ನಾಟಕ, ಸಾಹಿತ್ಯಗಳಲ್ಲಿ ಸಿದ್ಧಾಂತ ತುಂಬಬಾರದು


Team Udayavani, Nov 21, 2018, 12:13 PM IST

m3-nataka.jpg

ಮೈಸೂರು: ಯಾವುದೇ ಕಲಾ ಪ್ರಕಾರಗಳಿಂದ ಸಮಾಜ ಬದಲಾವಣೆ ಆಗಲಿದೆ ಎಂಬುದು ಕೇವಲ ಭ್ರಮೆಯಾಗಿದ್ದು, ನಾಟಕ, ಸಾಹಿತ್ಯ ಯಾವುದೇ ಕಲೆ ಪ್ರಕಾರಗಳಲ್ಲಿ ಸಿದ್ಧಾಂತಗಳನ್ನು ತುಂಬಬಾರದು ಎಂದು ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಪ್ರತಿಪಾದಿಸಿದರು.

ತುಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಕದಂಬ ರಂಗವೇದಿಕೆ ವತಿಯಿಂದ ನಗರದ ಶಾರದಾವಿಲಾಸ ಶತಮಾನೋತ್ಸವ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ “ಸಮಸ್ತ ನಾಟಕ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ನಾಟಕವೆಂದರೆ ಸಮಾಜದಲ್ಲಿರುವ ಅನ್ಯಾಯವನ್ನು ತೋರಿಸಿ, ಸಮಾಜದಲ್ಲಿ ಕ್ರಾಂತಿ ಉಂಟು ಮಾಡುವ ಮೂಲಕ ಸಮಾಜವನ್ನು ಉದ್ಧಾರ ಮಾಡಬೇಕೆಂಬುದು ವ್ಯಾಪಿಸಿದೆ. ಆದರೆ, ನಾಟಕ, ಸಾಹಿತ್ಯ ಹಾಗೂ ಇನ್ನಿತರ ಕಲಾ ಪ್ರಕಾರಗಳ ಮೂಲಕ ಸಮಾಜ ಬದಲಾಗಲಿದೆ ಎಂಬುದು ಕೇವಲ ಭ್ರಮೆಯಾಗಿದೆ. ಸಾಮಾಜಿಕ ಪಿಡುಗುಗಳನ್ನು ತೋರಿಸುವ ನಾಟಕ, ಸಾಹಿತ್ಯಗಳು ಒಂದು ಕಾಲಕ್ಕೆ ಮಾತ್ರ ಸೀಮಿತವಾಗಿ, ಸಮಸ್ಯೆಗಳು ನಿವಾರಣೆಯಾದಾಗ ತಟಸ್ಥವಾಗಲಿವೆ ಎಂದರು.

ಮೌಲ್ಯ ಇರಲಿ: ಕಲೆಗೆ ಮುಖ್ಯವಾಗಿ ರಸಾಯನಗಳು, ಜೀವನದ ಮೌಲ್ಯಗಳು ಬೇಕೆ ಹೊರತು ಸಿದ್ಧಾಂತಗಳಲ್ಲ. ಹೀಗಾಗಿ ನಾಟಕ, ಸಾಹಿತ್ಯದಲ್ಲಿ ಸಿದ್ಧಾಂತ ತುಂಬಬಾರದು. ಟಿ.ಪಿ.ಕೈಲಾಸಂ ಅವರ ವರದಕ್ಷಿಣೆ ನಾಟಕ ಬಂದಾಗ ವರದಕ್ಷಿಣೆ ನೀಡುವುದು ಕಡಿಮೆಯಾಗದೆ, ಇನ್ನಷ್ಟು ಹೆಚ್ಚಾಯಿತು.

ಈ ಹಿನ್ನೆಲೆಯಲ್ಲಿ ಭಾವನೆಯ ರಸಾನುಭವ ಇರುವ ಕಲೆಯಲ್ಲಿ ಶಾಸ್ತ್ರೀಯ ಸಂಗೀತ, ಅದರಲ್ಲೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ನಿಜವಾದ ರಸಾನುಭವ ನೀಡುತ್ತದೆ ಎಂದ ಅವರು, ಮನುಷ್ಯನ ಸ್ವಭಾವ, ಜೀವನ ಸತ್ಯ-ಅಸತ್ಯೆ, ಒಳಿತು-ಕೆಡಕು ಎಲ್ಲವನ್ನು ಶೇಕ್ಸ್‌ಪಿಯರ್‌ ನಾಟಕಗಳಲ್ಲಿ ತೋರಿಸುತ್ತಿದ್ದ. ತಾನು ಕೂಡ ಸಿನಿಮಾದ ಫ್ಲಾಶ್‌ಬ್ಯಾಕ್‌ಗಳನ್ನು ತೆಗೆದುಕೊಂಡು ಕೃತಿಯಲ್ಲಿ ಅವಳಡಿಸಿದ್ದೇನೆ ಎಂದರು. 

ಸರ್ವಕಾಲಿಕ ಸಾಹಿತ್ಯ: ಕೃತಿ ಬಿಡುಗಡೆ ಮಾಡಿ ಮಾತನಾಡಿದ ನಟ ಕೆ.ಸಚೀಂದ್ರ ಪ್ರಸಾದ್‌, ನಾಟಕಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಬಹುಮುಖ ಪ್ರತಿಭೆ ಎಚ್‌ಎಸ್‌ವಿ ಅವರ ವಿದ್ವಾತ್‌ ಹಲವಾರು ಜನರ ಆಶ್ರಯವಾಗಿದೆ. ಅವರ ಪದ ಪ್ರಯೋಗದ ಸ್ವಭಾವ, ನ್ಯಾಯ ನಿಷ್ಠುರತೆಯನ್ನು ಒಳಗೊಂಡಿದ್ದು, ಸರ್ವಕಾಲಿಕ ಸಾಹಿತ್ಯವಾಗಿವೆ.

ನಾಟಕವನ್ನು ಹೇಗೆ ಪ್ರದರ್ಶಿಸಬೇಕು ಎಂಬುದನ್ನು ಅವರ ಬರವಣಿಗೆಯೇ ತೋರುತ್ತದೆ. ನಾಟಕಗಳಲ್ಲಿ ಮೌಲ್ವಿಕಗಳು ಅಡಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೃತಿಕಾರ ಎಚ್‌.ಎಸ್‌.ವೆಂಕಟೇಶ್‌ ಮೂರ್ತಿ, ಪ್ರಕಾಶಕ ಟಿ.ಎಸ್‌.ಛಾಯಪತಿ, ಕದಂಬ ರಂಗ ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ಕವಿ ಬಿ.ಆರ್‌.ಲಕ್ಷಣರಾವ್‌, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಜರಿದ್ದರು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.