ತಿಮ್ಮಕ್ಕ ವೃಕ್ಷೊದ್ಯಾನ ಲೋಕಾರ್ಪಣೆ


Team Udayavani, Dec 10, 2018, 4:37 PM IST

mys-1.jpg

ಮೈಸೂರು: ಅರಣ್ಯ ಇಲಾಖೆ ವತಿಯಿಂದ ಲಿಂಗಾಂಬುದಿ ನಗರದಲ್ಲಿ ಅಭಿವೃದ್ಧಿಪಡಿಸಿರುವ ಉದ್ಯಾನವನ ಹಾಗೂ ಸಾಲುಮರದ ತಿಮ್ಮಕ್ಕ ವೃಕ್ಷೊದ್ಯಾನವನ್ನು ಸಂಸದ ಪ್ರತಾಪ ಸಿಂಹ ಭಾನುವಾರ ಲೋಕಾರ್ಪಣೆಗೊಳಿಸಿದರು.

ಲಿಂಗಾಂಬುದಿ ನಗರ ಉದ್ಯಾನವನದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ 87.54 ಹೆಕ್ಟೇರ್‌ ಪ್ರದೇಶದಲ್ಲಿ ಉದ್ಯಾನವನ ಹಾಗೂ ವೃಕ್ಷೊಧ್ಯಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ 1.39 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದ 35ಲಕ್ಷ ರೂ. ಅನುದಾನದಲ್ಲಿ ಕೆರೆ ಅಭಿವೃದ್ಧಿ ಮಾಡಲಾಗಿದೆ. ಪ್ರಮುಖವಾಗಿ ವಾಯುವಿಹಾರ ರಸ್ತೆಗಳು, ವಿಶ್ರಾಂತಿ ಆಸನಗಳು, ಸಸ್ಯ ಸಂಗ್ರಹಾಲಯ, ವ್ಯಾಯಾಮ ಸಲಕರಣೆಗಳು, ಪಕ್ಷಿವೀಕ್ಷಣೆ, ಸೂಚನಾಫ‌ಲಕಗಳು, ಮಕ್ಕಳ ಆಟಿಕೆ ಮೈದಾನ, ಕುಡಿಯುವ ನೀರಿನ ಘಟಕ, ಶೌಚಾಲಯ ನಿರ್ಮಿಸಲಾಗಿದೆ.

ಜತೆಗೆ ಉದ್ಯಾನವನದ ವಿವಿಧ ಭಾಗಗಳಲ್ಲಿ 422 ಹಣ್ಣಿನ ಗಿಡ ಸೇರಿದಂತೆ ಅಪರೂಪದ 25 ಜಾತಿಯ ಸಸಿಗಳನ್ನು ನೆಟ್ಟು ಸಸ್ಯ ಸಂಗ್ರಹಾಲಯ ಮಾಡಲಾಗಿದೆ.

ಮಳಲವಾಡಿ ಕೆರೆಯಲ್ಲಿ ವೃಕ್ಷೋದ್ಯಮ: ನಗರದ ಮಳಲವಾಡಿ ಕೆರೆಯಲ್ಲಿ ಅರಣ್ಯ ಇಲಾಖೆಯ 33 ಎಕರೆ ಪ್ರದೇಶದಲ್ಲಿ ವೃಕ್ಷೊಧ್ಯಾನ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ 61 ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಿದ್ದು, ವಾಯುವಿಹಾರ ರಸ್ತೆಗಳು, ಮಕ್ಕಳ ಆಟಿಕೆ ಮೈದಾನ, ಶೌಚಾಲಯ, ಮುಂಭಾಗದ ಗೇಟ್‌, ಬೆಂಚ್‌ಗಳು, ಸಂದೇಶ ಸೂಚನಾಫ‌ಲಕ ಅಳವಡಿಸಲಾಗಿದೆ. ಆಲದಮರ, ಅರಳಿಮರ, ಅತ್ತಿಮರ, ನೇರಳೆ ಮೊದಲಾದ ಹಣ್ಣು ಬಿಡುವ ಹಾಗೂ 180 ಗಿಡಗಳನ್ನು ನೆಡಲಾಗಿದೆ.

ಉತ್ತಮ ವ್ಯವಸ್ಥೆ: ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ರವಿ ಮಾತನಾಡಿ, ಕುಕ್ಕರಹಳ್ಳಿ, ಕಾರಂಜಿಕೆರೆಗಿಂತ ಲಿಂಗಾಬುದಿ ಕೆರೆಗೆ 280-320 ಪ್ರಬೇಧದ ಪಕ್ಷಿಗಳು ಬಂದು ಸೇರುತ್ತದೆ. ವಾಯುಮಾಲಿನ್ಯದಿಂದ ಅತಿ ಹೆಚ್ಚಿನ ಮೃತಪ್ರಕರಣ ನಡೆಯುತ್ತಿರುವುದಲ್ಲಿ ಭಾರತ ಎರಡನೇ ಸ್ಥಾನವಾಗಿದೆ. ನಾವು ಮುಕ್ತ ಜಾಗದಲ್ಲಿ ಸಸಿ ನೆಟ್ಟು ರಕ್ಷಿ$ಸಿದಷ್ಟು ಉತ್ತಮ ಗಾಳಿ ಬರಲಿದೆ. 8-10 ಜಾತಿಯ ಮರಗಳನ್ನು ನೆಟ್ಟರೂ ಅನುಕೂಲವಾಗಲಿದೆ ಎಂದು ಹೇಳಿದರು. ಲಿಂಗಾಂಬುದಿಕೆರೆಗೆ ಎಸ್‌ಟಿಪಿ ಪ್ಲಾಂಟ್‌ ಬದಲು ಕಬಿನಿುಂದ ನೇರವಾಗಿ ಶುದ್ಧ ನೀರು ಬರುವಂತೆ ಮಾಡಿದರೆ ಮುಂದೆ ಅನುಕೂಲವಾಗಲಿದೆ ನಗರಪಾಲಿಕೆ ಈ ಚಾರದಲ್ಲಿ ಗಮನಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಸಸ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡು ಸಸಿಗಳನ್ನು ನೆಡುವಲ್ಲಿ ಶ್ರಮಿಸಿದ ಹಲವರನ್ನು ಸನ್ಮಾನಿಸಲಾಯಿತು. ಟಿ.ಇ.ಜಯಕುಮಾರ್‌, ಕಾಳಸ್ವಾಮಿ, ಎಂ.ಎಸ್‌.ಗಿರಿಗೌಡ, ಬಿ.ಎನ್‌.ದರ್ಶನ್‌, ಪುಟ್ಟರಾಜು, ಬೀರಪ್ಪ, ಚಿಕ್ಕಣ್ಣ, ಅಂಬರೀಶ್‌, ನಂಜುಂಡ, ಎಂ.ಆನಂದ, ಲಿಂಗರಾಜು, ಕೃಷ್ಣ, ಅಂಕಯ್ಯ, ಆರ್‌. ಮಂಜುನಾಥ್‌, ನವೀನ ಕುಮಾರ್‌, ನಾಗೇಶ್‌, ಕುಮಾರ್‌, ಪಿ.ಬಸವೇಗೌಡ, ಶಿವಣ್ಣ, ಎನ್‌.ರಾಜು ಅವರುಗಳನ್ನು ಅಭಿನಂದಿಸಲಾಯಿತು. ಮೇಯರ್‌ ಪುಷ್ಪಲತಾ ಜಗನ್ನಾಥ್‌, ನಗರಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್‌, ಪಾಲಿಕೆ ಸದಸ್ಯರಾದ ಎಂ.ಎಸ್‌.ಶೋಭಾ, ಆರ್‌.ಕೆ.ಶರತ್‌ಕುಮಾರ್‌, ಡಿಸಿಎಫ್ ಗಳಾದ ಮಹೇಶ್ವರನ್‌, ಹನುಮಂತಪ್ಪ ಹಾಜರಿದ್ದರು.

ಚರ್ಚಿಸಿ ಗಿಡ ನೆಡಿ ಆರೋಗ್ಯ ಕಾಪಾಡಲು ಹೆಚ್ಚಿನ ಮರಗಳನ್ನು ನೆಡಬೇಕು. ಈ ಹಿಂದೆ ತಾವು ಜಿಪಂ ಅಧ್ಯಕ್ಷರಾಗಿದ್ದಾಗ ಕೆಆರ್‌ಎಸ್‌ ಹಿನ್ನೀರು, ದಡದಕಲ್ಲಹಳ್ಳಿ ಬಳಿ ನೆಡಸಿದ್ದ 4500 ಸಸಿ ಇಂದು ಸಾಮಾಜಿಕ ಅರಣ್ಯ ವಲಯವಾಗಿದೆ. ಮರಗಳನ್ನು ನೆಡುವ ಜತೆಗೆ ಮಳೆ ನೀರು ನಿಲ್ಲುವಂತೆ ಪಾತ್‌ಗಳನ್ನು ಮಾಡಬೇಕಿದೆ. ಮೈಸೂರು ನಗರ, ರಿಂಗ್‌ರಸ್ತೆಯ ಅಕ್ಕಪಕ್ಕದಲ್ಲಿರುವ ಉದ್ಯಾನವನ, ರಸ್ತೆಗಳಲ್ಲಿ ಮರಗಳನ್ನು ನೆಟ್ಟು ಸುಂದರ ನಗರವನ್ನಾಗಿ ಅಭಿವೃದ್ಧಿಪಡಿಸಬೇಕು. ಅಧಿಕಾರಿಗಳು ಈ ಬಗ್ಗೆ ಚಿಂತನೆ ನಡೆಸಬೇಕು. ಅರಣ್ಯ ಇಲಾಖೆ ಜತೆ ನಗರಪಾಲಿಕೆ, ಮುಡಾ
ಅಧಿಕಾರಿಗಳು ಕುಳಿತು ಚರ್ಚಿಸಿ ಸಸಿ ನೆಡಬೇಕು ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ರನ್‌ವೇ ವಿಸ್ತರಣೆ: ಹೊಸ ವರ್ಷಕ್ಕೆ ಭೂಮಿಪೂಜೆ ನಗರದ ಮಂಡಕಳ್ಳಿ ವಿಮಾನ ನಿಲ್ದಾಣದ ರನ್‌ವೇ ವಿಸ್ತರಿಸುವ ಕಾಮಗಾರಿಗೆ ಮುಂದಿನ ಜನವರಿಯಲ್ಲಿ ಗುದ್ದಲಿಪೂಜೆ ನೆರವೇರಿಸಲಾಗುತ್ತದೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ತಿಮ್ಮಕ್ಕ ವೃಕ್ಷೊಧ್ಯಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಂಡಕಳ್ಳಿ ವಿಮಾನ ನಿಲ್ದಾಣದ ರನ್‌ ವೇ ಅಭಿವೃದ್ಧಿಗೆ ಎದುರಾಗಿದ್ದ ಭೂಮಿಯ ಸಮಸ್ಯೆ ನಿವಾರಣೆಯಾಗಿದೆ. ಈ ಹಿಂದೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸಣ್ಣ ಸಣ್ಣ ವಿಮಾನಗಳು ಹಾರಾಟ ಮಾಡುತ್ತಿದ್ದವು. ಆದರೆ ದೊಡ್ಡ ವಿಮಾನಗಳು ಮೈಸೂರಿನಿಂದ ಚೆನ್ನೈ, ಮುಂಬಯಿ, ದೆಹಲಿ ಇನ್ನಿತರ ಪ್ರದೇಶಗಳಿಗೆ ಹಾರಾಡಲು ಈಗಿರುವ 1.7 ಕಿ.ಮೀ ರನ್‌ ವೇ ಅನ್ನು 2.7 ಕಿ.ಮೀ ರನ್‌ವೇ ವಿಸ್ತರಣೆ ಮಾಡಬೇಕಾಗಿತ್ತು. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರಿಂದ ಸಮಸ್ಯೆಯಾಗಿತ್ತು.

ಈ ವಿಚಾರದಲ್ಲಿ ಕೇಂದ್ರ ಸಚಿವರೊಂದಿಗೆ ಚರ್ಚಿಸಿದ ಬಳಿಕ ಎನ್‌ಎಸ್‌ಎ ಅವರು ರನ್‌ವೇ ವಿಸ್ತರಿಸಲು ಅನುಮತಿ ನೀಡಿದ್ದಾರೆ. ರನ್‌ವೇ ವಿಸ್ತರಣೆಗೆ 280 ಎಕರೆ ಭೂಮಿಬೇಕೆಂದು ಸಚಿವ ಜಿ.ಟಿ.ದೇವೇಗೌಡರಲ್ಲಿ ಪ್ರಸ್ತಾಪಿಸಿದ್ದ ಬಳಿಕ, ಈ ಸಂಬಂಧ ಸಭೆ ನಡೆಸಿ 300ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ಕೊಡಿಸಿದ್ದಾರೆ. ಭೂಮಿ ಸ್ವಾಧೀನ ಪ್ರಕ್ರಿಯೆ ಮುಗಿದ ಕೂಡಲೇ ಜನವರಿಯಲ್ಲಿ ಕಾಮಗಾರಿ ಗುದ್ದಲಿಪೂಜೆ ನಡೆಯಲಿದೆ. ಕೇಂದ್ರ ಸರ್ಕಾರ 700 ಕೋಟಿ ಅನುದಾನ ಮಂಜೂರು ಮಾಡಿದೆ ಎಂದರು. 

ಹತ್ತು ಪಥದ ರಸ್ತೆ ಕಾಮಗಾರಿಗೆ ಜ.8ಕ್ಕೆ ಚಾಲನೆ ಮೈಸೂರು-ಬೆಂಗಳೂರು ನಡುವಿನ ಹತ್ತು ಪಥದ ರಸ್ತೆ ಕಾಮಗಾರಿಗೆ ಜ.8ಕ್ಕೆ ಚಾಲನೆ ಕೊಡಲಾಗುತ್ತದೆ. ಈಗಾಗಲೇ ಭೂಮಿಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಕೇಂದ್ರ ಸರ್ಕಾರವೇ 7 ಸಾವಿರ ಕೋಟಿ ಅನುದಾನ ಖರ್ಚು ಮಾಡುತ್ತಿದ್ದು, 2020ಕ್ಕೆ ಮುಕ್ತಾಯವಾಗಲಿದೆ. ಈ ನಡುವೆ ಬಿಳಿಕೆರೆಯಿಂದ ಬೇಲೂರು ತನಕ ಹೊಸ ರಸ್ತೆ ನಿರ್ಮಾಣವಾಗಲಿದ್ದು, ಅದಕ್ಕಾಗಿ 1875 ಕೋಟಿ ಮಂಜೂರು ಮಾಡಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ರಸ್ತೆಗಾಗಿಯೇ 1.44 ಲಕ್ಷ ಕೋಟಿ ಅನುದಾನ ನೀಡಲಾಗಿದೆ. ಮೊದಲು ಆರು ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ಇತ್ತು, ಇದೀಗ 13,500 ಕಿ.ಮೀ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲಾಗಿದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

11-

UPSC ಪರೀಕ್ಷೆಯಲ್ಲಿ ಹುಣಸೂರಿನ ಲೇಖನ್‌ಗೆ 77ನೇ ರ‍್ಯಾಂಕ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.