-ಚಿಕ್ಕಬಳ್ಳಾಪುರ ಜಿಲ್ಲೆಗಳ ಸಮ್ಮಾಳ ಮೇಳ ಹಾಗೂ ಕೀಲು ಕುದುರೆ. ಬೀದರ್‌ ಜಿಲ್ಲೆಯ ಅನುಭವ ಮಂಟಪ-ಬಸವ ಕಲ್ಯಾಣ ಸ್ತಬ್ಧಚಿತ್ರ, ಪೂಜಾ ಕುಣಿತ, ಪ್ರವಾಸೋದ್ಯಮ ಇಲಾಖೆಯ ಒಂದು ರಾಜ್ಯ ಹಲವು ಜಗತ್ತುಗಳು ಸ್ತಬ್ಧಚಿತ್ರ, ರಾಯಚೂರು ಹಾಗೂ ಬಾಗಲಕೋಟೆ ಜಿಲ್ಲೆಯ ಝಾಂಜ್‌ ಪಥಕ್‌, ವಿಜಯಪುರ ಜಿಲ್ಲೆಯ ಗೋಲ್‌ ಗುಂಬಜ್‌ ಸ್ತಬ್ಧಚಿತ್ರ, ಕರಡಿ ಮಜಲು, ಚಾಮರಾಜ ನಗರ ಜಿಲ್ಲೆಯ ಅರಣ್ಯ ಸಂಪತ್ತಿನೊಳಗಿನ ಆಧ್ಯಾತ್ಮಿಕ ಕ್ಷೇತ್ರಗಳು ಸ್ತಬ್ಧಚಿತ್ರ.

ನವಿಲು ನೃತ್ಯ ಹಾಗೂ ಗೊಂಬೆ ಕುಣಿತ, ಚಿತ್ರದುರ್ಗ ಜಿಲ್ಲೆಯ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು ನಾಯಕನಹಟ್ಟಿ ಪುಣ್ಯಕ್ಷೇತ್ರ ಸ್ತಬ್ಧಚಿತ್ರ, ಲಂಬಾಣಿ ನೃತ್ಯ, ಚಿಕ್ಕಮಗಳೂರು ಜಿಲ್ಲೆಯ ಭೂತಾಯಿ ಕಾಫಿ ಕನ್ಯೆ ಸ್ತಬ್ಧಚಿತ್ರ, ಸೋಮನ ಕುಣಿತ, ವಿದುರಾಶ್ವಥ ಪುಣ್ಯಕ್ಷೇತ್ರ ಸ್ತಬ್ಧಚಿತ್ರ, ಚಿಟ್‌ ಮೇಳ, ದಕ್ಷಿಣ ವಲಯ ಕಲಾ ಕೇಂದ್ರ ಮಧ್ಯಪ್ರದೇಶ ತಂಡದ ಬದಾಯಿ ಬರೇಡಿ ನೃತ್ಯ, ಮೈಸೂರು ಜಿಲ್ಲಾಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ಸೇವೆಗಳ ಕುರಿತ ಸ್ತಬ್ಧಚಿತ್ರ, ವೀರಭದ್ರ ಕುಣಿತ, ದಾವಣಗೆರೆ ಜಿಲ್ಲೆಯ ಸ್ಮಾರ್ಟ್‌ ಸಿಟಿಯತ್ತ ಸ್ತಬ್ಧಚಿತ್ರ,

ಕಂಗೀಲು ನೃತ್ಯ ಹಾಗೂ ಕೊರಗರ ಮೇಳ, ದಕ್ಷಿಣ ಕನ್ನಡ ಜಿಲ್ಲೆಯ ಕೋಟೆ ಚೆನಯ್ಯ ತುಳುನಾಡ ವೀರರು ಸ್ತಬ್ಧಚಿತ್ರ, ಹೆಜ್ಜೆಮೇಳ, ಧಾರವಾಡ ಜಿಲ್ಲೆಯ ದ.ರಾ.ಬೇಂದ್ರೆ ಕಂಡ ಸಾಂಸ್ಕೃತಿಕ ನಗರಿ ಸ್ತಬ್ಧಚಿತ್ರ, ಗಾರುಡಿ-ಚಿಲಿಪಿಲಿ ಗೊಂಬೆ, ಕರಗನೃತ್ಯ, ವಾರ್ತಾ ಇಲಾಖೆಯ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕುರಿತ ಸ್ತಬ್ಧಚಿತ್ರ, ಅದರ ಹಿಂದೆ ಕೆಎಸ್‌ಆರ್‌ಪಿ ತಂಡ, ಇಂಗ್ಲೀಷ್‌ ಬ್ಯಾಂಡ್‌ ತಂಡ, ಪೊಲೀಸ್‌ ಅಶ್ವದಳ ಕೆ.ಎಸ್‌.ಆರ್‌.ಪಿ. ಮೌಂಟೆಡ್‌ ಕಂಪನಿ, ಅದರ ಹಿಂದೆ ಚಿನ್ನದ ಅಂಬಾರಿ ಹೊತ್ತ ಅರ್ಜುನ, ಎಡ-ಬಲಕ್ಕೆ ವರಲಕ್ಷ್ಮೀ-ಕಾವೇರಿ ಆನೆಗಳು ಸಾಗಿದವು.

ಫಿರಂಗಿ ಗಾಡಿ: ಮೈಸೂರು ಅರಮನೆ ವತಿಯಿಂದ ಫಿರಂಗಿ ಗಾಡಿಗಳು, ಕೋಲಾಟ ಹಾಗೂ ಪಟ ಕುಣಿತ, ಗದಗ ಜಿಲ್ಲೆಯ ಮರಗಳ ಮರು ನೆಡುವಿಕೆ, ತಮಟೆ ವಾದನ, ಕಲಬುರ್ಗಿ ಜಿಲ್ಲೆಯ ವಿಮಾನ ನಿಲ್ದಾಣ ಸ್ತಬ್ಧಚಿತ್ರ,ಸುಗ್ಗಿ ಕುಣಿತ, ಹಾಲಕ್ಕಿ ಸುಗ್ಗಿ ಕುಣಿತ, ಪಿನಾಸಿ ನೃತ್ಯ, ಹಾಸನ ಜಿಲ್ಲೆಯ ಹೊಯ್ಸಳ ನಾಡಿನ ಬೇಲೂರು ಶಿಲ್ಪಗಳ 900ರ ಸಂಭ್ರಮ ಸ್ತಬ್ಧಚಿತ್ರ, ಗೊರವರ ಕುಣಿತ, ಕಾವೇರಿ ನೀರಾವರಿ ನಿಗಮದ ನಾವು ಜಲವನ್ನು ಉಳಿಸಿದರೆ ಜಲವು ನಮ್ಮನ್ನು ಉಳಿಸುವುದು ಸ್ತಬ್ಧಚಿತ್ರ, ಮಹಿಳಾ ಡೊಳ್ಳು ಕುಣಿತ, ಕೋಲಾಟ,

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ-ಬಂಕಾಪುರ ನವಿಲುಧಾಮ ಸ್ತಬ್ಧಚಿತ್ರ, ಝಾಂಜ್‌ ಪಥಕ್‌, ಕೋಲಾರ ಜಿಲ್ಲೆಯ ಜಿಪಂ ನಡೆ ಗ್ರಾಮದ ಅಭಿವೃದ್ಧಿಯ ಕಡೆ ಸ್ತಬ್ಧಚಿತ್ರ, ಚಂಡೆಮೇಳ, ಕೊಡಗು ಕತ್ತಿಯಾಟ್‌, ಕೊಪ್ಪಳ ಜಿಲ್ಲೆಯ ಶ್ರೀಕನಕಾಚಲಮ್ಮನ ಮತ್ತು ಐತಿಹಾಸಿಕ ಬಾವಿ ಕನಕಗಿರಿ ಸ್ತಬ್ಧಚಿತ್ರ, ಹಗಲುವೇಷ-ದಾಲಪಟ-ಪೂಜಾ ಕುಣಿತ, ಮೈಸೂರು ಜಿಲ್ಲಾ ಸ್ವೀಪ್‌ ಸಮಿತಿಯ ನಮ್ಮ ಮತ ನಮ್ಮ ಹಕ್ಕು ಕುರಿತ ಸ್ತಬ್ಧಚಿತ್ರ, ಉರವಂತಿಕೆ, ತಮಟೆವಾದನ, ಮಂಡ್ಯ ಜಿಲ್ಲೆಗೆ ನಾಲ್ವಡಿಯವರ ಪ್ರಮುಖ ಕೊಡುಗೆ ಕೆಆರ್‌ಎಸ್‌ ಅಣೆಕಟ್ಟೆ ಸ್ತಬ್ಧಚಿತ್ರ,

ಕಂಸಾಳೆ, ತಮಟೆ ವಾದನ, ಮೈಸೂರು ಜಿಲ್ಲೆಯ ಬೈಲಕುಪ್ಪೆಯ ಗೋಲ್ಡನ್‌ ಟೆಂಪಲ್‌, ವೀರಮಕ್ಕಳ ಕುಣಿತ, ಡ್ರಂ ಡೋಲು, ಮಾರಿ ಕುಣಿತ, ರಾಯಚೂರು ಜಿಲ್ಲೆಯ ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ, ಸಿಂಗಾರಿ ಮೇಳ, ಸಿಂಹನೃತ್ಯ, ಪುಗಡಿ ನೃತ್ಯ, ರಾಮನಗರ ಜಿಲ್ಲೆಯ ಭಕ್ತಿ-ನಂಬಿಕೆ-ಕರಕುಶಲ ಇತಿಹಾಸಗಳ ಸಂಗಮ ಸ್ತಬ್ಧಚಿತ್ರ, ಮರಗಾಲು, ಕತ್ತಿವರಸೆ, ಕರಗನೃತ್ಯ, ಬೇಡರ ನೃತ್ಯ, ಶಿವಮೊಗ್ಗ ಜಿಲ್ಲೆಯ ಬಿದನೂರು ಶಿವಪ್ಪನಾಯಕ ಸ್ತಬ್ಧಚಿತ್ರ. ದಕ್ಷಿಣ ವಲಯ ಕಲಾ ಕೇಂದ್ರ ಒಡಿಶಾ ತಂಡದ ಘೂಮ್ರ, ಅರುಣಾಚಲ ಪ್ರದೇಶ ತಂಡದ ಅಜಿಲ್ಹಾಮ, ತಮಿಳುನಾಡು ತಂಡದ ತಪ್ಪಟಂ, ತುಮಕೂರು ಜಿಲ್ಲೆಯ ಶತಮಾನ ಕಂಡ ಡಾ.ಶಿವಕುಮಾರಸ್ವಾಮಿಗಳು ಸ್ತಬ್ಧಚಿತ್ರ, ಕರಾಟೆ ಪಟುಗಳು,

ಸ್ತಬ್ಧಚಿತ್ರ ಉಪ ಸಮಿತಿಯ ಭಾರತದ ಸಂವಿಧಾನದ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ವಿಕೇಂದ್ರೀಕರಣ ಸ್ತಬ್ಧಚಿತ್ರ, ಬಂಟ್ವಾಳದ ಶಾರದ ಆರ್ಟ್ಸ್ ತಂಡದ ನಾಸಿಕ್‌ ಡೋಲು, ಉಡುಪಿ ಜಿಲ್ಲೆಯ ಪರಶುರಾಮ ಸೃಷ್ಟಿಯ ತುಳುನಾಡು ಸ್ತಬ್ಧಚಿತ್ರ, ಸ್ಕೌಟ್ಸ್‌ ಮತ್ತು ಗೈಡ್ಸ್‌ ತಂಡ, ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜನಾಂಗ ಹಾಗೂ ಪ್ರವಾಸಿ ತಾಣ ಯಾಣ, ಎನ್‌ಸಿಸಿ ತಂಡ, ಯಾದಗಿರಿ ಜಿಲ್ಲೆಯ ಬಂಜಾರ ಸಂಸ್ಕೃತಿ ಸ್ತಬ್ಧಚಿತ್ರ, ಗಾರುಡಿ ಗೊಂಬೆ, ಆರೋಗ್ಯ ಇಲಾಖೆಯ ಸ್ತಬ್ಧಚಿತ್ರ, ಕರ್ನಾಟಕ ಬ್ಯಾಂಡ್‌ ಗಾಡಿ, ಕೇರಳತಂಡದ ಚಂಡೆಮೇಳ, ನಾದಸ್ವರ ಕಲಾತಂಡಗಳು ಪ್ರದರ್ಶನ ನೀಡುತ್ತಾ ಸಾಗಿದವು.

ಟಾಪ್ ನ್ಯೂಸ್

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.